River Journey: ವಿಶ್ವದ ಅತಿ ಉದ್ದದ ನದಿ ಪ್ರಯಾಣಕ್ಕೆ ಭಾರತ ಸಜ್ಜು! ಇಲ್ಲಿದೆ ವಿವರ

ದೋಣಿ, ಬೋಟಿಂಗ್ ಗಿಂತ ಕ್ರೂಸಸ್ ವಿಹಾರವು ಪ್ರಯಾಣಿಕರಿಗೆ ಭಿನ್ನ ಅನುಭವ ನೀಡುತ್ತದೆ. ಇಲ್ಲಿ ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗಲಿದ್ದು, ಹತ್ತಿರತ್ತಿರ 2 ತಿಂಗಳ ಹೊಸ ಜಾಗ, ಪರಿಸರವನ್ನು ಅನ್ವೇಷಣೆ ಮಾಡಲು ಭಿನ್ನ ಅನುಭವ ನೀಡಲು ಸಜ್ಜುಗೊಂಡಿದೆ.

ಅಂಟಾರಾ ಐಷಾರಾಮಿ ರಿವರ್ ಕ್ರೂಸಸ್

ಅಂಟಾರಾ ಐಷಾರಾಮಿ ರಿವರ್ ಕ್ರೂಸಸ್

  • Share this:
ಪ್ರವಾಸ ಸಂದರ್ಭದಲ್ಲಿ ಕೆಲವೆಡೆ ಬೋಟಿಂಗ್ (Boating), ದೋಣಿ ವಿಹಾರಗಳಿಗೆ ಹೋದಾಗ ಸಾಮಾನ್ಯವಾಗಿ ಸ್ವಲ್ಪೇ ಸ್ವಲ್ಪ ದೂರ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಿಡುತ್ತಾರೆ. ಅಯ್ಯೋ ಇನ್ನೂ ಸ್ವಲ್ಪ ದೂರ ಹೋಗಿದ್ರೆ ಚೆನ್ನಾಗಿರುತ್ತಿತ್ತು ಅಂತಾ ಕೆಲವರು ಮನಸ್ಸಲ್ಲಿಯೇ ಅಂದುಕೊಂಡಿರುತ್ತಾರೆ. ಹೀಗೆ ನದಿಯಲ್ಲಿ (River) ಸುದೀರ್ಘವಾದ ಪ್ರಯಾಣ ಮಾಡಲು ಬಯಸುವವರಿಗೆ ಸುವರ್ಣಾವಕಾಶವೊಂದು ಲಭಿಸಲಿದೆ. ಹೇಗೆ ಅಂತೀರಾ ಮುಂದೆ ಓದಿ. ಹೌದು, ಭಾರತದ ಅಂಟಾರಾ ಐಷಾರಾಮಿ ರಿವರ್ ಕ್ರೂಸಸ್ ಇದೇ ಡಿಸೆಂಬರ್ 2022ರಲ್ಲಿ ದೀರ್ಘವಾದ ನದಿ ಪ್ರಯಾಣ (Travel) ಮಾಡಲು ಸಜ್ಜಾಗಿದೆ. ಇನ್ನು ಈ ಪ್ರಯಾಣವನ್ನು ವಿಶ್ವದಲ್ಲಿಯೇ ಅತಿ ಉದ್ದದ ನದಿ (longest river in the world) ಪ್ರಯಾಣ ಎಂದು ಕರೆಯಲಾಗುತ್ತದೆ.

ಭಿನ್ನ ಅನುಭವ ನೀಡುವ ಗಂಗಾ ಮತ್ತು ಬ್ರಹ್ಮಪುತ್ರ ನದಿಯ ಮೂಲಕ ಹಾದುಹೋಗಲಿದ್ದು, 51 ದಿನ ಮತ್ತು 3000 ಮೈಲುಗಳ ಸುದೀರ್ಘ ಪ್ರಯಾಣವನ್ನು ಪ್ರಾರಂಭಿಸುವ ವಿಶ್ವದ ಅತಿ ಉದ್ದದ ನದಿ ಪ್ರಯಾಣ ಎಂದು ಖ್ಯಾತಿ ಪಡೆದುಕೊಂಡಿದೆ.  ದೋಣಿ, ಬೋಟಿಂಗ್ ಗಿಂತ ಕ್ರೂಸಸ್ ವಿಹಾರವು ಪ್ರಯಾಣಿಕರಿಗೆ ಭಿನ್ನ ಅನುಭವ ನೀಡುತ್ತದೆ. ಇಲ್ಲಿ ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗಲಿದ್ದು, ಹತ್ತಿರತ್ತಿರ 2 ತಿಂಗಳ ಹೊಸ ಜಾಗ, ಪರಿಸರವನ್ನು ಅನ್ವೇಷಣೆ ಮಾಡಲು ಭಿನ್ನ ಅನುಭವ ನೀಡಲು ಸಜ್ಜುಗೊಂಡಿದೆ.

ಎಲ್ಲಿಂದ ಪ್ರಯಾಣ ಆರಂಭ ?
ವರದಿಯ ಪ್ರಕಾರ, ಈ ಹಡಗು ಉತ್ತರ ಪ್ರದೇಶದ ಕಾಶಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿ, ಅಸ್ಸಾಂನ ದಿಬ್ರುಗಢದಲ್ಲಿ ಮುಕ್ತಾಯಗೊಳಿಸಲು ಆಯೋಜಿಸಿದೆ. ಕಂಪನಿಯ ಹೇಳಿಕೆಯ ಪ್ರಕಾರ, ಹಡಗು 5 ರಾಜ್ಯಗಳು, 27 ಸಣ್ಣ ನದಿಗಳು ಮತ್ತು 2 ದೇಶಗಳ ಮೂಲಕ ಹಾದು ಹೋಗಲಿದೆ. ಈ ಪ್ರಯಾಣವು ಪ್ರವಾಸಿಗರಿಗೆ ದಕ್ಷಿಣ ಏಷ್ಯಾದ ಭಾಷೆ, ವೈವಿಧ್ಯತೆ, ಸಂಸ್ಕೃತಿಯನ್ನು ಅನ್ವೇಷಿಸಲು ಉತ್ತಮ ಅವಕಾಶವನ್ನು ನೀಡುವುದಲ್ಲದೆ, ಸ್ವಲ್ಪ ಸಮಯವನ್ನು ವಿರಾಮದಲ್ಲಿ ಕಳೆಯಲು ಪ್ರಯಾಣಿಕರು ಅವಕಾಶವನ್ನು ಪಡೆಯಬಹುದು.

ಇದನ್ನೂ ಓದಿ:  Emergency: ತುರ್ತು ಪರಿಸ್ಥಿತಿಯ ಕರಾಳ ನೆನಪಿಗೆ 47 ವರ್ಷ! ಭಾರತದಲ್ಲಿ ಇದು ಹೇರಿಕೆಯಾಗಿದ್ದೇಕೆ? ಇಲ್ಲಿದೆ ಮಾಹಿತಿ

ಈ ಜಲಯಾನವು ಪ್ರಕೃತಿ ಪ್ರೇಮಿಗಳು, ಇತಿಹಾಸ ಪ್ರಿಯರು ಮತ್ತು ಸಾಂಸ್ಕೃತಿಕ ಉತ್ಸಾಹಿಗಳಿಗೆ ಹೆಚ್ಚಿನ ಉತ್ತಮ ಅನುಭವ ನೀಡುವುದರಲ್ಲಿ ಅನುಮಾನವೇ ಇಲ್ಲ. ಇನ್ನು ನಿರ್ದಿಷ್ಟ ವಿಭಾಗಗಳಲ್ಲಿ ಮಾತ್ರ ಪ್ರಯಾಣಿಸಲು ಬಯಸುವ ಜನರಿಗೆ ಹಾಪ್-ಆನ್ ಮತ್ತು ಹಾಪ್-ಆಫ್ ಆಯ್ಕೆಗಳು ಸಹ ಪ್ರಯಾಣದಲ್ಲಿ ಇರುತ್ತವೆ.

ಈ ಎಲ್ಲಾ ಸ್ಥಳಗಳನ್ನು ಪ್ರಯಾಣಿಕರು ನೋಡಬಹುದು
ಇನ್ನು, ಈ ಅದ್ಭುತ ಪ್ರಯಾಣವನ್ನು ‘ಗ್ರ್ಯಾಂಡ್‌ ಕ್ರೂಸ್‌’ ಎಂದು ಕರೆಯಲಾಗುವುದು. ಪ್ರತಿದಿನ ಆನ್‌ ಸೈಟ್ ಮತ್ತು ಆಫ್‌ ಸೈಟ್ ಅನುಭವಗಳನ್ನು ಪ್ರವಾಸಿಗರು ಪಡೆಯಬಹುದು. ಪ್ರವಾಸವು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಇತರ ಸ್ಥಳಗಳಲ್ಲಿ ನೆಲೆಗೊಂಡಿರುವ ಹಲವಾರು ವಿಶ್ವ ಪರಂಪರೆಯ ತಾಣಗಳನ್ನು ಒಳಗೊಂಡಿರುತ್ತದೆ. ಕ್ರೂಸ್ ಬಾಂಗ್ಲಾದೇಶವನ್ನು ಸಹ ಪ್ರವೇಶಿಸುತ್ತದೆ ಮತ್ತು ಯುನೆಸ್ಕೋ-ಮಾನ್ಯತೆ ಪಡೆದ ಸುಂದರಬನ್ಸ್ ಮೂಲಕ ಹಾದುಹೋಗುತ್ತದೆ ಮತ್ತು ಭಾರತವನ್ನು ಪ್ರವೇಶಿಸುವ ಮೊದಲು ಅದು ತನ್ನ ಪ್ರವಾಸಿ ಅತಿಥಿಗಳಿಗೆ ಬಾಂಗ್ಲಾದೇಶದ ಬ್ಯಾರಿಸಾಲ್, ಬಾಗರ್ಹತ್ ಮತ್ತು ಧಾಕ್ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದೊಯ್ಯುತ್ತದೆ.

ಪ್ರಯಾಣದ ಬಗ್ಗೆ ಹೆಚ್ಚಿನ ವಿವರ ಬಹಿರಂಗಪಡಿಸಿದ ಕಂಪನಿಯ ಅಧ್ಯಕ್ಷ ರಾಜ್ ಸಿಂಗ್ ಅವರು ಎಲ್ಲಾ ಅನುಭವಗಳನ್ನು ವೈಯಕ್ತಿಕವಾಗಿ ವಿನ್ಯಾಸಗೊಳಿಸಿದ್ದಾರೆ ಮತ್ತು ಪರಿಶೀಲಿಸಿದ್ದಾರೆ ಎಂದು ಹೇಳಿದರು. 2 ದೇಶದ ಮೂಲಕ ಪ್ರಯಾಣ ಮಾಡುವ ಕಾರಣ ಭಾರತ ಮತ್ತು ಬಾಂಗ್ಲಾದೇಶ ಸರ್ಕಾರಗಳ ಬೆಂಬಲ ನೆರವು ಮತ್ತು ಸಹಕಾರ ಅಗತ್ಯವಿದೆ. ಜೊತೆಗೆ ಐತಿಹಾಸಿಕ ಮಾರ್ಗವನ್ನು ಸಹ ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:  Petrol-Diesel Home Delivery: ವಾಹನ ಸವಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಪೆಟ್ರೋಲ್ & ಡೀಸೆಲ್ ಹೋಮ್ ಡೆಲಿವರಿ ಸಿಗಲಿದೆ

ಒಟ್ಟಾರೆ ಇದೊಂದು ತಡೆ ರಹಿತ ಪ್ರಯಾಣವಾಗಿದ್ದು ಬೇರೆ ಬೇರೆ ಜಾಗ, ಸಂಸ್ಕೃತಿಯ ಶ್ರೀಮಂತ ವಿಶ್ವ ಪರಂಪರೆಯ ತಾಣಗಳನ್ನು ಅನ್ವೇಷಣೆ ಮಾಡಲು ಪ್ರಯಾಣಿಕರಿಗೆ ಅನುವು ಮಾಡಿಕೊಡುವುದರಲ್ಲಿ ಎರಡು ಮಾತಿಲ್ಲ.
Published by:Ashwini Prabhu
First published: