ನವದೆಹಲಿ: ನಮ್ಮಲ್ಲಿ ದಸರಾ, ದೀಪಾವಳಿ, ಸಂಕ್ರಾಂತಿ ಮತ್ತು ಹೋಳಿ ಹಬ್ಬಗಳು (Holi Festival) ಬರುತ್ತಿವೆ ಎಂದರೆ ಸಾಕು, ಊರು ಬಿಟ್ಟು ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸ ಮಾಡುವ ಜನರು ರಜೆಯನ್ನು (Holiday) ಪಡ್ಕೊಂಡು ತಮ್ಮ ಊರಿಗೆ ಹಿಂತಿರುಗಲು ಕಾಯ್ತಿರುತ್ತಾರೆ. ಆ ಮೂಲಕ ತಮ್ಮ ಮನೆಯವರ ಜೊತೆಯಲ್ಲಿ ಹಬ್ಬ ಮಾಡಬೇಕು ಅಂತ ಹೊರಟು ಬಿಡುತ್ತಾರೆ.
ಆದ್ದರಿಂದ ಹಬ್ಬಕ್ಕೆ ಅಂತ ಅನೇಕ ವಾರಗಳ ಮುಂಚಿತವಾಗಿಯೇ ರೈಲಿನಲ್ಲಿ, (Indian Railway) ಬಸ್‌ನಲ್ಲಿ ಅಥವಾ ಯಾವ ಸಾರಿಗೆಯಲ್ಲಿ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತದೆಯೋ, ಅದರಲ್ಲಿ ಟಿಕೆಟ್ ಗಳನ್ನು ಮೊದಲೇ ಬುಕ್ ಮಾಡಿಕೊಂಡು ಬಿಡುತ್ತಾರೆ.
ಇದನ್ನೂ ಓದಿ: Vande Bharat: ವಂದೇ ಭಾರತ್ ರೈಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್, ರೈಲ್ವೆ ಇಲಾಖೆ ಕದ ತಟ್ಟಿದ 60 ಸಂಸದರು!
ಹೋಳಿ ಹಬ್ಬಕ್ಕೆ ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್
ಹಬ್ಬಗಳ ಹಿಂದಿನ ದಿನ ಪ್ರಯಾಣಿಕರು ತಮ್ಮ ಊರಿಗೆ ಹೋಗಲು ಪರದಾಡಬಾರದು ಅಂತ ಎಷ್ಟೋ ಸಾರಿ ವಿಶೇಷ ಬಸ್‌ಗಳನ್ನು ಮತ್ತು ಟ್ರೈನ್‌ಗಳನ್ನು ಓಡಿಸುವುದನ್ನು ನಾವು ನೋಡಿರುತ್ತೇವೆ. ಇದೀಗ ಭಾರತೀಯ ರೈಲ್ವೆ ಹಲವಾರು ಮಾರ್ಗಗಳಲ್ಲಿ ಹೋಳಿ ಹಬ್ಬಕ್ಕೆ ಅಂತ ವಿಶೇಷ ರೈಲುಗಳನ್ನು ಪ್ರಾರಂಭಿಸಲು ಯೋಜಿಸಿದೆ.
ಮಾರ್ಚ್ 8, 2023 ರಂದು ಹೋಳಿ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಈ ಅವಧಿಯಲ್ಲಿ ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಹೀಗಾಗಿ ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಮಧ್ಯಪ್ರದೇಶ, ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಹಬ್ಬದ ಸಮಯದಲ್ಲಿ ಪ್ರಯಾಣಿಕರು ಸುಖಕರವಾಗಿ ಪ್ರಯಾಣಿಸಲು ಮತ್ತು ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಈ ಬಗ್ಗೆ ಮಾತನಾಡಿರುವ ಪೂರ್ವ ರೈಲ್ವೆ ಅಧಿಕಾರಿಯೊಬ್ಬರು, 'ಮುಂಬರುವ ಹೋಳಿ ಹಬ್ಬದ ಸಮಯದಲ್ಲಿ ನಿರೀಕ್ಷಿತ ಪ್ರಯಾಣಿಕರ ದಟ್ಟಣೆಯನ್ನು ತೆರವುಗೊಳಿಸಲು, ಪೂರ್ವ ರೈಲ್ವೆ ಹೌರಾ ಮತ್ತು ರಕ್ಸೌಲ್ ನಡುವೆ ಒಂದು ಜೋಡಿ ವಿಶೇಷ ರೈಲುಗಳನ್ನು ಓಡಿಸಲಿದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: Railway Jobs: ರೈಲ್ವೆ ಇಲಾಖೆಯಲ್ಲಿ PUC ಆದವರಿಗೆ ಬಂಪರ್ ಉದ್ಯೋಗ- ಈಗಲೇ ಅಪ್ಲೈ ಮಾಡಿ
ಹೋಳಿ ಹಬ್ಬಕ್ಕೆ ಭಾರತೀಯ ರೈಲ್ವೆಯ ವಿಶೇಷ ರೈಲುಗಳ ಪಟ್ಟಿ ಹೀಗಿದೆ:
03043 ಸಂಖ್ಯೆಯ ಹೌರಾ-ರಕ್ಸೌಲ್ ಹೋಳಿ ವಿಶೇಷ ರೈಲು ಮಾರ್ಚ್ 4, 2023 ರಂದು ರಾತ್ರಿ 11:00 ಗಂಟೆಗೆ ಹೌರಾದಿಂದ ಹೊರಟು ಮರುದಿನ ಮಧ್ಯಾಹ್ನ 2:15 ಕ್ಕೆ ರಕ್ಸೌಲ್ ತಲುಪಲಿದೆ.
3044 ಸಂಖ್ಯೆಯ ರಕ್ಸೌಲ್ - ಹೌರಾ ಹೋಳಿ ಸ್ಪೆಷಲ್ ರೈಲು ಮಾರ್ಚ್ 5, 2023 ರಂದು ಮಧ್ಯಾಹ್ನ 3:45 ಕ್ಕೆ ರಕ್ಸೌಲ್ ನಿಂದ ಹೊರಟು ಮರುದಿನ ಬೆಳಿಗ್ಗೆ 07:20 ಕ್ಕೆ ಹೌರಾವನ್ನು ತಲುಪಲಿದೆ. ಈ ವಿಶೇಷ ರೈಲು ಪೂರ್ವ ರೈಲ್ವೆಯ ವ್ಯಾಪ್ತಿಯ ಬಂದೇಲ್, ಬರ್ಧಮಾನ್, ದುರ್ಗಾಪುರ, ಅಸನ್ಸೋಲ್, ಚಿತ್ತರಂಜನ್, ಮಧುಪುರ್ ಮತ್ತು ಜಸಿದಿಹ್ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲುತ್ತದೆ.
ಮಾರ್ಚ್ 9, 2023 ರಿಂದ ಮಾರ್ಚ್ 23, 2023 ರವರೆಗೆ, ರೈಲು ಸಂಖ್ಯೆ 03255 ಪಾಟ್ನಾ-ಆನಂದ್ ವಿಹಾರ್ ಸೂಪರ್ ಫಾಸ್ಟ್ ಹೋಳಿ ಸ್ಪೆಷಲ್ ಪಾಟ್ನಾದಿಂದ ಪ್ರತಿ ಗುರುವಾರ ಮತ್ತು ಭಾನುವಾರ ರಾತ್ರಿ 10:00 ಗಂಟೆಗೆ ಹೊರಡಲಿದೆ. ಮರುದಿನ ಮಧ್ಯಾಹ್ನ 3 ಗಂಟೆಗೆ ಆನಂದ್ ವಿಹಾರ್ ತಲುಪಲಿದೆ.
ಮಾರ್ಚ್ 10, 2023 ರಿಂದ ಮಾರ್ಚ್ 24, 2023 ರವರೆಗೆ 03256 ಸಂಖ್ಯೆಯ ರೈಲು ಆನಂದ್ ವಿಹಾರ್-ಪಾಟ್ನಾ ಸೂಪರ್ ಫಾಸ್ಟ್ ಹೋಳಿ ಸ್ಪೆಷಲ್ ಶುಕ್ರವಾರ ಮತ್ತು ಸೋಮವಾರ ರಾತ್ರಿ 11:30 ಕ್ಕೆ ಆನಂದ್ ವಿಹಾರ್ ನಿಂದ ಹೊರಡಲಿದ್ದು, ಆ ರೈಲು ಮರುದಿನ ಸಂಜೆ 5:20 ಕ್ಕೆ ಪಾಟ್ನಾ ತಲುಪಲಿದೆ.
ಮಾರ್ಚ್ 10, 2023 ರಿಂದ ಮಾರ್ಚ್ 24, 2023 ರವರೆಗೆ 05271 ಸಂಖ್ಯೆಯ ಮುಜಾಫರ್‌ಪುರ್-ಯಶವಂತಪುರ ಹೋಳಿ ಸ್ಪೆಷಲ್ ಟ್ರೈನ್ ಪ್ರತಿ ಶುಕ್ರವಾರ ಮಧ್ಯಾಹ್ನ 3:30 ಕ್ಕೆ ಮುಜಾಫರ್‌ಪುರ್ ದಿಂದ ಹೊರಡಲಿದ್ದು, ಅದು ಭಾನುವಾರ ಸಂಜೆ 4.30ಕ್ಕೆ ಯಶವಂತಪುರ ತಲುಪಲಿದೆ.
ಮಾರ್ಚ್ 9 ಮತ್ತು 16, 2023 ರಂದು 05279 ಸಂಖ್ಯೆಯ ಬರೌನಿ ಪುಣೆ ಹೋಳಿ ಸ್ಪೆಷಲ್ ಮಧ್ಯಾಹ್ನ 12.10 ಕ್ಕೆ ಬರೌನಿಯಿಂದ ಹೊರಡಲಿದ್ದು, ಮರುದಿನ ರಾತ್ರಿ ಅದು 10.30ಕ್ಕೆ ಪುಣೆ ತಲುಪಲಿದೆ.
05280 ಸಂಖ್ಯೆಯ ಪುಣೆ ಬರೌನಿ ಹೋಳಿ ಸ್ಪೆಷಲ್ ಮಾರ್ಚ್ 11 ಮತ್ತು 18 ರಂದು ಸಂಜೆ 5.00 ಗಂಟೆಗೆ ಪುಣೆಯಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 1.00 ಗಂಟೆಗೆ ಪುಣೆ ತಲುಪಲಿದೆ.
05272 ಸಂಖ್ಯೆಯ ಯಶವಂತಪುರ- ಮುಜಾಫರ್‌ಪುರ್ ಸಾಪ್ತಾಹಿಕ ಹೋಳಿ ವಿಶೇಷ ರೈಲು ಪ್ರತಿ ಸೋಮವಾರ ಬೆಳಿಗ್ಗೆ 7:30 ಕ್ಕೆ ಯಶವಂತಪುರದಿಂದ ಹೊರಡಲಿದೆ. ಇದು ಬುಧವಾರ ಮಧ್ಯಾಹ್ನ ಮುಜಾಫರ್‌ಪುರ್ ಗೆ ಆಗಮಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ