ಭಾರತೀಯ ವಿಮಾನ ಹಾರಾಟ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ ತನ್ನ ಹದಿನೈದು ವರ್ಷಗಳ ಸುದೀರ್ಘ ಯಶಸ್ವಿ ಹಾರಾಟವನ್ನು ನಡೆಸಿದೆ. ಈ ಹದಿನೈದು ವರ್ಷಗಳ ಸಂಭ್ರಮಾಚರಣೆ ಹಿನ್ನೆಲೆ ಇಂಡಿಗೋ ತನ್ನ ದೇಶೀಯ ಮತ್ತು ಅಂತಾರಾಷ್ಟ್ರೀಯ ಹಾರಾಟಗಳ ಮೇಲೆ ವಿಶೇಷ ಮಾರಾಟ ದರ ನಿಗದಿ ಮಾಡಿದೆ. ರೂ. 915 ರಿಂದ ಆರಂಭವಾಗುವ ಹಾಗೂ ಎಲ್ಲಾ ಸೇವೆಗಳನ್ನು ಒಳಗೊಂಡ ದರಗಳನ್ನು ನೀಡುವ ಮೂರು ದಿನಗಳ ವಿಶೇಷ ಮಾರಾಟವನ್ನು ಘೋಷಣೆ ಮಾಡಿದೆ.
ಈ ಆಫರ್ ಆಗಸ್ಟ್ 04, 2021 ರಿಂದ ಆಗಸ್ಟ್ 06, 2021 ರವರೆಗೆ ಇರುತ್ತದೆ ಎಂದು ಕಂಪನಿ ತಿಳಿಸಿದೆ. ಅಲ್ಲದೇ, ಸೆಪ್ಟೆಂಬರ್ 01, 2021, ಮಾರ್ಚ್ 26, 2022 ರವರೆಗಿನ ಪ್ರಯಾಣಕ್ಕೆ ಅನ್ವಯವಾಗುತ್ತದೆ. ಹೆಚ್ಚುವರಿಯಾಗಿ, ಫಾಸ್ಟ್ ಫಾರ್ವರ್ಡ್, 6 ಇ ಫ್ಲೆಕ್ಸ್, 6 ಇ ಸೇರಿದಂತೆ 6E ಆಡ್-ಆನ್ಗಳು ಬ್ಯಾಗ್ಪೋರ್ಟ್ ಅನ್ನು 315 ರೂಗಳಲ್ಲಿ ನೀಡಲಾಗುತ್ತಿದೆ. ಜೊತೆಗೆ ಕಾರ್ ಬಾಡಿಗೆ ಸೇವೆಯು 315 ರೂಗಳಲ್ಲಿ ಆರಂಭವಾಗುತ್ತದೆ.
ಇನ್ನು ಈ ಬಗ್ಗೆ ನಮ್ಮ ಸಂತೋಷ ಹಂಚಿಕೊಂಡಿರುವ ಇಂಡಿಗೋದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೊನೊಜೊಯ್ ದತ್ತಾ, ನಾವು 15 ವರ್ಷಗಳನ್ನು ಸಂಪೂರ್ಣವಾಗಿ ಪೂರೈಸಿದ್ದೇವೆ. ಆ ಸಂಭ್ರಮವನ್ನು ಆಚರಿಸುತ್ತಿರುವ ನಮಗೆ ಇದೊಂದು ಮಹತ್ವದ ಸಂದರ್ಭ. ಕೆಟ್ಟ ಸಮಯದಲ್ಲೂ ಸಹ ನಮ್ಮ ಗ್ರಾಹಕರು ಮತ್ತು ಉದ್ಯೋಗಿಗಳು ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಕ್ಕಾಗಿ ನಾವು ಕೃತಜ್ಞತೆ ವ್ಯಕ್ತಪಡಿಸಲು ಆಶಿಸುತ್ತೇವೆ. ಇಂಡಿಗೋ ತಂಡದ ಪರವಾಗಿ, ಈ ಸುದೀರ್ಘ ಪ್ರಯಾಣವನ್ನು ಯಶಸ್ವಿಯಾಗಿ ಮಾಡಿದ ನಮ್ಮ ಎಲ್ಲಾ ಗ್ರಾಹಕರು, ಪಾಲುದಾರರು ಮತ್ತು ಸಹೋದರರಂತೆ ಇರುವ ನಮ್ಮ ಕಂಪನಿಯ ಸದಸ್ಯರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
Time for SALE-brations! Grab the best fares, pack your bags and make that much awaited trip happen. Book now https://t.co/i2TT16rSey #15YearsOfBeing6E #LetsIndiGo #Aviation pic.twitter.com/Enb8a6UpFV
— IndiGo (@IndiGo6E) August 4, 2021
ಇದನ್ನೂ ಓದಿ: Yashika anand: ಅಪಘಾತದಲ್ಲಿ ನಾನು ಬದುಕುಳಿದು ಸ್ನೇಹಿತೆ ಸಾವನ್ನಪ್ಪಿದ್ದು ಕಾಡುತ್ತಿದೆ: ನಟಿ ಯಶಿಕಾ ಕಣ್ಣೀರು
ಕಳೆದ 15 ವರ್ಷಗಳಲ್ಲಿ ನಮ್ಮ ವಿಮಾನಯಾನ ಮಾರ್ಗವು ವಿಮಾನ ಪ್ರಯಾಣವನ್ನು ಗ್ರಾಹಕರ ಕೈಗೆಟುಕುವ ಮತ್ತು ಕೈಗೆಟುಕುವಂತೆ ಮಾಡುವ ನಮ್ಮ ಬದ್ಧತೆಯ ಸಾಕ್ಷಿಯಾಗಿದೆ. ಆ ಮೂಲಕ ವ್ಯಾಪಾರ, ಪ್ರವಾಸೋದ್ಯಮ ಮತ್ತು ಚಲನಶೀಲತೆಯನ್ನು ಉತ್ತೇಜಿಸುತ್ತಾ ಬಂದಿದ್ದೇವೆ. ಈ ಸಂಭ್ರಮದ ಸಂದರ್ಭದಲ್ಲಿ, ನಮ್ಮ ಸಂತೋಷವನ್ನು ಹಂಚಿಕೊಳ್ಳಲು ನಾವು 6E ಪ್ರಯಾಣಿಕರಿಗಾಗಿ 3 ದಿನಗಳ ವಿಶೇಷ ಮಾರಾಟವನ್ನು ಆರಂಭಿಸಿದ್ದೇವೆ. ನಮ್ಮ ನಮ್ಮ ಸ್ವಚ್ಛ ವಿಮಾನಗಳಲ್ಲಿ ಪ್ರಯಾಣಿಕರಿಗೆ ಸರಿಯಾದ ಸಮಯ, ಒಳ್ಳೆಯ ವಾತವಾರಣದೊಂದಿಗೆ ಮತ್ತು ಒಳ್ಳೆಯ ಅನುಭವವನ್ನು ನೀಡುವುದು ನಮ್ಮ ಈ ಸ್ಥಿರವಾದ ಪ್ರಯತ್ನವಾಗಿದೆ. ಇಷ್ಟು ವರ್ಷಗಳ ಕಾಲ ನಮ್ಮ ಸೇವೆಯ ಮೂಲಕ ಜನರನ್ನು ಸಂತುಷ್ಟಗೊಳಿಸಿದ್ದೇವೆ . ಮುಂದೆಯೂ ಕೂಡ ಹೀಗೆ ಮುಂದುವರೆಯಲಿದೆ ಎಂದು ಇಂಡಿಗೋದ ಮುಖ್ಯ ಕಾರ್ಯತಂತ್ರ ಮತ್ತು ಕಂದಾಯ ಅಧಿಕಾರಿ ಸಂಜಯ್ ಕುಮಾರ್ ಭರವಸೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ