news18-kannada Updated:February 22, 2021, 12:25 PM IST
ಸಾಂದರ್ಭಿಕ ಚಿತ್ರ
ಹಿಂದೂಗಳು ಗೋಮಾತೆಯನ್ನು ತಾಯಿ ಎಂದು ಭಾವಿಸಿ ಪೂಜೆ ಮಾಡುತ್ತಾರೆ. ಹಸುವಿನ ಹಾಲು, ಗಂಜಲು ಮತ್ತು ಸಗಣಿಗೆ ಮಹತ್ವದ ಗುಣವಿದೆ. ಇನ್ನು, ಹಸುವಿನ ಸಗಣಿ ಇದೀಗ ಕಾರ್ಪೋರೆಟ್ ವಲಯ ತಲುಪಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಗಗನಕ್ಕೆ ಏರಿದೆ. ಇದರಿಂದ ಹಸುವಿನ ಸಗಣಿಯನ್ನು ಬಳಸಿಕೊಂಡು ಸಿಎನ್ಜಿ ಗ್ಯಾಸ್ ತಯಾರಿಸಿ ಉತ್ತಮ ವ್ಯಾಪಾರ ಮಾಡಬಹುದು ಎಂದು ರಾಷ್ಟ್ರೀಯ ಕಾಮಧೇನು ಆಯೋಗ ತಿಳಿಸಿದೆ.
ಹವಾಮಾನ ಬದಲಾವಣೆ ಮತ್ತು ದಿನನಿತ್ಯ ಪೆಟ್ರೋಲ್, ಡಿಸೇಲ್ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಗ್ರಾಹಕರು ಕಂಗಾಲು ಆಗಿದ್ದಾರೆ. ಇದರಿಂದ ಹೊರಬರಲು ಹಸು ಆಯೋಗ ಉತ್ತಮ ಅವಕಾಶವನ್ನು ನೀಡಿದೆ. ಹಸುವಿನ ಸಗಣಿಯಿಂದ ಭಾರೀ ಆದಾಯವನ್ನು ಗಳಿಸಬಹುದು. ಹಸುವಿನ ಗಂಜಲು ಮತ್ತು ಸಗಣಿ ಆಕರ್ಷಕ ವ್ಯಾಪಾರಕ್ಕೆ ಅವಕಾಶವನ್ನು ನೀಡುತ್ತದೆ ಎಂದು ಕಾಮಧೇನು ಆಯೋಗ ತಿಳಿಸಿದೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಾಗಿದೆ. ಆದರೆ, ವಾಹನಗಳಿಗೆ ತೈಲ ಬೇಕೇ ಬೇಕು. ಪೆಟ್ರೋಲ್ ಮತ್ತು ಡಿಸೇಲ್ ಜೊತೆಗೆ ಸಿಎನ್ಜಿ ಗ್ಯಾಸ್ ಬಳಸುವುದರಿಂದ ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆದುಕೊಳ್ಳಬಹುದು. ಹಸುವಿನ ಸಗಣಿಯಿಂದ ಸಿಎನ್ಜಿ ಗ್ಯಾಸ್ ತಯಾರಿಸಿ ಮಾರಾಟ ಮಾಡಿದರೆ ಉತ್ತಮ ಲಾಭದಾಯಕ ವ್ಯಾಪಾರ ಆಗಲಿದೆ ಎಂದು ಆಯೋಗ ತಿಳಿಸಿದೆ.
ದೇಸಿ ಅನಿಲ ಸಿಎನ್ಜಿ ಗ್ಯಾಸ್:
ಭಾರತದಲ್ಲಿ ಹಸುವಿನ ಸಗಣಿಯಿಂದ ತಯಾರಿಸಿರುವ ನೈಸರ್ಗಿಕ ಅನಿಲ (ಸಿಎನ್ಜಿ) ಬಳಸಿ. ಇದಕ್ಕೆ ಹಣ ಕೂಡ ಕಡಿಮೆ ಆಗುತ್ತದೆ. ಆದರೆ, ಸದ್ಯಕ್ಕೆ ಸಿಎನ್ಜಿ ಗ್ಯಾಸ್ ಒದಗಿಸುವ ಯಾವುದೇ ಪಂಪ್ಗಳು ಇಲ್ಲ. ಆದರೆ, ಹಸುವಿನ ಉತ್ಪನ್ನಗಳಿಂದ ಹಲವು ಲಾಭದಾಯಕ ವ್ಯಾಪಾರಗಳಿವೆ ಎಂದು ರಾಷ್ಟ್ರೀಯ ಕಾಮಧೇನು ಆಯೋಗ ಅಭಿಪ್ರಾಯಪಟ್ಟಿದೆ.
Published by:
Sushma Chakre
First published:
February 22, 2021, 12:25 PM IST