Amit Pandey: ನಾಸಾ ಹಿರಿಯ ವಿಜ್ಞಾನಿಯಾಗಿ ಭಾರತದ ಅಮಿತ್ ಪಾಂಡೆ ನೇಮಕ!

 ಅಮಿತ್ ಪಾಂಡೆ

ಅಮಿತ್ ಪಾಂಡೆ

ನಾಸಾದ ಒಂದು ಮಹತ್ವಾಕಾಂಕ್ಷಿ ಯೋಜನೆಗೆ ಹಿರಿಯ ವಿಜ್ಞಾನಿಯಾಗಿ ಭಾರತದ ಮೂಲದ ವ್ಯಕ್ತಿಯೊಬ್ಬರು ನೇಮಕಗೊಂಡಿದ್ದಾರೆ. ಉತ್ತರಾಖಂಡ ವಿಜ್ಞಾನಿ ಅಮಿತ್ ಪಾಂಡೆ ಅವರನ್ನು ‘ನ್ಯೂ ಮೂನ್ ಪ್ರೋಗ್ರಾಂ ಆರ್ಟೆಮಿಸ್ I’ ರಲ್ಲಿ ಹಿರಿಯ ವಿಜ್ಞಾನಿಯಾಗಿ ಅಮೆರಿಕಾದ ನಾಸಾ ನೇಮಕ ಮಾಡಿದೆ.

  • Share this:

ನಾಸಾದ ಒಂದು ಮಹತ್ವಾಕಾಂಕ್ಷಿ ಯೋಜನೆಗೆ ಹಿರಿಯ ವಿಜ್ಞಾನಿಯಾಗಿ (Senior Scientist) ಭಾರತದ ಮೂಲದ ವ್ಯಕ್ತಿಯೊಬ್ಬರು ನೇಮಕಗೊಂಡಿದ್ದಾರೆ. ಉತ್ತರಾಖಂಡ ವಿಜ್ಞಾನಿ ಅಮಿತ್ ಪಾಂಡೆ (Amit Pandey) ಅವರನ್ನು ‘ನ್ಯೂ ಮೂನ್ ಪ್ರೋಗ್ರಾಂ ಆರ್ಟೆಮಿಸ್ I’ ರಲ್ಲಿ ಹಿರಿಯ ವಿಜ್ಞಾನಿಯಾಗಿ ಅಮೆರಿಕಾದ ನಾಸಾ ನೇಮಕ ಮಾಡಿದೆ. ನಾಸಾದ ಈ ಕಾರ್ಯಕ್ರಮವು ಚಂದ್ರನ ಮೇಲೆ ದೀರ್ಘಕಾಲ ಗಗನಯಾತ್ರಿಗಳು (Astronauts) ನೆಲೆಸುವ ಉದ್ದೇಶ ಹೊಂದಿದ್ದು , ರಾಕೆಟ್ ಅನ್ನು ಆಗಸ್ಟ್ 29ರಂದು ಉಡಾವಣೆ ಮಾಡಲು ನಿರ್ಧರಿಸಿದೆ. ‘ನ್ಯೂ ಮೂನ್ ಪ್ರೋಗ್ರಾಂ ಆರ್ಟೆಮಿಸ್ I’ಕ್ಕೆ ಹಿರಿಯ ವಿಜ್ಞಾನಿಯಾಗಿ ನೇಮಕಗೊಂಡಿರುವ ಅಮಿತ್ ಮಾತನಾಡಿ, “60ರ ದಶಕದಲ್ಲಿ, ಅಮೇರಿಕಾ ಅಪೊಲೊ ಕಾರ್ಯಕ್ರಮವನ್ನು ಪ್ರಾರಂಭಿಸಿತು, ಅದರ ಮೂಲಕ ಗಗನಯಾತ್ರಿ ನೀಲ್ ಆರ್ಮ್ಸ್ಟ್ರಾಂಗ್ ಚಂದ್ರನ ಮೇಲೆ ಹೆಜ್ಜೆ ಹಾಕಿದರು.


ಅದೇ ರೀತಿ, ನಾಸಾ ಈಗ ದೀರ್ಘಾವಧಿಯ ಚಂದ್ರನ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ, ಆದ್ದರಿಂದ ಗಗನಯಾತ್ರಿಗಳು ಚಂದ್ರನ ಮೇಲೆ ವಾಸಿಸಬಹುದು ಮತ್ತು ಸಂಶೋಧನೆ ಮಾಡಬಹುದು” ಎಂದು ಅಮಿತ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.


10 ಉಪಗ್ರಹಗಳನ್ನು ಹಿಡಿದಿಟ್ಟುಕೊಂಡು ಸಂಶೋಧನೆ
ನಾಸಾದ ಇದೇ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಕೊಡುಗೆ ನೀಡುತ್ತಿರುವ ಲಾಕ್ಹೀಡ್ ಮಾರ್ಟಿನ್ ಅವರೊಂದಿಗೆ ಅಮಿತ್ ಪಾಂಡೆ ಕೆಲಸ ಮಾಡುತ್ತಾರೆ. ಇತರ ಗುತ್ತಿಗೆದಾರರಲ್ಲಿ ಏರೋಜೆಟ್ ರಾಕೆಟ್‌ಡೈನ್, ಬೋಯಿಂಗ್, ಜೇಕಬ್ಸ್ ಮತ್ತು ನಾರ್ತ್‌ರಾಪ್ ಗ್ರುಮನ್ ಕೂಡ ಈ ತಂಡದಲ್ಲಿ ಸೇರಿದ್ದಾರೆ.


ಇದನ್ನೂ ಓದಿ: Viral News: ಮಗನ ಜೊತೆ ತಾಯಿಯೂ ಶಾಲೆ ಕಲೀತಾಳೆ! ಹೀಗೊಂದು ವಿಚಿತ್ರ ಘಟನೆ

ಆರ್ಟೆಮಿಸ್ I, ಫ್ಲೋರಿಡಾದಲ್ಲಿ ಎಕ್ಸ ಪ್ಲೋರೇಶನ್ ಗ್ರೌಂಡ್ ಸಿಸ್ಟಮ್ಸ್‌ನೊಂದಿಗೆ ನಾಸಾದ ಡೀಪ್ ಸ್ಪೇಸ್ ಎಕ್ಸ್ ಪ್ಲೋರೇಷನ್ ಸಿಸ್ಟಮ್ಸ್ - ಓರಿಯನ್ ಬಾಹ್ಯಾಕಾಶ ನೌಕೆ, ಸ್ಪೇಸ್ ಲಾಂಚ್ ಸಿಸ್ಟಮ್ (ಎಸ್‌ಎಲ್‌ಎಸ್) ರಾಕೆಟ್‌ನ ಮೊದಲ ಸಮಗ್ರ ಹಾರಾಟ ಪರೀಕ್ಷೆಯಾಗಿದೆ. ಓರಿಯನ್ ಚಂದ್ರನ ಸುತ್ತ ಪರಿಭ್ರಮಿಸಿದರೆ, ಎಸ್‌ಎಲ್‌ಎಸ್ 10 ಉಪಗ್ರಹಗಳನ್ನು ಹಿಡಿದಿಟ್ಟುಕೊಂಡು ಅದು ಸಂಶೋಧನೆ ನಡೆಸುತ್ತದೆ. ನಾಸಾ ಕೈಗೊಂಡಿರುವ ಆರ್ಟೆಮಿಸ್ I ಚಂದ್ರನ ಮೇಲೆ ಮಾನವ ಅಸ್ತಿತ್ವದ ಸಂಭಾವ್ಯತೆಯ ಬಗ್ಗೆ ವಿಚಾರಿಸುವ ಕಾರ್ಯಾಚರಣೆಗಳ ಸರಣಿಯಲ್ಲಿ ಮೊಟ್ಟ ಮೊದಲ ಹೆಜ್ಜೆಯಾಗಿದೆ.


“ಚಂದ್ರ, ನಾನು ಬರುತ್ತಿದ್ದೇನೆ”ಎಂದು ಟ್ವೀಟ್ ಮಾಡಿದ ಅಮಿತ್ಚಂದ್ರ ನಾನು ಬರುತ್ತಿದ್ದೇನೆ ( ಮೂನ್ ಹಿಯರ್ ಐ ಕಮ್) ಎಂದು ಟ್ವೀಟ್ ಮಾಡಿರುವ ಅಮಿತ್ ಪಾಂಡೆ ತಮ್ಮ ಖಾತೆಯಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. ಲಾಕ್ಹೀಡ್ ಮಾರ್ಟಿನ್ ಸ್ಪೇಸ್ ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾದ ವಿಡಿಯೋವನ್ನು ಮರುಹಂಚಿಕೊಂಡ ಅಮಿತ್ ಈ ರೀತಿಯಾಗಿ ಬರೆದುಕೊಂಡಿದ್ದಾರೆ.




ಅಮಿತ್ ಪಾಂಡೆ ಪರಿಚಯ
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಹುಟ್ಟಿ ಬೆಳೆದ ಅಮಿತ್ ಅವರ ತಂದೆ ಬಿಪಿನ್ ಚಂದ್ರ ಪಾಂಡೆ ಮಹಾತ್ಮ ಗಾಂಧಿ ಇಂಟರ್ ಕಾಲೇಜಿನಲ್ಲಿ ನಿವೃತ್ತ ಶಿಕ್ಷಕರಾಗಿದ್ದಾರೆ ಮತ್ತು ಅವರ ತಾಯಿ ಸುಶೀಲಾ ಪಾಂಡೆ ಗೃಹಿಣಿಯಾಗಿದ್ದಾರೆ. ಕೇಂದ್ರೀಯ ವಿದ್ಯಾಲಯ ಹಲ್ದ್ವಾನಿಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮತ್ತು ಕೇಂದ್ರೀಯ ವಿದ್ಯಾಲಯ ರಾಯ್ ಬರೇಲಿಯಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿದರು. ನಂತರ, ಅವರು ಐಐಟಿ ಬಿಹೆಚ್ ಯು (IIT BHU - ಬನಾರಸ್ ಹಿಂದೂ ವಿಶ್ವವಿದ್ಯಾಲಯ) ದಲ್ಲಿ ಬಿ.ಟೆಕ್ ಮಾಡಲು ತೆರಳಿದರು.

ಇದರ ನಂತರ ಸ್ನಾತಕೋತ್ತರ ಪದವಿಗಾಗಿ ಅಮೆರಿಕಕ್ಕೆ ತೆರಳಿ ಅರಿಜೋನಾ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ನಂತರ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಕೂಡ ಪಡೆದರು. ನಂತರ ಅಮಿತ್ ಪಾಂಡೆ ವಿಜ್ಞಾನಿಯಾಗಿ ವೃತ್ತಿ ಜೀವನ ಆರಂಭಿಸಿದರು. ಹಲವಾರು ವರ್ಷಗಳಿಂದ ಅಮೆರಿಕದಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ.


ಇದನ್ನೂ ಓದಿ:  Father and Daughter: ಮಗಳ ಫೀಸ್ ಕಟ್ಟೋದ್ದಕ್ಕೆ ಈ ತಂದೆ ಏನೆಲ್ಲಾ ಕೆಲಸ ಮಾಡ್ತಾರೆ ನೋಡಿ; ನೋಡಿದ್ರೆ ಪಾಪ ಅನಿಸುತ್ತೆ

ನಾಸಾದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುವುದರ ಜೊತೆಗೆ ಅವರು ದಿ ಕೆರಿಯರ್‌ಪೀಡಿಯಾ ಎಂಬ ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಸಹ ನಿರ್ವಹಿಸುತ್ತಾರೆ. ಅಲ್ಲಿ ಅವರು ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಮಾರ್ಗದರ್ಶನ ಸಲಹೆಯನ್ನು ನೀಡುತ್ತಾರೆ. ಯೂಟ್ಯೂಬ್ ಚಾನೆಲ್ ಮೂಲಕ, ಅವರು ಅಧ್ಯಯನ ಮತ್ತು ವಲಸೆ, ನಿರ್ದಿಷ್ಟ ಪದವಿ ಅಥವಾ ವೃತ್ತಿಜೀವನವನ್ನು ಮುಂದುವರಿಸುವಾಗ ಮಾಡಬೇಕಾದುದು ಮತ್ತು ಮಾಡಬಾರದು, ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ, ಕೆಲಸ ಮತ್ತು ಜೀವನವನ್ನು ನಿರ್ವಹಿಸುವುದು ಮತ್ತು ಹೆಚ್ಚಿನವುಗಳ ಕುರಿತು ಸಲಹೆಯನ್ನು ಹಂಚಿಕೊಳ್ಳುವ ಉತ್ತಮ ಕೆಲಸದಲ್ಲೂ ಕೂಡ ತೊಡಗಿದ್ದಾರೆ. ಅಮಿತ್ ಪಾಂಡೆ ನೇಮಕ ಭಾರತಕ್ಕೂ ಹೆಮ್ಮೆಯ ವಿಚಾರವಾಗಿವೇ ಸರಿ.

top videos
    First published: