ಹೊಸದಿಲ್ಲಿ: ಭಾರತೀಯ ರೈಲ್ವೆಯಲ್ಲಿ (Indian Railway) ಕಳ್ಳರ ಕಾಟ (Theft Case) ಇಂದು ನಿನ್ನೆಯ ಸಮಸ್ಯೆ ಅಲ್ಲ, ಕಳೆದ ಹಲವು ದಶಕಗಳಿಂದ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು (Railway Passengers) ಗುರಿಯಾಗಿಸಿಕೊಂಡು ದರೋಡೆ (Robbery Mafia) ಮಾಡುವ ಮಾಫಿಯಾ ಭಾರತದ ಉದ್ದಗಲಕ್ಕೂ ಇದೆ. ಹೀಗಾಗಿಯೇ ರಾತ್ರಿ ವೇಳೆ ಒಬ್ಬೊಬ್ಬರೇ ರೈಲಿನಲ್ಲಿ ಸಂಚರಿಸಲು (Train Journey) ಇಂದಿಗೂ ಭಯ ಪಡುವವರಿದ್ದಾರೆ. ಸರಕು ಸಾಗಾಣೆಯ ರೈಲಿನಲ್ಲೂ ಕೂಡ ಕಳ್ಳತನ ಕೃತ್ಯಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.
ಆದ್ರೆ ಇನ್ಮುಂದೆ ರೈಲಿನಲ್ಲಿ ನಮ್ಮ ಅತ್ಯಮೂಲ್ಯ ವಸ್ತುಗಳು, ಪಾರ್ಸೆಲ್ ಸೊತ್ತುಗಳು, ಸರಕುಗಳ ಕಳ್ಳತನ ಆಗುತ್ತದೆ ಎನ್ನುವ ಭಯವಿಲ್ಲ. ಯಾಕೆಂದರೆ ಒಟಿಪಿ ಆಧಾರಿತ ಡಿಜಿಟಲ್ ಲಾಕ್ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಸದ್ಯದಲ್ಲೇ ಪರಿಚಯಿಸಲಿದೆ. ಅಂದ್ರೆ ಈ ಒಟಿಪಿ ಆಧಾರಿತ ಡಿಜಿಟಲ್ ಲಾಕ್‌ನಿಂದ ನಿಮ್ಮ ಸರಕುಗಳು ಮತ್ತು ಪಾರ್ಸೆಲ್‌ಗಳನ್ನು ಈ ಹಿಂದಿಗಿಂತಲೂ ಉತ್ತಮ ರೀತಿಯಲ್ಲಿ ರಕ್ಷಿಸಲಾಗುತ್ತದೆ. ಜೊತೆಗೆ ರೈಲ್ವೆಯಲ್ಲಿ ವಸ್ತುಗಳ ಸಾಗಣೆಯ ಸಮಯದಲ್ಲಿ ಕಳ್ಳರ ಕಾಟದಿಂದಲೂ ರಕ್ಷಣೆ ಸಿಗುತ್ತದೆ.
ಇದನ್ನೂ ಓದಿ: Emergency Buttons: ರೈಲುಗಳಲ್ಲಿ ಮಹಿಳೆಯರಿಗಾಗಿ ಎಮರ್ಜೆನ್ಸಿ ಬಟನ್, ಒತ್ತಿದ ಮರುಕ್ಷಣವೇ ಸಹಾಯಕ್ಕೆ ಬರ್ತಾರೆ ಸಿಬ್ಬಂದಿ!
ಒಟಿಪಿ (OTP) ಆಧರಿಸಿ ಭದ್ರತೆ
ಅಂದ ಹಾಗೆ ಸಾಮಾನ್ಯವಾಗಿ ಈ ವ್ಯವಸ್ಥೆಯನ್ನು ಟ್ರಕ್‌ಗಳಲ್ಲಿ ಬಳಸಲಾಗುತ್ತದೆ, ಅಲ್ಲಿ ಸ್ಮಾರ್ಟ್ ಲಾಕ್ ಅನ್ನು ಒದಗಿಸಲಾಗುತ್ತದೆ. ಇದಕ್ಕೆ ಜಿಪಿಎಸ್ ಸಿಸ್ಟಮ್ ಅಳವಡಿಸಲಾಗಿದೆ. ಅದರ ಸಹಾಯದಿಂದ ವಾಹನ ಎಲ್ಲಿ ಸಂಚರಿಸುತ್ತಿದೆ ಎಂಬುವುದನ್ನು ತಿಳಿಯಲಾಗುತ್ತದೆ ಮತ್ತು ಇದಿರಿಂದ ಸರಕುಗಳ ಕಳ್ಳತನ ನಡೆಯುವ ಸಾಧ್ಯತೆ ಕಡಿಮೆ ಇರುತ್ತದೆ. ಹೀಗಾಗಿ ಈ ವ್ಯವಸ್ಥೆ ಸಂಪೂರ್ಣವಾಗಿ ಸುರಕ್ಷಿತ ಒಟಿಪಿಯನ್ನು ಆಧರಿಸಿರುವುದರಿಂದ ಇದನ್ನು ರೈಲು ವಿಭಾಗದ ಬಾಗಿಲುಗಳನ್ನು ತೆರೆಯಲು ಮತ್ತು ಮುಚ್ಚಲು ಬಳಸಿದರೆ ಅಕ್ರಮಗಳನ್ನು ತಡೆಯಬಹುದು ಎಂಧು ಅಧಿಕಾರಿಗಳು ಹೇಳಿದ್ದಾರೆ.
ರೈಲ್ವೆ ಸಿಬ್ಬಂದಿಗೆ ಮೊಬೈಲ್ ಸಂದೇಶ ರವಾನೆ
ಇನ್ನು ಈ ಡಿಜಿಟಲ್ ಲಾಕ್‌ನಿಂದ (Digital Lock) ಸರಕು ಸಾಗಾಣೆ ರೈಲುಗಳ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಇದರಿಂದ ಕಳ್ಳತನವನ್ನು ತಡೆಯಲು ಸಾಧ್ಯವಿದ್ದು, ಸರಕು ಆದಾಯವನ್ನು ಹೆಚ್ಚಿಸುತ್ತದೆ. ಅಲ್ಲದೇ, ಪ್ರಯಾಣದ ಸಮಯದಲ್ಲಿ ಸರಕುಗಳಿಗೆ ಪ್ರವೇಶ ಸಾಧ್ಯವಾಗುವುದಿಲ್ಲ. ಸರಕುಗಳನ್ನು ಇಡುವ ಕಂಪಾರ್ಟ್‌ಮೆಂಟ್ ಅನ್ನು OTP ಮೂಲಕ ತೆರೆಯಲಾಗುತ್ತದೆ ಜೊತೆಗೆ ಓಟಿಪಿ ಮೂಲಕವೇ ಮುಚ್ಚಲಾಗುತ್ತದೆ.
ಇದನ್ನೂ ಓದಿ: Emergency Buttons: ರೈಲುಗಳಲ್ಲಿ ಮಹಿಳೆಯರಿಗಾಗಿ ಎಮರ್ಜೆನ್ಸಿ ಬಟನ್, ಒತ್ತಿದ ಮರುಕ್ಷಣವೇ ಸಹಾಯಕ್ಕೆ ಬರ್ತಾರೆ ಸಿಬ್ಬಂದಿ!
ಬಳಿಕ ಅಧಿಕಾರಿಗಳು ಕಂಪಾರ್ಟ್‌ಮೆಂಟ್ ಅನ್ನು ಸೀಲ್ ಮಾಡುತ್ತಾರೆ. ಒಂದು ವೇಳೆ ಬಾಗಿಲು ಒಡೆದರೆ ಅಥವಾ ಯಾರಾದರೂ ಅದನ್ನು ತೆರೆಯಲು ಪ್ರಯತ್ನಿಸಿದರೆ ಅಧಿಕಾರಿಗಳ ಮೊಬೈಲ್ ಸಂದೇಶ ಬರುತ್ತದೆ. ಇದನ್ನು ಪ್ರತಿ ನಿಲ್ದಾಣದಲ್ಲಿ ಲೋಡ್ ಅಥವಾ ಇಳಿಸುವ ಅಗತ್ಯವಿರುವ ರೈಲ್ವೆ ಸಿಬ್ಬಂದಿಗೆ ಕಳುಹಿಸಲಾಗುತ್ತದೆ. ಇದು ಯಾವುದೇ ಅಡಚಣೆಯಿಲ್ಲದೆ ರೈಲು ಸುಗಮವಾಗಿ ಚಲಿಸುವಂತೆ ಮಾಡುತ್ತದೆ
ಕನಿಷ್ಠ ಮೂರು ರೈಲ್ವೆ ವಲಯಗಳು ಕೈಗೆಟಕುವ ದರದಲ್ಲಿ ಈ ಸೇವೆಯನ್ನು ಒದಗಿಸುವ ಕಂಪನಿಗಳನ್ನು ಗುರುತಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪ್ರತಿ ನಿಲ್ದಾಣದಲ್ಲಿ ರೈಲ್ವೆ ಇಲಾಖೆಯ ಉದ್ಯೋಗಿಯು ಸರಕುಗಳನ್ನು ಲೋಡ್ ಮಾಡುವ ಅಥವಾ ಇಳಿಸುವ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂದು OTP ಸ್ವೀಕರಿಸುತ್ತಾರೆ, ಇದರಿಂದ ವ್ಯವಸ್ಥೆಯು ಸುಲಭ ಮತ್ತು ಸರಳವಾಗಲಿದೆ.
ಇದನ್ನೂ ಓದಿ: Dodda Ganapathi Temple: ಮದುವೆ, ಕಳ್ಳತನ ಎಲ್ಲ ಸಮಸ್ಯೆಗೂ ಪರಿಹಾರ! ಶಿರಸಿ ದೊಡ್ಡ ಗಣಪತಿಯ ಮಹಿಮೆಯೂ ದೊಡ್ಡದು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ