ಸುಡಾನ್​​ ಸೆರಾಮಿಕ್​​ ಕಾರ್ಖಾನೆಯಲ್ಲಿ ಸ್ಪೋಟ: 18 ಮಂದಿ ಭಾರತೀಯರು ಸೇರಿದಂತೆ 23 ಮಂದಿ ಸಾವು

ಸ್ಪೋಟ ಸಂಭವಿಸಿದ ಜಾಗದಲ್ಲಿ ಅಗ್ನಿ ಸುರಕ್ಷತಾ ಕ್ರಮ ತೆಗೆದುಕೊಂಡಿರಲಿಲ್ಲ. ಹಾಗಾಗಿ ಈ ಅನಾಹುತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

news18-kannada
Updated:December 4, 2019, 6:39 PM IST
ಸುಡಾನ್​​ ಸೆರಾಮಿಕ್​​ ಕಾರ್ಖಾನೆಯಲ್ಲಿ ಸ್ಪೋಟ: 18 ಮಂದಿ ಭಾರತೀಯರು ಸೇರಿದಂತೆ 23 ಮಂದಿ ಸಾವು
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಡಿ.04): ಸುಡಾನ್​​ನ ಸೆರಾಮಿಕ್‌ ಕಾರ್ಖಾನೆಯಲ್ಲಿ ಎಲ್‌ಪಿಜಿ ಟ್ಯಾಂಕರ್‌ ಸ್ಫೋಟಗೊಂಡಿದೆ. ಈ ದುರಂತದಲ್ಲಿ 18 ಭಾರತೀಯರು ಸೇರಿದಂತೆ 23 ಮಂದಿ ಕಾರ್ಮಿಕರು ಸಾವನ್ನಪ್ಪಿದ್ಧಾರೆ ಸುಡಾನ್​​​ ಪೊಲೀಸ್​​ ಮೂಲಗಳು ತಿಳಿಸಿವೆ.

ಸೆರಾಮಿಕ್​​​ ಕಾರ್ಖಾನೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಭಾರೀತೀಯರು ಸೇರಿದಂತೆ ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೀಗ ಈ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿದ ಪರಿಣಾಮ, ಸುಮಾರು 130 ಜನ ಗಾಯಗೊಂಡಿದ್ದಾರೆ. ಈ ಪೈಕಿ 7 ಮಂದಿ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗುತ್ತಿದೆ.

ಇನ್ನು, ಸೆರಾಮಿಕ್​​ ಕಾರ್ಖಾನೆ ದುರಂತದಲ್ಲಿ18 ಭಾರತೀಯರು ಮೃತಪಟ್ಟಿದ್ದಾರೆ ಎಂದು ಸುಡಾನ್‌ನ ಭಾರತೀಯ ರಾಯಭಾರಿ ಕಚೇರಿ ಖಚಿತಪಡಿಸಿದೆ. ಅಲ್ಲದೇ ಕೆಲವು ಭಾರತದ ಕಾರ್ಮಿಕರು ನಾಪತ್ತೆಯಾಗಿದ್ಧಾರೆ. ಜತೆಗೆ ಮತ್ತಷ್ಟು ಭಾರತೀಯರು ಸಾವನ್ನಪ್ಪುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅತ್ಯಾಚಾರಿಗಳಿಗೆ ಮರಣದಂಡನೆ ಬದಲು ಸಿಂಗಾಪುರ ಮಾದರಿಯಲ್ಲಿ ಶಿಕ್ಷೆಯಾಗಲಿ: ಪವನ್ ಕಲ್ಯಾಣ್

ಸ್ಪೋಟ ಸಂಭವಿಸಿದ ಜಾಗದಲ್ಲಿ ಅಗ್ನಿ ಸುರಕ್ಷತಾ ಕ್ರಮ ತೆಗೆದುಕೊಂಡಿರಲಿಲ್ಲ. ಹಾಗಾಗಿ ಈ ಅನಾಹುತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ