ಅಳಿವಿನಂಚಿನಲ್ಲಿ ದೇಶದ ಮೊಟ್ಟಮೊದಲ ತೇಲುವ ಮಾರ್ಕೆಟ್​!


Updated:August 9, 2018, 4:04 PM IST
ಅಳಿವಿನಂಚಿನಲ್ಲಿ ದೇಶದ ಮೊಟ್ಟಮೊದಲ ತೇಲುವ ಮಾರ್ಕೆಟ್​!

Updated: August 9, 2018, 4:04 PM IST
ರಕ್ಷಿತಾ, ನ್ಯೂಸ್ 18 ಕನ್ನಡ

ಶ್ರೀನಗರ(ಆ.03): ದೇಶದ ಮೊಟ್ಟಮೊದಲ ತೇಲುವ ಮಾರ್ಕೆಟ್​ ಶುರುವಾಗಿದ್ದೇ ಶ್ರೀನಗರದಲ್ಲಿ. ಸುಮಾರು 100 ವರ್ಷಗಳ ಇತಿಹಾಸವಿರುವ ಈ ವಿಶೇಷ ಮಾರ್ಕೆಟ್​ ವಿಶ್ವಪ್ರಸಿದ್ಧವಾಗಿದ್ದರೂ, ಸರ್ಕಾರದ ನಿರ್ಲಕ್ಷ್ಯದಿಂದ ಇದೀಗ ಅಳಿವಿನಂಚಿಗೆ ಸಾಗುತ್ತಿದೆ.

ಶ್ರೀನಗರದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ದಾಲ್​ ಸರೋವರ ಕೂಡ ಒಂದು.. ಈ ಸರೋವರದಲ್ಲಿ ನಡೆಯುವ ತೇಲುವ ಮಾರುಕಟ್ಟೆ ವಿಶ್ವಪ್ರಸಿದ್ಧವಾಗಿದೆ.. ಸುಮಾರು 100 ವರ್ಷಗಳ ಇತಿಹಾಸವಿರೋ ಭಾರತದ ಮೊಟ್ಟಮೊದಲ ತೇಲುವ ಮಾರುಕಟ್ಟೆ ಇದಾಗಿದ್ದು, ಇಲ್ಲಿ ವ್ಯಾಪಾರ-ಖರೀದಿ ಎಲ್ಲವೂ ಸರೋವರದಲ್ಲಿ ತೇಲುವ ದೋಣಿಗಳ ಮೂಲಕವೇ ನಡೆಯೋದು ವಿಶೇಷ. ದೇಶ-ವಿದೇಶಗಳಿಂದ ಈ ಸುಂದರ ದೃಶ್ಯವನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರು ಹರಿದು ಬರುತ್ತಾರೆ.

ಬೆಳಗ್ಗೆ ಸೂರ್ಯನ ಕಿರಣ ಭೂಮಿಗೆ ಬೀಳುವ ಮುನ್ನ ಅಂದ್ರೆ, ಮುಂಜಾನೆ 4 ಗಂಟೆಗೆ ಆರಂಭವಾಗುವ ಈ ಮಾರ್ಕೆಟ್, ಎರಡು-ಮೂರು ಗಂಟೆಗಳಲ್ಲಿ ಮುಗಿದು ಹೋಗುತ್ತದೆ. ತರಕಾರಿ-ಹೂವು-ಹಣ್ಣು ಹೀಗೆ ನಾನಾ ವಸ್ತುಗಳನ್ನ ದೋಣಿಯಲ್ಲೇ ತಂದು ಮಾರಾಟ ಮಾಡಲಾಗುತ್ತದೆ. ಖರೀದಿದಾರರು ದೋಣಿಯಲ್ಲಿಯೇ ಬಂದು ವ್ಯವಹಾರ ನಡೆಸ್ತಾರೆ. 100ಕ್ಕೂ ಹೆಚ್ಚು ಬೋಟ್​ಗಳು ಇಲ್ಲಿದ್ದು, ವರ್ಷಕ್ಕೆ 35 ಕೋಟಿ ರೂಪಾಯಿ ವ್ಯವಹಾರ ಈ ಮಾರ್ಕೆಟ್ ಮೂಲಕ ನಡೆಯುತ್ತಿದೆ.

ಆದರೀಗ ದಾಲ್​ ಸರೋವರದ ತೇಲುವ ಮಾರ್ಕೆಟ್​​ನಲ್ಲಿ ತರಕಾರಿ ಮಾರಾಟ ಮಾಡಲು ಬರ್ತಿದ್ದ ಸ್ಥಳೀಯರು, ನಾನಾ ಕಾರಣಕ್ಕೆ ಬೇರೆಡೆಗೆ ಸ್ಥಳಾಂತರವಾಗ್ತಿದ್ದಾರೆ. ಖರೀದಿದಾರರ ಸಂಖ್ಯೆಯೂ ಇಳಿಮುಖವಾಗಿದೆ. ಹೀಗಾಗಿ ಶತಮಾನಗಳ ಇತಿಹಾಸವಿರೋ ತೇಲುವ ಮಾರ್ಕೆಟ್​ ಅಳಿವಿನಂಚಿಗೆ ಸಾಗುತ್ತಿದೆ. ವಿಪರ್ಯಾಸ ಅಂದ್ರೆ ಜಮ್ಮು ಕಾಶ್ಮೀರ ಆಳಿದ ಯಾವ ಪಕ್ಷಗಳೂ, ಇಂತಹದ್ದೊಂದು ಅಮೂಲ್ಯ ಸಂಪ್ರದಾಯ ಉಳಿಸುವತ್ತ ಗಮನಹರಿಸಿಲ್ಲ.

 
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ