• Home
  • »
  • News
  • »
  • national-international
  • »
  • Whistling Village: ಇದೇ ನೋಡಿ ದೇಶದ 'ಶಿಳ್ಳೆ ಗ್ರಾಮ', ಈ ಹಳ್ಳಿಯಲ್ಲಿದೆ ವಿಶಿಷ್ಟ ಸಂಪ್ರದಾಯ

Whistling Village: ಇದೇ ನೋಡಿ ದೇಶದ 'ಶಿಳ್ಳೆ ಗ್ರಾಮ', ಈ ಹಳ್ಳಿಯಲ್ಲಿದೆ ವಿಶಿಷ್ಟ ಸಂಪ್ರದಾಯ

 ಶಿಳ್ಳೆ ಗ್ರಾಮ

ಶಿಳ್ಳೆ ಗ್ರಾಮ

ಮೇಘಾಲಯದ ಲಿವಿಂಗ್ ರೂಟ್ ಸೇತುವೆಯಿಂದ ಹಿಡಿದು ಕರ್ನಾಟಕದ ಹಕ್ಕಿ ಪಿಕ್ಕಿ ಬುಡಕಟ್ಟು ಗ್ರಾಮದವರೆಗೆ ಭಾರತವು ಕೆಲವು ವಿಶಿಷ್ಟವಾದ ಮತ್ತು ಆಕರ್ಷಕ ಸ್ಥಳಗಳಿಗೆ ನೆಲೆಯಾಗಿದೆ. ಇಂತಹ ವಿಶಿಷ್ಟ ತಾಣಗಳಲ್ಲಿ ಒಂದು ಈ ಮೇಘಾಲಯದ ಶಿಲ್ಲಾಂಗ್ ಬಳಿಯ ಕಾಂಗ್‌ಥಾಂಗ್ ಗ್ರಾಮ. ರಾಜಧಾನಿ ಶಿಲ್ಲಾಂಗ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಕಾಂಗ್‌ಥಾಂಗ್ ಗ್ರಾಮವು ಸುಮಾರು 900 ಜನರನ್ನು ಹೊಂದಿರುವ ಗ್ರಾಮವಾಗಿದ್ದು, ವಿಶೇಷವಾಗಿ ಇದನ್ನು 'ಭಾರತದ ಶಿಳ್ಳೆ ಗ್ರಾಮ' ಎಂದು ಕರೆಯಲಾಗುತ್ತದೆ.

ಮುಂದೆ ಓದಿ ...
  • Share this:

ಭಾರತ (India) ಹೇಳಿಕೇಳಿ ವೈವಿಧ್ಯಮಯ ದೇಶ. ಜನ, ಸಂಸ್ಕೃತಿ, ಹವಾಮಾನ, ಆಚಾರ-ವಿಚಾರ ಹೀಗೆ ಎಲ್ಲವೂ ಭಿನ್ನ. ಮೇಘಾಲಯದ ಲಿವಿಂಗ್ ರೂಟ್ ಸೇತುವೆಯಿಂದ ಹಿಡಿದು ಕರ್ನಾಟಕದ ಹಕ್ಕಿ ಪಿಕ್ಕಿ ಬುಡಕಟ್ಟು ಗ್ರಾಮದವರೆಗೆ ಭಾರತವು ಕೆಲವು ವಿಶಿಷ್ಟವಾದ ಮತ್ತು ಆಕರ್ಷಕ ಸ್ಥಳಗಳಿಗೆ (Attractive places) ನೆಲೆಯಾಗಿದೆ. ಇಂತಹ ವಿಶಿಷ್ಟ ತಾಣಗಳಲ್ಲಿ ಒಂದು ಈ ಮೇಘಾಲಯದ ಶಿಲ್ಲಾಂಗ್ ಬಳಿಯ ಕಾಂಗ್‌ಥಾಂಗ್ ಗ್ರಾಮ (Kangthong village). ರಾಜಧಾನಿ ಶಿಲ್ಲಾಂಗ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಕಾಂಗ್‌ಥಾಂಗ್ ಗ್ರಾಮವು ಸುಮಾರು 900 ಜನರನ್ನು ಹೊಂದಿರುವ ಗ್ರಾಮವಾಗಿದ್ದು, ವಿಶೇಷವಾಗಿ ಇದನ್ನು 'ಭಾರತದ ಶಿಳ್ಳೆ ಗ್ರಾಮ' (Indias Whistling Village) ಎಂದು ಕರೆಯಲಾಗುತ್ತದೆ.


ವಿಸ್ಲಿಂಗ್ ವಿಲೇಜ್ ಎಂದು ಏಕೆ ಕರೆಯುತ್ತಾರೆ
ಅರೆ ಇದೆಂಥಾ ಶಿಳ್ಳೆ ಗ್ರಾಮ, ಏಕೆ ಎಂದು ಆಶ್ಚರ್ಯಪಡುತ್ತೀದ್ದೀರಾ? ಇದೇ ನೋಡಿ ಈ ಗ್ರಾಮದ ವಿಶೇಷತೆ. ನಾವೆಲ್ಲಾ ಸಾಮಾನ್ಯವಾಗಿ ಒಬ್ಬರನ್ನು ಕರೆಯಬೇಕಾದರೆ ಅವರು ಹೆಸರು ಹಿಡಿದು ಕರೆಯುತ್ತೇವೆ ಅಲ್ಲವೇ?. ಆದರೆ ಕಾಂಗ್‌ಥಾಂಗ್ ಗ್ರಾಮದಲ್ಲಿ ಈ ಸಂಸ್ಕೃತಿನೇ ಇಲ್ಲ. ಇಲ್ಲಿ ಹೆಸರಿನ ಬದಲಾಗಿ ನಿಗದಿತ ಒಂದು ಸ್ವರದ ಮೂಲಕ ಕರೆಯುತ್ತಾರೆ. ಹೌದು ಇಲ್ಲಿ ಹಳ್ಳಿಗರು ತಮ್ಮ ಹೆಸರಿನ ಜೊತೆ ಹೆಸರುಗಳಿಗೆ ರಾಗಗಳನ್ನು ಹೊಂದಿದ್ದಾರೆ. ಹೀಗಾಗಿ ಈ ಗ್ರಾಮವನ್ನು ಶಿಳ್ಳೆ ಗ್ರಾಮ ಅಥವಾ ‘ವಿಸ್ಲಿಂಗ್ ವಿಲೇಜ್’ ಎಂದು ಕರೆಯಲಾಗುತ್ತದೆ.


ಅದ್ಭುತ ನೈಸರ್ಗಿಕ ಸೌಂದರ್ಯದ ಹೊರತಾಗಿ, ವಿಶಿಷ್ಟ ಸಂಪ್ರದಾಯವು ಕಾಂಗ್‌ಥಾಂಗ್‌ಗೆ ಬರುವ ಪ್ರಯಾಣಿಕರನ್ನು ಆಕರ್ಷಿಸುತ್ತದೆ. ಇಲ್ಲಿನ ಹಳ್ಳಿಯ ನಿವಾಸಿಗಳು ನವಜಾತ ಶಿಶುವಿಗೆ ಸಾಮಾನ್ಯ ಹೆಸರಿನ ಜೊತೆ ಅದಕ್ಕೊಂದು ರಾಗ ಸೇರಿಸಿ ಎರಡನ್ನೂ ನಿಗದಿಪಡಿಸುತ್ತಾರೆ. ಅವರು ಈ ವಿಶಿಷ್ಟ ರಾಗಗಳೊಂದಿಗೆ ಒಬ್ಬರನ್ನೊಬ್ಬರು ಕರೆದುಕೊಳ್ಳುತ್ತಾರೆ.


ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯ ಯಾವುದು  
ಕಾಂಗ್‌ಥಾಂಗ್, ಶಿಲ್ಲಾಂಗ್‌ನಿಂದ ಸುಮಾರು 53 ಕಿಲೋಮೀಟರ್‌ಗಳಷ್ಟು ಮೂರು-ಗಂಟೆಗಳ ಪ್ರಯಾಣವನ್ನು ಹೊಂದಿದೆ, ಇದು ಹಚ್ಚ ಹಸಿರಿನ ಪೂರ್ವ ಖಾಸಿ ಬೆಟ್ಟಗಳ ಮಡಿಲಲ್ಲಿ ನೆಲೆಸಿದೆ. ಗ್ರಾಮವು ಚಿಕ್ಕ ಚಿಕ್ಕ ಕುಟೀರಗಳನ್ನು ಹೊಂದಿದೆ ಮತ್ತು ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗೆ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.


ಜಿಂಗ್‌ವಾಯ್ ಲಾಬೀ ಸಂಪ್ರದಾಯದಲ್ಲಿ ಏನಿದೆ
ಈ ಹಳ್ಳಿಯಲ್ಲಿ ತಾಯಿಯು ತನ್ನ ನವಜಾತ ಶಿಶುವಿನ ಕಿವಿಯಲ್ಲಿ ರಾಗವನ್ನು ಹಾಡುತ್ತಾಳೆ ಮತ್ತು ಅದು ಅವನ/ಅವಳ ಹೆಸರಾಗುತ್ತದೆ. ಕಾಂಗ್‌ಥಾಂಗ್ ಗ್ರಾಮಸ್ಥರು ಈ ಸಂಪ್ರದಾಯವನ್ನು ಜಿಂಗ್‌ವಾಯ್ ಲಾಬೀ ಎಂದು ಕರೆಯುತ್ತಾರೆ, ಅಂದರೆ ತಾಯಿಯ ಪ್ರೀತಿಯ ಹಾಡು ಎಂದರ್ಥ. ಹುಟ್ಟಿದ ಕೂಡಲೇ ಮಕ್ಕಳಿಗೆ ಇಲ್ಲಿ ಸಂಗೀತ ನಾಮ ಅಥವಾ ರಾಗವನ್ನು ಇಡುವ ಸಂಪ್ರದಾಯವನ್ನು ಇನ್ನೂ ಸಹ ಮುಂದುವರೆಸಿಕೊಂಡು ಬರುತ್ತಿದ್ದಾರೆ.


ಇದನ್ನೂ ಓದಿ: Viral Video Of Dudhsagar: ಸ್ವರ್ಗ ಭೂಮಿಯನ್ನು ಭೇಟಿಯಾದಂತಿದೆ, ದೂಧ್ ಸಾಗರ್ ಜಲಪಾತದ ಮೋಹಕ ದೃಶ್ಯ!


ವಿಶಿಷ್ಟವಾದ ರಾಗವು ಎರಡು ಹಂತಗಳನ್ನು ಹೊಂದಿದೆ, ಮೊದಲು ತಾಯಿ ಮತ್ತು ಎರಡನೆಯದು ಮಗು. ಮಗು ಬೆಳೆದಂತೆ, ಅವರು ತಮ್ಮ ಪೋಷಕರನ್ನು ಅಥವಾ ಗ್ರಾಮಸ್ಥರನ್ನು ಕರೆಯಲು ತಮ್ಮದೇ ಆದ ರಾಗವನ್ನು ರೂಪಿಸುತ್ತಾರೆ.


ಒಮ್ಮೆ ನೀವು ಹಳ್ಳಿಗೆ ಭೇಟಿ ನೀಡಿದರೆ, ನಿಮಗೆ ಆ ಗ್ರಾಮದ ಸುತ್ತಲೂ ಶಿಳ್ಳೆಗಳು ಮತ್ತು ಕೂಗುಗಳು, ರಾಗಗಳು ಕೇಳುತ್ತವೆ ನೋಡಿ. ಹೂಟ್ಸ್ ಎಂಬ ಧ್ವನಿ ಅಂದರೆ ಅಪಹಾಸ್ಯದಿಂದ ಕೂಗುವುದು ಅಥವಾ ನಗುವ ಶಬ್ದವನ್ನು ಮುಖ್ಯವಾಗಿ ಮಕ್ಕಳನ್ನು ಊಟಕ್ಕೆ ಮನೆಗೆ ಕರೆಯಲು ಅಥವಾ ಸ್ನೇಹಿತರು ಬೀದಿಗಳಲ್ಲಿ ಆಟವಾಡಲು ಅವರನ್ನು ಕರೆಯಲು ಈ ರಾಗಗಳ ಮೂಲಕ ಪರಸ್ಪರ ತಲುಪಲು ಬಳಸಲಾಗುತ್ತದೆ.


ವಿಶ್ವಸಂಸ್ಥೆಯ ಮೆಚ್ಚುಗೆಗೂ ಕೂಡ ಭಾಜನವಾದ ಗ್ರಾಮ
ಈ ವಿಶಿಷ್ಟ ಶೈಲಿಯು ತಲೆಮಾರುಗಳವರೆಗೆ ದೂರದವರೆಗೆ ಸಂವಹನ ನಡೆಸಲು ಅವರಿಗೆ ಸಹಾಯ ಮಾಡಿದೆ. ವಿಶಿಷ್ಟ ಸಂಪ್ರದಾಯದ ಮೂಲವು ಇನ್ನೂ ತಿಳಿದಿಲ್ಲ, ಆದರೆ ಸಾಂಪ್ರದಾಯಿಕ ಸಂಪ್ರದಾಯವು ಗ್ರಾಮ ಸ್ಥಾಪನೆಯಾದಾಗಿನಿಂದ ಇದೆ ಎಂದು ನಂಬಲಾಗಿದೆ.


ಇದನ್ನೂ ಓದಿ:  Water Police: ಇಲ್ಲಿ ನೀರಿನ ಬಳಕೆಗೂ ಇದೆ ಮಿತಿ, ಸ್ವಲ್ಪ ಯಾಮಾರಿದ್ರೂ ದಂಡ ಗ್ಯಾರೆಂಟಿ


ಅಲ್ಲದೇ ಈ ಗ್ರಾಮ ವಿಶ್ವಸಂಸ್ಥೆಯ ಮೆಚ್ಚುಗೆಗೂ ಕೂಡ ಭಾಜನವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಕಾಂಗ್‌ಥಾಂಗ್ ಅನ್ನು ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಎಂದು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ನಾಮಿನೇಟ್ ಮಾಡಿತ್ತು. ಇದು ನಿಜಕ್ಕೂ ಒಬ್ಬರು ಪ್ರವಾಸ ಹೋಗಲು ಬಯಸಬಹುದಾದ ಉತ್ತಮ ತಾಣವಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ ನೋಡಿ.

Published by:Ashwini Prabhu
First published: