• Home
 • »
 • News
 • »
 • national-international
 • »
 • Monkeypox Case: ಕೇರಳದಲ್ಲಿ ದೃಢವಾಯ್ತು ಭಾರತದ 2ನೇ ಮಂಕಿಪಾಕ್ಸ್ ಪ್ರಕರಣ; ಕರ್ನಾಟಕದಲ್ಲಿ ಹೆಚ್ಚಾಯ್ತು ಆತಂಕ

Monkeypox Case: ಕೇರಳದಲ್ಲಿ ದೃಢವಾಯ್ತು ಭಾರತದ 2ನೇ ಮಂಕಿಪಾಕ್ಸ್ ಪ್ರಕರಣ; ಕರ್ನಾಟಕದಲ್ಲಿ ಹೆಚ್ಚಾಯ್ತು ಆತಂಕ

ಮಂಕಿಪಾಕ್ಸ್

ಮಂಕಿಪಾಕ್ಸ್

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ದೇಶದ ಮಂಕಿಪಾಕ್ಸ್​ನ 2ನೇ ಪ್ರಕರಣ ದಾಖಲಾಗಿದೆ.

 • Share this:

  ತಿರುವನಂತಪುರಂ: ಕೇರಳದಲ್ಲಿ 2ನೇ ಮಂಕಿಪಾಕ್ಸ್ (Kerala 2nd Monkeypox Case) ಪ್ರಕರಣ ದೃಢಪಟ್ಟಿದೆ. ಈ ಮೂಲಕ ಭಾರತದ 2ನೇ ಮಂಕಿಪಾಕ್ಸ್ (Monkeypox 2nd Case) ಪ್ರಕರಣ ಖಚಿತಪಟ್ಟಂತಾಗಿದೆ.   ಕೇರಳ ರಾಜ್ಯದ ಕಣ್ಣೂರು (Kannur) ಜಿಲ್ಲೆಯಲ್ಲಿ ದೇಶದ ಮಂಕಿಪಾಕ್ಸ್​ನ 2ನೇ ಪ್ರಕರಣ ದಾಖಲಾಗಿದೆ. ಈ ಮುನ್ನವೂ ಕೇರಳದಲ್ಲಿಯೇ ಮೊದಲ ಪ್ರಕರಣ ಪತ್ತೆಯಾಗಿತ್ತು.  ಇಂದು ಬೆಳಗ್ಗೆಯಷ್ಟೇ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು. ಸೌದಿ ಅರೇಬಿಯಾದಿಂದ ಪೋಷಕರೊಂದಿಗೆ ವಿಜಯವಾಡಕ್ಕೆ ವಾಪಸ್ಸಾಗಿದ್ದ ಬಾಲಕನಲ್ಲಿ  ಮಂಕಿಪಾಕ್ಸ್‌ನ ರೋಗ ಲಕ್ಷಣ ಕಂಡುಬಂದಿತ್ತು. ವಿಜಯವಾಡದಲ್ಲಿ ಭಾರತದ 2ನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗುವ ಆತಂಕ ಹೆಚ್ಚಿತ್ತು, ಆದರೆ ಅದಕ್ಕೂ ಮುನ್ನವೇ ಕೇರಳದ ಕಣ್ಣೂರಿನಲ್ಲಿಯೇ 2ನೇ ಕೊವಿಡ್ ಪ್ರಕರಣ ಖಚಿತಗೊಂಡಿದೆ. 


  ಕೇರಳದಲ್ಲಿ ಪತ್ತೆಯಾಗಿದ್ದ ಮೊದಲ ಪ್ರಕರಣ
  ಕೇರಳದ ಕೊಲ್ಲಂ ಜಿಲ್ಲೆಯ 35 ವರ್ಷದ ವ್ಯಕ್ತಿಯಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು. ಮಂಕಿಪಾಕ್ಸ್ ದೃಢಪಟ್ಟ ವ್ಯಕ್ತಿ ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳ ಆರೋಗ್ಯ ಸಚಿವ ವೀನಾ ಜಾರ್ಜ್ ಈಗಾಗಲೇ ತುರ್ತು ಸಭೆ ನಡೆಸಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ತಪಾಸನೆ ನಡೆಸುವಂತೆ ಸೂಚಿಸಿದ್ದಾರೆ. ವಿದೇಶದಿಂದ ಆಗಮಿಸುವವರ ಬಗ್ಗೆ ನಿಗಾ ಇಡಲು ಸೂಚಿಸಲಾಗಿದೆ.


  ಕೇರಳ ರಾಜ್ಯದಾದ್ಯಂತ ಹೈ ಅಲರ್ಟ್
  ಕೇರಳದಲ್ಲಿ ಈಗಾಗಲೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಕಾರಣ 5 ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತದೆ. ಪ್ರಯಾಣಿಕರ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದೀಗ ಕೇರಳದಲ್ಲಿ ಕೋವಿಡ್ ಜೊತೆಗೆ ಮಂಕಿಪಾಕ್ಸ್ ಪ್ರಕರಣ ಭೀತಿ ಹೆಚ್ಚಾಗಿದೆ.


  ಇದನ್ನೂ ಓದಿ: Monkeypox: ಭಾರತದಲ್ಲಿ ಮಂಕಿಪಾಕ್ಸ್ ಟೆನ್ಶನ್, ಮಹಾಮಾರಿ ಕಂಟ್ರೋಲ್‌ಗೆ ಕೇಂದ್ರದಿಂದ ಗೈಡ್‌ಲೈನ್


  ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ
  ಕೇರಳದಲ್ಲಿ ಮಂಕಿಪಾಕ್ಸ್​ನ ಮೊದಲ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಗಳಿಗೆ ಪತ್ರ ಬರೆದಿದ್ದು, ರೋಗ ನಿಯಂತ್ರಣ ಸಂಬಂಧ ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ.


  ಕೇಂದ್ರದ ಮಾರ್ಗಸೂಚಿಯಲ್ಲಿ ಏನಿದೆ?
  ಮಂಕಿಪಾಕ್ಸ್ ಕಾಯಿಲೆ ಹಲವು ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಭಾರತದ ಕೆಲವೆಡೆ ರೋಗದ ಲಕ್ಷಣಗಳು ಕಂಡುಬಂದಿದ್ದು ರಾಜ್ಯಗಳ ಗಡಿಗಳಲ್ಲಿ ಆರೋಗ್ಯ ತಪಾಸಣೆ ಮಾಡಬೇಕು. ಕಾಯಿಲೆ ಗುಣಲಕ್ಷಣಗಳು ಕಂಡುಬಂದಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಅಂತ ಕೇಂದ್ರ ಸರ್ಕಾರ ಸೂಚಿಸಿದೆ.


  ಕೇಂದ್ರದ ಮಾರ್ಗಸೂಚಿಯಲ್ಲಿ ಏನಿದೆ?
  ಮಂಕಿಪಾಕ್ಸ್ ಕಾಯಿಲೆ ಹಲವು ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಭಾರತದ ಕೆಲವೆಡೆ ರೋಗದ ಲಕ್ಷಣಗಳು ಕಂಡುಬಂದಿದ್ದು ರಾಜ್ಯಗಳ ಗಡಿಗಳಲ್ಲಿ ಆರೋಗ್ಯ ತಪಾಸಣೆ ಮಾಡಬೇಕು. ಕಾಯಿಲೆ ಗುಣಲಕ್ಷಣಗಳು ಕಂಡುಬಂದಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಅಂತ ಕೇಂದ್ರ ಸರ್ಕಾರ ಸೂಚಿಸಿದೆ.


  ಇದನ್ನೂ ಓದಿ:  Monkeypox In Kerala: ಭಾರತದಲ್ಲೂ ಮಂಕಿಪಾಕ್ಸ್ ಪತ್ತೆ! ಕೇರಳದ ವ್ಯಕ್ತಿಗೆ ಡೆಡ್ಲಿ ವೈರಸ್​, ಕರ್ನಾಟಕಕ್ಕೂ ಆತಂಕ


  ಅಂತಾರಾಷ್ಟ್ರೀಯ ಪ್ರಯಾಣಿಕರು ಅನಾರೋಗ್ಯವಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರಬಾರದು ಅಂತ ಸೂಚಿಸಿದೆ. ಇಲಿಗಳು, ಅಳಿಲುಗಳು, ಮಂಗಗಳು ಮತ್ತು ಸಸ್ತನಿಗಳು ಸೇರಿದಂತೆ ಸತ್ತ ಅಥವಾ ಜೀವಂತ ಕಾಡು ಪ್ರಾಣಿಗಳ ಸಂಪರ್ಕದಿಂದ ದೂರವಿರಬೇಕು ಅಂತ ತಿಳಿಸಿದೆ.


  ಕಾಡುಪ್ರಾಣಿಗಳ ಮಾಂಸ ತಿನ್ನಬೇಡಿ
  ಕಾಡು ಪ್ರಾಣಿಗಳ ಮಾಂಸವನ್ನು ತಿನ್ನಬಾರದು ಅಂತ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆಫ್ರಿಕಾ ಸೇರಿದಂತೆ ಇತರ ದೇಶಗಳಲ್ಲಿ ಕಾಡು ಪ್ರಾಣಿಗಳಿಂದ ಉತ್ಪಾದಿಸಿದ ಉತ್ಪನ್ನಗಳಾದ ಕ್ರೀಮ್‌ ಲೋಷನ್‍ಗಳನ್ನು ಬಳಸಬಾರದು ಮತ್ತು ತರಬಾರದೆಂದು ಗೈಡ್‍ಲೈನ್‍ನಲ್ಲಿ ಸ್ಪಷ್ಟಪಡಿಸಲಾಗಿದೆ.


  ನಿರ್ಲಕ್ಷ್ಯ ಮಾಡದೇ ಹತ್ತಿರದ ಆಸ್ಪತ್ರೆಗೆ ತೆರಳಿ
  ಜೊತೆಗೆ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ಔಷಧಿ ಪಡೆಯಿರಿ ಮತ್ತು ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಿ. ಜೊತೆಗೆ ಸೋಂಕಿತರೊಂದಿಗೆ ಸಂಪರ್ಕಿಸಿದವರ ಬಗ್ಗೆ ಮಾಹಿತಿ ನೀಡಿ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

  Published by:ಗುರುಗಣೇಶ ಡಬ್ಗುಳಿ
  First published: