ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಪ್ರಗತಿ ಉತ್ತಮವಾಗಿದೆ; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ದೇಶದಲ್ಲಿ ಆರ್ಥಿಕ ಬೆಳವಣಿಗೆ ಕುಸಿದಿದೆ, ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ ಎಂಬ ಮಾತುಕಗಳು ವ್ಯಾಪಕವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿದರು.

HR Ramesh | news18-kannada
Updated:August 23, 2019, 7:42 PM IST
ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಪ್ರಗತಿ ಉತ್ತಮವಾಗಿದೆ; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕಲೆ: ಮಿರ್​ ಸುಹೇಲ್​
  • Share this:
ನವದೆಹಲಿ: ನಾವು ನಮ್ಮ ವೇಗವನ್ನು ಕಳೆದುಕೊಂಡಿಲ್ಲ. ನಮ್ಮ ಗುರಿಯೆಡೆಗೆ ವೇಗವಾಗಿಯೇ ಮುಂದುವರೆಯುತ್ತಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ದೇಶದಲ್ಲಿ ಆರ್ಥಿಕ ಬೆಳವಣಿಗೆ ಕುಸಿದಿದೆ, ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ ಎಂಬ ಮಾತುಕಗಳು ವ್ಯಾಪಕವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿದರು.

ಚೀನಾ ಮತ್ತು ಅಮೆರಿಕ  ನಡುವೆ ನಡೆಯುತ್ತಿರುವ ವಾಣಿಜ್ಯ ಸಮರ ಇಡೀ ಜಾಗತಿಕ ವಾಣಿಜ್ಯ ಹಿಂಜರಿತಕ್ಕೆ ಕಾರಣವಾಗಿದೆ. ಪ್ರಸ್ತುತ ಜಾಗತಿಕ ಜಿಡಿಪಿ 3.2ರಷ್ಟು ಬೆಳವಣಿಗೆಯಾಗಲಿದೆ ಎಂದು ಯೋಜಿಸಲಾಗಿದೆ. ಜಾಗತಿಕ ಬೇಡಿಕೆಗಳು ಕಡಿಮೆಯಾಗಿವೆ ಎಂದು ಹಲವು ಸಂಸ್ಥೆಗಳು ಹೇಳುತ್ತಿವೆ. ಜಾಗತಿಕ ದುರ್ಬಲ ಆರ್ಥಿಕತೆಗೆ ಹೋಲಿಕೆ ಮಾಡಿದರೆ ನಮ್ಮ ದೇಶದ ಪ್ರಗತಿ ಬಹಳ ವೇಗವಾಗಿದೆ ಎಂದು ದೇಶದ ಆರ್ಥಿಕ ಬೆಳವಣಿಗೆ ಬಗ್ಗೆ ಹೇಳಿದರು.

ಆದಾಯ ತೆರಿಗೆ ಇಲಾಖೆ ಆದೇಶಗಳು, ಸಮನ್ಸ್​ ಮತ್ತು ಪತ್ರಗಳ ಸೇರಿ ಇತರೆ ವಿಷಯಗಳು ಇನ್ನು ಮುಂದೆ ಆಕ್ಟೋಬರ್ 1ರಿಂದ ಕೇಂದ್ರೀಯ ವ್ಯವಸ್ಥೆ ಮೂಲಕ ಮುಂದುವರೆಯಲಿದೆ. ಹಳೆಯ ಎಲ್ಲ ತೆರಿಗೆ ನೋಟಿಸ್​ಗಳನ್ನು ಆಕ್ಟೋಬರ್ 1ರೊಳಗೆ ನಿರ್ಧರಿಸಲಾಗುತ್ತದೆ. ಅಥವಾ ಕೇಂದ್ರೀಯ ವ್ಯವಸ್ಥೆ ಮೂಲಕ ಅವುಗಳನ್ನು ಮತ್ತೊಮ್ಮೆ ಅಪ್​ಲೋಡ್​ ಮಾಡಲಾಗುವುದು ಎಂದರು. ಎಂದು ಹಣಕಾಸು ಸಚಿವೆ ತಿಳಿಸಿದರು.

ಆರ್ಥಿಕತೆ ಸುಧಾರಣೆಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಬದಲಾಗಿರುವ ದೇಶದ ಆರ್ಥಿಕತೆಗೆ ನಮ್ಮ ಸರ್ಕಾರ ಸ್ಪಂದಿಸಲಿದೆ. ಇನ್ನು ಏಂಜೆಲ್​ ಹೂಡಿಕೆದಾರರ ಸ್ಟಾರ್ಟ್​ಅಪ್ ಹೂಡಿಕೆಯ ಮೇಲೆ ತೆರಿಗೆ  ಪಾವತಿಸುವಂತಿಲ್ಲ ಎಂದು ಹಣಕಾಸು ಸಚಿವರು ಘೋಷಿಸಿದರು. ಹಾಗೆಯೇ ಎಫ್​ಪಿಐ ಮೇಲಿನ ವರ್ಧಿತ ಹೆಚ್ಚುವರಿ ಶುಲ್ಕದ ಮೇಲಿನ ತೆರಿಗೆಯನ್ನು ಹಿಂತೆಗೆದುಕೊಂಡರು. 

ನಮ್ಮ ಸರ್ಕಾರದ ಅತಿ ಮುಖ್ಯವಾದ ಕಾರ್ಯಸೂಚಿ ಎಂದರೆ ಅದು ಸುಧಾರಣೆ. 2014ರಿಂದ ನಾವು ಸುಧಾರಣೆಯಲ್ಲಿ ವೇಗವಾಗಿಯೇ ಸಾಗುತ್ತಿದ್ದೇವೆ. ಮುಂದೆಯೂ ಅದು ಮುಂದುವರೆಯಲಿದೆ ಎಂದು ಭರವಸೆ ನೀಡಿದರು.ಕ್ಯಾಪಿಟಲ್​ ಮಾರ್ಕೆಟ್​ನಲ್ಲಿ ಹೂಡಿಕೆಯನ್ನು ನಾವು ಪ್ರೋತ್ಸಾಹಿಸುತ್ತೇವೆ. ದೀರ್ಘ/ಕಡಿಮೆ ಅವಧಿಯ ಕ್ಯಾಪಿಟಲ್​ ಗಳಿಕೆ ಮೇಲೆ ಹಣಕಾಸು (ನಂ.2) ಕಾಯ್ದೆಯಂತೆ ವಿಧಿಸಲಾಗಿದ್ದ ವರ್ಧಿತ ಹೆಚ್ಚುವರಿ ಶುಲ್ಕವನ್ನು ರದ್ದುಮಾಡಲು ನಿರ್ಧರಿಸಿದ್ದೇವೆ ಎಂದು ಹಣಕಾಸು ಸಚಿವೆ ಘೋಷಿಸಿದರು.First published: August 23, 2019, 5:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading