Kohinoor Diamond: ಕೊಹಿನೂರ್ ವಜ್ರ ವಾಪಸ್ ಮಾಡಿ; ಭಾರತೀಯರ ಆಗ್ರಹ

ಹಿಂದಿನಿಂದಲೂ ಬ್ರಿಟನ್‌ ಗೆ ಕೊಹಿನೂರು ಕಿರೀಟವನ್ನು ಮರಳಿಸುವಂತೆ ಭಾರತೀಯರು ಧ್ವನಿ ಎತ್ತುತ್ತಲೇ ಇದ್ದಾರೆ.

ರಾಣಿ ಎಲಿಜಬೆತ್ IIರ ಕೊಹಿನೂರ್ ಕಿರೀಟ

ರಾಣಿ ಎಲಿಜಬೆತ್ IIರ ಕೊಹಿನೂರ್ ಕಿರೀಟ

  • Share this:
800 ವರ್ಷಗಳ ಭಾರತದ ಇತಿಹಾಸ (Indian History) ಹೊಂದಿರುವ ಕೊಹಿನೂರು ವಜ್ರ (Kohinoor Diamond) 1937ರಲ್ಲಿ ಬ್ರಿಟಿಷ್ ರಾಣಿಯ ಕಿರೀಟ (Crown) ಸೇರಿತ್ತು. ಈ ಬೆಲೆಬಾಳುವ ವಜ್ರ ಇಲ್ಲಿಯವರೆಗೂ ರಾಣಿ ಎಲಿಜಬೆತ್ 2ರ (Queen Elizabeth II) ಬಳಿ ಇತ್ತು. ಪ್ರಸ್ತುತ ರಾಣಿಯ ಮರಣದ ನಂತರ ಪ್ರತಿಷ್ಠಿತ ಕಿರೀಟ ಯಾರ ಕೈಗೆ ಸಿಗಲಿದೆ ಎಂಬ ಬಗ್ಗೆ ಭಾರಿ ಕೂತೂಹಲ ವ್ಯಕ್ತವಾಗಿತ್ತು. ಬ್ರಿಟನ್ ರಾಣಿ ಎಲಿಜಬೆತ್ II ರ ಮರಣದ ನಂತರ ರಾಜಮನೆತನದ ಜವಾಬ್ದಾರಿ ಚಾರ್ಲ್ಸ್ ಗೆ (Charles) ವರ್ಗಾವಣೆಯಾಗಿದೆ. ರಾಜಕುಮಾರ ಚಾರ್ಲ್ಸ್ ಅವರನ್ನು ಔಪಚಾರಿಕವಾಗಿ ಬ್ರಿಟನ್‌ನ ಹೊಸ ರಾಜ ಎಂದು ಘೋಷಣೆ ಮಾಡಲಾಗುವುದು. 

ಕೆಮಿಲ್ಲಾ ಮುಡಿಗೇರಲಿದೆ ಕೊಹಿನೂರ್ ಕಿರೀಟ
ರಾಜಕುಮಾರ ಚಾರ್ಲ್ಸ್ ಪತ್ನಿ, ಡಚೆಸ್ ಆಫ್ ಕಾರ್ನ್‌ವಾಲ್ ಕೆಮಿಲ್ಲಾ, ಕ್ವೀನ್ ಕನ್ಸಾರ್ಟ್ ಎಂಬ ಬಿರುದು ಪಡೆದಿದ್ದಾರೆ. ಅದರ ಅರ್ಥ ರಾಜಕುಮಾರ ಚಾರ್ಲ್ಸ್ ಅವರ ಪತ್ನಿ ಬ್ರಿಟನ್ನಿನ ರಾಣಿ ಆಗಲಿದ್ದು ಪ್ರತಿಷ್ಠಿತ ಕೊಹಿನೂರ್ ಕಿರೀಟ ಕೂಡ ಕೆಮಿಲ್ಲಾ ಮುಡಿಗೇರಲಿದೆ.

ಮತ್ತೆ ಸುದ್ದಿಯಲ್ಲಿ ಪ್ರತಿಷ್ಠಿತ ವಜ್ರದ ಕಿರೀಟ
ಕೊಹಿನೂರ್ ಕಿರೀಟವು ಯಾವಾಗಲೂ ವಿವಾದದಲ್ಲಿರುವ ಭಾರಿ ಸಂಪತ್ತಾಗಿದೆ. ಭಾರತಕ್ಕೆ ಸೇರಿದ್ದು ಎನ್ನಲಾಗಿರುವ ಕೊಹಿನೂರ್ ಕಿರೀಟವು ವಜ್ರಗಳಿಂದ ಕೂಡಿದೆ. ರಾಣಿ ಎಲಿಜಬೆತ್ II ರ ಮರಣದ ನಂತರ ಸಾಮಾಜಿಕ ಜಾಲತಾಣದಲ್ಲಿ ವಜ್ರದ ಕಿರೀಟವನ್ನು ಭಾರತಕ್ಕೆ ಮರಳಿ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಹಿಂದಿನಿಂದಲೂ ಬ್ರಿಟನ್‌ ಗೆ ಕೊಹಿನೂರು ಕಿರೀಟವನ್ನು ಮರಳಿಸುವಂತೆ ಭಾರತೀಯರು ಧ್ವನಿ ಎತ್ತುತ್ತಲೇ ಇದ್ದಾರೆ. ಈಗ ರಾಣಿಯ ಮರಣದ ನಂತರ ಈ ಬಗ್ಗೆ ಜೋರಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದುಗಳು ಕೇಳಿ ಬರುತ್ತಿವೆ.ಇದನ್ನೂ ಓದಿ: Diamond Necklace: ನಿಧನದವರೆಗೆ ಹೈದರಾಬಾದ್ ನಿಜಾಮರು ಕೊಟ್ಟಿದ್ದ ನೆಕ್ಲೇಸನ್ನೇ ಧರಿಸುತ್ತಿದ್ದ ರಾಣಿ ಎಲಿಜಬೆತ್, ಏನಿದರ ಸ್ಪೆಷಾಲಿಟಿ?

ಕೊಹಿನೂರ್ ಕಿರೀಟ ವಾಪಸಾತಿಗೆ ಟ್ವಿಟ್ಟರ್​ನಲ್ಲಿ ಆಗ್ರಹ
ಟ್ವಿಟ್ಟರ್ ಬಳಕೆದಾರರು ಕೊಹಿನೂರ್ ವಜ್ರದ ವಾಪಸಾತಿಗೆ ಸಂಬಂಧಿಸಿದಂತೆ ಗಂಭೀರವಾದ ಮನವಿಗಳನ್ನು ಮಾಡುತ್ತಿದ್ದರೆ. ಇನ್ನು ಕೆಲ ಬಳಕೆದಾರರು ಹೃತಿಕ್ ರೋಷನ್ ಅಭಿನಯದ ರೈಲಿನಿಂದ ವಜ್ರವನ್ನು ಹಿಡಿಯುವ ʼಧೂಮ್ 2' ನ ದೃಶ್ಯವನ್ನು ಹಂಚಿಕೊಂಡು, ಬ್ರಿಟಿಷ್ ಮ್ಯೂಸಿಯಂನಿಂದ ಭಾರತಕ್ಕೆ ಕಿರೀಟವನ್ನು ಮರುಪಡೆಯಲು ಹೃತಿಕ್ ರೋಷನ್ ಅಗತ್ಯವಿದೆ ಎಂದು ಬಳಕೆದಾರರು ಪೋಸ್ಟ್‌ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು "ಈಗ ನಾವು ನಮ್ಮ ಕೊಹಿನೂರ್ ಅನ್ನು ಮರಳಿ ಪಡೆಯಬಹುದೇ? ಎಂದು ಬರೆದುಕೊಂಡಿದ್ದಾರೆ.

ಕೊಹಿನೂರ್ ಕಿರೀಟದ ಇತಿಹಾಸ
ವಜ್ರವನ್ನು 14 ನೇ ಶತಮಾನದಲ್ಲಿ ಭಾರತದ ಗೋಲ್ಕೊಂಡಾ ಗಣಿಗಳಲ್ಲಿ ಕಂಡುಹಿಡಿಯಲಾಯಿತು. ಕಾಲಾನಂತರದಲ್ಲಿ ಈ ವಜ್ರವು ವಿವಿಧ ಸ್ಥಳಗಳಲ್ಲೂ ಹಾದುಹೋಯಿತು. ಭಾರತ ಬಿಟ್ಟು ಹೋದ ಸಂಪತ್ತನ್ನು ಹಿಂದಿರುಗಿಸುವಂತೆ 1947ರಲ್ಲಿ ಮತ್ತು ವಿವಿಧ ಸಂದರ್ಭಗಳಲ್ಲಿ ಒತ್ತಾಯಿಸಲಾಯಿತು. ಆದರೂ ಬ್ರಿಟಿಷ್ ಸರ್ಕಾರವು ಈ ಮನವಿಯನ್ನು ನಿರಾಕರಿಸುತ್ತಲೇ ಬಂದಿದೆ.

ಆಂಗ್ಲೋ-ಸಿಖ್ ಯುದ್ಧದ ನಂತರ ಲಾಹೋರ್‌ನ ಮಹಾರಾಜರೊಂದಿಗೆ ಸಹಿ ಮಾಡಿದ ದಂಡನಾತ್ಮಕ ಒಪ್ಪಂದದ ಭಾಗವಾಗಿ 1849 ರಲ್ಲಿ ಕೊಹಿನೂರ್ ಅನ್ನು ಬ್ರಿಟಿಷರಿಗೆ ಹಸ್ತಾಂತರಿಸಲಾಯಿತು ಎಂದು ಇತಿಹಾಸವು ಹೇಳುತ್ತದೆ. ರಾಣಿಯ ಈ ಕಿರೀಟವು ಕೊಹಿನೂರ್ ವಜ್ರಗಳಿಂದ ಕೂಡಿದೆ. ಈ ಕಿರೀಟ 105.6-ಕ್ಯಾರೆಟ್ ವಜ್ರವನ್ನು ಒಳಗೊಂಡಿದೆ. ರಾಣಿಯ ಈ ಕಿರೀಟದ ಬೆಲೆ ಸುಮಾರು 3600 ಕೋಟಿ ಎಂದು ಹೇಳಲಾಗಿದೆ. ಸಂಪೂರ್ಣ ಸೆಟ್‌ನ ಬೆಲೆ 4500 ಕೋಟಿ ಎಂದು ಹೇಳಲಾಗುತ್ತದೆ. ಚಿನ್ನದ ಆರೋಹಣಗಳಲ್ಲಿ ಕೆತ್ತಲಾದ ವರ್ಣರಂಜಿತ ರತ್ನಗಳಲ್ಲಿ ನೀಲಮಣಿಗಳು, ಪಚ್ಚೆಗಳು ಮತ್ತು ಮುತ್ತುಗಳು ಸೇರಿವೆ. ಸುಮಾರು 1.28 ಕೆಜಿ ತೂಕದ ಕಿರೀಟವು ಅನೇಕ ಹಳೆಯ ಮತ್ತು ಅಮೂಲ್ಯವಾದ ರತ್ನಗಳಿಂದ ಕೂಡಿದೆ.

ಇದನ್ನೂ ಓದಿ:  Queen Elizabeth II: ಅಬ್ಬಬ್ಬಾ, ರಾಣಿ ಎಲಿಜಬೆತ್ ಒಟ್ಟು ಆಸ್ತಿ ಇಷ್ಟು ಇದೆಯಂತೆ! ಆದಾಯದ ಮೂಲವೇನು ಗೊತ್ತಾ?

ಬ್ರಿಟಿಷ್ ಕ್ರೌನ್ ಜ್ಯುವೆಲ್ಸ್‌ನ ಭಾಗವಾಗಿರುವ ಇದು ಭಾರತ ಸೇರಿದಂತೆ ಕನಿಷ್ಠ ನಾಲ್ಕು ದೇಶಗಳ ನಡುವಿನ ಐತಿಹಾಸಿಕ ಮಾಲೀಕತ್ವದ ವಿವಾದದ ವಿಷಯವಾಗಿದೆ ಎನ್ನಲಾಗಿದೆ. ಒಟ್ಟಾರೆ ಭಾರತೀಯರು ಕೊಹಿನೂರ್‌ ಕಿರೀಟದ ಬಗ್ಗೆ ಆಗಾಗ್ಗೆ ಆಕ್ರೋಶ ಹೊರಹಾಕುತ್ತಿದ್ದರು, ಬ್ರಿಟನ್‌ ಸರ್ಕಾರ ಮಾತ್ರ ಇದನ್ನು ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ.
Published by:Ashwini Prabhu
First published: