Afghanistan: ಅಫ್ಘಾನಿಸ್ತಾನ ನೂತನ ಸರ್ಕಾರದ ಬಗ್ಗೆ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿದ ಭಾರತ

ಹೊಸ ತಾಲಿಬಾನ್ ಸರ್ಕಾರದ ಒಳಗೊಳ್ಳುವಿಕೆಯ ಬಗ್ಗೆ ಜೈಶಂಕರ್ ನೀಡಿರುವ ಹೇಳಿಕೆಗೆ ಪ್ರತಿಕ್ರಯಿಸಿದ ಆಸ್ಟ್ರೇಲಿಯನ್​ ಸರ್ಕಾರದ ಪ್ರತಿನಿಧಿ ಹಾಗೂ ಸಚಿವ ಪೇನ್ ಮಾತನಾಡಿ, ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಾನಮಾನದ ಬಗ್ಗೆ ಆಸ್ಟ್ರೇಲಿಯಾ ಕೂಡ ಭಯಭೀತಗೊಂಡಿದೆ. ಈ ದೇಶವು ಭಯೋತ್ಪಾದಕ ಗುಂಪುಗಳಿಗೆ ತಳಪಾಯವಾಗುತ್ತಿದೆ ಎಂದೂ ಸಹ ಕಳವಳ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಶನಿವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾದ ಸಚಿವದ್ವಯರ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಾಜನಾಥ್​ ಸಿಂಗ್​

ಶನಿವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾದ ಸಚಿವದ್ವಯರ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಾಜನಾಥ್​ ಸಿಂಗ್​

  • Share this:
    Afghanistan : ಅಫ್ಘಾನಿಸ್ತಾನ ಬಿಕ್ಕಟ್ಟು ಮತ್ತು ತಾಲಿಬಾನ್ (Taliban ) ಇಡೀ ದೇಶವನ್ನು ಸ್ವಾಧೀನ ಪಡಿಸಿಕೊಂಡಿರುವುದರ ಕುರಿತು ಇದೇ ಮೊದಲ ಬಾರಿಗೆ ನೆರೆಯ ರಾಷ್ಟ್ರವಾದ ಭಾರತ ಅಧಿಕೃತವಾಗಿ ತನ್ನ ಮೊದಲ ಹೇಳಿಕೆಯನ್ನು ದಾಖಲಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (external affairs minister S Jaishankar) ಅವರು ಬಂದುಕೋರರ ಸೇನಾ ಗುಂಪು ರಚಿಸಲಿರುವ ಹೊಸ ಸರ್ಕಾರದಲ್ಲಿ ಒಳಗೊಳ್ಳುವಿಕೆ ಹಾಗೂ ತನ್ನ ಪಾಲ್ಗೊಳ್ಳುವಿಕೆಯ ಬಗ್ಗೆ ಭಾರತವು ಚಿಂತಿತವಾಗಿದೆ ಎಂದು ಅವರು ಹೇಳಿದ್ದಾರೆ.

    ಭಾರತ ಮತ್ತು ಆಸ್ಟ್ರೇಲಿಯಾದ 2+2 ಸಚಿವರ ಸಭೆಯಲ್ಲಿ ಶನಿವಾರ ಜೈಶಂಕರ್ (Jaishankar’s )ಅವರು ಈ ಎಲ್ಲಾ ಬೆಳವಣಿಗೆಗಳ ಕುರಿತು ಮಾತನಾಡಿದರು ಎಂಬುದಾಗಿ ಹೇಳಲಾಗಿದೆ. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸ್ಟ್ರೇಲಿಯಾದ ಹಣಕಾಸು ಸಚಿವ ಮರಿಸ್ ಪೇನ್ ಮತ್ತು ರಕ್ಷಣಾ ಸಚಿವ ಪೀಟರ್ ಡಟನ್ ಅವರೊಂದಿಗೆ ಸಂವಾದ ನಡೆಸಿದ ವೇಳೆ ಈ ಮಾತುಗಳನ್ನು ಹೇಳಿದರು ಎಂದು ವರದಿ ಮಾಡಲಾಗಿದೆ.

    ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ಎರಡೂ ದೇಶಗಳು ಚಿಂತಿತವಾಗಿವೆ ಎಂದು ಒಪ್ಪಿಕೊಂಡಿವೆ. ಈ ಹೇಳೀಕೆಯು ಎರಡೂ ದೇಶಗಳ ಜಂಟಿ ಹೇಳಿಕೆ ಎಂದೇ ಭಾವಿಸಬಹುದು ಎಂದೂ ಸಹ ತಿಳಿಸಲಾಗಿದೆ. ಉಭಯ ದೇಶಗಳ ಸಚಿವರುಗಳು ಮುಕ್ತ  ಮತ್ತು ಸುರಕ್ಷಿತವಾದ ಇಂಡೋ ಪೆಸಿಫಿಕ್ ಬಾಂಧವ್ಯ ಜೊತೆಗೆ ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಆಗುತ್ತಿರುವ ಕ್ಷಿಪ್ರ ಬೆಳವಣಿಗೆಗಗಳ ಬಗ್ಗೆ ಅತ್ಯಂತ ಮುತುವರ್ಜಿಯಿಂದ ಚರ್ಚೆ ನಡೆಸಲಾಯಿತು ಎಂದು ವರದಿ ಮಾಡಲಾಗಿದೆ.

    ಹೊಸ ತಾಲಿಬಾನ್ ಸರ್ಕಾರದ ಒಳಗೊಳ್ಳುವಿಕೆಯ ಬಗ್ಗೆ ಜೈಶಂಕರ್ ನೀಡಿರುವ ಹೇಳಿಕೆಗೆ ಪ್ರತಿಕ್ರಯಿಸಿದ ಆಸ್ಟ್ರೇಲಿಯನ್​ ಸರ್ಕಾರದ ಪ್ರತಿನಿಧಿ ಹಾಗೂ ಸಚಿವ ಪೇನ್ ಮಾತನಾಡಿ, ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಾನಮಾನದ ಬಗ್ಗೆ ಆಸ್ಟ್ರೇಲಿಯಾ ಕೂಡ ಭಯಭೀತಗೊಂಡಿದೆ. ಈ ದೇಶವು ಭಯೋತ್ಪಾದಕ ಗುಂಪುಗಳಿಗೆ ತಳಪಾಯವಾಗುತ್ತಿದೆ ಎಂದೂ ಸಹ ಕಳವಳ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

    ಸೆಪ್ಟೆಂಬರ್ 7 ರಂದು ಘೋಷಿಸಲದಪಟ್ಟ ಕೇವಲ ತಾಲಿಬಾನಿನ ಪುರುಷರೇ ಸೇರಿ ರಚಿಸಿರುವ ಮಧ್ಯಂತರ ಸರ್ಕಾರವು ಶನಿವಾರ ಅಸ್ತಿತ್ವಕ್ಕೆ ಬರಬೇಕಾಗಿತ್ತು ಆದರೆ ಮಿಲಿಟರಿ ಗುಂಪಿನ ಇತರೇ ಒಂದಷ್ಟು ಪ್ರತ್ಯೇಕ ಗುಂಪುಗಳ ಒತ್ತಡದಿಂದಾಗಿ ರದ್ದುಗೊಂಡಿತು.

    ಇದನ್ನೂ ಓದಿ: Mumbai Rape Case: ಕಬ್ಬಿಣದ ರಾಡ್​ನಿಂದ ಅಮಾನುಷ ಹಲ್ಲೆಗೆ ಒಳಗಾಗಿದ್ದ ಅತ್ಯಾಚಾರ ಸಂತ್ರಸ್ತೆ ಸಾವು

    ನೂತನ ಸರ್ಕಾರದ ಅಸ್ತಿತ್ವವು ಯುಎಸ್​ನ ಟ್ವಿನ್​ ಟವರ್​ ಮೇಲಿನ 9/11 ಭಯೋತ್ಪಾದಕ ದಾಳಿಗೆ 20 ವರ್ಷ ತುಂಬಿದ ಹಿನ್ನೆಲೆಯುವ ಸಹ ಇದೇ ದಿನ ಇದ್ದ ಕಾರಣ ಕೊನೆಯ ಕ್ಷಣದಲ್ಲಿ ನೂತನ ಸರ್ಕಾರದ ಅಸ್ತಿತ್ವ ಕಾರ್ಯಕ್ರಮವು ರದ್ದಾಯಿತು ಎಂದು ಹೇಳಲಾಗಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
    Published by:HR Ramesh
    First published: