Kuldeep Yadav: 32 ವರ್ಷ ಪಾಕಿಸ್ತಾನ ಜೈಲಿನಲ್ಲಿದ್ರೂ ಸಿಗಲಿಲ್ಲ ನೆರವು! ಕರಾಳ ನೆನಪು ಬಿಚ್ಚಿಟ್ಟ ಭಾರತೀಯ

ಕುಲದೀಪ್‌ ಯಾದವ್‌ ಅವರು ಪಾಕಿಸ್ತಾನಕ್ಕೆ ಗೂಢಚಾರಿಕೆ ಕೆಲಸ ಮಾಡಲು ಹೋಗಿ ಅಲ್ಲಿನ ಪೊಲೀಸರ ಕೈಗೆ ಸಿಕ್ಕಿಬಿದ್ದು 32 ವರ್ಷ ಪಾಕಿಸ್ತಾನದ ಜೈಲಿನಲ್ಲಿದ್ದರು. ಈಗ ತವರು ದೇಶ ಭಾರತಕ್ಕೆ ಮರಳಿ ಬಂದಿರುವ ಕುಲದೀಪ್‌ ಅವರು ಜೈಲಿನಿಂದ ಬಿಡುಗಡೆ ಆಗಿರುವುದಕ್ಕೆ ಯಾವುದೇ ರೀತಿಯಲ್ಲಿ ಸಂತಸವನ್ನು ವ್ಯಕ್ತಪಡಿಸಿಲ್ಲ!

ಕುಲದೀಪ್‌ ಯಾದವ್

ಕುಲದೀಪ್‌ ಯಾದವ್

  • Share this:
ಅಹಮದಾಬಾದ್‌: ಸತತವಾಗಿ 32 ವರ್ಷಗಳ ಕಾಲ ಪಾಕಿಸ್ತಾನದ (Pakistan) ಜೈಲಿನಲ್ಲಿದ್ದು, ಈಗ ತವರು ದೇಶ ಭಾರತಕ್ಕೆ (India) ಮರಳಿ ಬಂದಿರುವ ಕುಲದೀಪ್‌ ಯಾದವ್‌ ಅವರು ಜೈಲಿನಿಂದ ಬಿಡುಗಡೆ ಆಗಿರುವುದಕ್ಕೆ ಯಾವುದೇ ರೀತಿಯಲ್ಲಿ ಸಂತಸವನ್ನು ವ್ಯಕ್ತಪಡಿಸಿಲ್ಲ.  ನಾನು 32 ವರ್ಷಗಳ ಕಾಲ ಜೈಲಿನಲ್ಲಿದ್ದು ಈಗ ವಾಪಸ್ಸು ಬಂದಿದ್ದರೂ ಸಹ ಈ ನಂತರದ ಜೀವನ ನಡೆಸಲು ನನಗೆ ಭಾರತ ಸರ್ಕಾರದಿಂದ (Indian Government) 32 ರೂ. ಗಳ ಜೀವನ ಸಹಾಯವೂ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ 59 ವರ್ಷ ವಯಸ್ಸಿನವರಾಗಿರುವ ಕುಲದೀಪ್‌ ಯಾದವ್‌ ಅವರು, ಹೃದಯ ಸಂಬಂಧಿ ಕಾಯಿಲೆಗಳು, ಹೆಪಟೈಟಿಸ್‌ ಬಿ, ನರ ದೌರ್ಬಲ್ಯ ಹೀಗೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಭಾರತ ಸರ್ಕಾರದಿಂದ ಹಣದ ನೆರವು ಕೇಳಿದ ಕುಲದೀಪ್‌
ಇದರ ಕುರಿತು ಅವರ ಮಾತುಗಳಲ್ಲೇ ಹೇಳುವುದಾದರೆ, “32 ವರ್ಷಗಳ ಕಾಲ ಜೈಲಿನಲ್ಲಿದ್ದರಿಂದ , ನನಗೆ ಅನೇಕ ಆರೋಗ್ಯ ಸಮಸ್ಯೆಗಳು ಇರುವುದು ಸತ್ಯ. ಆದರೆ ನನಗೆ ಈಗ ದುಡಿಯಲು ಕೂಡ ದೇಹದಲ್ಲಿ ಶಕ್ತಿಯಿಲ್ಲ. ಆದ್ದರಿಂದ ಭಾರತ ಸರ್ಕಾರವು, ನನ್ನ ಕೊನೆಯ ದಿನಗಳನ್ನು ಉತ್ತಮವಾಗಿ ಬದುಕಲು ಹಣದ ಅವಶ್ಯಕತೆ ಇರುವುದರಿಂದ, ನನಗೆ ಹಣದ ಬೆಂಬಲ ನೀಡಲೇಬೇಕು” ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ ಕುಲದೀಪ್‌ ಯಾದವ್
ಅವರು ತಮ್ಮ ಮಾತು ಮುಂದುವರಿಸುತ್ತಾ, “ಭಾರತ ದೇಶಕ್ಕೆ ನಾನು ನನ್ನ ಜೀವ ಮತ್ತು ಜೀವನವನ್ನೇ ತ್ಯಾಗ ಮಾಡಿದ್ದೇನೆ. ಮಾರ್ಚ್‌ 15, 1991 ರಂದು ನಾನು ಕೇವಲ 27 ವರ್ಷ ವಯಸ್ಸಿನಲ್ಲಿದ್ದಾಗ ಪಾಕಿಸ್ತಾನಕ್ಕೆ ಗೂಢಚಾರಿಕೆ ಕೆಲಸ ಮಾಡಲು ಹೋಗಿ ನಾನು ಅಲ್ಲಿನ ಪೊಲೀಸರ ಕೈಗೆ ಸಿಕ್ಕಿಬಿದ್ದೆ. ಆಗಿನಿಂದ 32 ವರ್ಷಗಳ ಕಾಲ ಸತತವಾಗಿ ನಾನು ಜೈಲಿನಲ್ಲಿದ್ದೆ.

ಇದನ್ನೂ ಓದಿ: Cyrus Mistry: ಸಾವಿನ ಕುರಿತು ಮತ್ತಷ್ಟು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಪೊಲೀಸರು

ನನ್ನ ಜೀವನದ ಅರ್ಧ ಭಾಗವನ್ನು ಜೈಲಿನಲ್ಲಿ ಕಳೆದಿರುವುದು ನನಗೆ ನಿಜಕ್ಕೂ ಇರುವ ಬೇಸರದ ಸಂಗತಿ. ಇದರ ಜೊತೆಗೆ ನನಗೆ ಯಾವಾಗಲೂ ತುಂಬಾ ಬೇಜಾರಿರುವ ಸಂಗತಿ ಎಂದರೆ ನಾನು ಜೈಲಿನಲ್ಲಿದ್ದಷ್ಟು ಕಾಲ ಭಾರತ ಸರ್ಕಾರದಿಂದ ಯಾರೂ ಸಹ ನನ್ನ ನೋಡಲು ಮತ್ತು ಮಾತನಾಡಿಸಲು ಬರಲಿಲ್ಲ. ಇದು ನನಗೆ ಇರುವ ಅತ್ಯಂತ ಬೇಸರದ ಸಂಗತಿ ಆಗಿದೆ” ಎಂದು ಕುಲದೀಪ್‌ ಯಾದವ್‌ ಅವರು ಬೇಸರವನ್ನು ವ್ಯಕ್ತಪಡಿಸಿದರು.

ಆಗಸ್ಟ್ 22 ರಂದು ಬಿಡುಗಡೆ
“ಪಾಕಿಸ್ತಾನದ ಭದ್ರತಾ ತಂಡವು ನನ್ನನ್ನು ಜೂನ್‌ 22, 1994 ಪಂಜಾಬ್‌ನ ಒಕರಾ ಜಿಲ್ಲೆಯ ಒಂದು ಪ್ರದೇಶದಲ್ಲಿ ಬಂಧಿಸಿತು. ನನ್ನ ಜೀವನಕ್ಕೆ ಕೊನೆಯ ತಿರುವನ್ನು ಆ ಪೊಲೀಸರು ನೀಡಿದ್ದರು. ಆಗಿನಿಂದ ಈಗಿನವರೆಗೂ ಜೈಲೆ ನನಗೆ ಎಲ್ಲ ಆಗಿತ್ತು. ಕಳೆದ ತಿಂಗಳು ಆಗಸ್ಟ್ 22 ರಂದು ನನ್ನನ್ನು ದೇಶದ ಗಡಿಯಾದ ವಾಘಾ ಮೂಲಕ ಭಾರತಕ್ಕೆ ಕಳುಹಿಸಲಾಯಿತು” ಎಂದು ಯಾದವ್‌ ಹೇಳಿದರು.



ಆರ್ಮಿ ವ್ಯಕ್ತಿಗೆ ನೀಡುವ ಎಲ್ಲ ಸವಲತ್ತುಗಳನ್ನು ನೀಡಬೇಕು
“ನನಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡು ಕೂಡ ವಸತಿ ಮತ್ತು ಹಣಕಾಸಿನ ನೆರವನ್ನು ನೀಡಲೇಬೇಕು. ಈಗ ನಾನು ನನ್ನ ವಸತಿ ಮತ್ತು ಹಣಕಾಸುಗಳ ಕಾರ್ಯಕ್ಕೆ ನನ್ನ ಸಹೋದರ ದಿಲೀಪ್‌ ಮತ್ತು ಸಹೋದರಿ ರೇಖಾ ಅವರನ್ನು ಅವಲಂಬಿಸಿದ್ದೇನೆ.  ಅವರಿಗೂ ಕಷ್ಟವಾಗುತ್ತಿದೆ. ಕೂಡಲೇ ಭಾರತ ಸರ್ಕಾರ ನನಗೆ ವಸತಿ ನಿರ್ಮಾಣ ಮಾಡಿಕೊಡಬೇಕು. ಇದರ ಜೊತೆಗೆ ನನಗೆ ಪಿಂಚಣಿ ಮತ್ತು ಒಬ್ಬ‌ ಆರ್ಮಿ ವ್ಯಕ್ತಿಗೆ ನೀಡುವ ಎಲ್ಲ ಸವಲತ್ತುಗಳನ್ನು ನೀಡಬೇಕು” ಎಂದು ಯಾದವ್‌ ತಮ್ಮ ಕಷ್ಟವನ್ನು ಮಾಧ್ಯಮದ ಮೂಲಕ ತಿಳಿಸಿದ್ಧಾರೆ.

ಇದನ್ನೂ ಓದಿ:  Video: ಗೋಡೆ ಕೊರೆದು ಮದ್ಯ ಕದ್ದ ಕಳ್ಳರು! ರುಚಿ ನೋಡಿ ಸಿಕ್ಕಿಬಿದ್ದರು!

ಇದರ ಕುರಿತು ಕುಲದೀಪ್‌ ಯಾದವ್‌ ಅವರ ಸಹೋದರ ದಿಲೀಪ್‌ ಮತ್ತು ಸಹೋದರಿ ರೇಖಾ ಅವರು “1991 ರಲ್ಲಿ ಯಾದವ್‌ ನಾಪತ್ತೆಯಾದಾಗ, ನಮ್ಮ ತಂದೆ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಇದರ ಕುರಿತು ತಿಳಿಸಿದ್ದರು. ಆಗ ಅವರು ಇದರ ಕುರಿತು ಕ್ರಮ ಜರುಗಿಸಿದ್ದರು, ಆದರೆ ಯಾವ ಪ್ರಯೋಜನವೂ ಆಗಲಿಲ್ಲ” ಎಂದು ಹೇಳಿದರು.
Published by:Ashwini Prabhu
First published: