ಇಂಡೋನೇಷ್ಯಾ, ಟರ್ಕಿ ದೇಶಗಳಿಗೆ ಪ್ರವಾಸ ಹೋಗುವ ಭಾರತೀಯರ ಸಂಖ್ಯೆ ಹೆಚ್ಚಾಗಿರುವುದು ಯಾಕೆ?


Updated:August 23, 2018, 10:16 PM IST
ಇಂಡೋನೇಷ್ಯಾ, ಟರ್ಕಿ ದೇಶಗಳಿಗೆ ಪ್ರವಾಸ ಹೋಗುವ ಭಾರತೀಯರ ಸಂಖ್ಯೆ ಹೆಚ್ಚಾಗಿರುವುದು ಯಾಕೆ?
ಶ್ರೀಲಂಕಾದ ಪ್ರವಾಸ ತಾಣ

Updated: August 23, 2018, 10:16 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 23): ವಿದೇಶಗಳಿಗೆ ಪ್ರವಾಸ ಹೋಗುವ ಭಾರತೀಯರಿಗೆ ಅಮೆರಿಕ, ಯೂರೋಪ್ ಮತ್ತು ಸಿಂಗಾಪುರ ದೇಶಗಳು ಅಚ್ಚುಮೆಚ್ಚು. ಆದರೆ, ಇತ್ತೀಚಿನ ದಿನಗಳಲ್ಲಿ ಈ ದೇಶಗಳಿಗೆ ಪ್ರವಾಸ ಹೋಗುವ ಭಾರತೀಯರ ಪ್ರಮಾಣ ಶೇ. 15ರಷ್ಟು ತಗ್ಗಿದೆಯಂತೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಟರ್ಕಿ, ಇಂಡೋನೇಷ್ಯಾ ಮೊದಲಾದ ದೇಶಗಳು ಭಾರತೀಯರ ಫೇವರಿಟ್ ಟೂರಿಸ್ಟ್ ಸ್ಪಾಟ್ ಆಗುತ್ತಿವೆಯಂತೆ. ಅದರಲ್ಲೂ ಇಂಡೋನೇಷ್ಯಾ ಮತ್ತು ಟರ್ಕಿ ದೇಶಗಳು ಭಾರತೀಯರಿಗೆ ಹೊಸ ಆಯ್ಕೆಯಾಗಿದೆ.

ಈ ಅಚ್ಚರಿ ಬದಲಾವಣೆಗೆ ಕಾರಣವೂ ಇದೆ. ಭಾರತೀಯ ರೂಪಾಯಿಯ ಮೌಲ್ಯ ಕುಸಿತ. ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಕರೆನ್ಸಿಯ ಮೌಲ್ಯ ದಿನೇದಿನೇ ಕುಸಿಯುತ್ತಿದ್ದು, ಇತಿಹಾಸದಲ್ಲೇ ಅತ್ಯಂತ ಕಳಪೆ ರೂಪಾಯಿ ಮೌಲ್ಯವನ್ನು ನಾವು ನೋಡುತ್ತಿದ್ದೇವೆ. ಅಮೆರಿಕನ್ ಡಾಲರ್ ಅಷ್ಟೇ ಅಲ್ಲ ಯೂರೋಪ್​ನ ಯೂರೋ, ಬ್ರಿಟನ್​ನ ಪೌಂಡ್, ಸಿಂಗಾಪುರದ ಡಾಲರ್​ಗಳ ಎದುರೂ ರೂಪಾಯಿ ದುರ್ಬಲ ಪ್ರದರ್ಶನ ನೀಡುತ್ತಿದೆ. ಇದೇ ವೇಳೆ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಟರ್ಕಿಯ ಕರೆನ್ಸಿಗಳೂ ಕೂಡ ರೂಪಾಯಿಗಿಂತಲೂ ಕಳಪೆ ಪ್ರದರ್ಶನ ನೀಡುತ್ತಿವೆ. ಆಸ್ಟ್ರೇಲಿಯಾದ ಡಾಲರ್ ಎದುರೂ ಭಾರತದ ರೂಪಾಯಿಯ ಮೌಲ್ಯದಲ್ಲಿ ಅಂತಹ ಕುಸಿತವಾಗಿಲ್ಲ. ಹೀಗಾಗಿ, ಭಾರತೀಯ ಪ್ರವಾಸಿಗರು ಈ ದೇಶಗಳತ್ತ ಕಣ್ಣುಹಾಯಿಸಲು ತೊಡಗಿದ್ದಾರೆ.

ರೂಪಾಯಿ ಮೌಲ್ಯಕ್ಕೂ ವಿದೇಶ ಪ್ರವಾಸಗಳಿಗೂ ನೇರ ಸಂಬಂಧವಿದೆ. ರೂಪಾಯಿ ಅತ್ಯಂತ ಹೀನ ಬೆಲೆ ಹೊಂದಿರುವ ಈ ಸಂದರ್ಭದಲ್ಲಿ ಅಮೆರಿಕಕ್ಕೆ ಪ್ರವಾಸ ಹೋದರೆ ಅಲ್ಲಿ ಹೆಚ್ಚು ಹಣ ತೆರಬೇಕಾಗುತ್ತದೆ. ಅದೇ, ಶ್ರೀಲಂಕಾ, ಇಂಡೋನೇಷ್ಯಾದಂಥ ರಾಷ್ಟ್ರಗಳಿಗೆ ಹೋದರೆ ಹೆಚ್ಚಿನ ಖರ್ಚು ತಗುಲುವುದಿಲ್ಲ. ಭಾರತಕ್ಕೆ ಅವು ಸನಿಹದಲ್ಲಿಯೂ ಇವೆ. ಹೀಗಾಗಿ, ಇಂಡೋನೇಷ್ಯಾದ ಬಾಲಿ ಮೊದಲಾದ ತಾಣಗಳತ್ತ ಹೆಚ್ಚೆಚ್ಚು ಭಾರತೀಯ ಪ್ರವಾಸಿಗರು ಎಡತಾಕುತ್ತಿದ್ಧಾರೆ. ಶ್ರೀಲಂಕಾದ ನೈಸರ್ಗಿಕ ಸೌಂದರ್ಯವೂ ಭಾರತೀಯರಿಗೆ ಆಕರ್ಷಣೆಯಾಗಿದೆ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ