• Home
  • »
  • News
  • »
  • national-international
  • »
  • Tejasvi Surya: ಇಂಡಿಗೋ ವಿಮಾನದಲ್ಲಿ ತೇಜಸ್ವಿ ಸೂರ್ಯ ಡೋರ್ ತೆಗೆದಿದ್ರಾ? ಸಹಪ್ರಯಾಣಿಕ ಹೇಳಿದ್ದೇನು?

Tejasvi Surya: ಇಂಡಿಗೋ ವಿಮಾನದಲ್ಲಿ ತೇಜಸ್ವಿ ಸೂರ್ಯ ಡೋರ್ ತೆಗೆದಿದ್ರಾ? ಸಹಪ್ರಯಾಣಿಕ ಹೇಳಿದ್ದೇನು?

ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರೊಂದಿಗೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರೊಬ್ಬರು ಇಂಡಿಗೋ ವಿಮಾನದಲ್ಲಿ ಅಂದು ನಿಜವಾಗಿ ಏನಾಯಿತು ಎಂಬುದನ್ನು ನ್ಯೂಸ್  18ಗೆ ವಿವರಿಸಿದ್ದಾರೆ.

  • Trending Desk
  • Last Updated :
  • Bangalore [Bangalore], India
  • Share this:

    ತಮಿಳುನಾಡು (Tamil Nadu) ಪ್ರವಾಸ ಸಂದರ್ಭದಲ್ಲಿ ತೇಜಸ್ವಿ ಸೂರ್ಯ (Tejashvi Surya) ಅವರು ಚೆನ್ನೈ-ತಿರುಚಿರಾಪಳ್ಳಿ ಇಂಡಿಗೋ ಏರ್‌ಲೈನ್ ( IndiGo Airline ) ವಿಮಾನದ ತುರ್ತು ದ್ವಾರವನ್ನು (Emergency Door) ಅಜಾಗರೂಕತೆಯಿಂದ ತೆರೆದಿದ್ದಾರೆ ಎಂಬ ಆರೋಪದ ನಡುವೆ  ಬೆಂಗಳೂರು ದಕ್ಷಿಣ ಸಂಸದರು ಇಂತಹ ಘಟನೆಗಳನ್ನು ವೈಭವೀಕರಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. ನನ್ನ ಪಕ್ಷ ಹಾಗೂ ಕ್ಷೇತ್ರಕ್ಕಾಗಿ ದುಡಿಯುವುದೊಂದೇ ನನ್ನ ಗುರಿಯಾಗಿದೆ, ಹಾಗಾಗಿ ಇಂತಹ ಘಟನೆಗಳ ಬಗ್ಗೆ ಹೇಳಿಕೆಗಳನ್ನು ನೀಡಲು ಬಯಸುವುದಿಲ್ಲ ಎಂದು ತೇಜಸ್ವಿ ಸೂರ್ಯ  ತಿಳಿಸಿದ್ದಾರೆ.


     ವಿಮಾನ 6E 7339 ರಲ್ಲಿ ನಡೆದ ಘಟನೆಯ  ಬಗ್ಗೆ ನ್ಯೂಸ್ 18 ಜನವರಿ 17 ರಂದು ವಿಶೇಷ ವರದಿಗಳನ್ನು ಪ್ರಕಟಿಸಿತ್ತು. ಈ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ವಿಮಾನಯಾನ ಸಂದರ್ಭದಲ್ಲಿ  ಜಾಗರೂಕರಾಗಿರ ಬೇಕಾಗಿರುವುದು ಮುಖ್ಯ ಎಂದು ತಿಳಿಸಿದ್ದರು.


    ಪರಿಶೀಲನೆ ನಡೆಸಿಯೇ ವಿಮಾನ ಟೇಕ್‌ಆಫ್‌ಗೆ ಅನುಮತಿ 


    ಘಟನೆ ಕುರಿತ ಸತ್ಯಾಂಶಗಳನ್ನು ಒಮ್ಮೆ ಅವಲೋಕಿಸಿ,  ವಿಮಾನವು ಲ್ಯಾಂಡಿಂಗ್‌ನಲ್ಲಿದ್ದಾಗಲೇ ಬಾಗಿಲುಗಳು ಅಕಸ್ಮಿಕವಾಗಿ ತೆರೆದಿವೆ. ಕೂಡಲೇ ಎಲ್ಲಾ ಪರಿಶೀಲನೆಗಳನ್ನು ನಡೆಸಲಾಗಿದೆ. ಆ ನಂತರವೇ ವಿಮಾನ ಟೇಕ್ ಆಫ್‌ ಆಗಲು ಅನುಮತಿಸಲಾಗಿದೆ. ಅಲ್ಲದೆ ಈ ಪ್ರಮಾದ ಉಂಟಾಗಿರುವುದಕ್ಕೆ ಆತ (ತೇಜಸ್ವಿ ಸೂರ್ಯ) ಎಲ್ಲಾ ಪ್ರಯಾಣಿಕರನ್ನು ಕ್ಷಮೆ ಯಾಚಿಸಿದ್ದಾರೆ ಎಂದು ಸಿಂಧಿಯಾ ದೆಹಲಿಯಲ್ಲಿ ಸುದ್ದಿಮಾಧ್ಯಮಗಳಿಗೆ ತಿಳಿಸಿದ್ದಾರೆ.


    ಇದನ್ನೂ ಓದಿ:IndiGo: ಸಂಗೀತ ಉಪಕರಣಗಳನ್ನು ಎತ್ತೆಸೆದ ಇಂಡಿಗೋ ಸಿಬ್ಬಂದಿ; ವಿಡಿಯೋ ಪೋಸ್ಟ್ ಮಾಡಿ ಸೂಫಿ ಗಾಯಕನಿಂದ ಆಕ್ರೋಶ!


    ಘಟನೆ ಬಗ್ಗೆ ವಿವರಿಸಿದ ಸಹಪ್ರಯಾಣಿಕರು


    ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರೊಂದಿಗೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರೊಬ್ಬರು ಇಂಡಿಗೋ ವಿಮಾನದಲ್ಲಿ ಅಂದು ನಿಜವಾಗಿ ಏನಾಯಿತು ಎಂಬುದನ್ನು ನ್ಯೂಸ್  18 ಗೆ ವಿವರಿಸಿದ್ದಾರೆ.




    "ವಿಮಾನದ ಎಡಭಾಗದಲ್ಲಿರುವ ಕಾರಿಡಾರ್ ಸೀಟ್‌ನಲ್ಲಿ  ನಾನು ಕುಳಿತಿದ್ದೆ.  ಅದಾಗಲೇ ಗಾಳಿ ಹೆಚ್ಚಾಗಿದ್ದರಿಂದ ವಿಮಾನ ಟೇಕ್ ಆಫ್​ ಆಗಲು ತಡವಾಗಿತ್ತು. ತೇಜಸ್ವಿ ಸೂರ್ಯ ಹಾಗೂ ಅಣ್ಣಾಮಲೈ ಒಂದೇ ಸಾಲಿನಲ್ಲಿ ಬಲಭಾಗದಲ್ಲಿ ಕುಳಿತಿದ್ದರು ಹಾಗೂ ಸೂರ್ಯ ಎಮರ್ಜೆನ್ಸಿ ದ್ವಾರದ ಬಳಿ  ಕುಳಿತಿದ್ದರು ಎಂಬುದಾಗಿ ಈ ಪ್ರಯಾಣಿಕರು  ಮಾಹಿತಿ ನೀಡಿದ್ದಾರೆ.


    ಉದ್ದೇಶಪೂರ್ವಕ ಘಟನೆಯಲ್ಲ


    ತೇಜಸ್ವಿ ಸೂರ್ಯ ಏರ್ ಕಂಡೀಷನರ್  ದ್ವಾರವನ್ನು ಮುಚ್ಚಲು ಸೂರ್ಯ  ಮುಂದಾದರು. ಆದರೆ ಈ ಸಮಯದಲ್ಲಿ ಅವರು ಕೈಯನ್ನು ಹಿಂತೆಗೆದುಕೊಳ್ಳುವಾಗ ಅವರ ಮೊಣಕೈ ತುರ್ತು ನಿರ್ಗಮನ ಬಾಗಿಲಿಗೆ ತಗುಲಿತು. ಆಗ ತುರ್ತು ನಿರ್ಗಮನದ ದ್ವಾರ  ಸ್ವಲ್ಪ  ಹೊರ ಬಂದಿತು.  ತೇಜಸ್ವಿ ಸೂರ್ಯ  ಉದ್ದೇಶಪೂರ್ವಕಾಗಿ ತುರ್ತು ನಿರ್ಗಮನ ಬಾಗಿಲನ್ನು ತೆರೆದಿಲ್ಲ. ನಾನು ಕುಳಿತಲ್ಲಿಂದಲೇ ಇದನ್ನೇ ಗಮನಿಸುತ್ತಿದ್ದೆ  ಎಂದು ತಿಳಿಸಿದ್ದಾರೆ.




    ಬಾಗಿಲು ಪೂರ್ಣವಾಗಿ ತೆರೆದಿಲ್ಲ


    ಈ ಸಮಯದಲ್ಲಿ ತುರ್ತು ನಿರ್ಗಮನ ಬಾಗಿಲು ಪೂರ್ಣವಾಗಿ ತೆರೆದುಕೊಂಡಿರಲ್ಲ ಹಾಗೂ ಬಾಗಿಲಿನ  ಹುಕ್ ಕೂಡ ತೆರೆದುಕೊಂಡಿರಲಿಲ್ಲ. ಆದರೆ ಬಾಗಿಲು ಸ್ವಲ್ಪ  ತೆರದಂತೆ   ಕಂಡುಬಂದಿತ್ತು. ನಾನು ಸಹಾ ಹತ್ತಿರಕ್ಕೆ ಹೋಗಿ ನೋಡಿಕೊಂಡು ಬಂದಿದ್ದೆ ಎಂದು ಆ ಸಹ ಪ್ರಯಾಣಿಕ ಮಾಹಿತಿ ನೀಡಿದ್ದಾರೆ.


    ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡಿದ ತೇಜಸ್ವಿ ಸೂರ್ಯ


    ಕೂಡಲೇ ತೇಜಸ್ವಿ ಸೂರ್ಯ ಕ್ಯಾಬಿನ್ ಸಿಬ್ಬಂದಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು. ತಂಡದಲ್ಲಿದ್ದ ಹಿರಿಯ ಸಿಬ್ಬಂದಿ ಇದನ್ನು ಪರಿಶೀಲಿಸಿದ್ದು ವಿಮಾನದ ಕ್ಯಾಪ್ಟನ್‌ಗೆ ಮಾಹಿತಿ ನೀಡಿದರು. ಅಂತೆಯೇ ವಿಮಾನ ಟೇಕ್-ಆಫ್ ಮಾಡುವ ಮುನ್ನ ವಿಮಾನದ ಸಂಪೂರ್ಣ ಸುರಕ್ಷತಾ ಪರಿಶೀಲನೆ  ನಡೆಸಲು ಪ್ರತಿಯೊಬ್ಬರನ್ನು ಡಿ-ಬೋರ್ಡ್ ಮಾಡಲಾಗುತ್ತದೆ ಎಂದು ಘೋಷಿಸಲಾಯಿತು ಎಂದು ವಿದ್ಯಾರ್ಥಿಯಾಗಿರುವ  ಸಹಪ್ರಯಾಣಿಕ ವಿವರಿಸಿದ್ದಾರೆ.


    ಪ್ರಯಾಣಿಕರಿಗೆ ಸಲಹೆ ನೀಡಿರುವ ತೇಜಸ್ವಿ ಸೂರ್ಯ, ಕ್ಷಮೆಯಾಚಿಸಿಲ್ಲ


    ಏರ್‌ಲೈನ್ ಕಂಪನಿಯ ಮನವಿ ಮೇರೆಗೆ ಸಂಸದರು ಘಟನೆಯ ಬಗ್ಗೆ ಲಿಖಿತ ವರದಿಯನ್ನು ನೀಡಿದ್ದಾರೆ. ಸಂಸದರ ಕೈ  ತಾಗಿದ್ದಕ್ಕೆ  ಬಾಗಿಲು ಚಲಿಸಿದ್ದು ನೋಡಿ ಆಶ್ಚರ್ಯ ಹಾಗೂ ಆಘಾತ ಉಂಟಾಗಿತ್ತು. ಇನ್ನು ಘಟನೆ ಸಂಬಂಧ ತೇಜಸ್ವಿ ಸೂರ್ಯ ಏರ್‌ಲೈನ್ ಕಂಪನಿಗೆ ಕ್ಷಮೆಯಾಚಿಸಿ ಪತ್ರ ಬರೆದಿಲ್ಲ ಎಂಬುದನ್ನು ಖಾತ್ರಿಪಡಿಸಿರುವ ಆತ,  ತೇಜಸ್ವಿ ಸೂರ್ಯ ಅವರು ತಾವೊಬ್ಬ ಪ್ರಯಾಣಿಕರಾಗಿ  ಅಲರ್ಟ್​ ನೀಡಿದ್ದರ ಬಗ್ಗೆ ಪತ್ರ ಬರೆದಿದ್ದಾರೆ ಎಂದರು.


    ಆದರೆ ಸೂರ್ಯ ತಮ್ಮ ತಪ್ಪಿನಿಂದಾಗಿ ಉಂಟಾದ ವಿಳಂಬಕ್ಕಾಗಿ ಸ್ವತಃ ಎಲ್ಲ ಪ್ರಯಾಣಿಕರನ್ನು ಕ್ಷಮೆಯಾಚಿಸಿದರು. ವಿಮಾನದಲ್ಲಿ ಹಿರಿಯ ನಾಗರಿಕರು ಪ್ರಯಾಣಿಸುತ್ತಿದ್ದರು ಅವರ ಬಳಿಯೂ ಸಂಸದರು ಕ್ಷಮೆಯಾಚಿಸಿದರು, ನನ್ನನ್ನೂ ಕ್ಷಮೆ ಕೇಳಿದರು. ಅದು ಮುಂಜಾನೆಯ ಫ್ಲೈಟ್ ಆಗಿದ್ದರಿಂದ  ಪ್ರಯಾಣಿಕರು ನಿರ್ದಿಷ್ಠ  ಸಮಯಕ್ಕೆ ಅವರವರ ಸ್ಥಳದಲ್ಲಿರಬೇಕಾಗಿತ್ತು. ಆದರೆ ಈ ಘಟನೆಯಿಂದ ತಡವಾಯಿತು ಹೀಗಾಗಿ ಸಂಸದರು ಕ್ಷಮೆಯಾಚಿಸಿದರು ಎಂದು ಪ್ರಯಾಣಿಕರು ತಿಳಿಸಿದ್ದಾರೆ.


    ವಿಮಾನ ಟೇಕ್ ಆಫ್ ಸಮಯದಲ್ಲೇ ಈ ದೋಷವನ್ನು ತೇಜಸ್ವಿ ಸೂರ್ಯ ಸಿಬ್ಬಂದಿಗೆ ತಿಳಿಸಿದ್ದು ಒಳ್ಳೆಯ ಕೆಲಸ ಎಂದು ಹಿರಿಯ ನಾಗರಿಕರು ಅವರನ್ನು ಶ್ಲಾಘಿಸಿದ್ದಾರೆ ಎಂದು ಸಹ ಪ್ರಯಾಣಿಕ  ನ್ಯೂಸ್​ 18ಗೆ ಮಾಹಿತಿ ನೀಡಿದ್ದಾರೆ.

    Published by:Rajesha B
    First published: