Water Taxi: ಮುಂಬೈನಲ್ಲಿ ಶುರುವಾಗಿದೆ ವಾಟರ್ ಟ್ಯಾಕ್ಸಿ ಸೇವೆ, ಇಲ್ಲಿದೆ ಟಿಕೆಟ್ ಬುಕ್ ಮಾಡುವ ಸಂಪೂರ್ಣ ಮಾಹಿತಿ

ಆಕ್ಸ್‌ಫರ್ಡ್ ಡಿಕ್ಷನರಿಯ ಪ್ರಕಾರ, ವಾಟರ್ ಟ್ಯಾಕ್ಸಿ ಎಂದರೆ, “ನದಿಗಳು, ಕಾಲುವೆಗಳು ಇತ್ಯಾದಿಗಳಲ್ಲಿ ಹಣ ಪಾವತಿಸುವ ಪ್ರಯಾಣಿಕರನ್ನು ಸಾಗಿಸಲು ಇರುವ ಒಂದು ಸಣ್ಣ ದೋಣಿ”.

ವಾಟರ್​ ಟ್ಯಾಕ್ಸಿ

ವಾಟರ್​ ಟ್ಯಾಕ್ಸಿ

  • Share this:

ಮುಂಬೈನ (Mumbai) ಪೂರ್ವ ಕರಾವಳಿಯನ್ನು, ನವಿ ಮುಂಬೈ (Navi Mumbai) ಮತ್ತು ಇತರ ಮುಖ್ಯ ಭೂಭಾಗಗಳಿಗೆ ಸಂಪರ್ಕ ಕಲ್ಪಿಸುವ ಭಾರತದ ಮೊತ್ತ ಮೊದಲ ವಾಟರ್ ಟ್ಯಾಕ್ಸಿ (Water Taxi) ಸೇವೆಯನ್ನು, ಇತ್ತೀಚೆಗೆ ಕೇಂದ್ರ ಶಿಪ್ಪಿಂಗ್ ಸಚಿವ ಸರ್ಬಾನಂದ ಸೊನೊವಾಲ್ ಅವರ ಉಪಸ್ಥಿತಿಯಲ್ಲಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಉದ್ಘಾಟಿಸಿದರು. “ಮೊದಲು ಬ್ರಿಟೀಷರು, ಭಾರತದ ಮೊದಲ ರೈಲ್ವೆ ಸೇವೆಯನ್ನು, ಮುಂಬೈ ಮತ್ತು ಥಾಣೆಯ ನಡುವೆ ಆರಂಭಿಸಿದರು. ಅದು  ಇಡೀ ಭಾರತದಲ್ಲಿ ಕೂಡಲೇ ಹರಡಿತು. ಛತ್ರಪತಿ ಶಿವಾಜಿ ಮಹಾರಾಜರ ಆಳ್ವಿಕೆಯ ಬಳಿಕ ನಗರವು , ಇಡೀ ದೇಶವೇ ಅನುಕರಿಸುವಂತಹ ಪ್ರವೃತ್ತಿಯನ್ನು ಹುಟ್ಟುಹಾಕುತ್ತಾ ಬಂದಿದೆ” ಎಂದು ಠಾಕ್ರೆ ಹೇಳಿದರು.


ವಾಟರ್ ಟ್ಯಾಕ್ಸಿ ಕುರಿತ ಮಾಹಿತಿ ಇಲ್ಲಿದೆ:
ವಾಟರ್ ಟ್ಯಾಕ್ಸಿ ಎಂದರೇನು ?
ಆಕ್ಸ್‌ಫರ್ಡ್ ಡಿಕ್ಷನರಿಯ ಪ್ರಕಾರ, ವಾಟರ್ ಟ್ಯಾಕ್ಸಿ ಎಂದರೆ, “ನದಿಗಳು, ಕಾಲುವೆಗಳು ಇತ್ಯಾದಿಗಳಲ್ಲಿ ಹಣ ಪಾವತಿಸುವ ಪ್ರಯಾಣಿಕರನ್ನು ಸಾಗಿಸಲು ಇರುವ ಒಂದು ಸಣ್ಣ ದೋಣಿ”. ಇದು ಎರಡು ಸ್ಥಳಗಳ ನಡುವಿನ ದೋಣಿ ಸೇವೆಗಿಂತ ಭಿನ್ನವಾಗಿರುತ್ತದೆ.ಮುಂಬೈ –ನವಿ ಮುಂಬೈ ನಡುವಿನ ವಾಟರ್ ಟ್ಯಾಕ್ಸಿ: ಪ್ರಮುಖ ಅಂಶಗಳು
1. ವಾಟರ್ ಟ್ಯಾಕ್ಸಿ ಸೇವೆಯು, ಮುಂಬೈ ಮತ್ತು ನವಿ ಮುಂಬೈ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ ರಸ್ತೆಯ ಮೂಲಕ 90-100 ನಿಮಿಷ ಬೇಕಾಗುತ್ತದೆ, ಆದರೆ ಸಮುದ್ರದ ಮೂಲಕ 40-45 ನಿಮಿಷಗಳು ತಗುಲುತ್ತವೆ.
2. ಅದು ಎಲಿಫೆಂಟಾ ದ್ವೀಪ, ಕನ್ಹೋಜಿ ಅಂಗ್ರೆ ಐಲೆ ಮತ್ತು ಕೊಂಕಣದ ಮುಖ್ಯ ಭೂಭಾಗದ ಇತರ ಪ್ರವಾಸಿ ಸ್ಥಳಗಳಿಗೂ ಪ್ರೋತ್ಸಾಹ ನೀಡುತ್ತದೆ.
3. ನಾಲ್ಕು ಜನ ಆಪರೇಟರ್‌ಗಳು, ವಾಟರ್ ಟ್ಯಾಕ್ಸಿಯಾಗಿ 10-30 ಪ್ರಯಾಣಿಕರ ಸಾಮರ್ಥ್ಯದ ಸ್ಪೀಡ್ ಬೋಟ್‍ಗಳನ್ನು ಮತ್ತು 56 ಪ್ರಯಾಣಿಕರ ಸಾಮರ್ಥ್ಯದ ಕ್ಯಾಟರ್‍ಮೆನ್‍ಗಳನ್ನು ನಡೆಸುತ್ತಾರೆ. ನಿತ್ಯವೂ ಪ್ರಯಾಣಿಸುವವರಿಗೆ ತಿಂಗಳ ಪಾಸ್ ಕೂಡ ನೀಡಲಾಗುತ್ತದೆ.
4. ರಾಜ್ಯ ಮತ್ತು ಕೇಂದ್ರದ 8.37 ಕೋಟಿ ರೂ. ಅನುದಾನದಲ್ಲಿ 2019 ರಲ್ಲಿ ಆರಂಭವಾದ ಬೇಲಾಪುರ್ ಜಟ್ಟಿಯ ಕೆಲಸವು 2021 ರಲ್ಲಿ ಪೂರ್ಣಗೊಂಡಿತು.
5. ಇದು ದೊಡ್ಡ ನಿಲುಗಡೆ ಪ್ರದೇಶವನ್ನು ಹೊಂದಿದೆ ಮತ್ತು ದಕ್ಷಿಣ ಮುಂಬೈನ ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ ಅನ್ನು ಬೇಲಾಪುರ ಮತ್ತು ನವಿ ಮುಂಬೈನ ಮುಖ್ಯ ಭೂಭಾಗದಲ್ಲಿರುವ ಜೆಎನ್‍ಪಿಟಿ ಜೊತೆಗೆ ಎಲಿಫೆಂಟಾ ಗುಹೆಗಳನ್ನು ಸಂಪರ್ಕಿಸುವ 3 ವಾಟರ್ ಟ್ಯಾಕ್ಸಿ ಮಾರ್ಗಗಳನ್ನು ಅಂತಿಮಗೊಳಿಸಲಾಗಿದೆ.
6. ಪ್ರತಿ ಪ್ರಯಾಣಿಕರು 10 ಕೆಜಿ ಲಗೇಜ್ ಕೊಂಡೊಯ್ಯಬಹುದು.ಅದಕ್ಕಿಂತ ಹೆಚ್ಚಿನ ತೂಕದ ಲಗೇಜ್‍ಗೆ ಪ್ರತಿ ಕೆಜಿಗೆ 1000 ರೂ. ಶುಲ್ಕ ವಿಧಿಸಲಾಗುವುದು.


ಇದನ್ನೂ ಓದಿ:  Bird Flu: ದೇಶದಲ್ಲಿ ಮತ್ತೆ ಹಕ್ಕಿ ಜ್ವರದ ಭೀತಿ, ಫಾರಂನಲ್ಲಿ 25,000 ಕೋಳಿಗಳನ್ನು ಕೊಲ್ಲಲು ಆದೇಶ

ಮುಂಬೈ- ನವಿ ಮುಂಬೈ ವಾಟರ್ ಟ್ಯಾಕ್ಸಿ: ಆಸನಗಳ ಮಾಧ್ಯಮ ವರದಿಯೊಂದರ ಪ್ರಕಾರ, ವಾಟರ್ ಟ್ಯಾಕ್ಸಿ ಹಾರ್ಬರ್ ಸರ್ವಿಸಸ್ ನಾಲ್ಕು ದೋಣಿಗಳ ತಂಡವನ್ನು ಹೊಂದಿದ್ದು – 50 ಆಸನಗಳ ಒಂದು ದೋಣಿ, 40 ಆಸನಗಳ ಒಂದು ದೋಣಿ-32 ಆಸನಗಳ ಒಂದು ದೋಣಿ ಮತ್ತು 14 ಆಸನಗಳ ಒಂದು ದೋಣಿಯನ್ನು ಒಳಗೊಂಡಿದೆ. ವೆಸ್ಟ್ ಕೋಸ್ಟ್ ಮರೈನ್ , 12 ಮತ್ತು 20 ಆಸನಗಳ ಎರಡು ದೋಣಿಗಳನ್ನು ಹೊಂದಿದೆ.


ಮುಂಬೈ –ನವಿ ಮುಂಬೈ ವಾಟರ್ ಟ್ಯಾಕ್ಸಿ : ಮಾರ್ಗಗಳು
• ಮುಂಬೈನ ಫೆರ್ರಿ ವ್ರಾಫ್ , ಮಜಗಾಂವ್‍ನಲ್ಲಿರುವ ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ ಮತ್ತು ನವಿ ಮುಂಬೈನ ಬೇಲಾಪುರ್ ಟರ್ಮಿನಲ್
• ಬೇಲಾಪುರ ಮತ್ತು ಎಲಿಫೆಂಟಾ ಗುಹೆಗಳು
• ಬೇಲಾಪುರ್ ಮತ್ತು ಜವಹರಲಾಲ್ ನೆಹರೂ ಪೋರ್ಟ್ ಟ್ರಸ್ಟ್
• ಇತರ ಮಾರ್ಗಗಳೆಂದರೆ, ಎಲಿಫೆಂಟಾದಿಂದ ಇಂಟರ್‌ನ್ಯಾಷನಲ್‌ ಕ್ರೂಸ್ ಟರ್ಮಿನಲ್, ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್‍ನಿಂದ ರೇವಾಸ್ , ಕರಂಜಾಡೆ , ಧರ್ಮತಾರ್, ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್‍ನಿಂದ ಬೇಲಾಪುರ್, ನೆರುಲ್, ವಾಶಿ ಮತ್ತು ಐರೋಲಿ ಹಾಗೂ ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್‍ನಿಂದ ಖಂಡೇರಿ ದ್ವೀಪಗಳು ಮತ್ತು ಜವಹಾರ್ ಲಾಲ್ ನೆಹರು ಪೋರ್ಟ್ ಟ್ರಸ್ಟ್.


ಮುಂಬೈ –ನವಿ ಮುಂಬೈ ವಾಟರ್ ಟ್ಯಾಕ್ಸಿ : ವೇಳಾ ಪಟ್ಟಿ
1. ವಾಟರ್ ಟ್ಯಾಕ್ಸಿಗಳು ವರ್ಷದ 330 ದಿನಗಳು ಕಾರ್ಯ ನಿರ್ವಹಿಸಲಿವೆ. ಬೆಳಗ್ಗೆ 8 ರಿಂದ ರಾತ್ರಿ 8 ರ ವರೆಗೆ, ಈ ದೋಣಿಗಳು ಬೆಳಗ್ಗೆ , ಮಧ್ಯಾಹ್ನ ಮತ್ತು ಸಂಜೆ ಮೂರು ಬಾರಿ ಸಂಚರಿಸಲಿವೆ.
2. ಪ್ರಯಾಣಿಕರು ಮುಂಬೈನಿಂದ ಎಲಿಫೆಂಟಾ ಮತ್ತು ಜವಹಾರ್ ಲಾಲ್ ನೆಹರು ಪೋರ್ಟ್ ಟ್ರಸ್ಟ್‌ಗೆ ಪ್ರಯಾಣಿಸಲು 15 ನಿಮಿಷ ಬೇಕಾಗುತ್ತದೆ.
3. ಮುಂಬೈನಿಂದ ಬೇಲಾಪುರ , ನೆರೂಲ್, ವಾಶಿ ಮತ್ತು ರೇವಾಸ್‍ಗೆ ಪ್ರಯಾಣಿಸಲು ಇದು 25-30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.


ಇದನ್ನೂ ಓದಿ: Carbon Dioxide: ಇಂಗಾಲದ ಡೈಆಕ್ಸೈಡ್ ಬಳಕೆ ಹೇಗೆ? ಇನ್ನು ಮುಂದೆ ಸುಲಭವಾಗಲಿದೆ ಅಧ್ಯಯನ!

ಮುಂಬೈ –ನವಿ ಮುಂಬೈ ವಾಟರ್ ಟ್ಯಾಕ್ಸಿ : ಹಂಚಿಕೆಯ ಆಧಾರದ ಮೇಲೆ ಟಿಕೆಟ್ ಬೆಲೆ
• ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್‍ನಿಂದ ಬೇಲಾಪುರ್‌ಗೆ ಹೋಗಿ ಬರಲು : 1,210 ರೂ.
• ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್‍ನಿಂದ ಧರಮ್‍ತಾರ್‌ಗೆ 2,000 ರೂ.
• ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್‍ನಿಂದ ಜವಹಾರ್ ಲಾಲ್ ನೆಹರು ಪೋರ್ಟ್ ಟ್ರಸ್ಟ್‌ಗೆ 200 ರೂ.
• ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್‍ನಿಂದ ಕರಂಜಾಗೆ 1,200 ರೂ.
• ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್‍ನಿಂದ ಕಾನೋಜಿ ಅಂಗ್ರೆಗೆ 1,500 ರೂ.
• ಸಿಬಿಡಿ ಬೇಲಾಪುರ್‌ನಿಂದ ನೆರುಲ್ 1,100 ರೂ.
• ಜವಹಾರ್ ಲಾಲ್ ನೆಹರೂ ಪೋರ್ಟ್ ಟ್ರಸ್ಟ್‌ನಿಂದ ಬೇಲಾಪುರಕ್ಕೆ 800 ರೂ.
• ಡಿಸಿಟಿ - ಜವಹಾರ್ ಲಾಲ್ ನೆಹರು ಪೋರ್ಟ್ ಟ್ರಸ್ಟ್‌ಗೆ - ಎಲಿಫೆಂಟಾ- ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್‍ಗೆ 800 ರೂ.
• ಬೇಲಾಪುರ- ಜವಹಾರ್ ಲಾಲ್ ನೆಹರು ಪೋರ್ಟ್ ಟ್ರಸ್ಟ್-ಎಲಿಫೆಂಟಾ-ಬೇಲಾಪುರಕ್ಕೆ 800 ರೂ.


ಮುಂಬೈ –ನವಿ ಮುಂಬೈ ವಾಟರ್ ಟ್ಯಾಕ್ಸಿ : ಟಿಕೆಟ್ ಬುಕ್ ಮಾಡುವುದು ಹೇಗೆ?
ಹಂತ 1 :http://myboatride.com/index.aspxಗೆ ಭೇಟಿ ನೀಡಿ.
ಹಂತ 2 : ಹೋಗಬೇಕಾದ ಜಾಗವನ್ನು ಆಯ್ಕೆ ಮಾಡಿ.
ಹಂತ 3: ಆಸನವನ್ನು ಆಯ್ಕೆ ಮಾಡಿ ಮತ್ತು ಪ್ರಯಾಣಿಕರ ಮಾಹಿತಿಯನ್ನು ನಮೂದಿಸಿ.
ಹಂತ 4 : ಡೆಬಿಟ್ /ಕ್ರೆಡಿಟ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಿ.

Published by:Pavana HS
First published: