5 ವರ್ಷಗಳ ಅವಧಿಗೆ ಸೈನಿಕರ ನೇಮಕ: ಏನಿದು ಪ್ರಸ್ತಾವಿತ Recruitment Model..?

2020 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವು ಹೆಚ್ಚಾದ ನಂತರ ಸೇನೆಯಲ್ಲಿ ಸೈನಿಕರ ನೇಮಕಾತಿ ಪ್ರಕ್ರಿಯೆಯನ್ನು ಎರಡು ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ ಸಾಂಕ್ರಾಮಿಕದ ಕಾರಣ ಕಳೆದ 2 ವರ್ಷಗಳಿಂದ ಸೈನಿಕರ (Soldiers) ನೇಮಕಾತಿ ಸ್ಥಗಿತವಾಗಿತ್ತು. ಆದರೆ, ದೇಶದ ರಕ್ಷಣೆಗೆ ಹೆಚ್ಚು ಹೆಚ್ಚು ಸೈನಿಕರ ನೇಮಕಾತಿ ಆಗುತ್ತಲೇ ಇರಬೇಕು. ಆದರೂ, ನೇಮಕಾತಿ (Recruitment) ಹೆಚ್ಚಾದಂತೆ ರಕ್ಷಣಾ ಪಿಂಚಣಿ ಬಿಲ್‌ಗಳು ಸಹ ಹೆಚ್ಚುತ್ತಿದೆ ಎಂಬುದು ಕೇಂದ್ರ ಸರ್ಕಾರದ ಚಿಂತೆಯಾಗಿದೆ. ಈ ಹಿನ್ನೆಲೆ, ಇದನ್ನು ನಿಭಾಯಿಸಲು ಸೈನ್ಯದಲ್ಲಿ ಅಧಿಕಾರಿಗಳ ಕೊರತೆಯನ್ನು ಕಡಿಮೆ ಮಾಡುವ ಆರಂಭಿಕ ಉದ್ದೇಶದೊಂದಿಗೆ 2020 ರಲ್ಲಿ ಮೊದಲು ಪ್ರಸ್ತಾಪಿಸಲಾದ ಅಲ್ಪಾವಧಿಯ ಗುತ್ತಿಗೆ ಆಧಾರದ ಮೇಲೆ ಸೈನಿಕರನ್ನು ಮಾತ್ರ ನೇಮಿಸಿಕೊಳ್ಳುವ ಮಾದರಿಯನ್ನು ಮಾರ್ಪಾಡು ಮಾಡುವ ಸಾಧ್ಯತೆಯಿದೆ.

ಕಳೆದೆರಡು ವರ್ಷದಿಂದ ಸ್ಥಗಿತವಾಗಿದ್ದ ನೇಮಕಾತಿ

2020 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವು ಹೆಚ್ಚಾದ ನಂತರ ಸೇನೆಯಲ್ಲಿ ಸೈನಿಕರ ನೇಮಕಾತಿ ಪ್ರಕ್ರಿಯೆಯನ್ನು ಎರಡು ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಕ್ಷಣಾ ಪಡೆಗಳಿಗೆ ಸೇರಲು ಬಯಸಿದ್ದ ಆಕಾಂಕ್ಷಿಗಳು ನೇಮಕಾತಿ ರ‍್ಯಾಲಿಗಳನ್ನು ಸ್ಥಗಿತಗೊಳಿಸಿದ್ದಕ್ಕೆ ಮಂಗಳವಾರ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಈ ಹಿನ್ನೆಲೆ ಕೇಂದ್ರ ಸರ್ಕಾರ ಹೊಸ ರೀತಿಯ ನೇಮಕಾತಿ ಮಾದರಿ ಮಾಡಲಿದೆ ಎಂದು ಹೇಳಲಾಗುತ್ತಿದೆ. ಟೂರ್ ಆಫ್ ಡ್ಯೂಟಿ (ToD) ಎಂಬ ಪ್ರಸ್ತಾವಿತ ನೇಮಕಾತಿ ಮಾದರಿಯು ಅಂತಿಮ ಹಂತದಲ್ಲಿದೆ ಮತ್ತು ಕಳೆದ ಎರಡು ವಾರಗಳಲ್ಲಿ ಈ ಕುರಿತು ಹಲವಾರು ಸಭೆಗಳು ಈಗಾಗಲೇ ನಡೆದಿದೆ ಎಂದು ಸರ್ಕಾರದ ಉನ್ನತ ಮೂಲಗಳು News18 ಗೆ ತಿಳಿಸಿವೆ.

ಟೂರ್ ಆಫ್ ಡ್ಯೂಟಿ ಮಾದರಿ ಅಡಿ ನೇಮಕಾತಿ

ಮೂಲಗಳ ಪ್ರಕಾರ, ಯೋಜನೆಯ ಪ್ರಸ್ತುತ ಕರಡು ಭಾರತೀಯ ಸೇನೆಯಲ್ಲಿರುವ ಎಲ್ಲಾ ಸೈನಿಕರನ್ನು ಟೂರ್ ಆಫ್ ಡ್ಯೂಟಿ ಮಾದರಿಯ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳುತ್ತದೆ. ಈ ಪೈಕಿ ನೇಮಕವಾದ ಸುಮಾರು 25% ಜನರು ಮೂರು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ ಮತ್ತು 25% ರಷ್ಟು ಸೈನಿಕರು ಐದು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ.

ಅಲ್ಲದೆ, ಉಳಿದ 50% ಸೈನಿಕರು ತಮ್ಮ ನಿವೃತ್ತಿ ವಯಸ್ಸನ್ನು ತಲುಪುವವರೆಗೆ ಪೂರ್ಣ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಅನೇಕ ಉಳಿತಾಯದ ಗಮನ

ಈ ನೇಮಕಾತಿ ಪ್ರಕ್ರಿಯೆಯಿಂದ ರಕ್ಷಣಾ ಪಿಂಚಣಿ ಬಿಲ್‌ಗಳ ಗಮನಾರ್ಹ ಭಾಗವನ್ನು ಉಳಿಸಬಹುದು ಎಂದು ಆರಂಭಿಕ ಲೆಕ್ಕಾಚಾರಗಳು ತೋರಿಸುತ್ತವೆ ಎಂದು ಸರ್ಕಾರದ ಉನ್ನತ ಮೂಲವು ತಿಳಿಸಿದೆ.

ಮೂರು ಮತ್ತು ಐದು ವರ್ಷಗಳ ಕೊನೆಯಲ್ಲಿ ನಿವೃತ್ತರಾಗುವ 50% ಸೈನಿಕರನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗುವುದು ಮತ್ತು ನಿರ್ದಿಷ್ಟ ಅವಧಿಗೆ ಸಶಸ್ತ್ರ ಪಡೆಗಳ ಅನುಭವಿಗಳಿಗೆ ಅನ್ವಯವಾಗುವ ಕೆಲವು ವೈದ್ಯಕೀಯ ಪ್ರಯೋಜನಗಳನ್ನು ನೀಡಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.

ಪ್ರಸ್ತಾವಿತ ನೇಮಕಾತಿಗೆ ಅನ್ವಯಿಸುವುದಿಲ್ಲ

ಈ ಪ್ರಸ್ತಾವಿತ ನೇಮಕಾತಿ ಮಾದರಿಯು ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. ಈ ಮಾದರಿ ಅಡಿಯಲ್ಲಿ ಸೈನಿಕರನ್ನು ಮಾತ್ರ ನೇಮಿಸಿಕೊಳ್ಳಬಹುದು ಎಂದು ಮೇಲೆ ಉಲ್ಲೇಖಿಸಿದ ಮೂಲವು ಹೇಳಿದೆ.

ಈ ಮಧ್ಯೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಿದ ಮಾಹಿತಿಯ ಪ್ರಕಾರ ಸೇನೆಯಲ್ಲಿ 7,476 ಅಧಿಕಾರಿಗಳ ಕೊರತೆಯಿದೆ ಎಂಬುದು ಗಮನಿಸಬೇಕಾದ ಅಂಶ.

ಅನುಮೋದನೆ ನಿರೀಕ್ಷೆ

ಆದರೆ, ಈ ಪ್ರಸ್ತಾವನೆ ಯಾವಾಗ ಆರಂಭವಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ, ಸೇನೆಯು ಈ ಪ್ರಸ್ತಾಪವನ್ನು ರಕ್ಷಣಾ ಸಚಿವಾಲಯಕ್ಕೆ ಕಳಿಸಿದ್ದು, ಅದರ ಅನುಮೋದನೆಗಾಗಿ ಕಾಯುತ್ತಿದೆ.

ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನೇಮಕಾತಿ ರ‍್ಯಾಲಿಗಳನ್ನು ನಿಲ್ಲಿಸಿದ ನಂತರ ಕಳೆದ ಎರಡು ವರ್ಷಗಳಲ್ಲಿ 1.1 ಲಕ್ಷ ಸೈನಿಕರ ಕೊರತೆ ಕಂಡುಬಂದಿದೆ, ಪ್ರತಿ ತಿಂಗಳೂ ಈ ಕೊರತೆ 5,000 ದಷ್ಟು ಹೆಚ್ಚಾಗುತ್ತಿದೆ ಎಂಬ ಮಾಹಿತಿಯನ್ನು ನ್ಯೂಸ್‌ 18 ಇತ್ತೀಚೆಗೆ ಪಡೆದುಕೊಂಡಿದೆ.

'ಪಿಂಚಣಿ ಬಿಲ್‌ಗಳನ್ನು ಕಡಿಮೆ ಮಾಡಲು ತರಬೇತಿ ಇನ್‌ಫ್ರಾ ಅಗತ್ಯತೆಗಳು'

ಭಾರತೀಯ ಸೇನೆಯ ಅಸ್ತಿತ್ವದಲ್ಲಿರುವ ಮೂಲಸೌಕರ್ಯದ ಪ್ರಕಾರ ಒಂದೇ ಸಮಯದಲ್ಲಿ ಸುಮಾರು 40,000 ನೇಮಕಾತಿಗಳಿಗೆ ತರಬೇತಿ ನೀಡಬಹುದು. ಈ ಹಿನ್ನೆಲೆ ಪ್ರತಿ ವರ್ಷ ನಿವೃತ್ತಿ ಹೊಂದುವ 60,000 ಸೈನಿಕರು ರಚಿಸುವ ಖಾಲಿ ಹುದ್ದೆಗಳನ್ನು ಪೂರೈಸಲು ಹಾಗೂ ಕೆಲವೊಮ್ಮೆ ತರಬೇತಿ ನೀಡುವ ಸೈನಿಕರಿಗೆ ದಿನನಿತ್ಯದ ಹೆಚ್ಚುವರಿ ಅವಶ್ಯಕತೆಗಳನ್ನು ಪೂರೈಸಲು ಇದು ಸಮರ್ಪಕವಾಗಿದೆ ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ: ಕುತೂಹಲ ಮೂಡಿಸಿದ Sharad Pawar​- PM Modi ಭೇಟಿ

ಸಾಮಾನ್ಯ ಕರ್ತವ್ಯದ ಸೈನಿಕರಿಗೆ ತರಬೇತಿ ಅವಧಿ 34 ವಾರಗಳಾಗಿದ್ದರೆ, ಟ್ರೇಡ್ಸ್‌ಮೆನ್‌ಗಳಿಗೆ 19 ವಾರಗಳು ಎಂದು ತಿಳಿದುಬಂದಿದೆ.

ಇನ್ನು, ನೇಮಕಾತಿಗಳನ್ನು ತಕ್ಷಣವೇ ಹೆಚ್ಚಿಸಿದರೂ, ಈ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು 6 - 7 ವರ್ಷಗಳು ಬೇಕಾಗುತ್ತದೆ ಎಂದೂ ಮೂಲಗಳು ತಿಳಿಸಿದೆ.

ಸೈನಿಕರ ಕೊರತೆ ತುಂಬಲು ಈ ಕಾರ್ಯ

ಒಂದು ವೇಳೆ ಟಿಒಡಿಯನ್ನು ಜಾರಿಗೊಳಿಸಿದರೆ ಮತ್ತು ಹೊಸ ನೇಮಕಾತಿಗಳಿಗೆ ಮೂಲಭೂತ ಮಿಲಿಟರಿ ತರಬೇತಿಯನ್ನು 19 ವಾರಗಳಿಗೆ ಇಳಿಸಿದರೆ, ಕಳೆದ 2 ವರ್ಷಗಳಲ್ಲಿ ಉಂಟಾಗಿರುವ ಸೈನಿಕರ ಕೊರತೆಯನ್ನು ತುಂಬಲು ಸುಮಾರು ನಾಲ್ಕು ವರ್ಷಗಳು ಬೇಕಾಗುತ್ತವೆ ಎಂದು ಮತ್ತೊಂದು ಮೂಲವು ಹೇಳಿದೆ.

ಇದನ್ನು ಓದಿ: ಮುಂಬಯಿನಲ್ಲಿ ಪತ್ತೆಯಾಯ್ತು Covid ಹೊಸ ತಳಿ

ಆದರೆ ಅದೇ ಸಮಯದಲ್ಲಿ, ಮೂರು ಮತ್ತು ಐದು ವರ್ಷಗಳ ಕೊನೆಯಲ್ಲಿ ToD ಮೂಲಕ ನಿವೃತ್ತರಾಗುವ ಸೈನಿಕರು ಸೃಷ್ಟಿಸುವ ಖಾಲಿ ಹುದ್ದೆಗಳು ಕೂಡ ನೇಮಕಾತಿಗಳಿಗೆ ಸೇರ್ಪಡೆಗೊಳ್ಳಲು ಪ್ರಾರಂಭಿಸುತ್ತವೆ ಎನ್ನುವುದೂ ಗಮನಿಸಬೇಕಾದ ಅಂಶ.

"ಸೇನೆಯು ಹೆಚ್ಚುವರಿ ನೇಮಕಾತಿಗಳಿಗೆ ತರಬೇತಿ ನೀಡಲು ಮೂಲಸೌಕರ್ಯವನ್ನು ಹೆಚ್ಚಿಸಲು ಯೋಜನೆಯ ಅನುಷ್ಠಾನದ ದಿನಾಂಕದಿಂದ 3 ವರ್ಷಗಳ ಸಮಯವನ್ನು ಹೊಂದಿರುತ್ತದೆ. ToD ಅಡಿಯ ನೇಮಕಾತಿಯಲ್ಲಿ ಸಂಚಿತವಾಗಿ ಹೆಚ್ಚುವ ಖಾಲಿ ಹುದ್ದೆಗಳನ್ನು ತುಂಬುವ ಅಗತ್ಯತೆಗೆ ಮೂಲಸೌಕರ್ಯ ಹೆಚ್ಚಳದ ಅಗತ್ಯತೆ ಇದೆ" ಎಂದೂ ಎರಡನೇ ಮೂಲವು ತಿಳಿಸಿದೆ.
Published by:Seema R
First published: