ಭಾರತದಲ್ಲಿ ನಿರುದ್ಯೋಗ ಪ್ರಮಾಣ ಶೇ. 7.78ಕ್ಕೆ ಹೆಚ್ಚಳ: ಸಿಎಂಐಇ ವರದಿ

ಗ್ರಾಮೀಣ ಭಾಗದಲ್ಲಿ ಜನವರಿಯಲ್ಲಿ ಶೇ. 5.97ರಷ್ಟಿದ್ದ ನಿರುದ್ಯೋಗ ಫೆಬ್ರುವರಿಯಲ್ಲಿ ಶೇ. 7.37ಕ್ಕೆ ಏರಿದೆ. ನಗರ ಪ್ರದೇಶಗಳಲ್ಲಿ ನಿರುದ್ಯೋಗ ಇನ್ನೂ ಹೆಚ್ಚಿದೆ. ಇಲ್ಲಿ ಶೇ. 8.65ರಿಂದ ಶೇ. 9.70ಗೆ ಏರಿಕೆಯಾಗಿದೆ.

news18-kannada
Updated:March 2, 2020, 2:51 PM IST
ಭಾರತದಲ್ಲಿ ನಿರುದ್ಯೋಗ ಪ್ರಮಾಣ ಶೇ. 7.78ಕ್ಕೆ ಹೆಚ್ಚಳ: ಸಿಎಂಐಇ ವರದಿ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಮಾ. 02): ಜಾಗತಿಕ ಆರ್ಥಿಕ ಮುಗ್ಗಟ್ಟಿನ ನಡುವೆ ಭಾರತದ ಆರ್ಥಿಕತೆಯೂ ಸಂಕಷ್ಟದ ಸ್ಥಿತಿಯಲ್ಲಿದೆ. ಹೊಸ ಉದ್ಯೋಗಗಳ ಸೃಷ್ಟಿಯಿಲ್ಲದೇ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಫೆಬ್ರುವರಿ ತಿಂಗಳಲ್ಲೂ ನಿರುದ್ಯೋಗ ಹೆಚ್ಚಾಗಿದೆ. ಶೇ. 7.78ರಷ್ಟು ನಿರುದ್ಯೋಗ ಇದೆ ಎಂದು ಮುಂಬೈ ಮೂಲದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ (ಸಿಎಂಐಇ) ಬಿಡುಗಡೆ ಮಾಡಿದ ವರದಿಯಿಂದ ತಿಳಿದುಬಂದಿದೆ. ಇದು ಕಳೆದ ತಿಂಗಳಲ್ಲೇ ಗರಿಷ್ಠ ಮಟ್ಟದ ನಿರುದ್ಯೋಗ ಎನ್ನಲಾಗಿದೆ. ಜನವರಿಯಲ್ಲಿ ನಿರುದ್ಯೋಗ ಶೇ. 7.16ರಷ್ಟಿತ್ತು.

ಗ್ರಾಮೀಣ ಭಾಗದಲ್ಲಿ ಜನವರಿಯಲ್ಲಿ ಶೇ. 5.97ರಷ್ಟಿದ್ದ ನಿರುದ್ಯೋಗ ಫೆಬ್ರುವರಿಯಲ್ಲಿ ಶೇ. 7.37ಕ್ಕೆ ಏರಿದೆ. ನಗರ ಪ್ರದೇಶಗಳಲ್ಲಿ ನಿರುದ್ಯೋಗ ಇನ್ನೂ ಹೆಚ್ಚಿದೆ. ಇಲ್ಲಿ ಶೇ. 8.65ರಿಂದ ಶೇ. 9.70ಗೆ ಏರಿಕೆಯಾಗಿದೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರಕ್ಕೆ 46 ಬಲಿ; ಕೋಮುಗಲಭೆಯಲ್ಲಿ ಬಿಜೆಪಿ ಮುಸ್ಲಿಂ ನಾಯಕನ ಮನೆಯೂ ಸುಟ್ಟು ಭಸ್ಮ

ಕಳೆದ ವರ್ಷದಿಂದ ಭಾರತದ ಆರ್ಥಿಕತೆ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ಈಗ ಕೊರೊನಾ ವೈರಸ್ ವಿಶ್ವಾದ್ಯಂತ ವ್ಯಾಪಿಸುತ್ತಿರುವುದು ಭಾರತ ಸೇರಿದಂತೆ ಜಗತ್ತಿನ್ನೆಲ್ಲಾ ದೇಶಗಳಿಗೆ ಗಾಬರಿ ಮೂಡಿಸಿದೆ. ಚೀನಾ ದೇಶವಂತೂ ಅಕ್ಷರಶಃ ತತ್ತರಿಸಿದೆ. ಅಲ್ಲಿಯ ಉದ್ಯಮ ಬಹುತೇಕ ಸ್ತಬ್ಧಗೊಂಡಿದೆ. ಇದು ಜಾಗತಿಕ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಿದೆ. ಮೊದಲೇ ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಭಾರತಕ್ಕೆ ಕೊರೊನಾ ಇನ್ನಷ್ಟು ಹಾನಿ ಉಂಟು ಮಾಡುವ ಸಾಧ್ಯತೆ ಇದೆ. ಭವಿಷ್ಯದ ದಿನಗಳಲ್ಲಿ ಇನ್ನೂ ಹೆಚ್ಚು ಆರ್ಥಿಕ ಸಂಕಷ್ಟ ಬರುವ ಸಾಧ್ಯತೆ ಇದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:March 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading