Airlines: ವಿಮಾನಯಾನ ಸಂಸ್ಥೆಗೆ ಸರ್ಕಾರದಿಂದ ಶೇ. 100ರಷ್ಟು ಅನುಮತಿ: ಬೃಹತ್‌ ನಷ್ಟದಿಂದ ಹೊರಬರಲಿವೆಯೇ ವಿಮಾನಯಾನ ಸಂಸ್ಥೆಗಳು..?

ವಿಮಾನಯಾನ ಸಂಸ್ಥೆಗಳು ನಾಗರಿಕ ವಿಮಾನಯಾನ ಸಚಿವಾಲಯವನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಟಿಕೆಟ್ ದರಗಳನ್ನು ತೀವ್ರವಾಗಿ ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ. ಆದರೂ, ಕಾರ್ಪೊರೇಟ್ ಪ್ರಯಾಣಿಕರು ಇನ್ನೂ ಹಿಂತಿರುಗದಿರುವ ಕಾರಣ ಕೊನೆಯ ನಿಮಿಷದ ಬುಕಿಂಗ್‌ಗಳು ನಡೆಯುತ್ತಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಗುರುಗ್ರಾಮ್‌ನಲ್ಲಿರುವ ಬೃಹತ್ ಗಾಜು ಮತ್ತು ಉಕ್ಕಿನ ಕಟ್ಟಡವುಳ್ಳ ಸೊಗಸಾದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ವಿನೀತ್ ಕುಮಾರ್, ಸುಮಾರು ಎರಡು ವರ್ಷಗಳಿಂದ, ಪಂಜಾಬ್‌ನ ಗುರುದಾಸ್‌ಪುರ್‌ನಲ್ಲಿ ತಾವು ಹುಟ್ಟಿ ಬೆಳೆದ ಊರಿನಲ್ಲಿದ್ದಾರೆ. ಏಕೆಂದರೆ, ಈಗ ಕೊರೊನಾ ಕಾರಣದಿಂದ ಕಚೇರಿಗಳು ಬಂದ್‌ ಆಗಿದ್ದು, ವರ್ಕ್‌ ಫ್ರಮ್ ಹೋಂ (Work From Home) ನಡೆಯುತ್ತಿದೆ. ಆದರೆ, ಕಳೆದ ತಿಂಗಳು, ಕುಮಾರ್ ಕುಟುಂಬದ ತುರ್ತು ಎಮರ್ಜೆನ್ಸಿಗಾಗಿ ಸಾಂಕ್ರಾಮಿಕ ರೋಗದ ಆರಂಭದ ನಂತರ ಮೊದಲ ಬಾರಿಗೆ ವಿಮಾನವೇರಿದರು (Flight). ಹತ್ತಿರದ ಅಮೃತಸರ ವಿಮಾನ ನಿಲ್ದಾಣದಿಂದ (Airport) ಮುಂಬೈಗೆ ಏರ್ ಇಂಡಿಯಾ (Air india) ವಿಮಾನದಲ್ಲಿ ಹಾರಿದರು. ಇಂಡಿಗೋ ವಿಮಾನದಲ್ಲಿ (Indigo Airlines) ಬೆಳಗ್ಗಿನ ಜಾವ ವಾಪಸಾದರು. ಈ ವೇಳೆ ‘’ವಿಮಾನಗಳು ಭರ್ತಿಯಾಗಿದ್ದವು’’ ಎಂದು 35 ವರ್ಷದ ಕುಮಾರ್‌ ಹೇಳಿದ್ದರು. ಅಲ್ಲದೆ, ಹಿಂದಿರುಗುವಾಗ ಕೊನೆಯ ಸಾಲುಗಳಲ್ಲಿ ಮಧ್ಯದ ಸೀಟು ಖಾಲಿಯಾಗಿತ್ತು ಎಂದಿದ್ದರು.


ವಾಸ್ತವವಾಗಿ, ಕುಮಾರ್ ಅವರ ಈ ಅನುಭವ ಮತ್ತು ಮುಂಬೈ ವಿಮಾನ ನಿಲ್ದಾಣದಲ್ಲಿ ದೀರ್ಘ ಸರತಿ ಸಾಲುಗಳ ವಿಡಿಯೋಗಳು ಮತ್ತು ದೆಹಲಿ ವಿಮಾನ ನಿಲ್ದಾಣವು ಮುಚ್ಚಿದ ಟರ್ಮಿನಲ್ ಅನ್ನು ಪುನಃ ತೆರೆಯುವ ಆಯ್ಕೆ ಮಾಡಿದೆ ಎಂದರೆ, ವಿಮಾನ ಪ್ರಯಾಣವು ಹಿಂತಿರುಗಿದೆ ಅಂದರೆ ಹೆಚ್ಚು ಜನ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರ್ಥ.


ಆದರೂ, ಸಾಂಕ್ರಾಮಿಕ ರೋಗದ ಅತಿದೊಡ್ಡ ನಷ್ಟಕ್ಕೀಡಾದ ವಲಯಗಳಲ್ಲಿ ಒಂದಾದ ದೇಶದ ಈಗಾಗಲೇ ಒತ್ತಡಕ್ಕೊಳಗಾದ ವಾಯುಯಾನ ವಲಯವು ಮತ್ತೆ ಮೊದಲಿನ ಹಳೆಗೆ ಮರಳುತ್ತದಾ ಎಂಬ ಪ್ರಶ್ನೆ ಕಾಡುತ್ತದೆ.


ದುರದೃಷ್ಟವಶಾತ್, ಇದಕ್ಕೆ ಉತ್ತರವು ಸರಳವಾಗಿಲ್ಲ. ಯಾಕೆ ಅಂತೀರಾ..


ಕಾರ್ಪೊರೇಟ್‌ ಪ್ರಯಾಣಿಕರ ಆತಂಕ


ಹೌದು, ಕ್ರಮೇಣವಾಗಿ ವಿಮಾನಗಳು ತುಂಬುತ್ತಿದ್ದರೂ, ಇಷ್ಟವಿಲ್ಲದ ಮಧ್ಯಮ ಸೀಟುಗಳು ಇನ್ನೂ ಹಲವಾರು ವಿಮಾನಗಳಲ್ಲಿ ಖಾಲಿಯಾಗಿವೆ. ಈ ಹಿನ್ನೆಲೆ ಇಂಡಿಗೋ ಮತ್ತು ಸ್ಪೈಸ್‌ಜೆಟ್‌ನಂತಹ ಪಟ್ಟಿಮಾಡಿದ ವಿಮಾನಯಾನ ಸಂಸ್ಥೆಗಳು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೊಡ್ಡ ನಷ್ಟವನ್ನು ವರದಿ ಮಾಡುವ ನಿರೀಕ್ಷೆ ಇದಾಗಿದೆ.


ಇಂಡಿಗೋದ ನಷ್ಟವು ಎರಡನೇ ತ್ರೈಮಾಸಿಕದಲ್ಲಿ ಸುಮಾರು 2,000 ಕೋಟಿ ರೂ. ಗೆ ವಿಸ್ತರಣೆಯಾಗಬಹುದು ಎಂದು ಏವಿಯೇಷನ್ ​​​​ವಿಶ್ಲೇಷಕರು ನಿರೀಕ್ಷಿಸುತ್ತಾರೆ. ಕಳೆದ ವರ್ಷವೇ ಸುಮಾರು 1,200 ಕೋಟಿ ನಷ್ಟಕ್ಕೊಳಗಾಗಿತ್ತು ಈ ವಿಮಾನಯಾನ ಸಂಸ್ಥೆ. ಇನ್ನು, ಸ್ಪೈಸ್‌ಜೆಟ್‌ನಲ್ಲಿ ಕಳೆದ ವರ್ಷ ಸುಮಾರು 300 ಕೋಟಿ ನಷ್ಟಕ್ಕೊಳಗಾಗಿದ್ದರೆ, ಈ ಬಾರಿ ಸುಮಾರು 500 ಕೋಟಿ ರೂ. ನಷ್ಟವನ್ನುಂಟುಮಾಡುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ.


ಇದರ ಜತೆಗೆ ದೊಡ್ಡ ನಷ್ಟಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಜೆಟ್ ಇಂಧನ ಬೆಲೆಗಳ ಹೆಚ್ಚಳ. ಇದು ವಿಮಾನಯಾನ ವೆಚ್ಚದ ಸುಮಾರು 40% ರಷ್ಟಿದೆ. ಬೆಲೆಗಳು ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಪ್ರತಿ ಬ್ಯಾರೆಲ್‌ಗೆ 43 ಅಮೆರಿಕ ಡಾಲರ್‌ನಿಂದ ಈಗ ಸುಮಾರು 73 ಅಮೆರಿಕ ಡಾಲರ್‌ಗೆ ದ್ವಿಗುಣಗೊಂಡಿದೆ.


ಇದರರ್ಥ ಇಂಧನ ವೆಚ್ಚದಲ್ಲಿ ಕಳೆದ ವರ್ಷ ಎರಡನೇ ತ್ರೈಮಾಸಿಕದಲ್ಲಿ ಸುಮಾರು 650 ಕೋಟಿ ರೂ. ಪಾವತಿಸಿದ IndiGo, ಈ ವರ್ಷ ಅದೇ ಸಂಖ್ಯೆಯ ವಿಮಾನಗಳನ್ನು ಹಾರಿಸಲು ಹೆಚ್ಚುವರಿ 200 ಕೋಟಿ ರೂ. (ಅಥವಾ 30% ಹೆಚ್ಚು) ಖರ್ಚು ಮಾಡಿದೆ.


ಟಿಕೆಟ್​​ ದರ ಹೆಚ್ಚಳಕ್ಕೆ ಅನುಮತಿ

ವಾಸ್ತವವಾಗಿ, ಕೆಲವು ವಿಮಾನಯಾನ ಸಂಸ್ಥೆಗಳು ನಾಗರಿಕ ವಿಮಾನಯಾನ ಸಚಿವಾಲಯವನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಟಿಕೆಟ್ ದರಗಳನ್ನು ತೀವ್ರವಾಗಿ ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ. ಆದರೂ,, ಕಾರ್ಪೊರೇಟ್ ಪ್ರಯಾಣಿಕರು ಇನ್ನೂ ಹಿಂತಿರುಗದಿರುವ ಕಾರಣ ಕೊನೆಯ ನಿಮಿಷದ ಬುಕಿಂಗ್‌ಗಳು ನಡೆಯುತ್ತಿಲ್ಲ. ಆದ್ದರಿಂದ, ಹೆಚ್ಚಿನ ದರದ ಟಿಕೆಟ್‌ಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ ಇದೆ ಎಂದು ತಿಳಿದುಬಂದಿದೆ.


ಈ ಹಿನ್ನೆಲೆ ವಿಸ್ತಾರಾ ಸಿಇಒ ವಿನೋದ್ ಕಣ್ಣನ್ ಕೂಡ ಜಾಗರೂಕರಾಗಿದ್ದಾರೆ.


ಇದನ್ನು ಓದಿ: ದೇಶದ ರೈತರಿಗೆ ಬಂಪರ್​; PM Kisan Samman ಯೋಜನೆಯಿಂದ ಸದ್ಯದಲ್ಲೇ ರೈತರ ಅಕೌಂಟ್​ಗೆ ಹಣ

"ಕಾರ್ಪೊರೇಟ್ ಪ್ರಯಾಣದಲ್ಲಿ ಸಂಪೂರ್ಣ ಮರುಕಳಿಸುವಿಕೆಯು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆಯಾದರೂ, ಕಳೆದ ಕೆಲವು ತಿಂಗಳುಗಳಲ್ಲಿ ನಾವು ಬೇಡಿಕೆಯಲ್ಲಿ ಅಲ್ಪ ಹೆಚ್ಚಳವನ್ನು ಗಮನಿಸಿದ್ದೇವೆ. ಜನರು ತಮ್ಮ ಕೆಲಸದ ಸ್ಥಳಗಳಿಗೆ ಹಿಂದಿರುಗುವುದು ಮತ್ತು ಕಾರ್ಪೊರೇಟ್ ಈವೆಂಟ್‌ಗಳಿಗೆ ಸಂಬಂಧಿಸಿದ ಪ್ರಯಾಣದಂತಹ ಅನೇಕ ಅಂಶಗಳಿಗೆ ಇದು ಕಾರಣವಾಗಿದೆ” ಎಂದು ಅವರು ಹೇಳುತ್ತಾರೆ.


ಕಾರ್ಪೊರೇಟ್ ಪ್ರಯಾಣಿಕರು ವಿಮಾನಗಳಿಗೆ ಸಂಪೂರ್ಣ ಗೈರುಹಾಜರಾಗಿಲ್ಲ, ಆದರೆ ಒಟ್ಟು ಪ್ರಯಾಣಿಕರ ದಟ್ಟಣೆಯಲ್ಲಿ ಅವರ ಪಾಲು ಸಾಂಕ್ರಾಮಿಕ-ಪೂರ್ವ ದಿನಗಳಿಗಿಂತ ತೀರಾ ಕಡಿಮೆಯಾಗಿದೆ ಎಂದು ಕಂಡುಬಂದಿದೆ.


ಇದನ್ನು ಓದಿ: PMASBY: ಪ್ರಧಾನ ಮಂತ್ರಿ ಆತ್ಮನಿರ್ಭರ್ ಸ್ವಸ್ತ್​​ ಭಾರತ್ ಯೋಜನೆಗೆ ಮೋದಿ ಚಾಲನೆ; ಏನಿದು ಯೋಜನೆ!

ಉದಾಹರಣೆಗೆ, 2019ರಲ್ಲಿ ಪ್ರತಿದಿನ ಸರಾಸರಿ 4 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ದೇಶೀಯ ವಿಮಾನಗಳನ್ನು ತೆಗೆದುಕೊಂಡರೆ, ಈ ಸಂಖ್ಯೆ ಅಕ್ಟೋಬರ್‌ನಲ್ಲಿ ಇಲ್ಲಿಯವರೆಗೆ ಸುಮಾರು 2.7 ಲಕ್ಷಕ್ಕೆ ಇಳಿದಿದೆ. ಇದರರ್ಥ ದೇಶೀಯ ವಿಮಾನಗಳ ಸಾಮರ್ಥ್ಯವು ಸಾಂಕ್ರಾಮಿಕ-ಪೂರ್ವದ 100%ನಷ್ಟು ಮಟ್ಟಕ್ಕೆ ಮರಳಿದರೂ, ಸರಾಸರಿ ದೈನಂದಿನ ಪ್ರಯಾಣಿಕರ ದಟ್ಟಣೆ ಸುಮಾರು 65%ನಲ್ಲಿದೆ. 2.7 ಲಕ್ಷ ಪ್ರಯಾಣಿಕರಲ್ಲಿಯೂ, ಕಾರ್ಪೊರೇಟ್ ಪ್ರಯಾಣಿಕರ ಪ್ರಮಾಣವು ಸಾಂಕ್ರಾಮಿಕ ಪೂರ್ವದ ಮಟ್ಟಗಳಲ್ಲಿ ಸುಮಾರು 35%-40%ರಷ್ಟು ಕಡಿಮೆಯಿದೆ. ಆದರೆ, VFR ದಟ್ಟಣೆಯು ಸುಮಾರು 85% ಕ್ಕೆ ಮರಳಿದೆ.


ಭರ್ತಿಯಾಗಲಿದೆಯಾ ಸೀಟು

ವಾರದ ದಿನಗಳಲ್ಲಿ ಸರಾಸರಿ ಮಟ್ಟಕ್ಕಿಂತ ಕಡಿಮೆ ಇದ್ದರೂ, ವಾರಾಂತ್ಯದಲ್ಲಿ ಪ್ರಯಾಣಿಕರ ಸಂಖ್ಯೆ ಸುಮಾರು 3 ಲಕ್ಷಕ್ಕೆ ಏರಿರುವುದರಿಂದ ಮೆಟ್ರೋ ಮಾರ್ಗಗಳಲ್ಲಿ ಬೇಡಿಕೆ ಚೇತರಿಕೆ ದುರ್ಬಲವಾಗಿದೆ ಎನ್ನಬಹುದು. ಏಕೆಂದರೆ, ವಿಶಿಷ್ಟವಾಗಿ, ಕಾರ್ಪೊರೇಟ್ ಪ್ರಯಾಣಿಕರು ಸಾಂಕ್ರಾಮಿಕ ಪೂರ್ವ ದಿನಗಳಲ್ಲಿ ವಾರದ ದಿನಗಳಲ್ಲಿ ಸೀಟುಗಳನ್ನು ತುಂಬುತ್ತಿದ್ದರು.


ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಪ್ರಯಾಣಿಸಲು ಅನುವು ಮಾಡಿಕೊಡುವ ಆಂತರಿಕ ಸಲಹೆಗಳೊಂದಿಗೆ ಹೊರಬಂದಿದ್ದರೂ, ಅವುಗಳು ಹೆಚ್ಚಾಗಿ ಕಾಗದದ ಮೇಲೆ ಉಳಿದಿವೆ. ಸಾಮಾನ್ಯ ಕಾರ್ಪೊರೇಟ್ ಪ್ರಯಾಣಿಕರು ತೀರಾ ಅಗತ್ಯವಿದ್ದಾಗ ಫ್ಲೈಟ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ, "ತ್ಯಾಜ್ಯ ಪ್ರಯಾಣ" ಅಥವಾ ವಾರಾಂತ್ಯದಲ್ಲಿ ಕಾರ್ಯನಿರ್ವಾಹಕರು ವಾರಾಂತ್ಯವನ್ನು ಗಮ್ಯಸ್ಥಾನದಲ್ಲಿ ಕಳೆಯುವ ಪ್ರಯಾಣಗಳು ಇನ್ನೂ ಪುನಾರಂಭಗೊಳ್ಳಬೇಕಿದೆ ಎಂದೂ ವಿಮಾನಯಾನ ವಲಯದ ವಿಶ್ಲೇಷಕರು ಹೇಳುತ್ತಿದ್ದಾರೆ.


First published: