Union Budget 2019: ಇಂದು ನಿರ್ಮಲಾ ಸೀತಾರಾಮನ್​ ಚೊಚ್ಚಲ ಬಜೆಟ್​ ಮಂಡನೆ; ಮೋದಿ ಸರ್ಕಾರದ ಮೇಲೆ ಭಾರೀ ನಿರೀಕ್ಷೆ

Union Budget 2019: ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಇಂದು ಮೊದಲ ಬಜೆಟ್​ ಮಂಡಿಸಲಿದೆ. ಐದು ತಿಂಗಳ ಹಿಂದೆ ಸಚಿವ ಪಿಯೂಷ್​ ಗೋಯಲ್ ಮಂಡಿಸಿದ್ದ ಮಧ್ಯಂತರ ಬಜೆಟ್​ನ ಅನೇಕ ಯೋಜನೆಗಳು ಇಂದಿನ ಬಜೆಟ್​ನಲ್ಲೂ ಮುಂದುವರಿಯುವ ಸಾಧ್ಯತೆಯಿದೆ.

Sushma Chakre | news18
Updated:July 5, 2019, 8:06 AM IST
Union Budget 2019: ಇಂದು ನಿರ್ಮಲಾ ಸೀತಾರಾಮನ್​ ಚೊಚ್ಚಲ ಬಜೆಟ್​ ಮಂಡನೆ; ಮೋದಿ ಸರ್ಕಾರದ ಮೇಲೆ ಭಾರೀ ನಿರೀಕ್ಷೆ
ಸಚಿವೆ ನಿರ್ಮಲಾ ಸೀತಾರಾಮನ್
Sushma Chakre | news18
Updated: July 5, 2019, 8:06 AM IST
ನವದೆಹಲಿ (ಜು.5): ಇಂದು ಕೇಂದ್ರ ಸರ್ಕಾರದ 2019-20ನೇ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮೊದಲ ಬಾರಿಗೆ ಬಜೆಟ್​ ಮಂಡಿಸಲಿದ್ದಾರೆ. ಈ ಮೂಲಕ ಬಜೆಟ್​ ಮಂಡಿಸುತ್ತಿರುವ ದೇಶದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ದೇಶದ ಜನರಿಗೆ ಯಾವೆಲ್ಲಾ ಕೊಡುಗೆಗಳನ್ನು ನೀಡಲಿದೆ ಎಂಬ ಕುತೂಹಲ ಮನೆಮಾಡಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಣಕಾಸು ಇಲಾಖೆಯನ್ನೂ ನಿರ್ವಹಿಸಿದ್ದರು. ಆದರೆ, ಪೂರ್ಣ ಪ್ರಮಾಣದ ವಿತ್ತ ಸಚಿವರಾಗಿ ಬಜೆಟ್ ಮಂಡಿಸುತ್ತಿರುವ ಮೊದಲ ಮಹಿಳೆ ಎಂಬ ಕೀರ್ತಿಗೆ ನಿರ್ಮಲಾ ಸೀತಾರಾಮನ್ ಪಾತ್ರರಾಗಲಿದ್ದಾರೆ.

India's Prime Minister Narendra Modi poses after the ceremonial reception for South Africa's President Cyril Ramaphosa at the forecourt of India's Rashtrapati Bhavan Presidential Palace in New Delhi
ನರೇಂದ್ರ ಮೋದಿ


ಪ್ರತಿವರ್ಷ ಫೆಬ್ರವರಿ​ ತಿಂಗಳಲ್ಲಿ ಬಜೆಟ್​ ಮಂಡಿಸಲಾಗುತ್ತದೆ. ಆದರೆ, ಈ ವರ್ಷ ಆ ವೇಳೆಗೆ ಎನ್​ಡಿಎ ಸರ್ಕಾರದ ಅಧಿಕಾರಾವಧಿ ಮುಗಿಯುವ ಹಂತಕ್ಕೆ ಬಂದಿದ್ದರಿಂದ ಮೋದಿ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿತ್ತು. ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರಿಗೆ ಅನಾರೋಗ್ಯದ ಸಮಸ್ಯೆ ಇದ್ದುದರಿಂದ ಹಣಕಾಸು ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ಪಿಯೂಷ್​ ಗೋಯಲ್ ಮಧ್ಯಂತರ ಬಜೆಟ್​ ಮಂಡಿಸಿದ್ದರು. ಇದೀಗ ನಿರ್ಮಲಾ ಸೀತಾರಾಮನ್​ ಪೂರ್ಣ ಪ್ರಮಾಣದ ಹೊಸ ಬಜೆಟ್ ಮಂಡಿಸಲಿದ್ದಾರೆ. ಮಧ್ಯಂತರ ಬಜೆಟ್​ನಲ್ಲಿ ಮಂಡಿಸಲಾಗಿದ್ದ ಯೋಜನೆಗಳು ಈ ಬಜೆಟ್​ನಲ್ಲೂ ಮುಂದುವರಿಯುವ ಸಾಧ್ಯತೆಯಿದೆ.

Union Budget 2019 – ಬಜೆಟ್ ಮಂಡನೆ ವೇಳೆ ತಿಳಿದುಕೊಳ್ಳಬೇಕಾದ ಕೆಲ ಪದಗಳ ಅರ್ಥಗಳು

ಬಜೆಟ್​ನಲ್ಲಿ ರಾಜ್ಯದ ನಿರೀಕ್ಷೆಗಳೇನು?:

ಮೋದಿ ಸರ್ಕಾರದ ಬಜೆಟ್​ ಬಗ್ಗೆ ರಾಜ್ಯ ಸರ್ಕಾರದ  ನಿರೀಕ್ಷೆಯೂ ಸಾಕಷ್ಟಿದೆ. ಮಲೆನಾಡಿನಲ್ಲಿ ಮಳೆ ಕೊಯ್ಲು ಯೋಜನೆ, ಅಂತರ್ಜಲಮಟ್ಟ ಹೆಚ್ಚಳ, ಪಶ್ಚಿಮಘಟ್ಟಗಳ ಸಂರಕ್ಷಣೆ, ಕೆಎಫ್​ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ತಡೆಗೆ ಅನುದಾನ, ಕಾಫಿ, ಅಡಿಕೆ ಬೆಳೆಗೆ ಪೂರಕ ಯೋಜನೆ, ಕಾಳುಮೆಣಸು ಬೆಳೆಗಾರರ ಪ್ರೋತ್ಸಾಹಕ್ಕೆ ಪೆಪ್ಪರ್ ಪಾರ್ಕ್, ಜವಳಿ ಕ್ಷೇತ್ರಗಳ ಉತ್ತೇಜನಕ್ಕೆ ಆದ್ಯತೆ, ಪ್ರದೇಶವಾರು ಜವಳಿ ಪಾರ್ಕ್ ಸ್ಥಾಪನೆಗೆ ಯೋಜನೆ, ತಿಪಟೂರಿನಲ್ಲಿ ಜಾಗತಿಕಮಟ್ಟದ ‘ಕೊಬ್ಬರಿ ಸಂಶೋಧನಾ ಕೇಂದ್ರ’, ತುಮಕೂರು ಇಂಡಸ್ಟ್ರಿಯಲ್ ಸ್ಮಾರ್ಟ್ ಸಿಟಿ, ಮುಂಬೈ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ, ರೇಷ್ಮೆ ಉತ್ಪಾದನೆಗೆ ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತೇಜನ ನೀಡುವ ನಿರೀಕ್ಷೆಯಿದೆ.
Loading...

First published:July 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...