ನಮ್ಮ ಪ್ರೀತಿಪಾತ್ರರು ಕೆಲವೇ ಗಂಟೆ ನಮ್ಮ ಮುಂದೆ ಕಾಣದಿದ್ದರೆ ಎಷ್ಟೊಂದು ಚಡಪಡಿಕೆಯಾಗುತ್ತೆ ಅಲ್ವಾ? ಅವರು ಯಾವಾಗ ಬರುತ್ತಾರೋ, ಯಾವಗ ನೋಡುತ್ತೀವೋ ಎಂದು ಕಾಯುತ್ತಾ ಇರುತ್ತೇವೆ. ಆ ವ್ಯಕ್ತಿ ಬರೋದೇ ಇಲ್ಲ ಕಾಣಿಯಾಗಿ ಬಿಟ್ಟಿದ್ದಾರೆ ಎಂದರೆ ಹೇಗಾಗುತ್ತೆ ಹೇಳಿ, ಅವರಿಗಾಗಿ ನಾವು ಹುಡುಕುತ್ತೇವೆ. ಅವರು ಹೋದ ಸ್ಥಳ, ಸ್ನೇಹಿತರ ಮನೆ, ದಿನ ಹೋಗುತ್ತಿದ್ದ ಜಾಗಗಳಿಗೆ ಹೋಗಿ ಹುಡುಕುತ್ತೇವೆ. ನಮಗೆ ಸಿಗುವುದೇ ಇಲ್ಲ ಎಂದು ಅನ್ನಿಸಿದಾಗ, ಪೊಲೀಸರ ಬಳಿ ಹೋಗಿ ದೂರು ನೀಡುತ್ತೇವೆ. ಆದ್ರೆ ನ್ಯೂಯಾರ್ಕ್‍ನಲ್ಲಿ (New York) ವಿಚಿತ್ರ ಘಟನೆಯೊಂದು ನಡೆದಿದೆ. 3 ವರ್ಷದ ಹಿಂದೆ ಕಾಣೆ (Missing)ಯಾಗಿದ್ದ ಭಾರತೀಯ ಮಹಿಳೆ (Woman) ಸುಳಿವೂ ಸಿಕ್ಕೇ ಇಲ್ಲ. ಈಗ ಅಲ್ಲಿನ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಕಾಣೆಯಾದ ವ್ಯಕ್ತಿಗಳ ಪಟ್ಟಿಗೆ ಆಕೆಯ ಹೆಸರು (Name) ಸೇರಿಸಿದೆ.
3 ವರ್ಷದ ಹಿಂದ ಕಾಣೆಯಾಗಿದ್ದ ಭಾರತೀಯ ಮಹಿಳೆ
ಈ ಕಥೆಯಲ್ಲಿ ಕಾಣೆಯಾಗಿರು ಮಹಿಳೆ ಹೆಸರು ಮಯೂಷಿ ಭಗತ್ ಅಂತ. ಆಕೆ ಕಾಣೆಯಾದಾಗ ಆಕೆಗೆ 28 ವರ್ಷ ಆಗಿತ್ತು. ಭಾರತದಿಂದ ನ್ಯೂಯಾರ್ಕ್‍ಗೆ ಓದಲು ಹೋಗಿದ್ದಳು. ಆದರೆ ಅದೊಂದು ದಿನ ಕಾಣೆಯಾದವಳು, ಮತ್ತೆ ಸಿಕ್ಕಿಲ್ಲ. ಎಲ್ಲಿ ಹೋದ್ರೂ, ಏನ್ ಆದ್ರೂ ಎಂಬ ಸುಳಿವೂ ಸಹ ಇಲ್ಲ.
ಓದಲು ಹೋದವಳು ತಾಯ್ನಾಡಿಗೆ ಮರಳಲಿಲ್ಲ!
ಮಯೂಷಿ ಭಗತ್ ಎಂಬ ಮಹಿಳೆ 2016 ರಲ್ಲಿ ಎಪ್ 1 ವಿದ್ಯಾರ್ಥಿ ವೀಸಾದಲ್ಲಿ ಯುನೈಟೆಡ್ ಸ್ಟೇಟ್ಸ್‍ಗೆ ಹೋಗಿದ್ದರು. ಅಲ್ಲಿ ನ್ಯೂ ಹ್ಯಾಂಪ್‍ಶೈರ್ ವಿಶ್ವವಿದ್ಯಾಲಯಕ್ಕೆ ಓದುವುದಕ್ಕಾಗಿ ದಾಖಲಾಗಿದ್ದರು. ಅಲ್ಲಿಗೆ ಹೋಗಿ 3 ವರ್ಷದ ನಂತರ ಅಂದ್ರೆ ಏಪ್ರಿಲ್ 29, 2019ರಂದು ಸಂಜೆ ಕಾಣೆಯಾಗಿದ್ದಾರೆ.
3 ವರ್ಷದ ನಂತರ ಕಾಣೆಯದವರ ಪಟ್ಟಿಗೆ!
ಕಳೆದ ಮೂರು ವರ್ಷಗಳ ನ್ಯೂಜೆರ್ಸಿಯಿಂದ ನಾಪತ್ತೆಯಾಗಿರುವ 28 ವರ್ಷದ ಭಾರತೀಯ ಮಹಿಳೆಯನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತನ್ನ "ಕಾಣೆಯಾದ ವ್ಯಕ್ತಿಗಳ" ಪಟ್ಟಿಗೆ ಸೇರಿಸಿದೆ. ಎಫ್‍ಬಿಐ ನ ನೆವಾರ್ಕ್ ವಿಭಾಗವು ತನ್ನ ವೆಬ್ ಪುಟದಲ್ಲಿ "ಕಾಣೆಯಾದ ವ್ಯಕ್ತಿಗಳ" ಪಟ್ಟಿಗೆ ಮಯೂಷಿ ಭಗತ್ ಅವರನ್ನು ಸೇರಿಸಿದೆ ಎಂದು ಎಪ್‍ಬಿಐ ವಿಶೇಷ ಏಜೆಂಟ್ ಚಾರ್ಜ್ ಜೇಮ್ಸ್ ಡೆನ್ನೆಹಿ ತಿಳಿಸಿದ್ದಾರೆ.
ಇದನ್ನೂ ಓದಿ: Run Away Cases- ಈ ಜಿಲ್ಲೆಯಲ್ಲಿ ನಾಪತ್ತೆ ಪ್ರಕರಣ ಅತಿಹೆಚ್ಚು; ಓಡಿಹೋದ ಹುಡುಗಿಯರೇ ಹೆಚ್ಚು
ಮಯೂಷಿ ಭಗತ್ ಬಗ್ಗೆ ಮಾಹಿತಿ!
ಏಪ್ರಿಲ್ 29, 2019ರಂದು ಸಂಜೆ ಮಯೂಷಿ ಭಗತ್ ಕಾಣೆಯಾಗಿದ್ದಾರೆ. ಮಯೂಷಿ ಭಗತ್ ಕೊನೆಯ ಬಾರಿಗೆ ನ್ಯೂಜೆರ್ಸಿಯ ಜೆರ್ಸಿ ಸಿಟಿಯಲ್ಲಿರುವ ತನ್ನ ಅಪಾರ್ಟ್‍ಮೆಂಟ್ ತೊರೆದಿದ್ದಾರೆ. ಅವಳು ಕೊನೆಯದಾಗಿ ವರ್ಣರಂಜಿತ ಪೈಜಾಮ ಪ್ಯಾಂಟ್ ಮತ್ತು ಕಪ್ಪು ಟಿ-ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಳು. ಶ್ರೀಮತಿ ಭಗತ್ ಅವರು ಮೇ 1, 2019 ರಂದು ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬ ದೂರು ದಾಖಲಿಸಿತ್ತು ಎಂದು ತಿಳಿದಿದೆ. ಮಯೂಷಿ ಭಗತ್ ಇಂಗ್ಲಿಷ್, ಹಿಂದಿ ಮತ್ತು ಉರ್ದು ಮಾತನಾಡುತ್ತಾರೆ ಮತ್ತು ಸೌತ್ ಪ್ಲೇನ್‍ಫೀಲ್ಡ್, ನ್ಯೂಜೆರ್ಸಿ ಪ್ರದೇಶದಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಮಾಹಿತಿ ನೀಡಿದೆ.
ಶ್ರೀಮತಿ ಭಗತ್ ನೋಡಿದ್ರೆ ನಮಗೆ ತಿಳಿಸಿ
ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಕಾಣೆಯಾದ ವ್ಯಕ್ತಿಗಳ ಪಟ್ಟಿಗೆ ಶ್ರೀಮತಿ ಭಗತ್‍ರನ್ನು ಸೇರಿಸಿದೆ. ಅಲ್ಲದೇ ಯಾರಾದ್ರೂ ಸಾರ್ವಜನಿಕರು ಈಕೆಯನ್ನು ನೋಡಿದ್ರೆ ನಮಗೆ ಮಾಡಿತಿ ನೀಡಿ ಎಂದು ತಿಳಿಸಿದೆ. ಸ್ಥಳೀಯ ಎಫ್‍ಬಿಐ ಕಚೇರಿ ಅಥವಾ ಹತ್ತಿರದ ಅಮೆರಿಕನ್ ರಾಯಭಾರಿ ಕಚೇರಿ ಅಥವಾ ಕಾನ್ಸುಲೇಟ್ ಅನ್ನು ಸಂಪರ್ಕಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ: Chola Temple: ಕರ್ನಾಟಕದಲ್ಲಿ ಚೋಳರು ನಿರ್ಮಿಸಿದ್ದ 1,000 ವರ್ಷ ಹಳೆಯ ದೇಗುಲ ನಾಪತ್ತೆ!?
ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಭಾರತ ಮಹಿಳೆ
FBI ತನ್ನ ವೆಬ್‍ಸೈಟ್‍ನಲ್ಲಿ ಭಗತ್ ಅವರ 'ಮಿಸ್ಸಿಂಗ್ ಪರ್ಸನ್' ಪೋಸ್ಟರ್ ಅನ್ನು "ಅಪಹರಣಗಳು/ಕಾಣೆಯಾದ ವ್ಯಕ್ತಿಗಳ" "ಮೋಸ್ಟ್ ವಾಂಟೆಡ್" ಪಟ್ಟಿಯ ಅಡಿಯಲ್ಲಿ ಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ