ಆರ್ಥಿಕತೆ ಚೇತರಿಕೆ? ಜನವರಿ ಪಿಎಂಐ ಇಂಡೆಕ್ಸ್ ಪ್ರಕಾರ ಉತ್ಪಾದನಾ ವಲಯ 8 ವರ್ಷದಲ್ಲೇ ಗರಿಷ್ಠ ಮಟ್ಟ

ಒಟ್ಟಾರೆಯಾಗಿ, ದೇಶದ ಉತ್ಪಾದನೆ ಅಥವಾ ತಯಾರಿಕಾ ವಲಯದಲ್ಲಿ ಹೊಸ ಉತ್ಸಾಹ ಬಂದಿದೆ. ಚಟುವಟಿಕೆಗಳು ಹೆಚ್ಚಾಗಿವೆ ಎಂದು ಐಎಚ್​ಎಸ್ ಮಾರ್ಕಿಟ್​ನ ಪಿಎಂಐ ವರದಿ ಅಭಿಪ್ರಾಯಪಟ್ಟಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • News18
 • Last Updated :
 • Share this:
  ಬೆಂಗಳೂರು(ಫೆ. 03): ಭಾರತದ ಆರ್ಥಿಕ ಅಧಃಪತನದಿಂದ ಕಂಗಾಲಾಗಿರುವ ಜನರಿಗೆ ಒಂದಿಷ್ಟು ಸಮಾಧಾನಕರ ಸುದ್ದಿ ಇದೆ. ಆರ್ಥಿಕತೆಗೆ ಬಹಳ ಪ್ರಮುಖವೆಂದು ಪರಿಗಣಿಸಲಾಗಿರುವ ತಯಾರಿಕಾ ಕ್ಷೇತ್ರ ಭಾರತದಲ್ಲಿ ಮತ್ತೊಮ್ಮೆ ಕಳೆಗಟ್ಟುತ್ತಿದೆ. ಈ ವರ್ಷ ಹೆಚ್ಚೆಚ್ಚು ಆರ್ಡರ್​ಗಳು ಬರುತ್ತಿವೆ ಎಂದು ಖಾಸಗಿ ಸಮೀಕ್ಷೆಯೊಂದು ಹೇಳುತ್ತಿದೆ. ಇದು ದೇಶದ ಆರ್ಥಕತೆ ಚೇತರಿಸಿಕೊಳ್ಳುತ್ತಿರುವ ಸೂಚನೆಯಾಗಿದೆ ಎಂಬ ಮಾತೂ ಕೇಳಿಬರುತ್ತಿದೆ. ಈ ಖಾಸಗಿ ಸಮೀಕ್ಷೆಯ ವರದಿಯ ಪ್ರಕಾರ, ಕಳೆದ ಎಂಟು ವರ್ಷದಲ್ಲೇ ಭಾರತದ ಮ್ಯಾನುಫ್ಯಾಕ್ಚರಿಂಗ್ ವಲಯ ಗರಿಷ್ಠ ಮಟ್ಟ ಕಂಡಿದೆಯಂತೆ.

  ಉತ್ಪನ್ನಗಳ ತಯಾರಿಕೆಗೆ ಆರ್ಡರ್​​ಗಳು ಹೆಚ್ಚಾಗುತ್ತಿರುವಂತೆಯೇ ದೇಶದ ವಿವಿಧೆಡೆ ಕಾರ್ಖಾನೆಗಳು ಹೊಸ ನೌಕರರ ನೇಮಕಾತಿ ಪ್ರಕ್ರಿಯೆ ಜೋರಾಗಿದೆ. ಇದೇ ಟ್ರೆಂಡ್ ಮುಂದುವರಿದರೆ ಮುಂಬರುವ ದಿನಗಳಲ್ಲಿ ಆರ್ಥಿಕತೆ ಮತ್ತೆ ಚೇತರಿಕೆ ಕಾಣಲು ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  ಐಎಚ್​ಎಸ್ ಮಾರ್ಕಿಟ್ ಇಂಡಿಯಾ ತಂಡದವರು ತಯಾರಿಸುವ ಪಿಎಂಐ (ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್) ಸೂಚ್ಯಂಕದಿಂದ ಈ ಅಂಶ ಕಂಡುಬಂದಿದೆ. 2020ರ ಜನವರಿ ತಿಂಗಳಲ್ಲಿ ಪಿಎಂಐ ಇಂಡೆಕ್ಸ್ 55.3ಕ್ಕೆ ಏರಿದೆ. ಡಿಸೆಂಬರ್​ನಲ್ಲಿದ್ದ 52.7 ಅಂಕಕ್ಕಿಂತ 2.6 ಅಂಕ ಹೆಚ್ಚಳ ಕಂಡಿದೆ. 2012ರಿಂದ ಇದು ಗರಿಷ್ಠ ಪ್ರಮಾಣ ಎಂದು ಪರಿಗಣಿಸಲಾಗಿದೆ.

  ಇದನ್ನೂ ಓದಿ: Nirmala Sitharaman Exclusive Interview: ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ-ಗತಿ ಸರಿಪಡಿಸಲು ಅಗತ್ಯ ಕ್ರಮ: ನಿರ್ಮಲಾ ಸೀತಾರಾಮನ್

  ಜನವರಿಯಲ್ಲಿ ಉದ್ಯೋಗ ನೇಮಕಾತಿ ಪ್ರಮಾಣ ಹೆಚ್ಚಾಗಿದೆ. ಕಳೆದೆರಡು ತಿಂಗಳಿನಿಂದ ಕಾರ್ಖಾನೆಗಳಿಂದ ಸರಕು ಖರೀದಿ ಪ್ರಮಾಣ ಹೆಚ್ಚಾಗಿದೆ. ಖರೀದಿ ಮತ್ತು ಮಾರಾಟದ ದರಗಳೂ ಹೆಚ್ಚಾಗಿವೆ.

  ಒಟ್ಟಾರೆಯಾಗಿ, ದೇಶದ ಉತ್ಪಾದನೆ ಅಥವಾ ತಯಾರಿಕಾ ವಲಯದಲ್ಲಿ ಹೊಸ ಉತ್ಸಾಹ ಬಂದಿದೆ. ಚಟುವಟಿಕೆಗಳು ಹೆಚ್ಚಾಗಿವೆ ಎಂದು ಐಎಚ್​ಎಸ್ ಮಾರ್ಕಿಟ್​ನ ಪಿಎಂಐ ವರದಿ ಅಭಿಪ್ರಾಯಪಟ್ಟಿದೆ.

  (ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ)

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: