ಭಾರತೀಯರು ವಾರಕ್ಕೆ ಮೂರೂವರೆ ದಿನಕ್ಕಿಂತ ಜಾಸ್ತಿ ಕೆಲಸ ಮಾಡಲ್ವಂತೆ..!; ಹೊಸ ಸಮೀಕ್ಷೆ

ಸುಮಾರು 65 ಪ್ರತಿಶತದಷ್ಟು ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುವ ಸಮಯದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರಬಹುದು ಎಂದು ಹೇಳಿದ್ದಾರೆ. ಆದರೆ ಶೇಕಡಾ 64ರಷ್ಟು ಜನ ಕೊರೊನಾ ನಂತರದ ಸಮಯವನ್ನು ಆಫೀಸ್ನಲ್ಲಿ ಕೆಲಸ ಮಾಡಲು ಇಷ್ಟಪಟ್ಟಿದ್ದಾರೆ.

ಕಚೇರಿ

ಕಚೇರಿ

 • Share this:
  ಕೊರೋನಾ ಕಾರಣದಿಂದ ಭಾರತ ಸೇರಿದಂತೆ ವಿಶ್ವದಲ್ಲಿ ಹೆಚ್ಚಿನ ಜನರು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ಆದರೆ ವಿಶ್ವ ಆರ್ಥಿಕ ವೇದಿಕೆಯ ಸಹಯೋಗದೊಂದಿಗೆ ಇಪ್ಸೊಸ್ ನಡೆಸಿದ ಹೊಸ ಸಮೀಕ್ಷೆಯ ಪ್ರಕಾರ 29 ದೇಶಗಳಲ್ಲಿ ಸರಾಸರಿ 23 ಪ್ರತಿಶತದಷ್ಟು ಉದ್ಯೋಗಿಗಳು ಕೊರೊನಾ ವೈರಸ್ ಹರಡುವ ಮೊದಲೇ ಮನೆಯಿಂದ ಕೆಲಸ ಮಾಡುತ್ತಿದ್ದಾರೆ.

  ಮೇ 21 ಮತ್ತು ಜೂನ್ 4 ರ ನಡುವೆ ನಡೆದ ಈ ಸಮೀಕ್ಷೆಯನ್ನು ಆನ್ಲೈನ್ ಮೂಲಕ ನಡೆಸಲಾಯಿತು ಮತ್ತು ಭಾಗವಹಿಸಿದ್ದ 12,500 ಜನರು ಕೆಲಸ ಮಾಡುವ ವಯಸ್ಕರಾಗಿದ್ದಾರೆ. ಅಧ್ಯಯನದ ಸಂಶೋಧನೆಗಳು ಹೇಳುವಂತೆ ಶೇಕಡಾ 66 ರಷ್ಟು ಉದ್ಯೋಗಿಗಳು (ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ) ಕೊರೊನಾ ನಿಯಮಗಳು ಸಡಿಲವಾದ ನಂತರ ಹೆಚ್ಚಿನ ಕಂಪನಿಗಳು ಆಫೀಸ್ ಗೆ ಉದ್ಯೋಗಿಗಳನ್ನು ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  ಸುಮಾರು 65 ಪ್ರತಿಶತದಷ್ಟು ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುವ ಸಮಯದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರಬಹುದು ಎಂದು ಹೇಳಿದ್ದಾರೆ. ಆದರೆ ಶೇಕಡಾ 64ರಷ್ಟು ಜನ ಕೊರೊನಾ ನಂತರದ ಸಮಯವನ್ನು ಆಫೀಸ್ನಲ್ಲಿ ಕೆಲಸ ಮಾಡಲು ಇಷ್ಟಪಟ್ಟಿದ್ದಾರೆ.

  ಇದನ್ನೂ ಓದಿ:Karnataka Cabinet: ನೂತನ ಸಚಿವರ ಪಟ್ಟಿಯಲ್ಲಿ ಯಾರಿಗೆ ಸ್ಥಾನ?; ಬೊಮ್ಮಾಯಿ ಸಂಪುಟ ಸೇರ್ಪಡೆಯಾದವರು ಇವರೇ ನೋಡಿ..!

  ಇಪ್ಸೊಸ್ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಅಭಿಪ್ರಾಯವನ್ನು ಹೆಚ್ಚು ಶಿಕ್ಷಣ ಪಡೆದವರು(More Graduated) ಮತ್ತು ಹೆಚ್ಚು ಆದಾಯ ಹೊಂದಿರುವವರು, ಮಹಿಳೆಯರು, ಕಿರಿಯ ವಯಸ್ಕರು ಮತ್ತು 18 ವರ್ಷದೊಳಗಿನ ಮಕ್ಕಳ ಪೋಷಕರು ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಸುಮಾರು ಮೂರನೇ ಒಂದು ಭಾಗದಷ್ಟು ಜನರು (38%) ತಮ್ಮ ಮನೆಯಲ್ಲಿ ಹೆಚ್ಚು ಆ್ಯಕ್ಟಿವ್ ಆಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಶೇಕಡಾ 37% ರಷ್ಟು ಜನ ಮನೆಯಿಂದ ಕೆಲಸ ಮಾಡುವಾಗ ನಿರ್ಲಿಪ್ತತ ಭಾವ ಕಾಡುತ್ತದೆ ಎಂದರೆ ಶೆಕಡಾ 33% ರಷ್ಟು ಜನ ನಾವು ಆಫೀಸಿನಲ್ಲಿ ಮಾಡುವುದಕ್ಕಿಂತ ಹೆಚ್ಚಿನ ಕೆಲಸವನ್ನು ಮನೆಯಲ್ಲಿ ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಹತ್ತರಲ್ಲಿ ಮೂವರು (30%) ತಮ್ಮ ಕಂಪನಿ ಹೆಚ್ಚಿನ ಸಮಯ ಅಥವಾ ಪೂರ್ಣ ಪ್ರಮಾಣದಲ್ಲಿ ಮನೆಯಿಂದ ಹೊರಗೆ ಅಂದರೆ ಆಫೀಸಿನಲ್ಲಿಯೇ ಕೆಲಸ ಮಾಡಬೇಕು ಎಂದು ಅಪೇಕ್ಷಿಸಿದರೇ, ಅದೇ ಸಂಬಳ ಮತ್ತು ಅದೇ ಜವಾಬ್ದಾರಿ ನೀಡುವ ಮತ್ತೊಂದು ಕಂಪನಿಯಲ್ಲಿ ಕೆಲಸ ಹುಡುಕುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಪೋಷಕರೇ ಈ ರೀತಿ ಹೇಳುವ ಸಾಧ್ಯತೆ ಇದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  ಈ ಸಮೀಕ್ಷೆಯು ಜಾಗತಿಕವಾಗಿ ಕೆಲಸದ ವ್ಯವಸ್ಥೆ ಮತ್ತು ಆದ್ಯತೆಗಳು ಬದಲಾಗುತ್ತಿರುವ ಮಾದರಿಯನ್ನು ತೋರಿಸುತ್ತದೆ. ಇನ್ನು ಕೊರೊನಾ ಸೋಂಕಿನ ನಂತರ, ಐದು ಕೆಲಸದ ದಿನಗಳಲ್ಲಿ ಜನರು ಮನೆಯಿಂದ ಕೆಲಸ ಮಾಡಲು ಇಚ್ಛಿಸುವ ದಿನಗಳ ಪಟ್ಟಿಯನ್ನು ದೇಶಗಳ ಆಧಾರದಲ್ಲಿ ಸಮೀಕ್ಷೆ ನೀಡಿದೆ. ಸಮೀಕ್ಷೆ ಪ್ರಕಾರ ಭಾರತದಲ್ಲಿ ಸುಮಾರು ಸರಾಸರಿ ದಿನಗಳ ಸಂಖ್ಯೆ 3.4 ರಷ್ಟಿದೆ. ಚೀನಾ, ಬೆಲ್ಜಿಯಂ ಮತ್ತು ಫ್ರಾನ್ಸ್ನ ಉದ್ಯೋಗಿಗಳು ಐದು ದಿನಗಳ ಕೆಲಸದ ವಾರದಲ್ಲಿ 1.9 ದಿನಗಳ ಕಾಲ ಮನೆಯಿಂದ ಕೆಲಸ ಮಾಡಲು ಇಷ್ಟಪಡುತ್ತಾರೆ ಎನ್ನಲಾಗಿದೆ.

  ಇದನ್ನೂ ಓದಿ:Viral Post: ಈ ಜಿಮ್​ಗೆ ಹೋಗ್ಬೇಕು ಅಂದ್ರೆ ನಿಮ್ಮ ಒಳಉಡುಪು ಸರಿ ಇರ್ಬೇಕು, ಕಾಲು ಶೇವ್ ಮಾಡಿರ್ಬೇಕು!

  ರಷ್ಯಾ, ಜಪಾನ್, ಪೋಲೆಂಡ್, ಹಂಗೇರಿ, ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಹತ್ತರಲ್ಲಿ ಒಬ್ಬರಿಗೆ ಹೋಲಿಕೆ ಮಾಡಿದರೆ, ಪೆರು, ಸಿಂಗಾಪುರ್, ಭಾರತ, ಅರ್ಜೆಂಟೀನಾ, ಚಿಲಿ ಮತ್ತು ಕೊಲಂಬಿಯಾದಲ್ಲಿ ಹತ್ತರಲ್ಲಿ ಮೂರಕ್ಕಿಂತ ಹೆಚ್ಚು ಜನರು ಮನೆಯಿಂದ ಅಥವಾ ಆಫೀಸ್ ಬಿಟ್ಟು ಬೇರೆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಇಪ್ಸೊಸ್ ಬಹಿರಂಗ ಮಾಡಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

  (ಸಂಧ್ಯಾ ಎಂ)
  Published by:Latha CG
  First published: