Indian Railways: ಇಂದಿನಿಂದ 80 ಹೊಸ ವಿಶೇಷ ರೈಲುಗಳ ಸಂಚಾರ ಆರಂಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ರೈಲುಗಳನ್ನು ಬಿಡುವಿರಾ ಎಂಬ ಪ್ರಶ್ನೆಗೆ, ಪರೀಕ್ಷೆಗಳು ಇತರೆ ಉದ್ದೇಶಗಳಿಗಾಗಿ ರಾಜ್ಯ ಸರ್ಕಾರಗಳು ಮನವಿ ಮಾಡಿದಾಗಲೆಲ್ಲಾ ನಾವು ರೈಲುಗಳನ್ನು ಬಿಡುತ್ತೇವೆ ಎಂದರು.

  • Share this:

    ನವದೆಹಲಿ(ಸೆ.12): ಇಂದಿನಿಂದ ಸುಮಾರು 80 ಹೊಸ ವಿಶೇಷ ರೈಲುಗಳು ತಮ್ಮ ಕಾರ್ಯಾಚರಣೆಯನ್ನು ಆರಂಭಿಸಲಿದ್ದು, ಗುರುವಾರದಿಂದಲೇ(ಸೆಪ್ಟೆಂಬರ್ 10) ಸೀಟು ಕಾಯ್ದಿರಿಸುವಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ 230 ರೈಲುಗಳು ತಮ್ಮ ಸಂಚಾರ ಶುರು ಮಾಡಿದ್ದು, ಹೆಚ್ಚುವರಿಯಾಗಿ ಈ ಹೊಸ 80 ರೈಲುಗಳನ್ನು ಬಿಡಲಾಗಿದೆ ಎಂದು ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ.ಯಾದವ್ ತಿಳಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ಜೋಡಿ ಅಥವಾ 80 ಹೊಸ ರೈಲುಗಳು ಸೆಪ್ಟೆಂಬರ್ 12ರಿಂದ ತಮ್ಮ ಕಾರ್ಯಾಚರಣೆ ಆರಂಭಿಸಲಿವೆ. ಈಗಾಗಲೇ ಸಂಚಾರ ಆರಂಭಿಸಿರುವವ 230 ರೈಲುಗಳ ಜೊತೆಗೆ ಹೆಚ್ಚುವರಿಯಾಗಿ ಈ 80 ರೈಲುಗಳನ್ನು ಬಿಡಲಾಗಿದೆ ಎಂದು ಹೇಳಿದರು.ವಿ.ಕೆ.ಯಾದವ್ ಅವರು ಇತ್ತೀಚೆಗೆ ರೈಲ್ವೆ ಮಂಡಳಿಯ ಮೊದಲ ಸಿಇಒ ಆಗಿ ನೇಮಕಗೊಂಡಿದ್ದರು. ಯಾವ ರೈಲುಗಳು ದೀರ್ಘ ಕಾಯುವಿಕೆ(ಲಾಂಗ್​ ವೈಟಿಂಗ್ ಲಿಸ್ಟ್​​) ಪಟ್ಟಿಯಲ್ಲಿವೆ ಎಂಬುದನ್ನು ನಿರ್ಧರಿಸಲು ಪ್ರಸ್ತುತ ಚಾಲನೆಯಲ್ಲಿರುವ ಎಲ್ಲಾ ರೈಲುಗಳನ್ನು ರೈಲ್ವೆ ಇಲಾಖೆ ಮೇಲ್ವಿಚಾರಣೆ ಮಾಡುತ್ತದೆ ಎಂದರು.


    ಪ್ರಮುಖವಾಗಿ ವಲಸೆ ಕಾರ್ಮಿಕರು ತಮ್ಮ ಕೆಲಸದ ಸ್ಥಳದಿಂದ ಹಿಂದಿರುಗಲು ಸಹಕಾರಿಯಾಗಲೆಂದು ಈ 80 ಹೊಸ ರೈಲುಗಳನ್ನು ಬಿಡಲಾಗಿದೆ ಎಂದು ಯಾದವ್ ಅವರು ಹೇಳಿದರು. ಕೊರೋನಾ ಆತಂಕದಿಂದಾಗಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್​ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರಮುಖವಾಗಿದೆ.



    ಪ್ರಯಾಣಿಕರು ಈ ರೈಲುಗಳಲ್ಲಿ ಪ್ರಯಾಣಿಸಲು ರೈಲ್ವೆ ಇಲಾಖೆಯ ಅಧಿಕೃತ ವೆಬ್​ಸೈಟ್​​ನಲ್ಲಿ ಟಿಕೆಟ್​ ಬುಕಿಂಗ್ ಮಾಡಬಹುದಾಗಿದೆ. ಐಆರ್​​​​ಸಿಟಿಸಿ ಎಂಬ ತಮ್ಮ ಮೊಬೈಲ್ ಆ್ಯಪ್​ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಅಥವಾ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಬುಕಿಂಗ್​ ಕೌಂಟರ್​ನಲ್ಲಿ ರಿಸರ್ವ್ ಮಾಡಬಹುದಾಗಿದೆ.


    ಕೊರೋನಾ ಭೀತಿ; ಈ ವರ್ಷ ಉತ್ತರ ಕರ್ನಾಟಕದ ಜನಪ್ರಿಯ ಕೃಷಿ‌ ಮೇಳ ರದ್ದು


    ನಾವು ರೈಲುಗಳ ಉದ್ಯೋಗಾವಕಾಶವನ್ನು ಮೇಲ್ವಿಚಾರಣೆ ಮಾಡಿ, ಬಳಿಕ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ರೈಲುಗಳನ್ನು ಬಿಡುತ್ತೇವೆ. 230 ರೈಲುಗಳಲ್ಲಿ 12 ಉದ್ಯೋಗ ತುಂಬಾ ಕಡಿಮೆಯಾಗಿದೆ. ಆದರೂ ಅವುಗಳನ್ನು ಓಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತೇವೆ. 230 ರೈಲುಗಳಲ್ಲಿ ಶೇ.80-85ರಷ್ಟು ಉದ್ಯೋಗಗಳಿವೆ ಎಂದರು.


    ಹೊಸ ರೈಲುಗಳ ಪರಿಚಯವನ್ನು ನಿರ್ಧರಿಸುವಾಗ ರೈಲ್ವೆ ಇಲಾಖೆಯು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ, ಸಮನ್ವಯತೆ ಸಾಧಿಸುತ್ತದೆ ಎಂದು ಯಾದವ್ ಹೇಳಿದರು. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ರೈಲುಗಳನ್ನು ಬಿಡುವಿರಾ ಎಂಬ ಪ್ರಶ್ನೆಗೆ, ಪರೀಕ್ಷೆಗಳು ಇತರೆ ಉದ್ದೇಶಗಳಿಗಾಗಿ ರಾಜ್ಯ ಸರ್ಕಾರಗಳು ಮನವಿ ಮಾಡಿದಾಗಲೆಲ್ಲಾ ನಾವು ರೈಲುಗಳನ್ನು ಬಿಡುತ್ತೇವೆ ಎಂದರು.

    Published by:Latha CG
    First published: