NTPC ಲಿಮಿಟೆಡ್ ಶನಿವಾರ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸಿಂಹಾದ್ರಿ ಥರ್ಮಲ್ ಸ್ಟೇಷನ್ನಲ್ಲಿ ನಿರ್ಮಿಸಿರುವ ಭಾರತದ ಅತಿದೊಡ್ಡ ತೇಲುವ ಸೋಲಾರ್ ಪ್ಲಾಂಟ್ ಯೋಜನೆ ಕಾರ್ಯಾಚರಣೆ ಆರಂಭಿಸಿದೆ. ಸಿಂಹಾದ್ರಿ ಥರ್ಮಲ್ ಸ್ಟೇಷನ್ನಲ್ಲಿ 15 ಮೆಗಾವ್ಯಾಟ್ ಫ್ಲೋಟಿಂಗ್ ಸೋಲಾರ್ ಯೋಜನೆಯನ್ನು ಪ್ರಾರಂಭಿಸಿದ ನಂತರ ಈ ಬೃಹತ್ ಯೋಜನೆಯನ್ನು ತೆರೆಯಲಾಗಿದೆ. ಇದರೊಂದಿಗೆ ಒಟ್ಟು ಸೋಲಾರ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಸುಮಾರು 25 ಮೆಗಾವ್ಯಾಟ್ ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
" ಅವಶ್ಯಕತೆಗಳಿಗೆ ಅನುಗುಣವಾಗಿ ನಿರ್ಮಿಸಿದ್ದ, 15 ಮೆಗಾವ್ಯಾಟ್ ಸಾಮರ್ಥ್ಯದ ಪ್ಲಾಂಟ್ ಯಶಸ್ವಿಯಾದ ನಂತರ, ಆಂಧ್ರಪ್ರದೇಶದ ಸಿಂಹಾದ್ರಿಯಲ್ಲಿ ಸಿಂಹಾದ್ರಿ ಫ್ಲೋಟಿಂಗ್ ಸೋಲಾರ್ ಪಿವಿ ಯೋಜನೆಯನ್ನು ಘೋಷಿಸಲಾಗಿತ್ತು ಎಂದು ನಾವು ತಿಳಿಸಲು ಬಯಸುತ್ತೇವೆ. 10:00 ಗಂಟೆ 21.08.2021 ರಂದು ಹೊರಡಿಸಿದ "ಸರ್ಕಾರಿ- ಪ್ರಾಯೋಜಿತ NTPC ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದರೊಂದಿಗೆ, NTPC ಮತ್ತು NTPC ಸಮೂಹ ಇದುವರೆಗು ತಾನು ಸ್ಥಾಪಿಸಿರುವ ಹಾಗೂ ಉತ್ಪಾದಿಸುತ್ತಿರುವ ವಿದ್ಯುತ್ ಕ್ರಮವಾಗಿ 53,475 MW ಮತ್ತು 66,900 MW ಆಗಿದೆ. ಈ ಸೌರ ಯೋಜನೆಯು ವಿಶೇಷವಾಗಿ ಭಾರತ ಸರ್ಕಾರವು 2018 ರಲ್ಲಿ ತಂದ ಫೆಲ್ಕ್ಸಿಬಿಲೈಸೇಶನ್ ಯೋಜನೆಯಡಿ ಸ್ಥಾಪನೆಯಾದ ಮೊದಲನೆಯದು. ಈ ಸೌರ ವಿದ್ಯುತ್ ಉತ್ಪಾದನಾ ಘಟಕದ ಸ್ಥಾಪನೆಯು ತುಂಬಾ ವಿಶಿಷ್ಟವಾದುದು ಹಾಗೂ ಹೊಸಾ ವಿಧಾನದಲ್ಲಿ ವಿನ್ಯಾಸ ಮಾಡಲಾಗಿದೆ. ಇದು ಜಲಾಶಯದ 75 ಎಕರೆ ಜಾಗದಲ್ಲಿ ಹರಡಿದೆ.
ಈ ಯೋಜನೆಯಲ್ಲಿನ ಕಾರ್ಯಕ್ಷಮತೆ ಮತ್ತೊಂದು ಗಮನಾರ್ಹ ಅಂಶವಾಗಿದೆ, ಏಕೆಂದರೆ ಇದು 1 ಲಕ್ಷಕ್ಕೂ ಹೆಚ್ಚು ಸೋಲಾರ್ ಪಿವಿ ಮಾಡ್ಯೂಲ್ಗಳಿಗೆ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 7,000 ಮನೆಗಳಿಗೆ ವಿದ್ಯುತ್ ಪೂರೈಸಲು ಈ ಹೆಚ್ಚಿನ ಶಕ್ತಿಯು ಸಾಕಾಗುತ್ತದೆ, ಅದೇ ಸಮಯದಲ್ಲಿ CO2 ಹೊರಸೂಸುವಿಕೆಯನ್ನು ಪ್ರತಿವರ್ಷ 46,000 ಟನ್ಗಳಷ್ಟು ತಗ್ಗಿಸುತ್ತದೆ. ಸಂಪನ್ಮೂಲಗಳನ್ನು ಉಳಿಸುವ ವಿಷಯ ತೆಗೆದುಕೊಂಡರೆ, ಪ್ರತಿವರ್ಷ ಸುಮಾರು 1,364 ದಶಲಕ್ಷ ಲೀಟರ್ ನೀರನ್ನು ಈ ಯೋಜನೆಯಿಂದ ಉಳಿಸಬಹುದು. ಸುಮಾರು 6,700 ಮನೆಗಳಿಗೆ ಪೂರೈಸಲು ಇದು ಸಾಕಷ್ಟು ನೀರು ಒದಗಿಸುತ್ತದೆ.
ಎನ್ಟಿಪಿಸಿ ಸಂಸ್ಥೆಯು ಎನ್ ಹೈ-ಲೆವೆಲ್ ಡೈಲಾಗ್ ಆನ್ ಎನರ್ಜಿ (ಎಚ್ಎಲ್ಡಿಇ) ಯ ಭಾಗವಾಗಿ ತನ್ನನ್ನು ಎನರ್ಜಿ ಕಾಂಪ್ಯಾಕ್ಟ್ ಸಮೂಹ ಎಂದು ಘೋಷಿಸಿದ ದೇಶದ ಮೊದಲ ಇಂಧನ ಕಂಪನಿಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: Taliban: ಅಫ್ಘನ್ನಲ್ಲಿ ಕೋ- ಎಜುಕೇಶನ್ ಬಂದ್: ಮೊದಲ ಫತ್ವಾ ಹೊರಡಿಸಿದ ತಾಲಿಬಾನ್
NTPC ಸಮೂಹವು ತನ್ನ ಅಡಿಯಲ್ಲಿ 71 ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಹೊಂದಿದೆ, ಅದರಲ್ಲಿ 29 ನವೀಕರಿಸಬಹುದಾದ ಇಂಧನ ಕೇಂದ್ರಗಳು. NTPC ಸಮೂಹದ ಒಟ್ಟು ಸ್ಥಾಪಿತ ಸಾಮರ್ಥ್ಯವು ಒಟ್ಟು 66,990 MW ಆಗಿದೆ. ಈ ಗುಂಪು 2032 ರ ವೇಳೆಗೆ ಸುಮಾರು 60 ಗಿಗಾವಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ಕಂಪನಿಯು ಸುಮಾರು 17 ಗಿಗಾವಾಟ್ ಸಾಮರ್ಥ್ಯದ ನಿರ್ಮಾಣ ಹಂತದಲ್ಲಿದೆ, ಅದರಲ್ಲಿ 5 ಗಿಗಾವಾಟ್ ನವೀಕರಿಸಬಹುದಾದ ಇಂಧನ ಯೋಜನೆಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ