ಈಗಂತೂ ನಮ್ಮ ಭಾರತ (India) ದೇಶದಲ್ಲಿ (Nation) ತಳ್ಳುಗಾಡಿಯಲ್ಲಿ ಮಾರುವಂತಹ ವಸ್ತುಗಳನ್ನು ಖರೀದಿಸಿದರೂ ಸಹ ನಾವು ಅವರಿಗೆ ಹಣ ಪಾವತಿ (Payment) ಮಾಡುವುದು ಆನ್ಲೈನ್ನಲ್ಲಿಯೇ (Online) ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು ಆನ್ಲೈನ್ ಅಂತ ಹೇಳಿದರೆ ನೀವು ಇಂಟರ್ನೆಟ್ (Internet) ಬ್ಯಾಂಕಿಂಗ್ (Banking) ಅಂತ ತಿಳಿಯಬೇಡಿ, ನಾವು ಇಲ್ಲಿ ಮಾತಾಡುತ್ತಿರುವುದು ಯುಪಿಐ ಪೇಮೆಂಟ್ ಬಗ್ಗೆ. ಚಿಕ್ಕ ಚಿಕ್ಕ ವ್ಯಾಪಾರಿಗಳು ಸಹ ಈ ವ್ಯವಸ್ಥೆಯನ್ನು ತಮ್ಮ ಗ್ರಾಹಕರಿಗೆ ನೀಡಿದ್ದಾರೆ ಅಂತ ಹೇಳಬಹುದು.
ಒಟ್ಟಿನಲ್ಲಿ ಬಹುತೇಕರು ಮೊದಲಿನ ಥರ ನಗದು ದುಡ್ಡು ಕೊಟ್ಟು ವ್ಯಾಪಾರ ಮಾಡುತ್ತಿಲ್ಲ ಅಂತ ಹೇಳಬಹುದು. ಈವಾಗ ಏನೇ ಇದ್ದರೂ ಮೊಬೈಲ್ ಫೋನ್ ನಲ್ಲಿ ಯುಪಿಐ ಪೇಮೆಂಟ್ ಮಾಡುವ ಜಮಾನ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಬೇರೆ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ಸಹ ಯುಪಿಐ ಪೇಮೆಂಟ್ ಮಾಡ್ಬಹುದಂತೆ..
ಪ್ರಸ್ತುತ ಯುಪಿಐ ಪಾವತಿಗಳನ್ನು ನಾವೆಲ್ಲ ಭಾರತೀಯರು ಭಾರತದಲ್ಲಷ್ಟೇ ಬಳಸುತ್ತಿದ್ದೇವೆ. ಆದರೆ, ಶೀಘ್ರದಲ್ಲಿಯೇ ಅನಿವಾಸಿ ಭಾರತೀಯರೂ ಸಹ ತಮ್ಮ ಅಂತರರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ.
10 ದೇಶಗಳಲ್ಲಿನ ಅನಿವಾಸಿ ಭಾರತೀಯರು (ಎನ್ಆರ್ಐಗಳು) ತಮ್ಮ ಭಾರತೀಯ ಫೋನ್ ಸಂಖ್ಯೆಯನ್ನು ಅವಲಂಬಿಸದೆ ವ್ಯವಹಾರಗಳಿಗಾಗಿ ಯುಪಿಐ ಸೇವೆಗಳನ್ನು ಪಡೆಯಬಹುದು.
ಯಾವೆಲ್ಲಾ ದೇಶಗಳಲ್ಲಿರುವ ಭಾರತೀಯರು ಇದನ್ನು ಬಳಸಬಹುದು ಅಂತ ಹೇಳಿದ್ರೆ ಸಿಂಗಾಪುರ್, ಯುಎಸ್, ಆಸ್ಟ್ರೇಲಿಯಾ, ಕೆನಡಾ, ಹಾಂಗ್ ಕಾಂಗ್, ಒಮನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಯುಕೆ ದೇಶಗಳಲ್ಲಿ ಇರುವ ಭಾರತೀಯರು ಈ ಪೇಮೆಂಟ್ ವಿಧಾನವನ್ನು ಬಳಸಬಹುದು.
ಎನ್ಆರ್ಇ, ಎನ್ಆರ್ಒ ಖಾತೆಗಳು ಯುಪಿಐ ಬಳಸಿ ವಹಿವಾಟು ನಡೆಸಬಹುದಂತೆ..
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಪ್ರಕಾರ, ಅಂತರರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಹೊಂದಿರುವ ಎನ್ಆರ್ಇ/ಎನ್ಆರ್ಒ ನಂತಹ ಖಾತೆಗಳು ಯುಪಿಐ ಬಳಸಿ ವಹಿವಾಟು ನಡೆಸಬಹುದು. ಪಾವತಿ ನಿಗಮವು ಪಾಲುದಾರ ಬ್ಯಾಂಕುಗಳಿಗೆ ನಿರ್ದೇಶನಗಳನ್ನು ಅನುಸರಿಸಲು ಏಪ್ರಿಲ್ 30 ರವರೆಗೆ ಸಮಯವನ್ನು ನೀಡಿದೆ.
ಅನಿವಾಸಿ ಭಾರತೀಯರು ವಿದೇಶಿ ಆದಾಯವನ್ನು ಭಾರತಕ್ಕೆ ವರ್ಗಾಯಿಸಲು ಎನ್ಆರ್ಇ ಖಾತೆಯು ಸಹಾಯ ಮಾಡುತ್ತದೆ, ಆದರೆ ಎನ್ಆರ್ಒ ಖಾತೆಯು ಭಾರತದಲ್ಲಿ ಗಳಿಸಿದ ಆದಾಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳ ಪ್ರಕಾರ ಅಂತಹ ಖಾತೆಗಳನ್ನು ಅನುಮತಿಸಲಾಗಿದೆ ಎಂದು ಬ್ಯಾಂಕುಗಳು ಖಚಿತಪಡಿಸಿಕೊಳ್ಳಬೇಕು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಮತ್ತು ಮನಿ ಲಾಂಡರಿಂಗ್ ಅಥವಾ ಭಯೋತ್ಪಾದನೆಗೆ ಹಣಕಾಸು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು.
ಅನೇಕರಿಗೆ ಸಹಾಯವಾಗುತ್ತೆ ಯುಪಿಐ ನ ಈ ಹೊಸ ಕ್ರಮ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಮಿತಿಯು ಇಂದು ರುಪೇ ಡೆಬಿಟ್ ಕಾರ್ಡ್ ಮತ್ತು ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು ಉತ್ತೇಜಿಸಲು 2,600 ಕೋಟಿ ಯೋಜನೆಗೆ ಅನುಮೋದನೆ ನೀಡಿದೆ.
ಈ ದೊಡ್ಡ ಯುಪಿಐ ಕ್ರಮವು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು, ವಿದೇಶದಲ್ಲಿ ವಾಸಿಸುವ ಕುಟುಂಬ ಮತ್ತು ಸ್ಥಳೀಯ ವ್ಯವಹಾರಗಳಿಗೆ ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: UPI Payment: ಡಿಜಿಟಲ್ ಪೇಮೆಂಟ್ ಹೆಚ್ಚಳ, ದೇಶದ ಜನರಿಗೆ ಮೋದಿ ಮೆಚ್ಚುಗೆ!
ಈ ಯೋಜನೆಯಡಿ, ರುಪೇ ಮತ್ತು ಯುಪಿಐ ಬಳಸಿ ವಹಿವಾಟುಗಳನ್ನು ಉತ್ತೇಜಿಸಲು ಬ್ಯಾಂಕುಗಳಿಗೆ ಆರ್ಥಿಕ ಪ್ರೋತ್ಸಾಹಕಗಳನ್ನು ಒದಗಿಸಲಾಗುವುದು.
ಪ್ರಧಾನಿ ಮೋದಿ ಟ್ವೀಟ್
"ರುಪೇ ಡೆಬಿಟ್ ಕಾರ್ಡ್ಗಳು ಮತ್ತು ಭೀಮ್-ಯುಪಿಐ ವಹಿವಾಟುಗಳನ್ನು ಉತ್ತೇಜಿಸುವ ಬಗ್ಗೆ ಇಂದಿನ ಕ್ಯಾಬಿನೆಟ್ ನಿರ್ಧಾರದಿಂದ ಡಿಜಿಟಲ್ ಪಾವತಿಗಳಲ್ಲಿ ಭಾರತದ ದಾಪುಗಾಲು ಮತ್ತಷ್ಟು ಬಲಗೊಳ್ಳುತ್ತದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕೇವಲ ಆರು ವರ್ಷಗಳಲ್ಲಿ ಯುಪಿಐ ವಹಿವಾಟುಗಳಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ಡಿಸೆಂಬರ್ ನಲ್ಲಿ 12 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಯುಪಿಐ ವಹಿವಾಟುಗಳು ನಡೆದಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ