• Home
  • »
  • News
  • »
  • national-international
  • »
  • Zakir Naik in FIFA World Cup 2022: ಫಿಫಾದಲ್ಲಿ ಜಾಕೀರ್‌ ನಾಯ್ಕ್‌ಗೆ ರಾಜಾತಿಥ್ಯ! ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಲ್ಲಿ ಗಣ್ಯ ಅತಿಥಿ!

Zakir Naik in FIFA World Cup 2022: ಫಿಫಾದಲ್ಲಿ ಜಾಕೀರ್‌ ನಾಯ್ಕ್‌ಗೆ ರಾಜಾತಿಥ್ಯ! ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಲ್ಲಿ ಗಣ್ಯ ಅತಿಥಿ!

ಜಾಕೀರ್ ನಾಯ್ಕ್

ಜಾಕೀರ್ ನಾಯ್ಕ್

ಭಾರತದ ಮೋಸ್ಟ್ ವಾಂಟೆಡ್‌ ವ್ಯಕ್ತಿಯಾದ (India's most wanted man) ಜಾಕೀರ್ ನಾಯಕ್‌ಗೆ ಫಿಫಾ ಆಹ್ವಾನ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. FIFA ವಿಶ್ವಕಪ್ 2022 ಕ್ಕೆ ಮುಂಚಿತವಾಗಿ ಇಸ್ಲಾಂ ಧರ್ಮವನ್ನು ಬೋಧಿಸುವ ಉಪನ್ಯಾಸಗಳನ್ನು ನೀಡಲು ಕತಾರ್ ಜಾಕೀರ್ ನಾಯಕ್‌ನನ್ನು ಆಹ್ವಾನಿಸುತ್ತಿದ್ದಂತೆ ಚರ್ಚೆ ಜೋರಾಗಿದೆ.

ಮುಂದೆ ಓದಿ ...
  • Share this:

ಫಿಫಾ ವರ್ಲ್ಡ್ ಕಪ್-2022, ಕತಾರ್: ಫುಟ್ಬಾಲ್‌ ವಿಶ್ವಕಪ್ ಅದ್ಧೂರಿಯಾಗಿ (Football World Cup) ಪ್ರಾರಂಭಗೊಂಡಿದೆ. ಇದರಲ್ಲಿ ಗಣ್ಯ ಅತಿಥಿಯಾಗಿ (guest of honor) ವಿವಾದಾತ್ಮಕ ವ್ಯಕ್ತಿಯೊಬ್ಬನಿಗೆ ಆಹ್ವಾನ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ ಜಾಕೀರ್ ನಾಯಕ್ (Zakir Naik). ಭಾರತದ ಮೋಸ್ಟ್ ವಾಂಟೆಡ್‌ ವ್ಯಕ್ತಿಯಾದ (India's most wanted man) ಜಾಕೀರ್ ನಾಯಕ್‌ಗೆ ಫಿಫಾ ಆಹ್ವಾನ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. FIFA ವಿಶ್ವಕಪ್ 2022 ಕ್ಕೆ ಮುಂಚಿತವಾಗಿ ಇಸ್ಲಾಂ ಧರ್ಮವನ್ನು ಬೋಧಿಸುವ ಉಪನ್ಯಾಸಗಳನ್ನು ನೀಡಲು ಕತಾರ್ ಜಾಕೀರ್ ನಾಯಕ್‌ನನ್ನು ಆಹ್ವಾನಿಸುತ್ತಿದ್ದಂತೆ ಚರ್ಚೆ ಜೋರಾಗಿದೆ. ವಿವಾದಾತ್ಮಕ ಟೆಲಿವಾಂಜೆಲಿಸ್ಟ್ ಜಾಕಿರ್ ನಾಯಕ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದಾನೆ.


ಜಾಕೀರ್‌ ನಾಯ್ಕ್‌ಗೆ ಫಿಫಾದಿಂದ ಆಹ್ವಾನ


ಜಾಕೀರ್ ನಾಯ್ಕ್‌ಗೆ ಕತಾರ್ ಸರ್ಕಾರದಿಂದ ಗೌರವದ ಆಹ್ವಾನ ನೀಡಲಾಗಿದೆ. ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್‌ ಪಂದ್ಯಾವಳಿಯ ವಿಶೇಷ ಅತಿಥಿಯಾಗಿ ಜಾಕೀರ್ ನಾಯ್ಕ್‌ ಅವರನ್ನು ಆಹ್ವಾನಿಸಲಾಗಿದೆ.


ಧಾರ್ಮಿಕ ಉಪನ್ಯಾಸ ನೀಡಲಿರುವ ಜಾಕೀರ್ ನಾಯ್ಕ್


ನಿನ್ನೆಯಿಂದ ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ಡಾ ಜಾಕೀರ್ ನಾಯಕ್ ಧಾರ್ಮಿಕ ಉಪನ್ಯಾಸಗಳನ್ನು ನೀಡಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೋಹಾದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಅಲ್ ಬೇತ್ ಸ್ಟೇಡಿಯಂನಲ್ಲಿ ಫಿಫಾ ವಿಶ್ವಕಪ್ ನಡೆಯುತ್ತಿದೆ. ಜಾಕೀರ್ ನಾಯಕ್ ಅವರು ಟೂರ್ನಿಯುದ್ದಕ್ಕೂ ಹಲವು ಧಾರ್ಮಿಕ ಉಪನ್ಯಾಸಗಳನ್ನು ನೀಡಲಿದ್ದಾರೆ ಎಂದು ವರದಿಯಾಗಿದೆ.


ಇದನ್ನೂ ಓದಿ: FIFA World Cup 2022: ಕ್ರೀಡಾಂಗಣದಲ್ಲಿ ಇಲ್ಲ ಬಿಯರ್ ಮಾರಾಟ! ಕತಾರ್ ಸರ್ಕಾರದ ಈ ನಿರ್ಧಾರ ಯಾಕೆ ಗೊತ್ತಾ?


ಯಾರು ಈ ಜಾಕೀರ್ ನಾಯ್ಕ್?


ಜಾಕೀರ್ ನಾಯ್ಕ್ ಇಸ್ಲಾಮಿಕ್ ಬೋಧಕ. ಭಾರತದಲ್ಲಿ ಉಗ್ರರು, ಭಯೋತ್ಪಾದಕ ಸಂಘಟನೆಗಳಿಗೆ ಹಣ ವರ್ಗಾವಣೆ ಮತ್ತು ದ್ವೇಷ ಭಾಷಣದ ಅನೇಕ ಪ್ರಕರಣಗಳ ಆರೋಪ ಈತನ ಮೇಲಿದೆ. ಭಾರತ ಸರ್ಕಾರ ಆತನ ವಿರುದ್ಧ ಆರೋಪ ಹೊರಿಸಿದ ನಂತರ ಆತ 2017 ರಿಂದ ಮಲೇಷ್ಯಾದಲ್ಲಿ ದೇಶಭ್ರಷ್ಟನಾಗಿ ವಾಸಿಸುತ್ತಿದ್ದಾನೆ. ಮಾರ್ಚ್‌ನಲ್ಲಿ, ಗೃಹ ಸಚಿವಾಲಯವು ಜಾಕಿರ್ ನಾಯ್ಕ್ ಸ್ಥಾಪಿಸಿದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್‌ಎಫ್) ಅನ್ನು ಕಾನೂನುಬಾಹಿರ ಸಂಘ ಎಂದು ಘೋಷಿಸಿ ಐದು ವರ್ಷಗಳ ಕಾಲ ನಿಷೇಧಿಸಿತ್ತು.


ಜಾಕೀರ್‌ ನಾಯ್ಕ್ ಸಂಸ್ಥೆ ಮೇಲೂ ಆರೋಪ


2016ರಲ್ಲಿ ಜಾಕೀರ್ ನಾಯಕ್‌ ನಡೆಸುತ್ತಿದ್ದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥೆಯನ್ನು ಸರ್ಕಾರ ನಿಷೇಧಿಸಿತ್ತು. ಈ ಸಂಸ್ಥೆ ಹಾಗೂ ಇದರ ಸದಸ್ಯರು ದೇಶದಲ್ಲಿ ಕೋಮು ಸಾಮರಸ್ಯ ಹದಗೆಡಿಸುವ ಕೆಲಸ ಮಾಡುತ್ತಿದ್ದರು. ದ್ವೇಷದ ವಾತಾವರಣ ಸೃಷ್ಟಿಸಲು ಹಾಗೂ ಉದ್ವಿಗ್ನತೆ ಉಂಟು ಮಾಡಲು ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು.


ಕತಾರ್ ಮಾಧ್ಯಮಗಳಲ್ಲಿ ಪ್ರಚಾರ


ಕತಾರ್ ಸರ್ಕಾರಿ ಸ್ವಾಮ್ಯದ ಕ್ರೀಡಾ ಚಾನೆಲ್ ಅಲ್ಕಾಸ್‌ನ ನಿರೂಪಕ ಫೈಸಲ್ ಅಲ್ಹಜ್ರಿ ಶನಿವಾರ ಟ್ವಿಟ್ಟರ್‌ನಲ್ಲಿ "ವಿಶ್ವಕಪ್ ಸಮಯದಲ್ಲಿ ಕತಾರ್‌ನಲ್ಲಿ ಬೋಧಕ ಶೇಖ್ ಜಾಕಿರ್ ನಾಯಕ್ ಉಪಸ್ಥಿತರಿದ್ದಾರೆ ಮತ್ತು ಪಂದ್ಯಾವಳಿಯುದ್ದಕ್ಕೂ ಅನೇಕ ಧಾರ್ಮಿಕ ಉಪನ್ಯಾಸಗಳನ್ನು ನೀಡುತ್ತಾರೆ" ಎಂದು ಅಲ್ ಅರೇಬಿಯಾ ನ್ಯೂಸ್ ಉಲ್ಲೇಖಿಸಿದೆ.


ಇದನ್ನೂ ಓದಿ: FIFA World Cup 2022: ಕತಾರ್‌ಗೆ 2000 ಪೌಂಡ್‌ ಮಾಂಸ ಕಳುಹಿಸಿದ ಉರುಗ್ವೆ, ಅರ್ಜೆಂಟೀನಾ ತಂಡದ ಅಧಿಕಾರಿಗಳು


ಈಗಾಗಲೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾಯ್ಕ್


ಕಳೆದ ವಾರ ಕತಾರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಝಾಕಿರ್ ನಾಯ್ಕ್ ಇತರ ಧರ್ಮದ ನಾಲ್ವರನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದರು ಎಂದು ವರದಿಯಾಗಿದೆ. ಅವರ ವಿಡಿಯೋ ಕೂಡ ಹೊರಬಿದ್ದಿದೆ. ವೀಡಿಯೊದಲ್ಲಿ, ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್ ಇತರ ನಾಲ್ವರೊಂದಿಗೆ ವೇದಿಕೆಯಲ್ಲಿದ್ದಾರೆ.

Published by:Annappa Achari
First published: