ಕಾಫಿಗೆ(Coffee) ಪ್ರಪಂಚದಾದ್ಯಂತ ಬಹಳಷ್ಟು ಬೇಡಿಕೆ ಇದೆ. ವಿಶ್ವಾದ್ಯಂತ ಬಹಳಷ್ಟು ರಾಷ್ಟ್ರಗಳು ಕಾಫಿಯ ಗ್ರಾಹಕರು. ಭಾರತದ ಸುವಾಸನೆ ಭರಿತ ಕಾಫಿಗಂತೂ ಇನ್ನಿಲ್ಲದ ಬೇಡಿಕೆ ಇದೆ. ಉತ್ತಮ ಗುಣಮಟ್ಟದ ಕಾಫಿ ರಫ್ತು ದೇಶಕ್ಕೆ ಉತ್ತಮ ಆದಾಯವನ್ನೂ(Income) ತಂದುಕೊಡುತ್ತಿದೆ. ಭಾರತದಲ್ಲಿ ಕಾಫಿ ರಫ್ತಿನಲ್ಲಿ ಸುಮಾರು 28 ಶೇಕಡ ಏರಿಕೆಯಾಗಿದೆ. ಕಾಫಿಗೆ ಹೆಚ್ಚಿನ ಬೇಡಿಕೆ ಇಡುವ ಫಾರಿನ್ ದೇಶಗಳು ಭಾರತದ ಪ್ರಮುಖ ಗ್ರಾಹಕರಾಗಿ ಲಾಭ ತಂದುಕೊಡುತ್ತಿದ್ದಾರೆ. ಈ ವರ್ಷದ ಎರಡನೇ ಕೊನೆಯ ೬ ತಿಂಗಳಲ್ಲಿ ಕಾಫಿಯ ಬೇಡಿಕೆ(Demand) ಇನ್ನಷ್ಟು ಹೆಚ್ಚಳವಾಗಲಿದೆ. ಆದರೆ ಕೊರೋನಾ ವೇರಿಯೆಂಟ್ಗಳ ಕಾರಣದಿಂದ ಈ ಬೇಡಿಕೆಯನ್ನು ಪೋರೈಸಲು ಸಾಧ್ಯವೇ ಎಂಬುದು ರಫ್ತುದಾರರ ಪ್ರಶ್ನೆ.
ಕಾಫಿ ಬೋರ್ಡ್(Coffee Board) ಮಾಹಿತಿಯ ಪ್ರಕಾರ ಕಾಫಿ ರಫ್ತಿನ ಪ್ರಮಾಣ ಈಗಾಗಲೇ 395,716 ಟನ್ ತಲುಪಿದ್ದು ಇದು ಗಳಿಸಿದ ಲಾಭ 950 ಮಿಲಿಯನ್ ಡಾಲರ್ಗಳು. ಅಂದರೆ ಸುಮಾರು 70 ಸಾವಿರ ಕೋಟಿಗಳಿಗಿಂತ ಅಧಿಕ. ಇದು ಕಳೆದ 10 ವರ್ಷಗಳಲ್ಲಿ ಕಾಫಿ ರಫ್ತಿನಲ್ಲಿ ಆದ ದೊಡ್ಡ ಮೊತ್ತ. ಅಂತೂ ವಾರ್ಷಿಕ ವಹಿವಾಟಿನಲ್ಲಿ ಕಾಫಿ ರಫ್ತಿನಲ್ಲಿ 5ರಿಂದ 10 ಪಟ್ಟು ಏರಿಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕೊರೋನಾದಿಂದಾಗಿ ತಡವಾಗಿತ್ತು ರಫ್ತು
ಭಾರತದ ಶಿಪ್ಮೆಂಟ್ ಸುಮಾರು 308,050 ಟನ್ಗೆ ಅಂದರೆ ಸುಮಾರು 714 ಮಿಲಿಯನ್ ಡಾಲರ್ಗೆ(Dollars) ಇಳಿಕೆಯಾಗಿತ್ತು. ಇದು 2020ರ ಅಂಕಿ ಅಂಶಗಳು. ಇದು ಕೊರೋನಾ ಹೆಚ್ಚಳದ ಪರಿಣಾಮವಾಗಿತ್ತು. ಇದರ ಪರಿಣಾಮ 2021ರ ಮೊದಲಾರ್ಧದಲ್ಲಿಯೂ ಇತ್ತು. ಕಳೆದ ಕೆಲವು ತಿಂಗಳಲ್ಲಿ ರಫ್ತಿನಲ್ಲಿ(Exports) ಭಾರೀ ಏರಿಕೆ ಕಂಡುಬಂದಿದೆ.
ಇದನ್ನೂ ಓದಿ: ಏನಾಯ್ತೋ ಗೊತ್ತಿಲ್ಲ, 34 ವರ್ಷಗಳ ನಂತರ ಇಲ್ಲಿ ಧಿಡೀರನೆ ಹಿಮಪಾತವೇ ಶುರುವಾಗಿದೆ!
ಇದು ಹೆಚ್ಚಿದ ಬೇಡಿಕೆಯ ಪರಿಣಾಮ. ಕಳೆದ ಕೆಲವು ತಿಂಗಳಲ್ಲಿ ಕಾಫಿ ರಫ್ತಿನಲ್ಲಿ ಹೆಚ್ಚಳ ಕಂಡುಬಂದಿದೆ. ಇದು ಹೆಚ್ಚಿದ ಬೇಡಿಕೆಯ ಪರಿಣಾಮ. ಕೊರೋನಾ ಸಮಸ್ಯೆಗಳು ಹಾಗೂ ಶಿಪ್ಮೆಂಟ್(Shipment) ಸಮಸ್ಯೆಗಳಿಂದಾಗಿ ರಫ್ತು ತಡವಾಗಿತ್ತು ಎಂದು ಕಾಫಿ ಎಕ್ಸ್ಪೋರ್ಟ್ ಎಸೋಸಿಯೇಷನ್ ಅಧ್ಯಕ್ಷ ರಮೇಶ್ ರಾಜ ಹೇಳಿದ್ದಾರೆ. ಭಾರತವು ತನ್ನ ಒಟ್ಟು ಕಾಫಿ ಉತ್ಪಾದನೆಯ 70%ನ್ನು ರಫ್ತು ಮಾಡುತ್ತದೆ.
ಇಟಲಿ ನೇತೃತ್ವದ ಯುರೋಪಿಯನ್ ದೇಶಗಳು ಭಾರತದ ಕಾಫಿ ಪ್ರಮುಖ ಖರೀದಿದಾರರು. ಕಾಫಿ ಬೆಲೆಯ ಹೆಚ್ಚಳದಿಂದ ರಫ್ತು ಹೆಚ್ಚಿದ್ದರೂ ಸಹ ಹೆಚ್ಚಿನ ಸರಕು ಸಾಗಣೆ ವೆಚ್ಚ ರಫ್ತುದಾರರ ಲಾಭದ ಮೇಲೆ ಪರಿಣಾಮ ಬೀರಿದೆ. ಸರಕು ಸಾಗಣೆ ವೆಚ್ಚವು 200% ಹೆಚ್ಚಾಗಿದೆ, ರಫ್ತುದಾರರ ಪ್ರಾಫೀಟ್ ಮಾರ್ಜಿನ್ ಕಡಿಮೆಯಾಗಿದೆ ಎಂದು ರಾಜಾ ಹೇಳಿದ್ದಾರೆ.
ಅಧಿಕ ಬೆಲೆ ಹೆಚ್ಚು ದಿನ ಉಳಿಯುವ ನಿರೀಕ್ಷೆ ಇಲ್ಲ
ಕಳೆದ ಕೆಲವು ತಿಂಗಳಲ್ಲಿ ಗಣನೀಯವಾಗಿ ಕಾಫಿ ಬೆಲೆ ಏರಿಕೆ ಕಂಡಿದೆ. ಕಾಫಿಯ ಅತಿ ದೊಡ್ಡ ಉತ್ಪಾದಕ ರಾಷ್ಟ್ರ ಬ್ರೆಜಿಲ್ನಿಂದ(Brazil) ಕಾಫಿ ರಫ್ತು ಕಡಿಮೆಯಾದಂತೆ ಭಾರತದ ಕಾಫಿ ಬೆಲೆ ಹೆಚ್ಚಳವಾಗಿದೆ. ಆದರೆ ಈ ಬೆಲೆ ಹೆಚ್ಚು ಕಾಲ ನಿಲ್ಲಲಾರದು, ಈ ಬಾರಿ ಬ್ರೆಜಿಲ್ನಿಂದ ಉತ್ತಮ ಇಳುವರಿಯನ್ನು ನಿರೀಕ್ಷಿಸಲಾಗಿದೆ ಎಂದು ರಾಜ ಹೇಳಿದ್ದಾರೆ.
ಭಾರತದಲ್ಲಿ ಒಟ್ಟು ಕಾಫಿ ಉತ್ಪಾದನೆಯಲ್ಲಿ ಸುಮಾರು 70% ಪಾಲು ಕರ್ನಾಟಕದಿಂದ(Karnataka) ಬರುತ್ತದೆ. ಕರ್ನಾಟಕ ಭಾರತದ ಪ್ರಮುಖ ಕಾಫಿ ಉತ್ಪಾದಕವಾಗಿದೆ. ಎಸ್ಟೇಟ್ಗಳು ರೋಬಸ್ಟಾ ಬೆರ್ರಿ ಕೀಳುವ ಕೆಲಸದ ಮಧ್ಯೆ ಇರುವಾಗ ಅರೇಬಿಕಾ ಕೊಯ್ಲು ಬಹುತೇಕ ಮುಗಿದಾಗಿದೆ. ಅದು ಮುಂದಿನ ತಿಂಗಳಲ್ಲಿ ಮುಗಿಯಬಹುದು. ರೋಬಸ್ಟಾ ಉತ್ಪಾದನೆಯು ಹಿಂದಿನ ವರ್ಷದಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಹಳೆಯದಾದ್ರೂ ಮತ್ತೆ ವೈರಲ್ ಆಗಿದ್ದೇಕೆ ಮಣಿಪಾಲ್ ಸೂಟ್ ಕೇಸ್ ಹುಡುಗಿ ವಿಡಿಯೋ?
ಕೇರಳ(Kerala) ಸರ್ಕಾರವು ರಾಜ್ಯದ ಪ್ರಮುಖ ಕಾಫಿ ಉತ್ಪಾದಕ ಪ್ರದೇಶವಾದ ವಯನಾಡಿನ ರೈತರಿಂದ ಮಾರುಕಟ್ಟೆ ಬೆಲೆಗಿಂತ ಹೆಚ್ಚಿಗೆ ಕೆಜಿಗೆ 10 ರೂ.ಗೆ ರೈತರಿಂದ ಕಾಫಿ ಖರೀದಿಸಲು ನಿರ್ಧರಿಸಿದೆ. ಕೇರಳವು ದೇಶದ ಎರಡನೇ ಅತಿ ದೊಡ್ಡ ಕಾಫಿ ಉತ್ಪಾದಕ ರಾಜ್ಯ. 455 ಟನ್ ಖರೀದಿಸಲು ರಾಜ್ಯ ಸರ್ಕಾರ 50 ಲಕ್ಷ ರೂ ವ್ಯಯಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ