Myntra| ಹಳೆಯ ಹಿಂದೂ ವಿರೋಧಿ ಪೋಸ್ಟರ್: ಮಾಡದ ತಪ್ಪಿಗೆ ಟ್ವಿಟ್ಟರ್‌ನಲ್ಲಿ ಮಿಂತ್ರಾ ತಲೆದಂಡ!

ಈ ಹಿಂದೆ ಮಿಂತ್ರಾದಲ್ಲಿ, ಸ್ಕ್ರೋಲ್‍ಡ್ರೋಲ್ ಎಂಬ ಏಜೆನ್ಸಿಯೊಂದು ಹಾಕಿದ , ಮಹಾಭಾರತದ ದೃಶ್ಯ ಹೊಂದಿರುವ ಜಾಹಿರಾತೊಂದು ಕಂಡು ಬಂದಾಗ ಈ ಹ್ಯಾಶ್‍ಟ್ಯಾಗ್ ಅಭಿಯಾನ ಆರಂಭವಾಗಿತ್ತು.

ಮಿಂತ್ರಾ ಕಂಪೆನಿಯ ಹಳೆ ಪೋಸ್ಟ್.

ಮಿಂತ್ರಾ ಕಂಪೆನಿಯ ಹಳೆ ಪೋಸ್ಟ್.

 • Share this:

  ಜಾಹೀರಾತು ಪೋಸ್ಟರ್‌ನಲ್ಲಿ ಮಹಾಭಾರತದ (Mahabharat) ದ್ರೌಪದಿ ವಸ್ತ್ರಾಪಹರಣ ಪ್ರಸಂಗದ ಚಿತ್ರವಿದ್ದು, ಅದನ್ನು ಮಿಂತ್ರಾದಲ್ಲಿ ವಸ್ತ್ರ ಮಾರಾಟಕ್ಕೆ ಬಳಸಿಕೊಳ್ಳಲಾಗಿದೆ. ಪೋಸ್ಟರ್‌ನಲ್ಲಿ ದುಶ್ಯಾಸನ ದ್ರೌಪದಿಯ ಸೀರೆ ಎಳೆಯುತ್ತಿರುವಾಗ, ಶ್ರೀ ಕೃಷ್ಣ ಪರಮಾತ್ಮ ‘ಹೆಚ್ಚು ಉದ್ದನೆಯ’ ಸೀರೆಗಾಗಿ ಮಿಂತ್ರ ಆ್ಯಪನ್ನು ನೋಡುತ್ತಿರುವಂತೆ ಚಿತ್ರಿಸಲಾಗಿದೆ. ಮಿಂತ್ರಾ (Myntra) ಭಾರತದಲ್ಲಿ ಅತ್ಯಂತ ಜನಪ್ರಿಯ ಆನ್‍ಲೈನ್ ಶಾಪಿಂಗ್ ಸೈಟ್‍ಗಳಲ್ಲಿ ಒಂದು. ಆದರೆ ಸೋಮವಾರ #BoycottMyntra ಮತ್ತು #UninstallMyntra ಎಂಬ ಅಭಿಯಾನ ಆರಂಭವಾಗಿದ್ದು, ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಹಾಗಂತ ಇದೇನು ಹೊಸ ಸಂಗತಿಯಲ್ಲ. 2016 ರಲ್ಲೂ ಇದೇ ಆನ್‌ಲೈನ್ ತಾಣ ‘ಹಿಂದೂ-ವಿರೋಧಿ’ ಪೋಸ್ಟರ್ ವಿರುದ್ಧ ಟ್ರೆಂಡ್ ಆಗಿತ್ತು. ಆದರೆ ಇದೀಗ ಮತ್ತೆ ಮಿಂತ್ರಾ ತಾನು ಮಾಡದಿರುವ ‘ಹಿಂದೂ-ವಿರೋಧಿ’ ಪೋಸ್ಟರ್ ಕಾರಣದಿಂದ ವಿರೋಧ ಎದುರಿಸುತ್ತಿದೆ!

  ಈ ಹಿಂದೆ ಮಿಂತ್ರಾದಲ್ಲಿ, ‘ಸ್ಕ್ರೋಲ್‍ಡ್ರೋಲ್’ ಎಂಬ ಏಜೆನ್ಸಿಯೊಂದು ಹಾಕಿದ , ಮಹಾಭಾರತದ ದೃಶ್ಯ ಹೊಂದಿರುವ ಜಾಹಿರಾತೊಂದು ಕಂಡು ಬಂದಾಗ ಈ ಹ್ಯಾಶ್‍ಟ್ಯಾಗ್ ಅಭಿಯಾನ ಆರಂಭವಾಗಿತ್ತು. ಜಾಹೀರಾತು ಪೋಸ್ಟರ್‌ನಲ್ಲಿ ಮಹಾಭಾರತದ ದ್ರೌಪದಿ ವಸ್ತ್ರಾಪಹರಣ ಪ್ರಸಂಗದ ಚಿತ್ರವಿದ್ದು, ಅದನ್ನು ಮಿಂತ್ರಾದಲ್ಲಿ ವಸ್ತ್ರ ಮಾರಾಟಕ್ಕೆ ಬಳಸಿಕೊಳ್ಳಲಾಗಿದೆ.

  ಪೋಸ್ಟರ್‌ನಲ್ಲಿ ದುಶ್ಯಾಸನ ದ್ರೌಪದಿಯ ಸೀರೆ ಎಳೆಯುತ್ತಿರುವಾಗ, ಶ್ರೀ ಕೃಷ್ಣ ಪರಮಾತ್ಮ ‘ಹೆಚ್ಚು ಉದ್ದನೆಯ’ ಸೀರೆಗಾಗಿ ಮಿಂತ್ರ ಆ್ಯಪನ್ನು ನೋಡುತ್ತಿರುವಂತೆ ಚಿತ್ರಿಸಲಾಗಿದೆ. ಬಹುಷಃ ಈ ಪೋಸ್ಟರನ್ನು ಜಾಹೀರಾತಿನಲ್ಲಿ ಕೊಂಚ ಹಾಸ್ಯ ಮಿಶ್ರಿತವಾಗಿಸಲು ಹೀಗೆ ಮಾಡಲಾಗಿದ್ದರೂ, ಹಿಂದೂ ಗ್ರಾಹಕರಿಗೆ ಇದು ಇಷ್ಟವಾಗಿಲ್ಲ. ಮಹಾಕಾವ್ಯದ ದೃಶ್ಯವನ್ನು ಕ್ಷುಲ್ಲಕಗೊಳಿಸಿ, ಹಿಂದೂ ಧರ್ಮಕ್ಕೆ ಅಗೌರವ ತೋರಿಸಲಾಗಿದೆ ಎಂದು ಅವರು ಪರಿಗಣಿಸುತ್ತಿದ್ದಾರೆ.


  ಇದನ್ನೂ ಓದಿ: Indian Army| ಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ ಶ್ರೇಣಿ ನೀಡಿದ ಭಾರತೀಯ ಸೇನೆ!

  2016ರಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿತೆಂದು ಮಿಂತ್ರಾವನ್ನು ವಿರೋಧಿಸಲಾಗಿದ್ದ ಜಾಹೀರಾತು ಮತ್ತೆ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. ವಿಪರ್ಯಾಸವೆಂದರೆ, ಈ ಪೋಸ್ಟರನ್ನು ರಚಿಸಿದ್ದು ಮಿಂತ್ರಾ ಅಲ್ಲ! 2016ರಲ್ಲಿ ಈ ಪೋಸ್ಟರ್ ವೈರಲ್ ಆದಾಗ, ತಾನು ಈ ಪೋಸ್ಟರನ್ನು ರಚಿಸಿಲ್ಲ ಮತ್ತು ಅದನ್ನು ಯಾವುದೇ ರೀತಿಯಲ್ಲಿಯೂ ಅನುಮೋದಿಸಿಲ್ಲ” ಎಂದು ವಿವರಣೆ ನೀಡಿ ಮಿಂತ್ರಾ ಟ್ವೀಟ್ ಮಾಡಿತ್ತು. “ನಮ್ಮ ಬ್ರ್ಯಾಂಡ್ ಅನ್ನು ಬಳಸಿದ್ದಕ್ಕಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ” ಮಿಂತ್ರಾ ತಿಳಿಸಿತ್ತು. “ನಮ್ಮ ಅರಿವಿಗೆ ತಾರದೆ ಮತ್ತು ಅನುಮೋದನೆ ಪಡೆಯದೆ ಮೂರನೇ ವ್ಯಕ್ತಿಗಳು (ಸ್ಕ್ರೋಲ್‍ಡ್ರೋಲ್) ಈ ಪೋಸ್ಟರನ್ನು ಪೋಸ್ಟ್ ಮಾಡಿದ್ದಾರೆ” ಎಂದು ಮಿಂತ್ರಾ ವಿವರಣೆಯಲ್ಲಿ ತಿಳಿಸಿತ್ತು.


  ಈ ಜಾಹಿರಾತನ್ನು ರಚಿಸಿದ್ದ ಸ್ಕ್ರೋಲ್‍ಡ್ರೋಲ್ ಬ್ರ್ಯಾಂಡ್ ಕೂಡ ಸಾರ್ವಾಜನಿಕವಾಗಿ ಕ್ಷಮೆ ಕೇಳಿ, ತಾನು ಈ ಪೋಸ್ಟರನ್ನು ತೆಗೆದು ಹಾಕಿರುವುದಾಗಿ ಹೇಳಿತ್ತು. “ಮಿಂತ್ರಾ ಇದ್ದಕ್ಕೆ ಯಾವುದೇ ನೇರ ಹಾಗೂ ಪರೋಕ್ಷ ಸಂಬಂಧ ಹೊಂದಿಲ್ಲ” ಎಂದು ಕೂಡ ಅದು ಸ್ಪಷ್ಟನೆ ನೀಡಿತ್ತು.


  ಇದನ್ನೂ ಓದಿ: World Bank| ಭಾರತದಲ್ಲಿ ಸುಮಾರು 1 ಲಕ್ಷ ಶಿಶುಗಳು ಕೊರೋನಾ ಪ್ರೇರಿತ ಆರ್ಥಿಕ ಕುಸಿತದಿಂದ ಸಾವು; ವಿಶ್ವಬ್ಯಾಂಕ್ ವರದಿ

  ಪರಿಸ್ಥಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಸ್ಕ್ರೋಲ್‍ಡ್ರೋಲ್ 2016ರಲ್ಲಿ ಈ ಜಾಹಿರಾತನ್ನು ರಚಿಸಲಾಗಿದೆ ಎಂದು ತಿಳಿಸಿದ್ದು, ಜನ್ಮಾಷ್ಟಮಿಯಿಂದಾಗಿ ಗ್ರಾಫಿಕ್ ಮರುಕಳಿಸಿರಬಹುದು ಎಂದು ಹೇಳಿದೆ. ಆಗ ಆರಂಭವಾದ ಬಹಿಷ್ಕಾರ, ಈಗ ಐದು ವರ್ಷಗಳ ನಂತರ ಮತ್ತೆ ಟ್ವಿಟ್ಟರ್‌ನಲ್ಲಿ ಮರುಕಳಿಸಿರುವುದನ್ನು ನೋಡಬಹುದು. ಸೋಮವಾರ ಬೆಳಗ್ಗೆ ಯಿಂದ ಮಿಂತ್ರಾವನ್ನು ಬಹಳಷ್ಟು ಮಂದಿ ಅನ್‍ಇನ್‍ಸ್ಟಾಲ್ ಮಾಡಿದ್ದು, ಅದಕ್ಕೆ ಹಿಂದೂ – ವಿರೋಧಿ ಸಂಗತಿಯೇ ಕಾರಣ ಎಂದು ತಮ್ಮ 1-ಸ್ಟಾರ್ ವಿಮರ್ಶೆಗಳಲ್ಲಿ ತಿಳಿಸಿದ್ದಾರೆ.
  ಅದೇನೇ ಇದ್ದರೂ, ಇತ್ತೀಚಿನ ದಿನಗಳಲ್ಲಿ ಹಿಂದೂ ವಿರೋಧಿ ಭಾವನೆಗಳಿಗಾಗಿ ಸುದ್ದಿಯಲ್ಲಿರುವ ಮೊದಲ ಅಥವಾ ಏಕೈಕ ಬ್ರ್ಯಾಂಡ್ ಮಿಂತ್ರಾ ಆಗಿದೆ. ಸರ್ಫ್ ಎಕ್ಸೆಲ್ , ತನಿಷ್ಕ್, ಕೇರಳ ಪ್ರವಾಸೋದ್ಯಮ ಸೇರಿದಂತೆ ಇನ್ನೂ ಅನೇಕ ಜಾಹಿರಾತುಗಳನ್ನು ಹಿಂದೂ ವಿರೋಧಿ ಎಂದು ಕರೆಯಲಾಗಿದೆ. ಆದರೆ ತಾನು ರಚಿಸದೆ ಅಥವಾ ಯಾವುದೇ ಸಂಬಂಧವಿಲ್ಲದೇಯೇ ವಿರೋಧ ಎದುರಿಸುತ್ತಿರುವ ಕೆಲವು ಬ್ರ್ಯಾಂಡ್‌ಗಳಲ್ಲಿ ಮಿಂತಾ ಕೂಡ ಒಂದೆಂದು ಹೇಳಬಹುದು.

  First published: