• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Compensation: ದುಬೈ ಬಸ್ ಅಪಘಾತದಲ್ಲಿ ಗಾಯಗೊಂಡ ಭಾರತೀಯನಿಗೆ 11 ಕೋಟಿ ಪರಿಹಾರ! ವಿಮಾ ಕಂಪನಿಗೆ ಕೋರ್ಟ್ ಆದೇಶ

Compensation: ದುಬೈ ಬಸ್ ಅಪಘಾತದಲ್ಲಿ ಗಾಯಗೊಂಡ ಭಾರತೀಯನಿಗೆ 11 ಕೋಟಿ ಪರಿಹಾರ! ವಿಮಾ ಕಂಪನಿಗೆ ಕೋರ್ಟ್ ಆದೇಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2019ರಲ್ಲಿ ದುಬೈನಲ್ಲಿ ಈ ಅಪಘಾತ ನಡೆದಿತ್ತು. ಇದರಲ್ಲಿ 12 ಭಾರತೀಯರು ಸೇರಿದಂತೆ 19 ಜನರು ಮರಣ ಹೊಂದಿದ್ದರು. ಈ ಅಪಘಾತದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದ. ಆತನಿಗೆ 11 ಕೋಟಿ ಪರಿಹಾರ ಸಿಕ್ಕಿದೆ.

  • Share this:

ದುಬೈ: ದುಬೈನಲ್ಲಿ ನಡೆದಿದ್ದ ಬಸ್​ ಅಪಘಾತದಲ್ಲಿ (Bus Accident) ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ (Indian) ವ್ಯಕ್ತಿಗೆ ಪರಿಹಾರವಾಗಿ (Compensation) 5 ಮಿಲಿಯನ್​ ದಿರ್ಹಾಮ್​ ( 11.11 ಕೋಟಿ) ಮೊತ್ತವನ್ನು ಪಡೆದಿದ್ದಾರೆ. ​ 2019ರಲ್ಲಿ ದುಬೈನಲ್ಲಿ ಈ ಅಪಘಾತ ನಡೆದಿತ್ತು. ಇದರಲ್ಲಿ 12 ಭಾರತೀಯರು ಸೇರಿದಂತೆ 19 ಜನರು ಮರಣ ಹೊಂದಿದ್ದರು. ಈ ಭೀಕರ ಬಸ್ ಅಪಘಾತದಲ್ಲಿ ಭಾರತದ ಬೇಗ್ ಮಿರ್ಜಾ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದ. ಇದೀಗ ದುಬೈ ಸುಪ್ರೀಂ ಕೋರ್ಟ್​ ಅವರಿಗೆ  11 ಕೋಟಿ ರೂಪಾಯಿ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.


17 ಮಂದಿ ಸಾವು


ಬಸ್​ ಅಪಘಾತಕ್ಕೊಳಗಾಗಿದ್ದ ಸಂದರ್ಭದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ 20 ವರ್ಷದ ಮುಹಮ್ಮದ್ ಬೇಗ್ ಮಿರ್ಜಾ ಅವರು ಒಮನ್‌ನಿಂದ ಯುಎಇಗೆ ತೆರಳುತ್ತಿದ್ದರು. ಈ ವೇಳೆ ಅಪಘಾರ ಸಂಭವಿಸಿ ಬಸ್‌ನಲ್ಲಿದ್ದ 31 ಪ್ರಯಾಣಿಕರ ಪೈಕಿ 17 ಮಂದಿ ಮೃತಪಟ್ಟಿದ್ದರು. ಅವರಲ್ಲಿ 12 ಮಂದಿ ಭಾರತೀಯರಿದ್ದರು.


ಮೆಟ್ರೋ ನಿಲ್ದಾಣದ ಪಾರ್ಕಿಂಗ್‌ನ ಪ್ರವೇಶ ಭಾಗದಲ್ಲಿದ್ದ ಎತ್ತರದ ತಡೆಗೋಡೆಗೆ ಬಸ್​ ಡಿಕ್ಕಿ ಹೊಡೆದಿತ್ತು. ಈ ಅಪಘಾತದಿಂದ ಬಸ್‌ನ ಮೇಲಿನ ಎಡಭಾಗವನ್ನು ಸಂಪೂರ್ಣ ನಾಶವಾಗಿತ್ತು. ಈ ಬಸ್​ ಚಾಲಕನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಕೋರ್ಟ್, 3.4 ಮಿಲಿಯನ್​ ದಿರ್ಹಾಮ್​ ಮೊತ್ತವನ್ನು ಸಂತ್ರಸ್ತ ಕುಟುಂಬಗಳಿಗೆ  ಪರಿಹಾರ ನೀಡುವಂತೆ ಆದೇಶಿಸಿತ್ತು ಎಂದು ಪಿಟಿಐ ವರದಿ ಮಾಡಿದೆ.


ಇದನ್ನೂ ಓದಿ:  Relationship: 1.5 ಮಿಲಿಯನ್ ಜಪಾನಿಯರನ್ನು ಪ್ರತ್ಯೇಕವಾಗಿ ವಾಸಿಸುವಂತೆ ಮಾಡಿದ ಹಿಕಿಕೊಮೊರಿ, ಅಷ್ಟಕ್ಕೂ ಹೀಗಂದ್ರೇನು?


ಮೊದಲು 1 ಮಿಲಿಯನ್ ದಿರ್ಹಾಮ್ ಪರಿಹಾರ


ಯುಎಇ ವಿಮಾ ಪ್ರಾಧಿಕಾರವು ಈ ಹಿಂದೆಯೇ ಮಿರ್ಜಾರಿಗೆ 1 ಮಿಲಿಯನ್ ದಿರ್ಹಾಮ್​ಗಳನ್ನು (2.2 ಕೋಟಿ) ಪರಿಹಾರವಾಗಿ ನೀಡಿತ್ತು. ಆದಾಗ್ಯೂ, ಮಿರ್ಜಾ ದುಬೈ ಕೋರ್ಟ್​ನಲ್ಲಿ ಫಸ್ಟ್ ಇನ್‌ಸ್ಟಾನ್ಸ್ ಗೆ ಮೇಲ್ಮನವಿ ಸಲ್ಲಿಸಿ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಸಲ್ಲಿಸಿದ್ದರು. ಇವರ ಮನವಿಯನ್ನು ಪುರಸ್ಕರಿಸಿದ್ದ ಕೋರ್ಟ್​ 5 ಮಿಲಿಯನ್ ದಿರ್ಹಾಮ್​ಗಳನ್ನು ಪರಿಹಾರವಾಗಿ ಪಾವತಿಸುವಂತೆ ಆದೇಶ ನೀಡಿದೆ ಎಂದು ಮಿರ್ಜಾ ಪರ ವಕೀಲರು ಮಾಹಿತಿ ನೀಡಿದ್ದಾರೆ.


ಮೆದುಳಿಗೆ ಗಂಭೀರ ಗಾಯ


ಅಪಘಾತದಲ್ಲಿ ಮಿರ್ಜಾ ಅವರ ಮೆದುಳಿಗೆ ಶೇ 50ರಷ್ಟು ಹಾನಿಯಾಗಿದೆ ಎಂಬ ವರದಿ ಆಧಾರದಲ್ಲಿ ತೀರ್ಪು ನೀಡಿರುವ ಯುಎಇ ಸುಪ್ರೀಂಕೋರ್ಟ್, 5 ಮಿಲಿಯನ್ ದಿರ್ಹಾಮ್ ಮೊತ್ತದ ಪರಿಹಾರ ಪಾವತಿ ಮಾಡುವಂತೆ ಇನ್ಸುರೆನ್ಸ್ ಕಂಪೆನಿಗೆ ಆದೇಶ ನೀಡಿದೆ. ಕೋರ್ಟ್​ ತೀರ್ಪಿನಿಂದ ನಮಗೆ ಬಹಳ ಖುಷಿಯಾಗಿದೆ ಎಂದು ಹಿರಿಯ ವಕೀಲ ಈಸಾ ಅನೀಸ್ ತಿಳಿಸಿದ್ದಾರೆ.




14 ದಿನಗಳ ಕೋಮಾದಲ್ಲಿದ್ದ ಮಿರ್ಜಾ


ಅಪಘಾತ ಸಂಭವಿಸಿದಾಗ ಮಿರ್ಜಾ ಅವರು ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್‌ನ ಅಂತಿಮ ಸೆಮಿಸ್ಟರ್‌ನಲ್ಲಿದ್ದರು. ಅವರು ತಮ್ಮ ರಜಾದಿನಗಳಲ್ಲಿ ಮಸ್ಕತ್‌ನಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿ, ಅವರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ದುಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು 14 ದಿನಗಳ ಕಾಲ ಕೋಮಾದಲ್ಲಿದ್ದರು, ಅಲ್ಲದೆ ಎರಡು ತಿಂಗಳ ಕಾಲ ಅಲ್ಲೇ ಚಿಕಿತ್ಸೆಯನ್ನು ಪಡೆದಿದ್ದರು. ನಂತರ ಪುನರ್ವಸತಿ ಕೇಂದ್ರದಲ್ಲಿ ಹಲವು ತಿಂಗಳ ಕಾಲ ಚಿಕಿತ್ಸೆಗೆ ಒಳಗಾಗಿದ್ದರು.


ಇದನ್ನೂ ಓದಿ: Donald Trump: ಅನೈತಿಕ ಸಂಬಂಧ ಮುಚ್ಚಿಡಲು ಹಣ ಕೊಟ್ಟಿದ್ದ ಡೊನಾಲ್ಡ್​ ಟ್ರಂಪ್‌ ಅರೆಸ್ಟ್: ಯಾರೀಕೆ ಸ್ಟಾರ್ಮಿ ಡೇನಿಯಲ್ಸ್ ?


ಸಾಮಾನ್ಯ ಜೀವನಕ್ಕೆ ಮರಳುವ ಸಾಧ್ಯತೆ ಕಡಿಮೆ


ಅಪಘಾತದಲ್ಲಿ ಮಿರ್ಜಾ ಅವರ ಮೆದುಳಿಗೆ ತೀವ್ರ ಹಾನಿಯಾಗಿರುವುದುರಿಂದ ಅವರು ಸಾಮಾನ್ಯ ಜೀವನಕ್ಕೆ ಮರಳುವ ಸಾಧ್ಯತೆಗಳು ಕಡಿಮೆ ಎಂದು ವೈದ್ಯರು ಹೇಳಿದ್ದಾರೆ. ಆತನ ತಲೆಬುರುಡೆ, ಕಿವಿ, ಬಾಯಿ, ಕೈ ಮತ್ತು ಕಾಲುಗಳಿಗೂ ಗಾಯಗಳಾಗಿವೆ. ಅಲ್ಲದೆ ಭವಿಷ್ಯದಲ್ಲಿ ಅವರು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಸಾದ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ವರದಿಯ ಆಧಾರದ ಮೇಲೆ ಯುಎಇ ಸರ್ವೋಚ್ಚ ನ್ಯಾಯಾಲಯ ವಿಮಾ ಕಂಪನಿಗೆ 5 ಲಕ್ಷ ದಿರ್ಹಾಮ್​ಗಳನ್ನು ಮಿರ್ಜಾ ಕುಟುಂಬಕ್ಕೆ ನೀಡುವಂತೆ ಆದೇಶಿಸಿದೆ.

First published: