ಹೊಸ ದಾಖಲೆ ಮಟ್ಟ ತಲುಪಿದ ಭಾರತೀಯ ಷೇರುಪೇಟೆ; 52,000 ಅಂಕ ಮುಟ್ಟಿದ ಸೆನ್ಸೆಕ್ಸ್

ಇಂದು ಸೋಮವಾರದ ಬೆಳಗಿನ ವಹಿವಾಟಿನಲ್ಲಿ ಭಾರತದ ಬಿಎಸ್ಇ ಸೆನ್ಸೆಕ್ಸ್ 52,000 ಅಂಕಗಳ ಮಟ್ಟ ಮುಟ್ಟಿತು. ಎನ್ಎಸ್ಇ ನಿಫ್ಟಿ ಸೂಚ್ಯಂಕ 15,300 ಅಂಕಗಳ ಮುಟ್ಟ ತಲುಪಿದೆ.

ಸೆನ್ಸೆಕ್ಸ್

ಸೆನ್ಸೆಕ್ಸ್

 • News18
 • Last Updated :
 • Share this:
  ಮುಂಬೈ(ಫೆ. 15): ಜಾಗತಿಕವಾಗಿ ಆರ್ಥಿಕತೆ ಚೇತರಿಕೆ ಆಗುತ್ತಿರುವುದು ಹಾಗೂ ಕೊರೋನಾ ಲಸಿಕೆ ಎಲ್ಲೆಡೆ ವಿತರಣೆ ಅಗುತ್ತಿರುವುದು ಭಾರತೀಯ ಹೂಡಿಕೆದಾರರ ಉತ್ಸಾಹ ಹೆಚ್ಚಿಸಿದೆ. ತತ್​ಪರಿಣಾಮವಾಗಿ ಭಾರತೀಯ ಷೇರುಪೇಟೆ ಈ ವಾರ ಗರಿಗರಿಯಾಗಿ ಮಿಂಚಲು ಆರಂಭಿಸಿದೆ. ಇಂದು ಸೋಮವಾರ ಬೆಳಗ್ಗೆ ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ 52,000 ಅಂಕಗಳ ಮಟ್ಟ ಮುಟ್ಟಿತು. ಇಷ್ಟು ಮಟ್ಟಕ್ಕೆ ಸೆನ್ಸೆಕ್ಸ್ ಏರಿದ್ದು ಇತಿಹಾಸದಲ್ಲಿ ಇದೇ ಮೊದಲು. ಮತ್ತೊಂದು ಷೇರುಪೇಟೆ ಎನ್​ಎಸ್​ಇ ನಿಫ್ಟಿ ಸೂಚ್ಯಂಕ ಕೂಡ ಸೋಮವಾರದ ಬೆಳಗಿನ ವಹಿವಾಟಿನ ವೇಳೆ ದಾಖಲೆಯ 15,300 ಅಂಕಗಳ ಮಟ್ಟ ತಲುಪಿತು.

  ಭಾರತವಷ್ಟೇ ಅಲ್ಲ, ಜಾಗತಿಕವಾಗಿಯೂ ಹಲವು ಷೇರುಪೇಟೆಗಳೂ ಕೂಡ ಗಣನೀಯ ವೃದ್ಧಿ ಕಂಡಿವೆ. ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳ ಕಂಪನಿಗಳ ಷೇರು ಬೆಲೆ ಇಂದು ವೃದ್ಧಿಸಿವೆ. ಇಂಡಸ್​ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹೆಚ್​ಡಿಎಫ್​ಸಿ ಬ್ಯಾಂಕ್ ಮತ್ತು ಭಾರ್ತಿ ಏರ್​ಟೆಲ್ ಸಂಸ್ಥೆಗಳ ಷೇರುಮೌಲ್ಯ ಹೆಚ್ಚಳಗೊಂಡಿದೆ.

  ಇದನ್ನೂ ಓದಿ: ಉತ್ತರಾಖಂಡ್ ನೀರ್ಗಲ್ಲು ಸ್ಫೋಟ: ಸಾವಿನ ಸಂಖ್ಯೆ 51ಕ್ಕೆ ಏರಿಕೆ

  ಏಷ್ಯಾದ ಇತರ ಷೇರುಪೇಟೆಗಳೂ ಉತ್ಸಾಹದ ವಾತಾವರಣ ಕಂಡಿವೆ. ಜಪಾನ್​ನ ನಿಕ್ಕೀ ಸೂಚ್ಯಂಕ ಶೇ. 1.3ರಷ್ಟು ಹೆಚ್ಚಳ ಕಂಡಿದೆ. ಆಸ್ಟ್ರೇಲಿಯಾ, ಅಮೆರಿಕದ ಷೇರುಪೇಟೆ ಸೂಚ್ಯಂಕಗಳೂ ಕೂಡ ಹೆಚ್ಚಿನ ವಹಿವಾಟು ಕಂಡಿವೆ. ವಿಶ್ವ ಆರ್ಥಿಕ ಚೇತರಿಕೆ, ಕೊರೋನಾ ಲಸಿಕೆ ಜೊತೆಗೆ ತೈಲ ಬೆಲೆ ಹೆಚ್ಚಳವಾಗಿರುವುದೂ ಕೆಲ ಷೇರುಪೇಟೆಗಳಿಗೆ ಸಕಾರಾತ್ಮಕವಾಗಿ ಪರಿಣಮಿಸಿದೆ.
  Published by:Vijayasarthy SN
  First published: