ಸಾಮಾನ್ಯವಾಗಿ ಭಾರತೀಯ ರೈಲ್ವೆ ಸಚಿವಾಲಯವು (Indian Railways) ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳ (Social Media) ಪುಟಗಳಲ್ಲಿ ವಿಶೇಷವಾಗಿ ಹೊಸದಾಗಿ ಪರಿಚಯಿಸಿದ ರೈಲುಗಳ (Trains) ಬಗ್ಗೆ ಮಾಹಿತಿ, ಪ್ರಯಾಣಿಕರ ಸೌಲಭ್ಯಕ್ಕಾಗಿ ಪರಿಚಯಿಸಿದ ಸೇವೆಗಳ ಮಾಹಿತಿಯನ್ನು ಮತ್ತು ಅವರು ಕೈಗೊಂಡ ವಿವಿಧ ಉಪಕ್ರಮಗಳ ಬಗ್ಗೆ ಅಪ್ಡೇಟ್ಗಳನ್ನು ಹಂಚಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಆದರೆ ಈ ಬಾರಿ ರೈಲ್ವೆ ಸಚಿವಾಲಯವು ತನ್ನ ಸಾಮಾಜಿಕ ಮಾಧ್ಯಮದ ಪುಟದಲ್ಲಿ ಕೆಲವು ಫೋಟೋಗಳನ್ನು (Photos) ಹಂಚಿಕೊಂಡಿದೆ ನೋಡಿ. ಈ ಫೋಟೋಗಳನ್ನು ಚಲಿಸುವ ರೈಲಿನಿಂದ ಸೆರೆಹಿಡಿಯಲಾದ ಸುತ್ತಮುತ್ತಲಿನ ಲೈಟ್ಗಳ ಒಂದು ಮ್ಯಾಜಿಕಲ್ ನೋಟವನ್ನು ತೋರಿಸುತ್ತದೆ ಅಂತ ಹೇಳಬಹುದು. ಈ ಬಾರಿ ಅವರು ವಿಭಿನ್ನವಾದದ್ದನ್ನು ಹಂಚಿಕೊಂಡಿದ್ದು, ಅದು ಅನೇಕ ಇಂಟರ್ನೆಟ್ ಬಳಕೆದಾರರನ್ನು ಬೆರಗುಗೊಳಿಸುತ್ತಿದೆ.
ರೈಲ್ವೆ ಸಚಿವಾಲಯ ಹಂಚಿಕೊಂಡ ಫೋಟೋಗಳು ಹೇಗಿವೆ?
ನಾವು ರೈಲಿನಲ್ಲಿ ರಾತ್ರಿ ಹೊತ್ತು ಪ್ರಯಾಣಿಸುವಾಗ ಯಾವುದಾದರೂ ನಗರ ಅಥವಾ ಊರು ಹತ್ತಿರ ಬರುತ್ತಿದ್ದಂತೆ ಅಲ್ಲಿ ಮನೆಗಳಲ್ಲಿರುವ ಲೈಟ್ಗಳು ನಮಗೆ ತುಂಬಾನೇ ಡಿಸೈನ್ ಡಿಸೈನ್ ಆಗಿ ಕಾಣುತ್ತವೆ ಮತ್ತು ಇದನ್ನು ಚಲಿಸುತ್ತಿರುವ ಹೈಸ್ಪೀಡ್ ರೈಲಿನ ಒಳಗೆ ಕೂತು ನೋಡುವುದೇ ಒಂದು ಚೆಂದ ಅಂತ ಹೇಳಬಹುದು.
ಚಲಿಸುವ ರೈಲಿನಿಂದ ಸೆರೆ ಹಿಡಿದ ಬೆಳಕಿನ ಚಿತ್ರಗಳನ್ನು ಸಚಿವಾಲಯವು ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. "ಚಲಿಸುವ ರೈಲಿನಿಂದ ಸೆರೆಹಿಡಿದ ಬೆಳಕಿನ ಮಾಂತ್ರಿಕ ನೋಟ" ಎಂದು ಅವರು ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ. ಈ ಫೋಟೋಗಳನ್ನು ಮೂಲತಃ ಭಾರತೀಯ ರೈಲ್ವೆ ನೆಟ್ವರ್ಕ್ ನ ಒಂದು ಉಪಕ್ರಮವಾದ ‘ದಿ ಟ್ರೈನ್ ಸ್ಟೋರಿ’ ಮೊದಲು ಪೋಸ್ಟ್ ಮಾಡಿತ್ತು.
ಫೋಟೋಗಳನ್ನು ಹಂಚಿಕೊಂಡ ಟ್ರೈನ್ ಸ್ಟೋರಿಯಲ್ಲಿ ಏನೆಲ್ಲಾ ಬರೆದಿದೆ?
ಪುಟದ ಪ್ರಕಾರ, ಈ ಫೋಟೋಗಳು "ಚಾಪ್ಟರ್: ದಿ ಟ್ರೈನ್ ಚೇಸರ್" ನ ಒಂದು ಭಾಗವಾಗಿದೆ. ಟ್ರೈನ್ ಸ್ಟೋರಿಯ ಪುಟದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, "ರೈಲು ನಿಲ್ದಾಣದಿಂದ ನಿಧಾನವಾಗಿ ಹೊರಡುತ್ತಿದ್ದಂತೆ ಬಾಗಿಲಲ್ಲಿ ನಿಂತು, ಸೂರ್ಯಾಸ್ತದ ಇಸ್ಲಾಮಿಕ್ ಕೂಗನ್ನುದೂರದಿಂದ ಕೇಳುತ್ತಾ, ಟ್ರ್ಯಾಕ್ ಬದಿಯಲ್ಲಿ ನಿಂತಿರುವ ಮಕ್ಕಳಿಗೆ ಕೈಬೀಸುತ್ತಾ, ನಾನು ಮತ್ತೊಮ್ಮೆ ನನ್ನ ಪ್ರಯಾಣವನ್ನು ಪ್ರಾರಂಭಿಸುತ್ತೇನೆ.
Magical play of light caught through the running train. #LightAndSpeed
PC: @thetrainstory pic.twitter.com/QGczep1bV9
— Ministry of Railways (@RailMinIndia) November 23, 2022
ಆ ದೃಶ್ಯ ಯಾವುದೇ ವೈಜ್ಞಾನಿಕ 3ಡಿ ಚಲನಚಿತ್ರದ ದೃಶ್ಯಕ್ಕಿಂತ ಕಡಿಮೆ ಇರಲಿಲ್ಲ. ರೈಲಿನ ಬೋಗಿಯ ಬಾಗಿಲ ಬಳಿ ಹೋಗಿ ಚಲಿಸುವ ರೈಲಿನ ಮೂಲಕ ಬೆಳಕಿನ ಈ ಮಾಂತ್ರಿಕ ಆಟಕ್ಕೆ ನಾನು ಸಾಕ್ಷಿಯಾಗುತ್ತೇನೆ. ಇದು ಹೀಗೆ ಮುಂದುವರಿಯಬೇಕು. ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ನೆನಪಿಗಾಗಿ” ಎಂದು ಬರೆದಿದ್ದಾರೆ.
ಇದನ್ನೂ ಓದಿ: Viral Video: ಅಬ್ಬಬ್ಬಾ! ಇಂಥಾ ಮಹಿಳೆಯರು ಕೂಡ ಇರ್ತಾರಾ? ಈ ವಿಡಿಯೋ ನೋಡಿದ್ರೆ ನೀವೂ ಬೈಯ್ತೀರಿ!
ಬೆಳಕಿನ ಮಾಂತ್ರಿಕ ನೋಟವನ್ನು ನೋಡಿ ಬೆರಗಾದ ನೆಟ್ಟಿಗರು
ಸಚಿವಾಲಯವು ನವೆಂಬರ್ 23 ರಂದು ಈ ಫೋಟೋಗಳನ್ನು ಹಂಚಿಕೊಂಡಿದೆ ಮತ್ತು ಅಂದಿನಿಂದ, ಈ ಟ್ವೀಟ್ 805 ಲೈಕ್ ಗಳು ಮತ್ತು 424 ರಿಟ್ವೀಟ್ ಗಳನ್ನು ಸಹ ಗಳಿಸಿದೆ. ಅನೇಕ ಇಂಟರ್ನೆಟ್ ಬಳಕೆದಾರರು "ಬೆಳಕಿನ ಮಾಂತ್ರಿಕ ಆಟ"ವನ್ನು ನೋಡಿ ದಿಗ್ಭ್ರಮೆಗೊಂಡರು. ಒಬ್ಬ ಬಳಕೆದಾರರು "ಅದ್ಭುತ ಚಿತ್ರ" ಎಂದು ಬರೆದಿದ್ದಾರೆ.
ಎರಡನೇ ಬಳಕೆದಾರರು ಕಾಮೆಂಟ್ ಮಾಡಿ "ಫೋಟೋಗಳು ತುಂಬಾನೇ ಅದ್ಬುತವಾಗಿವೆ, ದೂರದಿಂದ ತೆಗೆದ ಶಾಟ್ ಗಳು ತುಂಬಾನೇ ಚೆನ್ನಾಗಿ ಬಂದಿವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ವಿದೇಶಿ ಮಹಿಳೆಗೆ ನಡುರಸ್ತೆಯಲ್ಲಿ ಕೈ ಹಿಡಿದು ಎಳೆದಾಡಿ ಮುತ್ತು ಕೊಟ್ಟ!
"ಅತ್ಯುತ್ತಮವಾದ ಸೃಜನಶೀಲ ಕಣ್ಣುಗಳು ಮತ್ತು ಆಲೋಚನೆ ಮಾಡುವ ಮನಸ್ಸು, ಇದು ಔಟ್ ಆಫ್ ದಿ ಬಾಕ್ಸ್ ಟ್ವೀಟ್ . ಅದ್ಭುತ !" ಎಂದು ಮೂರನೇ ವ್ಯಕ್ತಿ ಹೇಳಿದರು. "ಸೂಪರ್" ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ