Indian Army: ದಾಳಿ ನಡೆಸಿದ ಉಗ್ರನಿಗೇ ರಕ್ತದಾನ ಮಾಡಿದ ಭಾರತೀಯ ಸೈನಿಕರು!

ಆತ ನಮ್ಮ ರಕ್ತ ಹರಿಸಲು ಬಂದಿದ್ದರೂ ಅವರಿಗೆ ನಮ್ಮ ರಕ್ತವನ್ನು ದಾನ ಮಾಡಿರುವುದು ಭಾರತೀಯ ಸೇನೆಯ ಅಧಿಕಾರಿಗಳ ಹಿರಿಮೆ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೋರ್ವರು ಈ ಅಪರೂಪದ ಮಾನವೀಯ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

ತಬ್ರಾಕ್ ಹುಸೇನ್

ತಬ್ರಾಕ್ ಹುಸೇನ್

  • Share this:
    ಕಾಶ್ಮೀರ: ಭಾರತೀಯ ಸೈನಿಕರು ತಮ್ಮ ಮೇಲೆ ದಾಳಿ ಮಾಡಿದ ಪಾಕಿಸ್ತಾನಿ ಭಯೋತ್ಪಾದಕನಿಗೆ ರಕ್ತದಾನ ಮಾಡಿದ ಮಾನವೀಯ ಘಟನೆಯೊಂದು (Indian Soldiers Donated Blood) ವರದಿಯಾಗಿದೆ. ಭಾರತೀಯ ಸೇನೆಯು (Indian Army)  ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ನೌಶೇರಾದ ಝಾಂಗರ್ ಸೆಕ್ಟರ್‌ನ ಎಲ್‌ಒಸಿಯಲ್ಲಿ ಆಗಸ್ಟ್ 21 ರಂದು ಆತ್ಮಾಹುತಿ ದಾಳಿಕೋರ ತಬ್ರಾಕ್ ಹುಸೇನ್‌ ಎಂಬಾತನನ್ನು ಸೆರೆಹಿಡಿದಿದೆ.  ಮೂವರು ಭಯೋತ್ಪಾದಕರು ಭಾರತೀಯ ಗಡಿ ನಿಯಂತ್ರಣ ರೇಖೆಯ (LOC) ಬಳಿ ಒಳನುಸುಳಲು ಯತ್ನಿಸುತ್ತಿದ್ದರು. ಇದನ್ನು ಕಂಡು ದಾಳಿ ನಡೆಸಿದ ಭಾರತೀಯ ಸೇನೆಯ ಗುಂಡಿಗೆ ತಬ್ರಾಕ್ ಹುಸೇನ್‌ (Tabarak Hussain) ತೊಡೆ ಮತ್ತು ಭುಜಕ್ಕೆ ಗುಂಡು ತಗುಲಿದ್ದು, ತೀವ್ರವಾಗಿ ಗಾಯಗೊಂಡಿದ್ದ. ಇನ್ನಿತರ ಭಯೋತ್ಪಾದಕರು ಈ ದಾಳಿಯ ವೇಳೆ ಪರಾರಿಯಾಗಿದ್ದಾರೆ.

    ಆದರೆ ತಬ್ರಾಕ್ ಹುಸೇನ್​ಗೆ ತೀವ್ರ ಗಾಯವಾಗಿತ್ತು. ತುರ್ತು ಚಿಕಿತ್ಸೆಯ ಅವಶ್ಯಕತೆಯಿತ್ತು. ಚಿಕಿತ್ಸೆಗೆ ರಕ್ತದ ಅವಶ್ಯಕತೆಯಿತ್ತು. ಅಲ್ಲದೇ ತಬ್ರಾಕ್ ಹುಸೇನ್​ದು ಓ ಗುಂಪಿನ ರಕ್ತವಾಗಿತ್ತು. ಆಸ್ಪತ್ರೆಯಲ್ಲಿ ಆ ಕ್ಷಣಕ್ಕೆ ಲಭ್ಯವಿರಲಿಲ್ಲ. ಇದನ್ನರಿತ ಸೇನಾ ಸಿಬ್ಬಂದಿಯೇ ಅಗತ್ಯವಿದ್ದ 3 ಬಾಟಲಿಗಳಷ್ಟು ರಕ್ತವನ್ನು ದಾನ ಮಾಡಿ ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದಾರೆ.

    ಆತ ಭಯೋತ್ಪಾದಕ ಎಂದು ಭಾವಿಸಲೇ ಇಲ್ಲ
    ಆ ಪರಿಸ್ಥಿತಿಯಲ್ಲೂ ನಾವು ಆತ ಭಯೋತ್ಪಾದಕ ಎಂದು ಭಾವಿಸಿರಲಿಲ್ಲ. ಅವನ ಜೀವವನ್ನು ಉಳಿಸಲು ನಾವು ಅವನನ್ನು ಇತರ ರೋಗಿಗಳಂತೆ ನಡೆಸಿಕೊಂಡಿದ್ದೇವೆ. ಆತ ನಮ್ಮ ರಕ್ತ ಹರಿಸಲು ಬಂದಿದ್ದರೂ ಅವರಿಗೆ ನಮ್ಮ ರಕ್ತವನ್ನು ದಾನ ಮಾಡಿರುವುದು ಭಾರತೀಯ ಸೇನೆಯ ಅಧಿಕಾರಿಗಳ ಹಿರಿಮೆ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೋರ್ವರು ಈ ಅಪರೂಪದ ಮಾನವೀಯ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: Happy Farewell: ಅಜ್ಜಿಯ ಮೃತದೇಹದ ಜೊತೆ ಕುಟುಂಬಸ್ಥರ ನಗುವ ಫೋಟೋ!

    ತಬಾರಕ್ ಹುಸೇನ್ (32) ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಕೋಟ್ಲಿ ಜಿಲ್ಲೆಯ ಸಬ್ಜ್ಕೋಟ್ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.

    ಮೂರು ಬಾಟಲಿ ರಕ್ತ ದಾನ
    ತೊಡೆ ಮತ್ತು ಭುಜದಲ್ಲಿ ಎರಡು ಗುಂಡಿನ ಗಾಯಗಳಿಂದಾಗಿ ಆತ್ಮಾಹುತಿ ದಾಳಿ ಮಾಡಲು ಬಂದಿದ್ದ ತಬ್ರಾಕ್ ಹುಸೇನ್​ಗೆ ರಕ್ತಸ್ರಾವವಾಗಿತ್ತು. ಗಂಭೀರ ಗಾಯವಾಗಿತ್ತು. ನಮ್ಮ ತಂಡದ ಸದಸ್ಯರು ಅವರಿಗೆ ಮೂರು ಬಾಟಲಿ ರಕ್ತ ನೀಡಿ, ಶಸ್ತ್ರಚಿಕಿತ್ಸೆ ನಡೆಸಿ ಐಸಿಯುನಲ್ಲಿ ದಾಖಲಿಸಿದ್ದಾರೆ ಎಂದು ರಾಜೌರಿಯ ಸೇನಾ ಆಸ್ಪತ್ರೆಯ ಕಮಾಂಡೆಂಟ್ ಬ್ರಿಗೇಡಿಯರ್ ರಾಜೀವ್ ನಾಯರ್ ತಿಳಿಸಿದ್ದಾರೆ.

    ಈ ಮುನ್ನವೂ ಸಿಕ್ಕಿಬಿದ್ದಿದ್ದ ಉಗ್ರ
    ಸೇನೆಯ ಪ್ರಕಾರ ಹುಸೇನ್ ಮತ್ತು ಆತನ ಸಹೋದರ ಹರೂನ್ ಅಲಿ ಏಪ್ರಿಲ್ 2016 ರಲ್ಲಿ ಅದೇ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣಾ ರೇಖೆಯ ಬಳಿ ಒಳನುಸುಳುವಾಗ ಸಿಕ್ಕಿಬಿದ್ದಿದ್ದರು. ಆದರೆ ನವೆಂಬರ್ 2017 ರಲ್ಲಿ ಮಾನವೀಯ ಆಧಾರದ ಮೇಲೆ ಅವರನ್ನು ವಾಪಸ್ ಕಳುಹಿಸಲಾಯಿತು.

    30 ಸಾವಿರ ಕೊಟ್ಟು ದಾಳಿ ಮಾಡಲು ಕಳಿಸಿದ ಪಾಕ್
    ಸದ್ಯ ತಬ್ರಾಕ್ ಹುಸೇನ್ ಆರೋಗ್ಯ ಚಿಕಿತ್ಸೆಯ ನಂತರ ಸ್ಥಿರವಾಗಿದ್ದು ಕರ್ನಲ್ ಯೂನಸ್ ಚೌಧರಿ ಎಂಬ ಪಾಕಿಸ್ತಾನಿ ಗುಪ್ತಚರ ಅಧಿಕಾರಿಯೊಬ್ಬರು ನನ್ನನ್ನು ಕಳುಹಿಸಿದ್ದಾರೆ ಎಂದು ಹುಸೇನ್ ವಿಚಾರಣೆಗೆ ತಿಳಿಸಿದ್ದಾನೆ. ಭಾರತೀಯ ಚೆಕ್​ಪೋಸ್ಟ್‌ನ ಮೇಲೆ ದಾಳಿ ಮಾಡಲು 30,000 ಪಾಕಿಸ್ತಾನಿ ರೂಪಾಯಿಗಳನ್ನು ನೀಡಿದ್ದರು ಎಂದು ಹುಸೇನ್ ಬಾಯ್ಬಿಟ್ಟಿದ್ದಾನೆ.

    ಇದನ್ನೂ ಓದಿ: Russia-Ukraine War: ಸ್ವಾತಂತ್ರ್ಯ ದಿನದಂದು ರಷ್ಯಾದ ಕ್ಷಿಪಣಿ ದಾಳಿ, 22 ಮಂದಿ ಬಲಿ: ಗುಡುಗಿದ ಝೆಲೆನ್ಸ್ಕಿ

    ಹುಸೇನ್ ಸುಮಾರು ಎರಡು ವರ್ಷಗಳಿಂದ ಪಾಕಿಸ್ತಾನಿ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಸೇನೆಯ ಹೇಳಿಕೆ ತಿಳಿಸಿದೆ. ಎಲ್‌ಒಸಿಯಾದ್ಯಂತ ಲಷ್ಕರ್-ಎ-ತೊಯ್ಬಾ ತರಬೇತಿ ಶಿಬಿರದಲ್ಲಿಈತ ಆರು ವಾರಗಳ ತರಬೇತಿ ಪಡೆದಿದ್ದ ಎಂದು ಸಹ ಭಾರತೀಯ ಸೇನೆ ತಿಳಿಸಿದೆ.
    Published by:guruganesh bhat
    First published: