ಹಬ್ಬಗಳ ಪ್ರಯುಕ್ತ ಇಂದಿನಿಂದ ದೇಶಾದ್ಯಂತ 392 ವಿಶೇಷ ರೈಲು ಸಂಚಾರ; ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ದಸರಾದಿಂದ ಮುಂದಿನ ತಿಂಗಳ ಅಂತ್ಯದವರೆಗೂ ಸಾಕಷ್ಟು ಹಬ್ಬಗಳು, ಸರ್ಕಾರಿ ರಜೆಗಳು ಇರುವುದರಿಂದ ಪ್ರಯಾಣಿಕರ ಅನುಕೂಲಕ್ಕೆಂದು ಇಂದಿನಿಂದ ನವೆಂಬರ್ 30ರವರೆಗೆ 392 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಾಗಿದೆ.
ಬೆಂಗಳೂರು (ಅ. 20): ಈಗಾಗಲೇ ದೇಶಾದ್ಯಂತ ದಸರಾ ಉತ್ಸವ ಆರಂಭವಾಗಿದೆ. ನವರಾತ್ರಿ ಬೆನ್ನಲ್ಲೇ ಒಂದರ ಹಿಂದೊಂದರಂತೆ ಸಾಲಾಗಿ ಹಬ್ಬಗಳು ಇರುವುದರಿಂದ ಭಾರತೀಯ ರೈಲ್ವೆ ಇಲಾಖೆ ಇಂದಿನಿಂದ ನವೆಂಬರ್ 30ರವರೆಗೆ 392 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿದೆ. ದಸರಾದಿಂದ ಮುಂದಿನ ತಿಂಗಳ ಅಂತ್ಯದವರೆಗೂ ಸಾಕಷ್ಟು ಹಬ್ಬಗಳು, ಸರ್ಕಾರಿ ರಜೆಗಳು ಇರುವುದರಿಂದ ಪ್ರಯಾಣಿಕರ ಅನುಕೂಲಕ್ಕೆಂದು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚಿನ ಜನದಟ್ಟಣೆಯನ್ನು ತಡೆಯುವ ಉದ್ದೇಶದಿಂದ ವಿಶೇಷ ರೈಲು ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಕೊಲ್ಕತ್ತಾ, ವಾರಾಣಸಿ, ಲಕ್ನೋ, ಪಾಟ್ನಾ ಸೇರಿದಂತೆ ಹಲವು ನಗರಗಳಿಗೆ ವಿಶೇಷ ರೈಲುಗಳ ವ್ಯವಸ್ಥೆ ಇಂದಿನಿಂದ ಆರಂಭವಾಗಿದೆ.
ಇಂದಿನಿಂದ (ಅ. 20) ನವೆಂಬರ್ 30ರವರೆಗೆ 196 ಜೋಡಿ ರೈಲುಗಳು ದೇಶದ ವಿವಿಧ ರಾಜ್ಯಗಳಿಗೆ ಸಂಚಾರ ಮಾಡಲಿವೆ. ಲಾಕ್ಡೌನ್ ಬಳಿಕ ರೈಲು ಸಂಚಾರವನ್ನು ಆರಂಭಿಸಲಾಗಿದ್ದು, ಈಗಾಗಲೇ ಸಂಚರಿಸುತ್ತಿರುವ ರೈಲುಗಳ ಜೊತೆಗೆ ವಿಶೇಷ ರೈಲುಗಳು ಹೆಚ್ಚುವರಿಯಾಗಿ ಸಂಚರಿಸಲಿವೆ.ಹಬ್ಬದ ಸಮಯದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಬಾರದು ಎನ್ನುವ ಕಾರಣಕ್ಕಾಗಿ ಹೆಚ್ಚುವರಿ ರೈಲು ಸಂಚಾರ ಆರಂಭಿಸಲಾಗುತ್ತಿದೆ.
ಯಾವೆಲ್ಲ ನಗರಗಳಿಗೆ ಯಾವಾಗ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ಟ್ವಿಟ್ಟರ್ ಖಾತೆಗೆ ಭೇಟಿ ನೀಡಿ...
To clear the festive rush, Ministry of Railways has approved 196 pairs (392 trains) of “Festival Special” services over Indian Railways to be operated from 20th October 2020 and 30th November 2020.
Zonal Railways will notify their schedule in advance.https://t.co/KaPpD36NtFpic.twitter.com/XlsvHgdGk0
ಎಕ್ಸ್ಪ್ರೆಸ್ ರೈಲುಗಳ ಟಿಕೆಟ್ ದರಕ್ಕೆ ಹೋಲಿಸಿದರೆ ವಿಶೇಷ ರೈಲುಗಳ ದರವು ಶೇ. 10ರಿಂದ 30ರವರೆಗೂ ಹೆಚ್ಚಿರಲಿದೆ. ಐಆರ್ಸಿಟಿಸಿ ಮತ್ತು ಪಿಆರ್ಎಸ್ ಟಿಕೆಟ್ ಕೌಂಟರ್ಗಳ ಮೂಲಕವೂ ವಿಶೇಷ ರೈಲುಗಳ ಟಿಕೆಟ್ ಬುಕ್ ಮಾಡಬಹುದು. ಪ್ರಯಾಣಿಕರು ಯಾವ ಬೋಗಿಯನ್ನು ಬುಕ್ ಮಾಡುತ್ತಾರೆ ಎಂಬುದರ ಆಧಾರದಲ್ಲಿ ದರ ನಿಗದಿಯಾಗಲಿದೆ.
ಕೊಲ್ಕತ್ತಾ, ಪಾಟ್ನಾ, ವಾರಣಾಸಿ, ಲಕ್ನೋ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ದುರ್ಗಾ ಪೂಜೆ, ದಸರಾ, ದೀಪಾವಳಿ, ಸೇರಿದಂತೆ ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರ ನಡೆಸಲಿವೆ. ನವೆಂಬರ್ 30ರ ನಂತರ ವಿಶೇಷ ರೈಲುಗಳ ಸಂಚಾರ ಸ್ಥಗಿತಗೊಳ್ಳಲಿದೆ. ವಿಶೇಷ ರೈಲುಗಳು ಪ್ರತಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಸಂಚಾರ ನಡೆಸಲಿವೆ. ಪ್ರಾದೇಶಿಕ ರೈಲ್ವೆ ಇಲಾಖೆಗಳು ಆಯಾ ಭಾಗದ ರೈಲಿನ ವೇಳಾಪಟ್ಟಿಯನ್ನು ಪ್ರಕಟಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ