• Home
  • »
  • News
  • »
  • national-international
  • »
  • Pakistan: ಪಾಕ್‌ ಅಧಿಕಾರಿ ವಿರುದ್ಧ ಭಾರತೀಯ ಮಹಿಳೆಯ ಆರೋಪ, ಅನುಚಿತ ವರ್ತನೆ ಸಹಿಸಲ್ಲ ಎಂದ ನೆರೆ ರಾಷ್ಟ್ರ

Pakistan: ಪಾಕ್‌ ಅಧಿಕಾರಿ ವಿರುದ್ಧ ಭಾರತೀಯ ಮಹಿಳೆಯ ಆರೋಪ, ಅನುಚಿತ ವರ್ತನೆ ಸಹಿಸಲ್ಲ ಎಂದ ನೆರೆ ರಾಷ್ಟ್ರ

ಮಮ್ತಾಜ್ ಝಹ್ರಾ

ಮಮ್ತಾಜ್ ಝಹ್ರಾ

ನಾನು ಏಕೆ ಮದುವೆಯಾಗಿಲ್ಲ ಎಂದು ಅವರು ನನ್ನನ್ನು ಕೇಳಿದರು. ಮದುವೆಯಿಲ್ಲದೆ ಹೇಗೆ ಬದುಕುತ್ತೀರಿ?  ಲೈಂಗಿಕ ಬಯಕೆಗಳಿಗಾಗಿ ನೀವೇನು ಮಾಡುತ್ತೀರಿ ಅಂತೆಲ್ಲಾ ನನ್ನ ಕೇಳಿದರು ಎಂದು ಮಹಿಳೆ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದರು.

  • Share this:

ಕರಾಚಿ: ಇತ್ತೀಚೆಗೆ ಪಾಕಿಸ್ತಾನದ (Pakistan) ಹೈಕಮಿಷನ್ ಕಚೇರಿಯ ಅಧಿಕಾರಿಯೊಬ್ಬರು ತನ್ನ ಜೊತೆಯಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ. ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ತನ್ನನ್ನು ಮುಜುಗರಕ್ಕೀಡು ಮಾಡಿದ್ದಾರೆ ಅಂತ ಭಾರತೀಯ ಮಹಿಳೆಯೊಬ್ಬರು ಆರೋಪಿಸಿದ್ದು ಮಾಧ್ಯಮದಲ್ಲಿ ತುಂಬಾನೇ ದೊಡ್ಡ ಸುದ್ದಿಯಾಗಿದೆ. ಈಗ ಈ ಮಹಿಳೆಯ ಆರೋಪಗಳಿಗೆ ನೆರೆಯ ದೇಶ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು (Pakistan Foreign Ministry) ಪ್ರತಿಕ್ರಿಯಿಸಿದೆ ನೋಡಿ.


ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಕಚೇರಿಯಲ್ಲಿ ಕೆಲಸ ಮಾಡುವ ಹಿರಿಯ ಸಿಬ್ಬಂದಿಯೊಬ್ಬರು ಭಾರತೀಯ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಅಂತ ಆರೋಪವು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಪಾಕ್ ವಿದೇಶಾಂಗ ಸಚಿವಾಲಯ ಈ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವುದಾಗಿ ಗುರುವಾರ ಹೇಳಿದೆ.


ಭಾರತೀಯ ಮಹಿಳೆಯ ಆರೋಪಕ್ಕೆ ಪಾಕ್ ವಿದೇಶಾಂಗ ಸಚಿವಾಲಯ ಏನ್ ಹೇಳಿದೆ?
ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾದ ಮುಮ್ತಾಜ್ ಜಹ್ರಾ ಬಲೂಚ್ ಅವರು ಭಾರತೀಯ ಮಹಿಳೆಗೆ ಹೈಕಮಿಷನ್ ಅಧಿಕಾರಿಯೊಬ್ಬರು ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಮಾಧ್ಯಮಗಳ ವರದಿಗಳಿಗೆ ಪ್ರತಿಕ್ರಿಯೆಯಾಗಿ ಹೇಳಿಕೆ ನೀಡಿದ್ದಾರೆ.


ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿ ಕೆಲಸ ಮಾಡುವ ಹಿರಿಯ ಸಿಬ್ಬಂದಿ ತನಗೆ ಅಸಭ್ಯವಾಗಿ ಪ್ರಶ್ನೆಗಳನ್ನು ಕೇಳಿದರು ಎಂದು ಪಂಜಾಬ್ ನ ಕಾಲೇಜಿನ ಪ್ರಾಧ್ಯಾಪಕಿಯೊಬ್ಬರು ಆರೋಪಿಸಿದ ನಂತರ ಈ ಬೆಳವಣಿಗೆ ನಡೆದಿದೆ.


ದುರ್ವರ್ತನೆ ವಿರುದ್ಧ ಶೂನ್ಯ ಸಹಿಷ್ಣುತೆ
"ನಮ್ಮ ರಾಯಭಾರ ಕಚೇರಿಗಳಿಗೆ ಭೇಟಿ ನೀಡುವ ವ್ಯಕ್ತಿಗಳೊಂದಿಗೆ ಯಾರೇ ದುರ್ವರ್ತನೆ ಮಾಡಿದರೂ ಅದರ ಬಗ್ಗೆ ನಮಗೆ ಶೂನ್ಯ ಸಹಿಷ್ಣುತೆ ಇದೆ" ಎಂದು ಮುಮ್ತಾಜ್ ಜಹ್ರಾ ಬಲೂಚ್ ಘಟನೆಯ ಬಗ್ಗೆ ಹೇಳಿದರು.


ಇದನ್ನೂ ಓದಿ: Protest in PoK: ಭಾರತದೊಂದಿಗೆ ವಿಲೀನಕ್ಕೆ ಆಗ್ರಹಿಸಿದ ಪಿಒಕೆ ನಿವಾಸಿಗಳು! ಪಾಕಿಸ್ತಾನ ತಾರತಮ್ಯ ನೀತಿ ವಿರುದ್ಧ ಪ್ರತಿಭಟನೆ


"ನಾವು ಈ ಪ್ರಕರಣವನ್ನು ಪರಿಶೀಲಿಸುತ್ತಿರುವಾಗ, ಅದರ ಸಮಯ ಮತ್ತು ಅದನ್ನು ಹೇಳಿದ ರೀತಿಯಿಂದ ನಮಗೆ ಆಶ್ಚರ್ಯವಾಗಿದೆ. ಎಲ್ಲಾ ಸಾರ್ವಜನಿಕ ಕುಂದುಕೊರತೆಗಳ ಪರಿಹಾರಕ್ಕಾಗಿ ದೃಢವಾದ ಕಾರ್ಯವಿಧಾನಗಳಿವೆ" ಎಂದು ಅವರು ಹೇಳಿದರು. ಎಲ್ಲಾ ವೀಸಾ ಮತ್ತು ಕಾನ್ಸುಲರ್ ಅರ್ಜಿದಾರರ ಬಗ್ಗೆ ಸರಿಯಾದ ಶಿಷ್ಟಾಚಾರ ಮತ್ತು ನಡವಳಿಕೆಗೆ ಪಾಕಿಸ್ತಾನ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದು ಅವರು ಹೇಳಿದರು. "ನಮ್ಮ ಎಲ್ಲಾ ರಾಜತಾಂತ್ರಿಕ ಸಿಬ್ಬಂದಿ ತಮ್ಮನ್ನು ವೃತ್ತಿಪರವಾಗಿ ನಡೆಸಿಕೊಳ್ಳಲು ಕಟ್ಟುನಿಟ್ಟಿನ ಸೂಚನೆಗಳನ್ನು ತಪ್ಪದೆ ಪಾಲಿಸುತ್ತಾರೆ" ಎಂದು ಬಲೂಚ್ ಅವರು ಹೇಳಿದರು.


ನಡೆದ ಘಟನೆ ಏನು?
ಪಾಕಿಸ್ತಾನದ ಹೈಕಮಿಷನ್ ನಲ್ಲಿ ಆನ್ಲೈನ್ ವೀಸಾ ನೇಮಕಾತಿಯನ್ನು ಕಾಯ್ದಿರಿಸಿದ್ದಾಗಿ ಪಂಜಾಬ್ ನ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕಿ ಮತ್ತು ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.


ಲಾಹೋರ್ ಭೇಟಿಯ ಉದ್ದೇಶದ ಬಗ್ಗೆ ಕೇಳಿದಾಗ "ಸ್ಮಾರಕಗಳ ಛಾಯಾಚಿತ್ರ ತೆಗೆಯಲು ಮತ್ತು ಅವುಗಳ ಬಗ್ಗೆ ಬರೆಯಲು ನಾನು ಲಾಹೋರ್ ಗೆ ಭೇಟಿ ನೀಡಲು ಬಯಸುತ್ತೇನೆ ಮತ್ತು ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಲಾದ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲು ಬಯಸುತ್ತೇನೆ" ಎಂದು ಅವರು ಅಧಿಕಾರಿಗೆ ತಿಳಿಸಿದರು. ಅವರು ಇನ್ನೇನು ಅಲ್ಲಿಂದ ಹೊರಡಲು ಸಿದ್ಧರಾದಾಗ, ಇನ್ನೊಬ್ಬ ಸಿಬ್ಬಂದಿ ಬಂದು ಅವರಿಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರಂತೆ, ಇದು ಅವರಿಗೆ ತುಂಬಾನೇ ಅನಾನುಕೂಲವನ್ನುಂಟು ಮಾಡಿತು.


ಲೈಂಗಿಕ ಬಯಕೆಗಳಿಗಾಗಿ ನೀವೇನು ಮಾಡುತ್ತೀರಿ?


"ನಾನು ಏಕೆ ಮದುವೆಯಾಗಿಲ್ಲ ಎಂದು ಅವರು ನನ್ನನ್ನು ಕೇಳಿದರು. ಮದುವೆಯಿಲ್ಲದೆ ಹೇಗೆ ಬದುಕುತ್ತೀರಿ?  ಲೈಂಗಿಕ ಬಯಕೆಗಳಿಗಾಗಿ ನೀವೇನು ಮಾಡುತ್ತೀರಿ ಅಂತೆಲ್ಲಾ ನನ್ನ ಕೇಳಿದರು" ಎಂದು ಮಹಿಳೆ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದರು.


ಇದನ್ನೂ ಓದಿ: Nitin Gadkari: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ, ದಾವೂದ್ ಹೆಸರಲ್ಲಿ 100 ಕೋಟಿಗೆ ಬೇಡಿಕೆ!


ಅವರು ಮಾತನಾಡುತ್ತಿರುವ ವಿಷಯವನ್ನು ಬದಲಾಯಿಸುವ ಪ್ರಯತ್ನ ಮಾಡಿದರೂ ಸಹ ಆ ಅಧಿಕಾರಿ ಮಾತ್ರ ಅಂತಹ ಪ್ರಶ್ನೆಗಳನ್ನು ಕೇಳುವುದನ್ನು ಹಾಗೆಯೇ ಮುಂದುವರೆಸಿದರು ಎಂದು ಪಂಜಾಬ್ ಪ್ರೊಫೆಸರ್ ತಮ್ಮ ಆರೋಪದಲ್ಲಿ ಹೇಳಿದ್ದಾರೆ. ನಂತರ ಮಹಿಳೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದು ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು.

Published by:ಗುರುಗಣೇಶ ಡಬ್ಗುಳಿ
First published: