ಇಂದು ಉದ್ಘಾಟನೆಯಾಗಲಿದೆ ದೇಶದ ಅತಿ ಉದ್ದದ ರೈಲು, ರಸ್ತೆ ಮಾರ್ಗದ ಸೇತುವೆ

ಒಟ್ಟು 5,920 ಕೋಟಿ ರೂ. ಮೊತ್ತದ ಯೋಜನೆಯ ಈ ಸೇತುವೆಯೂ ಎರಡು ರೈಲ್ವೆ ಹಳಿ ಮತ್ತು ಅದರ ಮೇಲ್ಭಾಗದಲ್ಲಿ ಮೂರು ಪಥದ ರಸ್ತೆ ಮಾರ್ಗವನ್ನು ಒಳಗೊಂಡಿದೆ.

HR Ramesh | news18
Updated:December 25, 2018, 9:15 AM IST
ಇಂದು ಉದ್ಘಾಟನೆಯಾಗಲಿದೆ ದೇಶದ ಅತಿ ಉದ್ದದ ರೈಲು, ರಸ್ತೆ ಮಾರ್ಗದ ಸೇತುವೆ
ರೈಲು ಹಾಗೂ ರಸ್ತೆ ಮಾರ್ಗವನ್ನು ಹೊಂದಿರುವ ಬೋಗಿಬೀಲ್ ಸೇತುವೆ
  • News18
  • Last Updated: December 25, 2018, 9:15 AM IST
  • Share this:
ಗುವಾಹಟಿ: ಎಚ್​.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಶಂಕುಸ್ಥಾಪನೆಗೊಂಡಿದ್ದ ದೇಶದ ಅತಿ ಉದ್ದದ ಸೇತುವೆ ಬೋಗಿಬೇಲ್ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಡಿ.25) ಉದ್ಘಾಟಿಸಲಿದ್ದಾರೆ.

2002ರಲ್ಲಿ ಅಟಲ್​ ಬಿಹಾರಿ ವಾಜಪೇಯಿ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿ ಆರಂಭವಾದ 16 ವರ್ಷಗಳ ನಂತರ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 4.94 ಕಿ.ಮೀ. ಉದ್ದವಿರುವ ಈ ಸೇತುವೆ ದೇಶದ ಅತಿದೊಡ್ಡ ರೈಲ್ವೆ ಮತ್ತು ರಸ್ತೆ ಮಾರ್ಗದ ಸೇತುವೆಯಾಗಿದೆ. ,

ಒಟ್ಟು 5,920 ಕೋಟಿ ರೂ. ಮೊತ್ತದ ಯೋಜನೆಯ ಈ ಸೇತುವೆಯೂ ಎರಡು ರೈಲ್ವೆ ಹಳಿ ಮತ್ತು ಅದರ ಮೇಲ್ಭಾಗದಲ್ಲಿ ಮೂರು ಪಥದ ರಸ್ತೆ ಮಾರ್ಗವನ್ನು ಒಳಗೊಂಡಿದೆ.

ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ಈ ಸೇತುವೆ ಉದ್ಘಾಟಿಸಿದಾಗ ನಾನು ಶಾಲೆಯಲ್ಲಿ ಓದುತ್ತಿದ್ದೆ. ಕೆಲ ವರ್ಷಗಳ ನಂತರ ಈ ಸೇತುವೆ ನನ್ನ ಕನಸಿನ ಯೋಜನೆಯಾಯಿತು. ಅಂತೂ ಕೊನೆಗೂ ಹಲವು ಅಡೆತಡೆಗಳನ್ನು ದಾಟಿ, ಇಂದು ಯೋಜನೆ ಪೂರ್ಣಗೊಂಡಿದೆ ಎಂದು ಯೋಜನೆಯ ಪ್ರಮುಖ ರೂವಾರಿ ಭಾಸ್ಕರ್ ಗೋಗೋಯ್​ ಹೇಳುತ್ತಾರೆ.

ಅಸ್ಸಾಂ ಮತ್ತು ಅರುಣಾಚಲಪ್ರದೇಶದ ನಿವಾಸಿಗಳ ಈ ರೈಲು ಮತ್ತು ರಸ್ತೆಯ ಡಬಲ್​ ಡೆಕ್ಕರ್​ ಸೇತುವೆ ನಿರ್ಮಾಣ ಪೂರ್ಣಕ್ಕೆ 21 ವರ್ಷಗಳಿಂದ ಕಾಯುತ್ತಿದ್ದರು. ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾದ ಈ ರೈಲು ಮತ್ತು ಬಸ್​ ಸೇತುವೆಯಿಂದಾಗಿ ಅಸ್ಸಾಂನ ತಿನಸುಕಿಯಾ ನಗರಕ್ಕೂ ಮತ್ತು ಅರುಣಚಲಪ್ರದೇಶದ ನಹರಲಗುನ್​ ನಗರದ ನಡುವೆ  ಕ್ಕೂ ಓಡಾಟಕ್ಕೆ ಹತ್ತು ಗಂಟೆಗಳ ಅವಧಿ ಉಳಿಯುತ್ತದೆ.

ಇದನ್ನು ಓದಿ: ವಿಶ್ವದ ಅತಿದೊಡ್ಡ ಸಮುದ್ರ ಸೇತುವೆ ಹೇಗಿದೆ ನೊಡಬೇಕಾ ಇಲ್ಲಿ ಕ್ಲಿಕ್ ಮಾಡಿ


ಈಶಾನ್ಯ ಭಾಗದಲ್ಲಿ ಮೂರನೇ ಅತಿದೊಡ್ಡ ನಗರವಾಗಿರುವ ದಿಬ್ರುಗಾವ್ ನಗರ ಪ್ರಮುಖ ಆಸ್ಪತ್ರೆಗಳು, ಮೆಡಿಕಲ್​ ಕಾಲೇಜುಗಳು ಮತ್ತು ವಿಮಾನ ನಿಲ್ದಾಣ ಒಳಗೊಂಡಿದ್ದು, ಈ ನಗರಕ್ಕೆ ಸಂಚರಿಸಲು ಜನರಿಗೆ ಈ ಸೇತುವೆ ಸಾಕಷ್ಟು ಉಪಯೋಗವಾಗಲಿದ.


ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವಾದ ಡಿ.25ರಂದು ಪ್ರಧಾನಿ ಮೋದಿ ಅವರು ಈ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

First published: December 23, 2018, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading