Ticket Discounts: ಫ್ಲೈಟ್ ಟಿಕೆಟ್ ಬುಕಿಂಗ್ ಮೇಲೆ ಹೊಸ ರಿಯಾಯಿತಿ ಘೋಷಿಸಿದ ಇಂಡಿಗೊ!

ವಿಮಾನಗಳ ಸೇವೆಯನ್ನು ಒದಗಿಸುತ್ತಿರುವ ಕಂಪನಿಗಳು ತಮ್ಮ ಪ್ರಯಾಣಿಕರಿಗಾಗಿ ಅವರು ಮಾಡುವ ಫ್ಲೈಟ್ ಟಿಕೆಟ್ ಬುಕಿಂಗ್ ಮೇಲೆ ಅನೇಕ ರೀತಿಯ ರಿಯಾಯಿತಿಗಳನ್ನು ಒದಗಿಸುತ್ತಿದೆ ಎಂದು ಹೇಳಬಹುದು. ತುಂಬಾನೇ ಪಾಕೆಟ್ ಸ್ನೇಹಿ ಎನಿಸಿಕೊಂಡಿರುವ ವಿಮಾನಯಾನ ಸಂಸ್ಥೆ ಇಂಡಿಗೊ ತನ್ನ ಪ್ರಯಾಣಿಕರಿಗೆ ಒಂದು ಸಿಹಿಯಾದ ಸುದ್ದಿಯೊಂದನ್ನು ನೀಡಿದೆ. ಅದೇನಪ್ಪಾ ಅಂತೀರಾ?

ಇಂಡಿಗೋ

ಇಂಡಿಗೋ

  • Share this:
ಎರಡು ವರ್ಷಗಳಿಂದ ಆಗೊಮ್ಮೆ ಈಗೊಮ್ಮೆ ಅಂತ ದೇಶೀಯ ವಿಮಾನಗಳು (National Airlines) ತಮ್ಮ ಸೇವೆಯನ್ನು ಶುರು ಮಾಡಿದ್ದರು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಂದಾಗಿ ವಿಮಾನಗಳ ಸೇವೆಯ (Flight Service)ನ್ನು ರದ್ದು ಮಾಡಿರುವುದನ್ನು ಸಹ ನಾವು ಅನೇಕ ಬಾರಿ ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಆದರೆ ಈಗ ಬಹುತೇಕ ದೇಶೀಯ ವಿಮಾನಗಳು ತಮ್ಮ ಸೇವೆಯನ್ನು ಶುರು ಮಾಡಿದ್ದು, ಆಯಾ ವಿಮಾನಗಳ ಸೇವೆಯನ್ನು ಒದಗಿಸುತ್ತಿರುವ ಕಂಪನಿಗಳು ತಮ್ಮ ಪ್ರಯಾಣಿಕರಿಗಾಗಿ (Traveler's) ಅವರು ಮಾಡುವ ಫ್ಲೈಟ್ ಟಿಕೆಟ್ ಬುಕಿಂಗ್ ಮೇಲೆ ಅನೇಕ ರೀತಿಯ ರಿಯಾಯಿತಿಗಳನ್ನು ಒದಗಿಸುತ್ತಿದೆ ಎಂದು ಹೇಳಬಹುದು. ತುಂಬಾನೇ ಪಾಕೆಟ್ ಸ್ನೇಹಿ ಎನಿಸಿಕೊಂಡಿರುವ ವಿಮಾನಯಾನ ಸಂಸ್ಥೆ ಇಂಡಿಗೊ (IndiGo) ತನ್ನ ಪ್ರಯಾಣಿಕರಿಗೆ ಒಂದು ಸಿಹಿಯಾದ ಸುದ್ದಿಯೊಂದನ್ನು ನೀಡಿದೆ. ಅದೇನಪ್ಪಾ ಅಂತೀರಾ?

ಇಂಡಿಗೊ ಸಂಸ್ಥೆ ಇದೇ ಫೆಬ್ರವರಿ 21 ರಿಂದ ತನ್ನ ಮೊಬೈಲ್ ಅಪ್ಲಿಕೇಶನ್ ನಲ್ಲಿ ಯಾರಾದರೂ ಪ್ರಯಾಣಿಕರು ಫ್ಲೈಟ್ ಟಿಕೆಟ್ ಅನ್ನು ಕಾಯ್ದಿರಿಸಿ ಕೊಂಡರೆ, ಅವರಿಗೆ ಉಚಿತ ಊಟ (Free Food) ಮತ್ತು ಸೀಟ್ ಆಯ್ಕೆ ಸೇರಿದಂತೆ ತನ್ನ ಪ್ರಯಾಣಿಕರಿಗೆ ಹೊಸ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಘೋಷಿಸಿದೆ.

ಮಾರ್ಚ್​ನಲ್ಲಿಯೂ ರಿಯಾಯಿತಿ

ಈ ಕೊಡುಗೆಯು ಮಾರ್ಚ್ ತಿಂಗಳಲ್ಲಿಯೂ ಲಭ್ಯವಿರುತ್ತದೆ ಮತ್ತು ಆ ಕೋಡ್ ಅನ್ನು ಪ್ರಮೋಷನಲ್ ಕೋಡ್ ಸ್ಥಳದಲ್ಲಿ ನಮೂದಿಸುವ ಮೂಲಕ ರಿಯಾಯಿತಿಯನ್ನು ಪಡೆಯಬಹುದು. ಇದರ ಜೊತೆಗೆ, ಮೊಬಿಕ್ವಿಕ್ ವ್ಯಾಲೆಟ್ (Wallet) ಬಳಸುವ ಗ್ರಾಹಕರಿಗೆ ಇಂಡಿಗೊ 500 ರೂಪಾಯಿಗಳವರೆಗೆ ಕ್ಯಾಶ್ ಬ್ಯಾಕ್ ಅನ್ನು ಸಹ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.

ಲಸಿಕಾ ಅಭಿಯಾನ ಹೆಚ್ಚಳ

ಈಗ ನಮ್ಮ ಭಾರತ ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನವನ್ನು ಹೆಚ್ಚಿಸುವ ಮತ್ತು ಪ್ರಯಾಣಿಕರನ್ನು ಮತ್ತೆ ವಿಮಾನದಲ್ಲಿ ಕೂತು ಬೇರೆ ಬೇರೆ ಮಹಾ ನಗರಗಳಿಗೆ ಪ್ರಯಾಣಿಸಲು ಪ್ರೋತ್ಸಾಹಿಸುವ ಗುರಿಯನ್ನು ಇಂಡಿಗೊ ವಿಮಾನಯಾನ ಸಂಸ್ಥೆ ಹೊಂದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Flight Ticket: ವಿಮಾನ ಟಿಕೆಟ್ ಮತ್ತಷ್ಟು ದುಬಾರಿ; ಯಾವ ಊರಿಂದ ಯಾವ ಊರಿಗೆ ಎಷ್ಟಿದೆ ಟಿಕೆಟ್ ದರ?

"ಫೆಬ್ರವರಿ ತಿಂಗಳು ಮೃದುವಾದ ಹವಾಮಾನದಿಂದ ಕೂಡಿದ್ದು, ಪ್ರಯಾಣಿಸಲು ಸೂಕ್ತ ತಿಂಗಳು ಎಂದು ಹೇಳಬಹುದು. ಈ ಅಪ್ಲಿಕೇಶನ್ ಕೊಡುಗೆಗಳು ಪ್ರಯಾಣಿಕರ ಆರಾಮದಾಯಕ ಪ್ರಯಾಣ ಮತ್ತು ಇಂಡಿಗೊ ವಿಮಾನಯಾನ (Indigo Flight) ಸಂಸ್ಥೆಯ ಮೇಲಿನ ವಿಶ್ವಾಸವನ್ನು ಹೆಚ್ಚಿಸುತ್ತವೆ, ವಿಮಾನ ಪ್ರಯಾಣದ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುತ್ತವೆ ಎಂಬ ವಿಶ್ವಾಸ ನಮಗಿದೆ” ಎಂದು ಇಂಡಿಗೊ ಸಂಸ್ಥೆಯ ಅಧಿಕಾರಿಗಳು ತಿಳಿಸುತ್ತಾರೆ.

ಕೈಗೆಟುಕುವ ದರದಲ್ಲಿ ಪ್ರಯಾಣ

“ವಿಮಾನ ಪ್ರಯಾಣದಲ್ಲಿ ಗ್ರಾಹಕರ ವಿಶ್ವಾಸವನ್ನು ಬಲಪಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮುಂದುವರಿಸುತ್ತೇವೆ ಮತ್ತು ನಮ್ಮ ಸ್ವಚ್ಛ ವಿಮಾನದಲ್ಲಿ ಕೈಗೆಟುಕುವ ದರಗಳಲ್ಲಿ ಸಮಯಕ್ಕೆ ಸರಿಯಾಗಿ, ಸೌಜನ್ಯಯುತ, ಸುರಕ್ಷಿತ ಮತ್ತು ತೊಂದರೆ ರಹಿತ ಅನುಭವವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ" ಎಂದು ಇಂಡಿಗೊದ ಮುಖ್ಯ ವಾಣಿಜ್ಯ ಅಧಿಕಾರಿ ವಿಲಿಯಂ ಬೌಲ್ಟರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Flight: ಗುಜರಾತ್​​ನಲ್ಲಿ ತಪ್ಪಿದ ಭಾರೀ ವಿಮಾನ ದುರಂತ

ಇತ್ತೀಚೆಗೆ, ವಿಮಾನಯಾನ ಸಂಸ್ಥೆಯು ತನ್ನ ಮೊದಲ ವಿಮಾನವನ್ನು ಏರ್‌ಬಸ್ ನಿಂದ ತರಿಸಿಕೊಂಡಿತು. ಈ ಹೊಸ ವಿಮಾನವು ಶುಕ್ರವಾರ ಫ್ರಾನ್ಸ್ ನಿಂದ ನಮ್ಮ ದೇಶದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ, ಇಂಡಿಗೊ ಸಿಇಒ ರೊನೊಜಾಯ್ ದತ್ತಾ ಅವರು ವಿಮಾನಯಾನ ಸಂಸ್ಥೆಯು ಸುಸ್ಥಿರ ವಾಯುಯಾನ ಇಂಧನ ಕುರಿತ ಬಹಳಷ್ಟು ತಯಾರಕರೊಂದಿಗೆ ಮಾತನಾಡುತ್ತಿದೆ ಎಂದು ಹೇಳಿದರು.

ಇತ್ತೀಚೆಗೆ ಇನ್ನೂ ಕೆಲವು ದೇಶೀಯ ವಿಮಾನಯಾನ ಸಂಸ್ಥೆಯವರು ಸಹ ತಮ್ಮ ವಿಮಾನದಲ್ಲಿ ಕುಳಿತು ಪ್ರಯಾಣಿಸುವವರಿಗೆ ಅವರು ಬುಕ್ ಮಾಡುವ ಫ್ಲೈಟ್ ಟಿಕೆಟ್ ಮೇಲೆ ಅನೇಕ ರೀತಿಯ ರಿಯಾಯಿತಿ ಮತ್ತು ಕೊಡುಗೆಗಳನ್ನು ನೀಡುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.

ಮಾರ್ಚ್ ತಿಂಗಳ ಮಧ್ಯಭಾಗದಿಂದ ಶುರು ಅಗಲಿದೆಯಂತೆ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ

ನಿಯಮಿತ ಅಂತರರಾಷ್ಟ್ರೀಯ ವಿಮಾನಗಳನ್ನು ಪುನರಾರಂಭಿಸಲು ವಾಯುಯಾನ ಸಚಿವಾಲಯವು ಆರೋಗ್ಯ ಸಚಿವಾಲಯದ ಅನುಮೋದನೆಯನ್ನು ಕೋರಿರುವುದರಿಂದ ಭಾರತವು ಮಾರ್ಚ್ ತಿಂಗಳ ಮಧ್ಯಭಾಗದಿಂದ ನಿಯಮಿತ ಅಂತರರಾಷ್ಟ್ರೀಯ ವಿಮಾನಗಳನ್ನು ಪುನರಾರಂಭಿಸಬಹುದು ಎಂದು ಹೇಳಲಾಗುತ್ತಿದೆ. ಜಗತ್ತಿನಾದ್ಯಂತ ಚಾಲ್ತಿಯಲ್ಲಿರುವ ಕೋವಿಡ್ ಪರಿಸ್ಥಿತಿಯಿಂದಾಗಿ ಈ ಪ್ರಕರಣದಲ್ಲಿ ಆರೋಗ್ಯ ಸಚಿವಾಲಯದ ಅನುಮೋದನೆ ಕಡ್ಡಾಯವಾಗಿದೆ.
Published by:Divya D
First published: