HOME » NEWS » National-international » INDIAS NOVEMBER INDUSTRIAL OUTPUT RISES BY 1 8 PERCENT TURNS POSITIVE AFTER 3 MONTHS OF CONTRACTION RH

3 ತಿಂಗಳ ಕುಸಿತದ ಬಳಿಕ ನವೆಂಬರ್​ನಲ್ಲಿ ಶೇ.1.8 ಏರಿಕೆ ಕಂಡ ಕೈಗಾರಿಕಾ ಉತ್ಪಾದನೆ

2018-19ರ ಏಪ್ರಿಲ್​ನಿಂದ ನವೆಂಬರ್​ವರೆಗಿನ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.5ರಷ್ಟು ಪ್ರಗತಿಯಲ್ಲಿತ್ತು. ಪ್ರಸ್ತುತ ವರ್ಷದ ಇದೇ ಅವಧಿಯ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.0.6ರಷ್ಟಿದೆ.

HR Ramesh | news18-kannada
Updated:January 10, 2020, 8:17 PM IST
3 ತಿಂಗಳ ಕುಸಿತದ ಬಳಿಕ ನವೆಂಬರ್​ನಲ್ಲಿ ಶೇ.1.8 ಏರಿಕೆ ಕಂಡ ಕೈಗಾರಿಕಾ ಉತ್ಪಾದನೆ
ಸಾಂದರ್ಭಿಕ ಚಿತ್ರ.
  • Share this:
ನವದೆಹಲಿ: ನವೆಂಬರ್ ತಿಂಗಳಲಿನಲ್ಲಿ ಕೈಗಾರಿಕ ಉತ್ಪನ್ನ ಉತ್ಪಾದನೆ ಶೇ.1.8ರಷ್ಟು ಹೆಚ್ಚಳವಾಗಿದೆ. ಅದರ ಹಿಂದಿನ ಮೂರು ತಿಂಗಳು ತೀವ್ರ ಕುಸಿತ ಕಂಡಿದ್ದ ಉತ್ಪಾದನಾ ವಲಯ ನವೆಂಬರ್​ನಲ್ಲಿ ಕೊಂಚ ಚೇತರಿಕೆ ಕಂಡಿದೆ ಎಂದು ಶುಕ್ರವಾರ ಸರ್ಕಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳು ಹೇಳಿವೆ. 

2018ರ ನವೆಂಬರ್​ನಲ್ಲಿ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ಶೇ.0.2ರಷ್ಟು ಬೆಳವಣಿಗೆ ಸಾಧಿಸಿತ್ತು.

ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿಯ ದತ್ತಾಂಶಗಳ ಪ್ರಕಾರ, ಕಳೆದ ವರ್ಷದ ಇದೇ ತಿಂಗಳಿನಲ್ಲಿ ಉತ್ಪಾದನಾ ವಲಯ ಶೇ.0.7ರ ಕುಸಿತದ ವಿರುದ್ಧ ಶೇ.2.7ರಷ್ಟು ಬೆಳವಣಿಗೆ ಸಾಧಿಸಿದೆ.

2018 ನವೆಂಬರ್​ನಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಶೇ.5.1 ರ ಬೆಳವಣಿಗೆಗೆ ಹೋಲಿಸಿದರೆ ಈ ಬಾರಿ ಶೇ.(-) 5 ನಕಾರಾತ್ಮಕವಾಗಿ ಮಾರ್ಪಟ್ಟಿದೆ. ಗಣಿಗಾರಿಕೆ ವಲಯ ಉತ್ಪಾದನೆ ಕಳೆದ ವರ್ಷದ ಇದೇ ತಿಂಗಳಿನಲ್ಲಿ ಶೇ.2.7 ರಿಂದ ಶೇ.1.7ಕ್ಕೆ ಇಳಿದಿದೆ.

2018-19ರ ಏಪ್ರಿಲ್​ನಿಂದ ನವೆಂಬರ್​ವರೆಗಿನ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.5ರಷ್ಟು ಪ್ರಗತಿಯಲ್ಲಿತ್ತು. ಪ್ರಸ್ತುತ ವರ್ಷದ ಇದೇ ಅವಧಿಯ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.0.6ರಷ್ಟಿದೆ.

ಇದನ್ನು ಓದಿ: 2018ರಲ್ಲಿ ಆತ್ಮಹತ್ಯೆಗೆ ಶರಣಾದ ರೈತರು 10,349; ಕೇಂದ್ರದ ಎನ್​ಸಿಆರ್​​ಬಿ ವರದಿ
Published by: HR Ramesh
First published: January 10, 2020, 8:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories