IndiGo: ಶೇ.35 ವೇತನ ಕಡಿತದ ಆದೇಶ ಹೊರಡಿಸಿದ ಇಂಡಿಗೋ ಏರ್​ಲೈನ್ಸ್

ಇಂಡಿಗೋ

ಇಂಡಿಗೋ

ಈಗಾಗಲೇ ಇಂಡಿಗೋ ತನ್ನ ಸಿಬ್ಬಂದಿಗೆ ತಿಂಗಳಲ್ಲಿ ಐದು ದಿನ ವೇತನ ರಹಿತ ರಜೆ ಘೋಷಣೆ ಮಾಡಿದೆ. ಇದನ್ನು ಆಗಸ್ಟ್ ವೇಳೆಗೆ 10 ದಿನಕ್ಕೆ ಏರಿಕೆ ಮಾಡುವ ಆಲೋಚನೆಯಲ್ಲಿ ಸಂಸ್ಥೆ ಇದೆ.

  • Share this:

ನವದೆಹಲಿ (ಜು.28): ಕೊರೋನಾ ವೈರಸ್​ನಿಂದಾಗಿ ವಿಮಾನ ಹಾಗೂ ರೈಲು ಸಂಚಾರ ಬಹುತೇಕ ಸ್ತಬ್ಧವಾಗಿದೆ. ಕಳೆದ ನಾಲ್ಕು ತಿಂಗಳುಗಳಿಂದ ವಿಮಾನ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿವೆ. ಈ ನಷ್ಟ ಸರಿದೂಗಿಸುವ ಉದ್ದೇಶದಿಂದ ಸಿಬ್ಬಂದಿಗಳ ವೇತನಕ್ಕೆ ಕತ್ತರಿ ಹಾಕಲಾಗುತ್ತಿದೆ. ಅದೇ ರೀತಿ ಇಂಡಿಗೋ ಏರ್​ಲೈನ್ಸ್ ಹಿರಿಯ ಉದ್ಯೋಗಿಗಳ ಶೇ.35 ಸಂಬಂಳವನ್ನು ಕತ್ತರಿಸುವುದಾಗಿ ಹೇಳಿದೆ.


ಜು.20ರಂದು ಪ್ರಕಟಣೆ ಹೊರಡಿಸಿದ್ದ ಇಂಡಿಗೋ ಏರ್​ಲೈನ್ಸ್​ ಎಲ್ಲಾ ನೌಕರರ ಶೇ.10ರಷ್ಟು ವೇತನ ಕಡಿತ ಮಾಡುವುದಾಗಿ ಹೇಳಿತ್ತು. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ ವೇತನಕ್ಕೆ ಕತ್ತರಿ ಹಾಕಿದೆ.


ಈ ಕುರಿಂತೆ ಎಲ್ಲ ಸಿಬ್ಬಂದಿಗೆ ಇಂಡಿಗೋ ಸಿಇಒ ರಣಜೋಯ್ ದತ್ ಅವರು ಇ ಮೇಲ್ ಮಾಡಿದ್ದಾರೆ. ಪೇ ಕಟ್ ಹೆಚ್ಚಿಸುವ ಅಗತ್ಯ ಸಂಸ್ಥೆಗೆ ಬಂದೊದಗಿದೆ. ಹೀಗಾಗಿ, ಹಿರಿಯ ಉದ್ಯೋಗಿಗಳ ಶೇ.35 ವೇತನವನ್ನು ಕಡಿತ ಮಾಡುತ್ತಿದ್ದೇವೆ. ಎಲ್ಲಾ ಪೈಲಟ್​ಗಳಿಗೆ ಶೇ.28 ವೇತನ ಕಡಿತ ಇರಲಿದೆ. ಇಂಡಿಗೋದ ಉಪಾಧ್ಯಕ್ಷರಿಗೆ ಶೇ. 25 ಹಾಗೂ ಸಹಾಯಕ ಉಪಾಧ್ಯಕ್ಷರಿಗೆ ಶೇ. 15 ವೇತನ ಕಡಿತ ಇರಲಿದೆ. ಇದು ಸೆ.1ರಿಂದ ಜಾರಿಗೆ ಬರಲಿದೆ ಎಂದು ಇಮೇಲ್​ನಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಲಾಹೋರ್‌ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲು ಮುಂದಾಗಿರುವ ಪಾಕಿಸ್ತಾನ; ಪ್ರತಿಭಟನೆ ದಾಖಲಿಸಿದ ಭಾರತ


ಈಗಾಗಲೇ ಇಂಡಿಗೋ ತನ್ನ ಸಿಬ್ಬಂದಿಗೆ ತಿಂಗಳಲ್ಲಿ ಐದು ದಿನ ವೇತನ ರಹಿತ ರಜೆ ಘೋಷಣೆ ಮಾಡಿದೆ. ಇದನ್ನು ಆಗಸ್ಟ್ ವೇಳೆಗೆ 10 ದಿನಕ್ಕೆ ಏರಿಕೆ ಮಾಡುವ ಆಲೋಚನೆಯಲ್ಲಿ ಸಂಸ್ಥೆ ಇದೆ. ಈ ಮೂಲಕ ಆಗುತ್ತಿರುವ ನಷ್ಟ ತುಂಬಿಕೊಳ್ಳಬೇಕಿದೆ.


ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿದ್ದರೂ ಲಾಕ್​ಡೌನ್​ ನಿಯಮಗಳನ್ನು ಸಡಿಲಿಸಿ ಅನ್ ಲಾಕ್ 1 ಮತ್ತು 2 ಅನ್ನು ಜಾರಿ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಲೇ ಇದೆ. ಪರಿಣಾಮವಾಗಿ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 14 ಲಕ್ಷದ ಗಡಿ ದಾಟಿದೆ. ಹೀಗಾಗಿ, ಆರ್ಥಿಕತೆ ನೆಲಕಚ್ಚಿದ್ದು, ಬಹುತೇಕ ಸಂಸ್ಥೆಗಳು ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದೆ. ಇನ್ನೂ ಕೆಲ ಸಂಸ್ಥೆಗಳು ಸಂಬಳವನ್ನು ಕಟ್​ ಮಾಡುತ್ತಿದೆ.

top videos
    First published: