Indian Railways: ಜನ ಉಗಿದಿರೋದನ್ನು ಕ್ಲೀನ್ ಮಾಡೋಕೆ ವರ್ಷಕ್ಕೆ ರೂ 12,000 ಕೋಟಿ ಖರ್ಚು ಮಾಡುತ್ತೆ ರೈಲ್ವೆ ಇಲಾಖೆ!

Smart way for cleanliness in Train: ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲುಗಳ ಒಳಗೆ ಜನರು ಉಗುಳುವುದನ್ನು ತಪ್ಪಿಸುವ ಸಲುವಾಗಿ ವೆಂಡಿಂಗ್ ಯಂತ್ರ ಅಥವಾ 5 ರಿಂದ 10 ರೂ.ಗೆ ಸ್ಪಿಟೂನ್ ಪೌಚ್ ನೀಡಲು ನಿರ್ಧರಿಸಿದೆ. ಜನರು ಇದನ್ನು ಬಳಸುವುದರಿಂದ ನೈರ್ಮಲ್ಯಕ್ಕೆ ಬಳಸುವ ವೆಚ್ಚ ಕಡಿಮೆಯಾಗಲಿದೆ ಎಂದು ರೈಲ್ವೆ ಇಲಾಖೆ ಅಂದಾಜಿಸಿದೆ.

ರೈಲನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ

ರೈಲನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ

  • Share this:
Cleanliness in Trains: ದೇಶದ ಸ್ವಚ್ಛತೆ ಪ್ರಜೆಯ ಸ್ವಾಸ್ಥ್ಯ ಎರಡನ್ನೂ ಗಮನದಲ್ಲಿಟ್ಟುಕೊಂಡ ಭಾರತ ಸರ್ಕಾರ ಸ್ವಚ್ಛ ಭಾರತ್ ಅಭಿಯಾನ (Swachh Bharat Abhiyan) ಕೈಗೊಂಡಿತು. ಈ ಅಭಿಯಾನ 2014ರಲ್ಲಿ ಅಧಿಕೃತವಾಗಿ ಗಾಂಧಿ ಕನಸು ಈಡೇರಿಸುವ ಸಲುವಾಗಿ ಜಾರಿಗೆ ಬಂದಿತು. ರಾಷ್ಟ್ರೀಯ ಮಟ್ಟದಲ್ಲಿ ಸ್ವಚ್ಛತೆ (cleanliness) ಕೇಂದ್ರಿಕರಿಸುವ ಸಲುವಾಗಿ ಆರಂಭವಾಗಿರುವ ಈ ಅಭಿಯಾನದ ಮೂಲಕ ಪ್ರತಿ ಗ್ರಾಮ, ಊರು, ಪಟ್ಟಣ, ನಗರಗಳನ್ನು ಸ್ವಚ್ಛವಾಗಿಡಲು ಪ್ರಯತ್ನಿಸಲಾಗುತ್ತಿದೆ. ಆದರೆ ಜನರು ಮಾತ್ರ ಎಲ್ಲೆಂದರಲ್ಲಿ ಉಗಿಯುವುದು (spitting), ಬಿಸಾಡುವುದು ಮಾತ್ರ ನಿಲ್ಲಿಸಿಲ್ಲ. ಜನರ ವರ್ತನೆಯಲ್ಲಿ ಬದಲಾವಣೆ ತರಲು ಸಾದ್ಯವಾಗುತ್ತಿಲ್ಲ. ಸ್ವಚ್ಛತೆಯ ಕುರಿತಾದ ಲಾಭಗಳ ಬಗ್ಗೆ ಜನರ ಅರಿವಿಗೆ ಬರದ ಹೊರತು ಎಷ್ಟೇ ಅಭಿಯಾನಗಳು ಜಾರಿಗೆ ಬಂದರೂ ಪ್ರಯೋಜನವಾಗುವುದಿಲ್ಲ. ಭಾರತೀಯ ರೈಲ್ವೆ ಇಲಾಖೆಯು  (Indian Railways) ಜನರು ಉಗಿಯುವ ತಂಬಾಕು ಮತ್ತು ಗುಟ್ಕಾ ಸ್ವಚ್ಛಗೊಳಿಸಲು 12 ಸಾವಿರ ಕೋಟಿ ವ್ಯಯಿಸಲಾಗಿದೆ ಎಂದು ಹೇಳಿದೆ.

ಕೋವಿಡ್ -19 ಮಾರ್ಗಸೂಚಿಗಳ ಹೊರತಾಗಿಯೂ ವೈಯಕ್ತಿಕ ನೈರ್ಮಲ್ಯ ಮತ್ತು ಸುತ್ತಮುತ್ತಲಿನ ಶುಚಿತ್ವ ಕಾಪಾಡಿಕೊಳ್ಳಲು ಹೆಚ್ಚು ಒತ್ತು ನೀಡುತ್ತಿದ್ದರೂ, ಕಂಡ ಕಂಡಲ್ಲಿ ಉಗಿಯುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಜನರು ತಮ್ಮ ತಮ್ಮ ಅಭ್ಯಾಸಗಳನ್ನು ಇನ್ನೂ ಬಿಟ್ಟಿಲ್ಲ ಮತ್ತು ಸಮಸ್ಯೆ ಉಲ್ಬಣಗೊಳ್ಳುತ್ತಿದೆ.

ಸ್ಮಾರ್ಟ್ ಪರಿಹಾರ ಕಂಡುಕೊಂಡ ರೈಲ್ವೆ

ಆದರೆ, ಅದನ್ನು ಎದುರಿಸಲು ರೈಲ್ವೆ ಹೊಸ ಪರಿಹಾರ ಕಂಡುಕೊಂಡಿದೆ. ನಿಲ್ದಾಣದ ಆವರಣದಲ್ಲಿ ಸ್ಪಿಟರ್ ಕಿಯೋಸ್ಕ್‌ಗಳನ್ನು ಸ್ಥಾಪಿಸುವ ಯೋಜನೆ ಇದಾಗಿದ್ದು ಇದನ್ನು ಸಾಮಾನ್ಯ ಜನರು ಸಹ ಬಳಸಬಹುದಾಗಿದೆ.

ಇದನ್ನೂ ಓದಿ: Explained: ರೈಲುಗಳ ವಿಳಂಬಕ್ಕೆ ರೈಲ್ವೆ ಇಲಾಖೆ ಪರಿಹಾರ ನೀಡಲೇಬೇಕೆಂದು ಸುಪ್ರೀಂ ಆದೇಶ, ರೈಲು ವಿಳಂಬಕ್ಕೆ ಕಾರಣಗಳೇನು ಗೊತ್ತಾ? ಇಲ್ಲಿದೆ ಪೂರ್ತಿ ಡೀಟೈಲ್ಸ್​

ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲುಗಳ ಒಳಗೆ ಜನರು ಉಗುಳುವುದನ್ನು ತಪ್ಪಿಸುವ ಸಲುವಾಗಿ ವೆಂಡಿಂಗ್ ಯಂತ್ರ ಅಥವಾ 5 ರಿಂದ 10 ರೂ.ಗೆ ಸ್ಪಿಟೂನ್ ಪೌಚ್ ನೀಡಲು ನಿರ್ಧರಿಸಿದೆ. ಜನರು ಇದನ್ನು ಬಳಸುವುದರಿಂದ ನೈರ್ಮಲ್ಯಕ್ಕೆ ಬಳಸುವ ವೆಚ್ಚ ಕಡಿಮೆಯಾಗಲಿದೆ ಎಂದು ರೈಲ್ವೆ ಇಲಾಖೆ ಅಂದಾಜಿಸಿದೆ.

ಪಶ್ಚಿಮ, ಉತ್ತರ ಮತ್ತು ಮಧ್ಯ ಈ ಮೂರು ರೈಲ್ವೆ ವಲಯಗಳು ಸ್ಪಿಟೂನ್ ಪೌಚ್ ತಯಾರಿಕೆಗೆ ಎಜಿ ಸ್ಪಿಟ್ ಎಂಬ ಸ್ಟಾರ್ಟ್‍ಅಪ್‍ಗೆ ಗುತ್ತಿಗೆ ನೀಡಿದೆ. ಈ ಸ್ಪಿಟೂನ್ ಪೌಚ್ ಅನ್ನು ಸುಲಭವಾಗಿ ಪಾಕೆಟ್‍ಗಳಲ್ಲಿ ಕೊಂಡೊಯ್ಯಬಹುದು ಮತ್ತು ಪ್ರಯಾಣಿಕರು ತಮಗೆ ಬೇಕಾದಾಗ ಮತ್ತು ಎಲ್ಲಿ ಬೇಕಾದರೂ ಇದರಲ್ಲಿ ಉಗುಳಬಹುದು. ಈ ಉತ್ಪನ್ನವು ಮ್ಯಾಕ್ರೋಮೋಲಿಕ್ಯೂಲ್ ಪಲ್ಪ್ ತಂತ್ರಜ್ಞಾನ ಹೊಂದಿದೆ. ಇದು ಲಾಲಾರಸದಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳನ್ನು ಪೌಚ್‍ನಲ್ಲಿಯೇ ಉಳಿದುಕೊಳ್ಳುವಂತಹ ರೀತಿಯಲ್ಲಿ ತಯಾರಿಸಲಾಗುತ್ತಿದೆ ಎಂದು ಕಂಪನಿ ತಯಾರಕರು ತಿಳಿಸಿದ್ದಾರೆ.

ಪರಿಸರಕ್ಕೆ ಇವುಗಳಿಂದ ಯಾವುದೇ ಹಾನಿಯಿಲ್ಲ

ಈ ಜೈವಿಕ ವಿಘಟನೀಯ ಚೀಲಗಳು, ವಿವಿಧ ಗಾತ್ರಗಳಲ್ಲಿ ಬರುತ್ತವೆ. ಇದನ್ನು ಸರಿಸುಮಾರು 15 ರಿಂದ 20 ಬಾರಿ ಮರುಬಳಕೆ ಮಾಡಬಹುದಾಗಿದೆ. ಉಗುಳನ್ನು ಹೀರಿಕೊಳ್ಳುವ ಮತ್ತು ಅವುಗಳನ್ನು ಘನವಾಗಿ ಪರಿವರ್ತಿಸುವ ಲಕ್ಷಣವನ್ನು ಒಳಗೊಂಡಿದೆ. ಒಮ್ಮೆ ಬಳಸಿದಲ್ಲಿ, ಈ ಚೀಲಗಳನ್ನು ಮಣ್ಣಿನಲ್ಲಿ ಬಿಸಾಡಬಹುದು. ಇದು ಸಸ್ಯ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆಯೇ ಹೊರತು ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗುವುದಿಲ್ಲ.

ಇದನ್ನೂ ಓದಿ: Indian Railways: ರೈಲ್ವೆ ಇಲಾಖೆಯಿಂದ ನೀವು ಲಕ್ಷಗಟ್ಟಲೆ ಹಣ ಗಳಿಸಬಹುದು, ಈ ರೀತಿ ಮಾಡಿ

ನಾಗಪುರ ಮೂಲದ ಕಂಪೆನಿಯೊಂದು ಈ ಯಂತ್ರವನ್ನು ನಿಲ್ದಾಣದಲ್ಲಿ ಅಳವಡಿಸಲು ಯೋಜನೆ ರೂಪಿಸಿದೆ. ಅವರು ನಾಗ್ಪುರ ಮುನ್ಸಿಪಲ್ ಕಾರ್ಪೋರೇಶನ್ ಮತ್ತು ಔರಂಗಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

ಸ್ಪಿಟೂನ್‍ಗಳು ಮೂರು ವಿಧಗಳಲ್ಲಿ ಲಭ್ಯವಿರಲಿದೆ. ಒಂದು ಪ್ಯಾಕೆಟ್ ಪೌಚ್‍ಗಳು (10 ರಿಂದ 15 ಬಾರಿ ಮರುಬಳಕೆ), ಮೊಬೈಲ್ ಕಂಟೇನರ್‌ಗಳು (20,30,40 ಬಾರಿ ಮರುಬಳಕೆ) ಮತ್ತು ಉಗುಳು ತೊಟ್ಟಿಗಳು.
Published by:Soumya KN
First published: