ಆರ್ಥಿಕತೆಗೆ ದೀಪಾವಳಿ ಗಿಫ್ಟ್; ಜನರಿಂದ ಅತಿ ಹೆಚ್ಚು ಹಣ ಡ್ರಾ; ಹಿಂದಿನ ಆರು ತಿಂಗಳನ್ನು ಮೀರಿಸಿತು ಈ ಒಂದು ತಿಂಗಳು

ದೇಶದ ಆರ್ಥಿಕತೆ ಕೆಲವೇ ದಿನಗಳಲ್ಲಿ ಚೇತರಿಕೆಯ ಹಾದಿ ಹಿಡಿಯಲಿದೆ ಎಂಬ ಭರವಸೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ದೀಪಾವಳಿ ಹಬ್ಬವೇ ಇದಕ್ಕೆ ಮುನ್ನುಡಿ ಬರೆದಿರುವ ಸಾಧ್ಯತೆಯಂತೂ ಕಾಣುತ್ತಿದೆ.

Vijayasarthy SN | news18
Updated:November 5, 2019, 9:48 PM IST
ಆರ್ಥಿಕತೆಗೆ ದೀಪಾವಳಿ ಗಿಫ್ಟ್; ಜನರಿಂದ ಅತಿ ಹೆಚ್ಚು ಹಣ ಡ್ರಾ; ಹಿಂದಿನ ಆರು ತಿಂಗಳನ್ನು ಮೀರಿಸಿತು ಈ ಒಂದು ತಿಂಗಳು
ನಗದು ಹಣ
  • News18
  • Last Updated: November 5, 2019, 9:48 PM IST
  • Share this:
ನವದೆಹಲಿ(ನ. 05): ಇತ್ತೀಚಿನ ದಿನಗಳಲ್ಲಿ ಷೇರುಪೇಟೆ ಮಿಂಚಲು ಪ್ರಾರಂಭಿಸಿದೆ. ಪ್ರಪಾತಕ್ಕೆ ಕುಸಿದುಹೋಗುವ ಅಪಾಯದಲ್ಲಿದ್ದ ಆಟೊಮೊಬೈಲ್ ಉದ್ಯಮ ಈ ತಿಂಗಳು ಗರಿಗೆದರುತ್ತಿದೆ. ವಾಹನಗಳ ಮಾರಾಟಕ್ಕೆ ಮತ್ತೆ ಜೀವ ಬಂದಿದೆ. ಇದಕ್ಕೆಲ್ಲಾ ಏನು ಕಾರಣ ಎಂದು ಅಚ್ಚರಿಪಡುವಂತಾಗಿತ್ತು. ದೀಪಾವಳಿ ಹಬ್ಬವೇ ಈ ಚೇತರಿಕೆಗೆ ಕಾರಣವಿರಬಹುದು ಎಂಬ ಸುಳಿವು ಸಿಕ್ಕಿದೆ. ದೀಪಾವಳಿ ಹಬ್ಬ ಬರುವ ತಿಂಗಳಲ್ಲಿ ಬ್ಯಾಂಕುಗಳಿಂದ ಅತಿ ಹೆಚ್ಚು ನಗದುಹಣ ಡ್ರಾ ಆಗಿರುವ ಮಾಹಿತಿ ಸಿಕ್ಕಿದೆ. ಹಿಂದಿನ ಇಡೀ ಆರು ತಿಂಗಳಲ್ಲಿ ಡ್ರಾ ಆಗಿದ್ದಕ್ಕಿಂತ ಶೇ. 50ಕ್ಕಿಂತ ಹೆಚ್ಚು ನಗದು ಹಣ ದೀಪಾವಳಿ ಹಬ್ಬದ ತಿಂಗಳಲ್ಲಿ ಆಗಿದೆ. ಈ ನಗದು ಹಣವೇ ದೇಶದ ಆರ್ಥಿಕತೆಗೆ ಪುಷ್ಟಿ ನೀಡಬಹುದು ಎಂಬ ಹೊಸ ಆಸೆ ಕೇಂದ್ರ ಸರ್ಕಾರಕ್ಕೆ ಚಿಗುರಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಡೇಟಾ ಪ್ರಕಾರ, ಸೆಪ್ಟೆಂಬರ್ 28ರಿಂದ ಅಕ್ಟೋಬರ್ 26ರ ಅವಧಿಯಲ್ಲಿ 70,987 ಕೋಟಿ ರೂ ನಗದು ಹಣವನ್ನು ಜನರು ಡ್ರಾ ಮಾಡಿದ್ದಾರೆ. ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ 6 ತಿಂಗಳ ಅವಧಿಯಲ್ಲಿ ಡ್ರಾ ಆದ ನಗದು ಹಣ ಕೇವಲ 46,543 ರೂ ಮಾತ್ರ. ಅಂದರೆ, ಆರು ತಿಂಗಳಿಗಿಂತ ಒಂದೇ ತಿಂಗಳಲ್ಲಿ ಹೆಚ್ಚು ಹಣ ಡ್ರಾ ಆಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹೊರಡಿಸಲಾಗಿದ್ದ ವಿವಿಧ ರಿಯಾಯಿತಿಗಳು, ಕ್ಯಾಷ್​​ಬ್ಯಾಕ್ ಆಫರ್​ಗಳು ಇತ್ಯಾದಿಗಳು ಜನರನ್ನು ಆಕರ್ಷಿಸಿರುವ ಸಾಧ್ಯತೆ ಇದೆ.

ಇದನ್ನೂ ಓದಿ: RCEPಗೆ ಒಲ್ಲೆ ಎಂದ ಭಾರತದ ಚಿತ್ತ ಈಗ ಪಶ್ಚಿಮದತ್ತ; ಐರೋಪ್ಯ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಸಾಧ್ಯತೆ

ನಗದು ಹಣದ ಹರಿವಿಗೂ ಆರ್ಥಿಕತೆಗೂ ಗಟ್ಟಿ ಸಂಬಂಧ ಇದೆ. ಯಾಕೆಂದರೆ ಹಿಂದಿನ ವರ್ಷದ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ 6 ತಿಂಗಳ ಅವಧಿಯಲ್ಲಿ 95,226 ಕೋಟಿ ರೂ ನಗದು ಹಣ ಬ್ಯಾಂಕುಗಳಿಂದ ಡ್ರಾ ಆಗಿತ್ತು. ಆಗ ಆರ್ಥಿಕತೆಗೆ ಗಂಡಾಂತರ ಇರಲಿಲ್ಲ. ಆದರೆ, ಈ ವರ್ಷದ ಇದೇ ಅವಧಿಯಲ್ಲಿ ಇದರ ಪ್ರಮಾಣ ಅರ್ಧಕ್ಕೆ ಇಳಿಯಿತು. ತತ್​ಪರಿಣಾಮವಾಗಿ ದೇಶದ ಜಿಡಿಪಿ ದರ ಶೇ. 5ಕ್ಕೆ ಕುಸಿಯಿತು. ಇದು ನಗದು ವಹಿವಾಟಿನ ಮಹತ್ವಕ್ಕೆ ಕೈಗನ್ನಡಿಯಾಗಿದೆ.

ದೇಶದ ಆರ್ಥಿಕತೆ ಕೆಲವೇ ದಿನಗಳಲ್ಲಿ ಚೇತರಿಕೆಯ ಹಾದಿ ಹಿಡಿಯಲಿದೆ ಎಂಬ ಭರವಸೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ದೀಪಾವಳಿ ಹಬ್ಬವೇ ಇದಕ್ಕೆ ಮುನ್ನುಡಿ ಬರೆದಿರುವ ಸಾಧ್ಯತೆಯಂತೂ ಕಾಣುತ್ತಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 5, 2019, 9:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading