Sensex - ಷೇರುಮಾರುಕಟ್ಟೆ ಹೊಸ ಎತ್ತರಕ್ಕೆ; ಮೊದಲ ಬಾರಿ 47 ಸಾವಿರ ಅಂಕ ಮುಟ್ಟಿದ ಸೆನ್ಸೆಕ್ಸ್

ಕೊರೋನಾ ಸ್ಥಿತಿಯಲ್ಲಿ ಸುಧಾರಣೆ, ಡಾಲರ್ ಮೌಲ್ಯ ಕುಸಿತ ಇತ್ಯಾದಿ ಕಾರಣಗಳಿಂದ ಭಾರತದ ಕಂಪನಿಗಳ ಮೇಲೆ ವಿದೇಶೀ ಹೂಡಿಕೆದಾರರು ಆಕರ್ಷಿತರಾಗಿದ್ದು, ಅದರ ಫಲವಾಗಿ ಷೇರುಪೇಟೆ ಗರಿಗೆದರಿದೆ.

ಬಿಎಸ್​ಇ ಸೆನ್ಸೆಕ್ಸ್

ಬಿಎಸ್​ಇ ಸೆನ್ಸೆಕ್ಸ್

  • News18
  • Last Updated :
  • Share this:
    ಮುಂಬೈ(ಡಿ. 18): ಅಮೆರಿಕದ ಡಾಲರ್ ಮೌಲ್ಯ ಕುಸಿತ, ಭಾರತದಲ್ಲಿ ಕೋವಿಡ್​ನಿಂದ ಚೇತರಿಕೆ ಇತ್ಯಾದಿ ವಿವಿಧ ಕಾರಣಗಳಿಂದಾಗಿ ಇಲ್ಲಿಯ ಷೇರುಮಾರುಕಟ್ಟೆಯಲ್ಲಿ ವ್ಯವಹಾರ ಗರಿಗೆದರಿ ಹೆಚ್ಚಾಗುತ್ತಿದೆ. ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ 47,000 ಅಂಕಗಳ ಗಡಿ ದಾಟಿತು. ನಂತರದ ವಹಿವಾಟು ತುಸು ಕಡಿಮೆಯಾಗಿ ಇದೀಗ 46,749.04 ಅಂಕಗಳಿಗೆ ಬಂದು ನಿಂತಿದೆ. ಅದೇ ರೀತಿ ಎನ್​ಎಸ್​ಇ ನಿಫ್ಟಿ ಸೂಚ್ಯಂಕ ಕೂಡ ಬೆಳಗ್ಗಿನ ವಹಿವಾಟಿನಲ್ಲಿ 13,713.55 ಅಂಕ ಮುಟ್ಟಿತು. ಇದೂ ಕೂಡ ಹೊಸ ಮೈಲಿಗಲ್ಲಾಗಿದೆ.

    ಇನ್ಫೋಸಿಸ್, ಹೆಚ್​ಸಿಎಲ್ ಟೆಕ್, ಟಿಸಿಎಸ್, ನೆಸ್ಲೆ ಇಂಡಿಯಾ, ಬಜಾಜ್ ಆಟೋ ಸಂಸ್ಥೆಯ ಷೇರುಗಳು ಹೆಚ್ಚಿನ ಬೆಲೆಗೆ ಬಿಕರಿಗೊಂಡವು. ಓಎನ್​ಜಿಸಿ, ಇಂಡಸ್​ಇಂಡ್ ಬ್ಯಾಂಕ್, ಹೆಚ್​ಡಿಎಫ್​ಸಿ, ಬಜಾಜ್ ಫೈನಾನ್ಸ್ ಮತ್ತು ಕೋಟಕ್ ಬ್ಯಾಂಕುಗಳ ಷೇರುಗಳ ಮೌಲ್ಯ ಕಡಿಮೆಗೊಂಡವು.

    ಮೆಕ್​ಡೊನಾಲ್ಡ್ಸ್, ಬರ್ಗರ್ ಕಿಂಗ್, ಕೆಎಫ್​ಸಿ, ಪೀಜ್ಜಾ ಹಟ್, ಡಾಮಿನೋಸ್ ಪೀಜ್ಜಾ ಮೊದಲಾದ ರೆಸ್ಟೋರೆಂಟ್​ಗಳಿಗೆ ಬನ್ನುಗಳನ್ನ ಸರಬರಾಜು ಮಾಡುವ ಮಿಸಸ್ ಬೆಕ್ಟರ್ಸ್ ಫೂಡ್ ಸ್ಪೆಷಾಲಿಟಿಸ್ ಸಂಸ್ಥೆ ಹೂಡಿಕೆದಾರರ ಆಕರ್ಷಣೆಯಾಗಿದೆ. ಈ ಕಂಪನಿಯ ಐಪಿಒ (ಇನಿಷಿಯಲ್ ಪಬ್ಲಿಕ್ ಆಫರ್) ನಿನ್ನೆ ಕೊನೆಯ ದಿನವಾಗಿತ್ತು. ನಿರೀಕ್ಷೆಮೀರಿದಷ್ಟು ಪ್ರಮಾಣದಲ್ಲಿ ಜನರು ಈ ಆಫರನ್ನು ಸ್ವೀಕರಿಸಇ ಖರೀದಿ ಮಾಡಿದ್ದಾರೆ.

    ಇದನ್ನೂ ಓದಿ: Petrol Diesel Price: ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು?; ವಿವಿಧ ನಗರಗಳಲ್ಲಿ ದರ ಇಂತಿದೆ

    ಷೇರುವಹಿವಾಟಿನಲ್ಲಿ ಗಮನ ಸೆಳೆದದ್ದು ಎಫ್​ಪಿಐಗಳು. ಅಂದರೆ ಫಾರೀನ್ ಪೋರ್ಟ್​ಫೋಲಿಯಾ ಹೂಡಿಕೆದಾರರು ನಿನ್ನೆ ಗುರುವಾರ 2,355 ಕೋಟಿ ರೂ ಮೊತ್ತದಷ್ಟು ಷೇರುಗಳನ್ನ ಖರೀದಿಸಿದ್ದಾರೆ. ಭಾರತದಲ್ಲಿ ಕೋವಿಡ್​ನಿಂದ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿರುವುದು, ಲಸಿಕೆ ವಿತರಣೆಗೆ ಸಮರ್ಪಕ ವ್ಯವಸ್ಥೆ ಸಿದ್ಧಗೊಳ್ಳುತ್ತಿರುವುದು, ಬಡ್ಡಿ ದರ ಇಳಿಕೆಯಾಗುತ್ತಿರುವುದು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಅಮೆರಿಕದ ಡಾಲರ್ ಮೌಲ್ಯ ಕುಸಿಯುತ್ತಿರುವುದು ವಿದೇಶೀ ಹೂಡಿಕೆದಾರರನ್ನ ಭಾರತದ ಕಂಪನಿಗಳು ಆಕರ್ಷಿಸುತ್ತಿವೆ.
    Published by:Vijayasarthy SN
    First published: