Breaking News: ಹೆಲಿಕಾಪ್ಟರ್​ ಪತನದಲ್ಲಿ ಸಿಡಿಎಸ್​ ಬಿಪಿನ್​ ರಾವತ್​ ಸಾವು

ಸರ್ಕಾರದ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆ ಕೂಡ ಅವರಿಗೆ ಇದೆ.

ಪತ್ನಿ ಮಧುಲಿಕಾ ಜೊತೆ ಜ. ಬಿಪಿನ್ ರಾವತ್

ಪತ್ನಿ ಮಧುಲಿಕಾ ಜೊತೆ ಜ. ಬಿಪಿನ್ ರಾವತ್

  • Share this:
    ಸೇನಾ ಪಡೆ ಮುಖ್ಯಸ್ಥ ಬಿಪಿನ್ ರಾವತ್, ಅವರ ಸಿಬ್ಬಂದಿ ಮತ್ತು ಕನಿಷ್ಠ ಒಬ್ಬ ಕುಟುಂಬದ ಸದಸ್ಯರನ್ನು ಹೊತ್ತ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಜನರಲ್​ ಸೇರಿದಂತೆ 13ಸಾವನ್ನಪ್ಪಿರುವ  ಬಗ್ಗೆ ಭಾರತೀಯ ವಾಯು ಸೇನೆ ದೃಢಪಡಿಸಿದೆ. ಹೆಲಿಕಾಪ್ಟರ್​​ ಅಪಘಾತದ ಕಾರಣವನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಘಟನೆ ಕುರಿತು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದು, ಜನರಲ್​ ಸಾವಿಗೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ



    ಜನರಲ್​ ರಾವತ್​ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್​ ಸಿಂಗ್​ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶದ ಸೇವೆಗೆ ಅವರು ಸಲ್ಲಿಸಿದ ಕೊಡುಗೆ ಅಪಾರವಾಗಿದ್ದು, ಅವರ ಸಾವು ವಿಷಾದ ತಂದಿದೆ ಮೂಡಿಸಿದೆ ಎಂದು ತಿಳಿಸಿದ್ದಾರೆ

    ಸೇನಾ ಕುಟುಂಬದಿಂದ ಬಂದವರು ರಾವತ್​​

    ಜನರಲ್ ಬಿಪಿನ್ ರಾವತ್ ಶಿಮ್ಲಾದ ಸೇಂಟ್ ಎಡ್ವರ್ಡ್ ಸ್ಕೂಲ್ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಅವರ ತಂದೆಯ ಆಜ್ಞೆಯಂತೆ ಬಿಪಿನ್​ ರಾವತ್​ 16 ಡಿಸೆಂಬರ್ 1978 ರಂದು ಪದಾತಿದಳದ ಇಲವಂತ್​ ಗೂರ್ಕ ರೈಫಲ್ಸ್‌ನ ಐದನೇ ಬೆಟಾಲಿಯನ್‌ಗೆ ನಿಯೋಜಿಸಲ್ಪಟ್ಟರು.ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದಾಗ, ಅವರು ಗೌರವಾನ್ವಿತ 'ಸ್ವರ್ಡ್ ಆಫ್ ಆನರ್' ಪ್ರಶಸ್ತಿಯನ್ನು ಪಡೆದರು. ಜನರಲ್ ಯುದ್ಧ ಮತ್ತು ಸಂಘರ್ಷದ ಸಂದರ್ಭಗಳಲ್ಲಿ ದೀರ್ಘ ಸೇವಾ ಅನುಭವ ಅವರಿಗೆ ಇದೆ.

    ವಿವಿಧ ವಲಯದಲ್ಲಿ ಸೇವೆ
    ಪೂರ್ವ ವಲಯದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ (line of Actual Control) ಉದ್ದಕ್ಕೂ ಬೆಟಾಲಿಯನ್ ಮತ್ತು ಕಾಶ್ಮೀರ ಕಣಿವೆಯಲ್ಲಿ ರಾಷ್ಟ್ರೀಯ ರೈಫಲ್ಸ್ ಸೆಕ್ಟರ್‌ಗೆ ಕಮಾಂಡರ್ ಆಗಿದ್ದಾರೆ. ಬಳಿಕ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (DRC) ಅಧ್ಯಾಯ VII ಮಿಷನ್‌ನಲ್ಲಿ ಬಹುರಾಷ್ಟ್ರೀಯ ಬ್ರಿಗೇಡ್‌ಗೆ ಕಮಾಂಡ್ ಆದರು. ಅವರನ್ನು ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನಾ ವಿಭಾಗದ ಕಮಾಂಡ್ ಆಗಿ ನಿಯೋಜಿಸಲಾಯಿತು. ಈಶಾನ್ಯದಲ್ಲಿ ಕಾರ್ಪ್ಸ್ ಕಮಾಂಡರ್ ಆಗಿದ್ದರು. ಆರ್ಮಿ ಕಮಾಂಡರ್ ಆಗಿ, ಅವರು ವೆಸ್ಟರ್ನ್​ ಫ್ರಂಟ್​ ಮೇಲ್ವಿಚಾರಕರಾಗಿ ಕಾರ್ಯಾಚರಣೆ ನಿರ್ವಹಿಸಿದರು.

    ಸೇನಾ ಮುಖ್ಯಸ್ಥರಾಗಿ ಸೇವೆ

    ಮಿಲಿಟರಿ ಕಾರ್ಯಾಚರಣೆ ನಿರ್ದೇಶನಾಲಯದಲ್ಲಿ ಜನರಲ್ ಸ್ಟಾಫ್ ಆಫೀಸರ್,  ನಂತರ ಮಿಲಿಟರಿ ಕಾರ್ಯದರ್ಶಿಯ ಶಾಖೆಯಲ್ಲಿ ಉಪ ಮಿಲಿಟರಿ ಕಾರ್ಯದರ್ಶಿ, ಮೇಜರ್ ಜನರಲ್ ಜನರಲ್ ಸ್ಟಾಫ್ ಮತ್ತು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರೂ ಆಗಿದ್ದರು.

    ಇದನ್ನು ಓದಿ: ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 14 ಜನರಿದ್ದ ಹೆಲಿಕಾಪ್ಟರ್ ಪತನ

    ಸರ್ಕಾರದ ಮಿಲಿಟರಿ ಸಲಹೆಗಾರರಾಗಿ ಕಾರ್ಯ

    ಜನರಲ್ ಅವರು  2016 ರಿಂದ 2019 ರವರೆಗೆ ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು . ನಿವೃತ್ತಿಯ ಒಂದು ದಿನ ಮೊದಲು, ಜನರಲ್ ಬಿಪಿನ್ ರಾವತ್ ಅವರು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಸ್ಥಾನವನ್ನು ಅಲಂಕರಿಸಿದರು. ಸರ್ಕಾರದ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆ ಕೂಡ ಅವರಿಗೆ ಇದೆ. ಭಾರತೀಯ ಸೇನೆಯ 27 ನೇ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅವರು, ಪಡೆಯಲ್ಲಿ ಪಡೆದ ಅತ್ಯುನ್ನತ ಶ್ರೇಣಿಯ ಸ್ಥಾನವಾಗಿದೆ.

    ಸೇನೆಯಲ್ಲಿ 42 ವರ್ಷಗಳ ಕಾಲ ಸೇವಾ ವೃತ್ತಿಜೀವನದ ಸಲ್ಲಿಸಿದ ಅವರ ವಿಶಿಷ್ಟ ಸೇವೆ ಮತ್ತು ಶೌರ್ಯಕ್ಕಾಗಿ ಹಲವಾರು ಪ್ರಶಸ್ತಿ ಸಂದಿವೆ. ಜನರಲ್ ಬಿಪಿನ್ ರಾವತ್ ಅವರಿಗೆ PVSM, UYSM, AVSM, YSM, SM ಮತ್ತು VSM ಸೇರಿದಂತೆ ಹಲವಾರು ರಾಷ್ಟ್ರಪತಿ ಪ್ರಶಸ್ತಿಗಳನ್ನು ನೀಡಲಾಗಿದೆ.
    Published by:Seema R
    First published: