ಯೂರೋಪ್​ನ ಮೆಸೆಡೋನಿಯಾದಲ್ಲಿ ಭಾರತೀಯರು ಸೇರಿ 12 ವಲಸಿಗರ ಒತ್ತೆಯಾಗಿರಿಸಿದ ಪಾಕಿಸ್ತಾನೀಯರ ಬಂಧನ

ಮೂವರು ಅಪಹರಣಕಾರರು ಪಾಕಿಸ್ತಾನೀ ರಾಷ್ಟ್ರೀಯರಾಗಿದ್ದು ಅವರೆಲ್ಲರನ್ನೂ ಪೊಲೀಸರು ಬಂಧನದಲ್ಲಿಟ್ಟಿದ್ಧಾರೆ. ಒತ್ತೆಯಾಳುಗಳನ್ನಿರಿಸಿದ್ದ ಮನೆಯ ಮಾಲೀಕನನ್ನು ಗೃಹ ಬಂಧನದಲ್ಲಿಡಲಾಗಿದೆ. ಈ ನಾಲ್ವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಗ್ರೀಸ್ ದೇಶಕ್ಕೆ ಅಕ್ರಮವಾಗಿ ಬಂದಿರುವ ವಲಸಿಗರು

ಗ್ರೀಸ್ ದೇಶಕ್ಕೆ ಅಕ್ರಮವಾಗಿ ಬಂದಿರುವ ವಲಸಿಗರು

  • News18
  • Last Updated :
  • Share this:
ನಾರ್ಥ್ ಮೆಸಿಡೋನಿಯಾ(ಫೆ. 04): ಯೂರೋಪ್​ನ ಆಗ್ನೇಯ ಭಾಗ (ದಕ್ಷಿಣ ಪೂರ್ವ) ದಲ್ಲಿರುವ ಮೆಸಿಡೋನಿಯಾದಲ್ಲಿ 12 ಮಂದಿ ವಲಸಿಗರನ್ನು ಒತ್ತೆಯಾಗಿರಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಈ ಪ್ರಕರಣದಲ್ಲಿ ಮೂವರು ಪಾಕಿಸ್ತಾನೀ ರಾಷ್ಟ್ರೀಯರು ಹಾಗೂ ಒಬ್ಬ ಸ್ಥಳೀಯ ವ್ಯಕ್ತಿಯನ್ನು ಬಂಧಿಸಿದ್ದೇವೆ ಎಂದು ಮೆಸಿಡೋನಿಯಾ ಪೊಲೀಸರು ತಿಳಿಸಿದ್ಧಾರೆ. ಕಳೆದ ವರ್ಷವೇ ಈ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಇವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಒತ್ತೆಯಾಗಿರಿಸಲ್ಪಟ್ಟ 12 ಮಂದಿಯಲ್ಲಿ ಭಾರತೀಯರು ಹಾಗೂ ಇಬ್ಬರು ಅಪ್ರಾಪ್ತರೂ ಇದ್ದಾರೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನೀ ರಾಷ್ಟ್ರೀಯರೂ ಈ 12 ಮಂದಿಯಲ್ಲಿದ್ದಾರೆ. ಯೂರೋಪ್​​ನ ಸಿರಿವಂತ ರಾಷ್ಟ್ರಗಳಿಗೆ ವಲಸೆ ಹೋಗಲು ಈ ವಲಸಿಗರು ನಾರ್ಥ್ ಮೆಸಿಡೋನಿಯಾಗೆ ಆಗಮಿಸಿದ್ದಾಗ ದುಷ್ಕರ್ಮಿಗಳ ಕೈಗೆ ಸಿಕ್ಕಿಕೊಂಡಿದ್ಧಾರೆ. ಸ್ಥಳೀಯ ವ್ಯಕ್ತಿಯೊಬ್ಬ ಮನೆಯಲ್ಲಿ ಎರಡು ವಾರಗಳ ಕಾಲ ಈ 12 ಮಂದಿಯನ್ನು ಕೂಡಿ ಹಾಕಲಾಗಿತ್ತು. ಈ 12 ಮಂದಿಯ ಕುಟುಂಬ ಸದಸ್ಯರು ಯೂರೋಪ್​ನ ವಿವಿಧ ರಾಷ್ಟ್ರಗಳಲ್ಲಿ ನೆಲಸಿದ್ದಾರೆ. ಅಪಹರಣಕಾರರು ಇವರನ್ನು ಸಂಪರ್ಕ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರೆನ್ನಲಾಗಿದೆ. ಹಣ ನೀಡದಿದ್ದರೆ ಒತ್ತೆಯಾಳುಗಳನ್ನ ಹತ್ಯೆ ಮಾಡುವ ಬೆದರಿಕೆ ಕೂಡ ಹಾಕುತ್ತಿದ್ದರು.

ಇದನ್ನೂ ಓದಿ: ಕೊರೋನಾ ವೈರಸ್​ ಹರಡುವುದು ಹೇಗೆ, ಇದರ ಲಕ್ಷಣಗಳೇನು?; ಇಲ್ಲಿದೆ ಸಂಪೂರ್ಣ ಮಾಹಿತಿ

ಹಾಗೆಯೇ, ಒತ್ತೆಯಾಳುಗಳ ವಿರುದ್ಧ ಅಪಹರಣಕಾರರು ಅಮಾನವೀಯವಾಗಿ ನಡೆದುಕೊಂಡಿರುವುದು ತಿಳಿದುಬಂದಿದೆ. ನಿತ್ಯವೂ ಅವರ ಮೇಲೆ ಹಲ್ಲೆಯಾಗುತ್ತಿತ್ತು. ಕತ್ತಲಕೋಣೆಯಲ್ಲಿ ಕೂಡಿ ಹಾಕಿ ದಿನಕ್ಕೆ ಒಂದು ಹೊತ್ತು ಮಾತ್ರ ಆಹಾರ ಕೊಡುತ್ತಿದ್ದರು.

ಕಳೆದ ವರ್ಷದಂದು ಒಬ್ಬ ಒತ್ತೆಯಾಳು ತನ್ನ ಸಂಬಂಧಿಯನ್ನು ಸಂಪರ್ಕಿಸಲು ಶಕ್ಯನಾಗಿ ಎಲ್ಲಾ ವಿಚಾರವನ್ನು ತಿಳಿಸಿದ್ದಾನೆ. ಆ ಸಂಬಂಧಿ ಮೂಲಕ ಸರ್ಬಿಯಾ ದೇಶದ ಅಧಿಕಾರಿಗಳಿಗೆ ವಿಚಾರ ಗೊತ್ತಾಗಿದೆ. ನಂತರ ಅವರು ನಾರ್ಥ್ ಮೆಸಿಡೋನಿಯಾದ ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ಇಲ್ಲಿಯ ಪೊಲೀಸರು ಕೂಡಲೇ ಕಾರ್ಯಾಚರಣೆಗಿಳಿದು ಅಪಹರಣಕಾರರನ್ನು ಹಿಡಿದು ಒತ್ತೆಯಾಳುಗಳನ್ನ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡಿಕೊಂಡಿದ್ದವನಿಗೆ ಐಟಿ ನೋಟಿಸ್!

ಮೂವರು ಅಪಹರಣಕಾರರು ಪಾಕಿಸ್ತಾನೀ ರಾಷ್ಟ್ರೀಯರಾಗಿದ್ದು ಅವರೆಲ್ಲರನ್ನೂ ಪೊಲೀಸರು ಬಂಧನದಲ್ಲಿಟ್ಟಿದ್ಧಾರೆ. ಒತ್ತೆಯಾಳುಗಳನ್ನಿರಿಸಿದ್ದ ಮನೆಯ ಮಾಲೀಕನನ್ನು ಗೃಹ ಬಂಧನದಲ್ಲಿಡಲಾಗಿದೆ. ಈ ನಾಲ್ವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಮೆಸಿಡೋನಿಯಾ ದೇಶವು ಯೂರೋಪ್​ನ ಆಗ್ನೇಯ ಭಾಗದಲ್ಲಿದ್ದು, ಟರ್ಕಿ, ಗ್ರೀಸ್ ದೇಶಗಳಿಗೆ ಹೊಂದಿಕೊಂಡಂತಿದೆ. ಯೂರೋಪ್​ಗೆ ಬರಬೇಕೆನ್ನುವ ವಲಸಿಗರು ಟರ್ಕಿಯ ಮೂಲಕ ಮೆಸಿಡೋನಿಯಾಗೆ ಬಂದು ಅಲ್ಲಿಂದ ಗ್ರೀಸ್ ದೇಶಕ್ಕೆ ಅಕ್ರಮವಾಗಿ ಹೋಗುತ್ತಾರೆ. ಅಲ್ಲಿ ವಲಸೆಗೆ ಅನುಮತಿ ಪತ್ರ ಗಿಟ್ಟಿಸಿಕೊಂಡು ಆ ಬಳಿಕ ಯೂರೋಪ್​ನ ಬೇರೆ ದೇಶಗಳಿಗೆ ಹೋಗುತ್ತಾರೆ.

(ಎಪಿ ಸುದ್ದಿ ಸಂಸ್ಥೆ ವರದಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: