HOME » NEWS » National-international » INDIAN STOCK MARKET CRASH ON THE DAY OF THE UNION BUDGET 2020 MAK

Union Budget 2020: ಕೇಂದ್ರ ಬಜೆಟ್ ಮಂಡನೆ ದಿನವೇ ಭಾರತೀಯ ಷೇರುಪೇಟೆ ಕುಸಿತ; ನಷ್ಟ ದಾಖಲಿಸಿದ ಖಾಸಗಿ ವಿಮಾ ಕಂಪೆನಿಗಳು

ಟೆಕ್ ಮಹೀಂದ್ರಾ, ಪವರ್​ಗ್ರೀಡ್​, ಟಾಟಾ ಸ್ಟೀಲ್, ಎನ್​ಟಿಪಿಸಿ, ಕೊಟಕ್ ಬ್ಯಾಂಕ್ ಮತ್ತು ಹೆಚ್​ಸಿಎಲ್​ ಟೆಕ್ ಕಂಪೆನಿಗಳ ಆದಾಯದಲ್ಲೂ ಶೇ. 3 ರಷ್ಟು ಕುಸಿತ ಉಂಟಾಗಿದೆ. ಒಟ್ಟಾರೆ ಇಂದಿನ ಮುಂಬೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ 680 ಅಂಕಗಳಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ 200 ಅಂಕಗಳನ್ನು ಕಳೆದುಕೊಂಡಿದೆ.

MAshok Kumar | news18-kannada
Updated:February 10, 2020, 6:50 PM IST
Union Budget 2020: ಕೇಂದ್ರ ಬಜೆಟ್ ಮಂಡನೆ ದಿನವೇ ಭಾರತೀಯ ಷೇರುಪೇಟೆ ಕುಸಿತ; ನಷ್ಟ ದಾಖಲಿಸಿದ ಖಾಸಗಿ ವಿಮಾ ಕಂಪೆನಿಗಳು
ಸಚಿವೆ ನಿರ್ಮಲಾ ಸೀತಾರಾಮನ್
  • Share this:
ಮುಂಬೈ (ಫೆಬ್ರವರಿ 01); ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್​ನಲ್ಲಿ ಮಹತ್ವದ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಅಲ್ಲದೆ, ಬಜೆಟ್​ನಲ್ಲಿ ಸರ್ಕಾರ ತೆರಿಗೆದಾರರಿಗೆ ಪರ್ಯಾಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದರು. ಅಲ್ಲದೆ, ಜೀವ ವಿಮಾ ನಿಗಮದ ಷೇರು ಮಾರಾಟ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ತಿಳಿಸುತ್ತಿದ್ದಂತೆ ಇಂದಿನ ವಿಮಾ ಷೇರುಪೇಟೆ ಕುಸಿತ ಕಂಡಿದೆ. ಖಾಸಗಿ ವಿಮಾ ಕಂಪೆನಿಗಳಾದ ಹೆಚ್​ಡಿಎಫ್​ಸಿ ಲೈಫ್, ಐಸಿಐಸಿಐ ಪ್ರುಡೆನ್ಶಿಯಲ್ ಹಾಗೂ ಎಸ್​ಬಿಐ ಲೈಫ್ ಕಂಪೆನಿಗಳು ದಾಖಲೆಯ ಕುಸಿತ ಅನುಭವಿಸಿವೆ.

ಸಂಸತ್​ನಲ್ಲಿ 2020ರ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮ್ ಎಲ್ಐಸಿ ಜೀವ ವಿಮಾ ನಿಗಮದ ಅಲ್ಪ ಪ್ರಮಾಣ ಷೇರುಗಳನ್ನು ಸರ್ಕಾರ ಮಾರಾಟ ಮಾಡಲು ನಿರ್ಧರಿಸಿದೆ. ಸಾರ್ವಜನಿಕರೂ ಸಹ ಈ ಷೇರುಗಳನ್ನು ಖರೀದಿ ಮಾಡಬಹುದು ಎಂದು ತಿಳಿದರು. ಅಲ್ಲದೆ, ಭವಿಷ್ಯದಲ್ಲಿ ಸರ್ಕಾರಿ ವಿಮಾ ನಿಗಮ ಸಂಪೂರ್ಣ ಖಾಸಗೀಕರಣವಾಗುವ ಸಾಧ್ಯತೆ ಇದೆ ಎಂಬ ಸೂಚನೆಯನ್ನೂ ನೀಡಿದರು.

ಸದನದಲ್ಲಿ ಹಣಕಾಸು ಸಚಿವೆ ವಿಮಾ ನಿಗಮದ ಷೇರು ಮಾರಾಟದ ಕುರಿತು ಉಲ್ಲೇಖಿಸುತ್ತಿದ್ದಂತೆ ಹೆಚ್​ಡಿಎಫ್​ಸಿ ಲೈಫ್, ಐಸಿಐಸಿಐ ಪ್ರುಡೆನ್ಶಿಯಲ್ ಹಾಗೂ ಎಸ್​ಬಿಐ ಲೈಫ್ ಕಂಪೆನಿಗಳು ದಾಖಲೆಯ ಕುಸಿತ ಕಾಣಲು ಆರಂಭಿಸಿವೆ. ಬಜೆಟ್ ಮಂಡನೆಗೂ ಮುನ್ನವೇ 100 ಅಂಕಗಳ ಕುಸಿತದೊಂದಿಗೆ ಮಾರುಕಟ್ಟೆ ವಹಿವಾಟು ಆರಂಭಿಸಿದ ಭಾರತೀಯ ಷೇರುಪೇಟೆ ಮಧ್ಯಾಹ್ನದ ವೇಳೆಗೆ ಖಾಸಗಿ ವಿಮಾ ಕಂಪೆನಿಗಳ ಪಾಲಿಗೆ ಮತ್ತಷ್ಟು ನಷ್ಟವನ್ನು ಉಂಟು ಮಾಡಿದೆ.

ಇದಲ್ಲದೆ, ಟೆಕ್ ಮಹೀಂದ್ರಾ, ಪವರ್​ಗ್ರೀಡ್​, ಟಾಟಾ ಸ್ಟೀಲ್, ಎನ್​ಟಿಪಿಸಿ, ಕೊಟಕ್ ಬ್ಯಾಂಕ್ ಮತ್ತು ಹೆಚ್​ಸಿಎಲ್​ ಟೆಕ್ ಕಂಪೆನಿಗಳ ಆದಾಯದಲ್ಲೂ ಶೇ. 3 ರಷ್ಟು ಕುಸಿತ ಉಂಟಾಗಿದೆ. ಒಟ್ಟಾರೆ ಇಂದಿನ ಮುಂಬೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ 680 ಅಂಕಗಳಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ 200 ಅಂಕಗಳನ್ನು ಕಳೆದುಕೊಂಡಿದೆ. ಮತ್ತೊಂದೆಡೆ ಹೆಚ್​ಯುಎಲ್​, ಅಲ್ಟ್ರಾಟೆಕ್ ಸಿಮೆಂಟ್, ಮಾರುತಿ ಮತ್ತು ಏಷ್ಯನ್ ಪೇಂಟ್ಸ್ ಲಾಭದೊಂದಿಗೆ ಇಂದಿನ ವಹಿವಾಟನ್ನು ಮುಂದುವರೆಸಿದೆ.

ಇದನ್ನೂ ಓದಿ : Union Budget - ಪರ್ಸನಲ್ ಟ್ಯಾಕ್ಸ್ ದರದಲ್ಲಿ ಭಾರೀ ಇಳಿಕೆ; ಇಲ್ಲಿದೆ ವಿವಿಧ ಸ್ಲ್ಯಾಬ್​ಗಳ ತೆರಿಗೆ ವಿವರ

First published: February 1, 2020, 2:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories