ಇನ್ನೂ Ukraineನಲ್ಲೇ ಸಿಲುಕಿರುವವರಿಗೆ ಮಹತ್ವದ ಸೂಚನೆ: ಆಪರೇಷನ್ ಗಂಗಾ ಕೊನೆ ಹಂತಕ್ಕೆ ಬಂತಾ..?

ಹೆಸರು, ಪಾಸ್‌ಪೋರ್ಟ್ ಸಂಖ್ಯೆ ಮತ್ತು ಪ್ರಸ್ತುತ ಇರುವ ಸ್ಥಳ ಸೇರಿದಂತೆ ಮೂಲಭೂತ ವಿವರಗಳನ್ನು ಕೇಳುವ ಗೂಗಲ್ ಫಾರ್ಮ್ ಅನ್ನು ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಉಕ್ರೇನ್​​ನಿಂದ ಭಾರತೀಯರ ಸ್ಥಳಾಂತರ

ಉಕ್ರೇನ್​​ನಿಂದ ಭಾರತೀಯರ ಸ್ಥಳಾಂತರ

  • Share this:
ಯುದ್ಧ ಪೀಡಿತ ಉಕ್ರೇನ್​​ನಲ್ಲಿ (Ukraine) ಸಿಲುಕಿರುವ ಭಾರತೀಯರನ್ನು (Indians in Ukraine) ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದೆ. ಈಗಾಗಲೇ ಸಾವಿರಾರು ಭಾರತೀಯರನ್ನು ಆಪರೇಷನ್​​ ಗಂಗಾ (Operation Ganga) ಅಡಿಯಲ್ಲಿ ಕರೆತಂದಿದ್ದಾರೆ. ಈ ಮಧ್ಯೆ ದಿನೇ ದಿನೇ ಉಕ್ರೇನ್​ನಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕೈವ್ ‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಉಕ್ರೇನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ 'ತುರ್ತು ಆಧಾರದ ಮೇಲೆ' ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಲು ಸೂಚಿಸಿದೆ. ಉಕ್ರೇನ್‌ನಲ್ಲಿನ ಪರಿಸ್ಥಿತಿಯು ಹದಗೆಡುತ್ತಲೇ ಇರುವುದರಿಂದ, ಭಾರತದ ರಾಯಭಾರ ಕಚೇರಿಯು ಹೊಸ ಸಲಹೆಯನ್ನು ನೀಡಿದೆ. “ಉಕ್ರೇನ್‌ನಲ್ಲಿ ಇನ್ನೂ ಉಳಿದಿರುವ ಭಾರತೀಯ ಪ್ರಜೆಗಳು ಲಗತ್ತಿಸಲಾದ Google ಫಾರ್ಮ್‌ನಲ್ಲಿರುವ ವಿವರಗಳನ್ನು ತುರ್ತು ಆಧಾರದ ಮೇಲೆ ಭರ್ತಿ ಮಾಡಲು ವಿನಂತಿಸಲಾಗಿದೆ. ಸುರಕ್ಷಿತವಾಗಿರಿ ದೃಢವಾಗಿರಿ’’ ಎಂದು ಟ್ವೀಟ್​ ಮಾಡಿದೆ.

ಹೆಸರು, ಪಾಸ್‌ಪೋರ್ಟ್ ಸಂಖ್ಯೆ ಮತ್ತು ಪ್ರಸ್ತುತ ಇರುವ ಸ್ಥಳ ಸೇರಿದಂತೆ ಮೂಲಭೂತ ವಿವರಗಳನ್ನು ಕೇಳುವ ಗೂಗಲ್ ಫಾರ್ಮ್ ಅನ್ನು ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ: Explained: ರಷ್ಯಾ-ಉಕ್ರೇನ್ ಯುದ್ಧ ಅಂತಿಮವಾಗಿ ಏನಾಗುತ್ತೆ..? 5 ಸಾಧ್ಯತೆಗಳು ಇಲ್ಲಿವೆ ನೋಡಿ..

19,000 ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ

ಭಾರತವು ತನ್ನ ಪ್ರಜೆಗಳನ್ನು ಉಕ್ರೇನ್​​ನಿಂದ ಸ್ಥಳಾಂತರಿಸಲು ಆಪರೇಷನ್ ಗಂಗಾ ಅನ್ನು ಪ್ರಾರಂಭಿಸಿದೆ. ಈ ಕಾರ್ಯಾಚರಣೆಯ ಮೇಲುಸ್ತುವಾರಿಯಾಗಿ, ಪ್ರಧಾನ ಮಂತ್ರಿಯ ವಿಶೇಷ ಪ್ರತಿನಿಧಿಗಳಾಗಿ ನಾಲ್ಕು ಕೇಂದ್ರ ಮಂತ್ರಿಗಳನ್ನು ಉಕ್ರೇನ್‌ನ ನೆರೆಹೊರೆಯ ದೇಶಗಳಿಗೆ ಕಳುಹಿಸಿದೆ.  ಆಪರೇಷನ್ ಗಂಗಾ ಕಾರ್ಯಾಚರಣೆಯ ಅಡಿಯಲ್ಲಿ 19,000 ಕ್ಕೂ ಹೆಚ್ಚು ಭಾರತೀಯರನ್ನು ಯುದ್ಧ ಪೀಡಿತ ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಯುದ್ಧ ಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಹಿಂದಿರುಗಿಸಲು ಸರ್ಕಾರವು ಅಲ್ಲಿನ ನೆರೆಹೊರೆಯ ದೇಶಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಅವರು ತಿಳಿಸಿದರು.

ಏನಿದು ಆಪರೇಷನ್ ಗಂಗಾ?

ಆಪರೇಷನ್ ಗಂಗಾ ಯುದ್ಧ ಪೀಡಿತ ಉಕ್ರೇನ್‍ಗೆ ಮಾನವೀಯ ನೆರವುಗಳನ್ನು ಒದಗಿಸಲು ಮತ್ತು ಅಲ್ಲಿನ ಯುದ್ಧದ ಪರಿಸ್ಥಿತಿಯ ನಡುವಿನಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರೀಕರನ್ನು ಅಲ್ಲಿಂದ ಸ್ಥಳಾಂತರಿಸಲು ಭಾರತ ಸರಕಾರ ಆರಂಭಿಸಿರುವ ಕಾರ್ಯಾಚರಣೆಯಾಗಿದೆ. ಈಗಾಗಲೇ ಉಕ್ರೇನ್‍ನಲ್ಲಿ ಇದ್ದ ಸಾವಿರಾರು ಮಂದಿ ಭಾರತೀಯರು ಈ ಕಾರ್ಯಾಚರಣೆಯ ಸಹಾಯದಿಂದ ಸುರಕ್ಷಿತವಾಗಿ ಸ್ವದೇಶ ತಲುಪಿದ್ದಾರೆ.

ರಷ್ಯಾದ ವಿರುದ್ಧ ಯುರೋಪಿಯನ್ ಒಕ್ಕೂಟಗಳ ವಿರೋಧ

ಉಕ್ರೇನಿನ ಮೇಲೆ ಮಿಲಿಟರಿ ಕಾರ್ಯಚರಣೆಯನ್ನು ನಡೆಸಿದ ರಷ್ಯಾದ ನಡೆಯನ್ನು ಯೂಕೆ, ಯೂಎಸ್, ಕೆನಡಾ ಮತ್ತು ಯುರೋಪಿಯನ್ ಒಕ್ಕೂಟಗಳು ಸೇರಿದಂತೆ ಹಲವಾರು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.  ಮಾಸ್ಕೊದ ಮೇಲೆ ಹಲವು ನಿರ್ಭಂಧಗಳನ್ನು ವಿಧಿಸಿವೆ. ಈ ಎಲ್ಲಾ ದೇಶಗಳು ರಷ್ಯಾದ ವಿರುದ್ಧ ಹೋರಾಡಲು ಮಿಲಿಟರಿ ನೆರವಿನ ಸಹಾಯವನ್ನು ಮಾಡುವುದಾಗಿ, ಯುದ್ಧ ಪೀಡಿತ ಉಕ್ರೇನ್‍ಗೆ ಭರವಸೆ ನೀಡಿವೆ.

ಇದನ್ನೂ ಓದಿ: First Lady Of Ukraine: ಉಕ್ರೇನ್​ನ ಮೊದಲ ಮಹಿಳೆ ಒಲೆನಾ ಝೆಲೆನ್ಸ್ಕಾ ಚಿತ್ರಕಥೆಗಾರ್ತಿ! ಯುದ್ಧದಲ್ಲಿ ಇವರೇನು ಮಾಡುತ್ತಿದ್ದಾರೆ?

ರಷ್ಯಾದ ಪ್ರಮುಖ ಬ್ಯಾಂಕ್‍ಗಳನ್ನು ಇಂಟರ್ ಬ್ಯಾಂಕ್ ಸಂದೇಶ ಕಳುಹಿಸುವ ವ್ಯವಸ್ಥೆಯಿಂದ ತೆಗೆದು ಹಾಕಲು, ಯುಎಸ್ , ಕೆನಡಾ ಮತ್ತು ಯುರೋಪಿಯನ್ ಮಿತ್ರ ರಾಷ್ಟ್ರಗಳು ಒಪ್ಪಿಕೊಂಡಿವೆ. ರಷ್ಯಾದ ಬ್ಯಾಂಕುಗಳು ರಷ್ಯಾದ ಗಡಿಯಾಚಿನ ಬ್ಯಾಂಕುಗಳೊಂದಿಗೆ ಸುರಕ್ಷಿತವಾಗಿ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ. ಈ ರಾಷ್ಟ್ರಗಳನ್ನು ವಿರೋಧಿಸುವಲ್ಲಿ ರಷ್ಯಾ ಕೂಡ ಹಿಂದೆ ಬಿದ್ದಿಲ್ಲ. ಯುಎಸ್ ಮತ್ತು ಅದರ ಮಿತ್ರ ರಾಷ್ಟ್ರಗಳ ವಿರುದ್ಧ ವಿಶೇಷ ಆರ್ಥಿಕ ಕ್ರಮಗಳ ಸುಗ್ರೀವಾಜ್ಞೆಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸಹಿ ಹಾಕಿದ್ದಾರೆ.
Published by:Kavya V
First published: