HOME » NEWS » National-international » INDIAN RAILWAYS ROLLING OUT HIGH SPEED CLONE TRAINS IN 20 ROUTES SNVS

ಕರ್ನಾಟಕ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ವೇಗದ 40 ಕ್ಲೋನ್ ರೈಲುಗಳ ಸಂಚಾರಕ್ಕೆ ಚಾಲನೆ

ಕರ್ನಾಟಕ ಸೇರಿದಂತೆ ವಿವಿಧೆಡೆ 20 ಮಾರ್ಗಗಳಲ್ಲಿ ವಿಶೇಷ ರೈಲುಗಳ ಜೊತೆ 40 ಕ್ಲೋನ್ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಚಾಲನೆ ನೀಡಿದೆ. ಕಡಿಮೆ ನಿಲುಗಡೆ ಮತ್ತು ವೇಗದ ಸಂಚಾರದಿಂದ ಈ ಕ್ಲೋನ್ ಟ್ರೈನ್​ಗಳು ಬಹಳ ಬೇಗ ತಮ್ಮ ನಿಲ್ದಾಣ ತಲುಪಬಲ್ಲವು.

news18
Updated:September 21, 2020, 1:38 PM IST
ಕರ್ನಾಟಕ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ವೇಗದ 40 ಕ್ಲೋನ್ ರೈಲುಗಳ ಸಂಚಾರಕ್ಕೆ ಚಾಲನೆ
ಸಾಂದರ್ಭಿಕ ಚಿತ್ರ
  • News18
  • Last Updated: September 21, 2020, 1:38 PM IST
  • Share this:
ನವದೆಹಲಿ(ಸೆ. 21): ವೇಗದ ಪ್ರಯಾಣ ಬಯಸುವ ಜನರಿಗಾಗಿ ನಿರ್ದಿಷ್ಟ ಮಾರ್ಗಗಳಲ್ಲಿ ಕ್ಲೋನ್ ಟ್ರೈನ್​ಗಳನ್ನ ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಒಟ್ಟು 40 ಕ್ಲೋನ್ ಟ್ರೈನ್​ಗಳು ದೇಶದ ವಿವಿಧ ಮಾರ್ಗಳಲ್ಲಿ ಸಂಚರಿಸಲಿವೆ. ಈ ಕ್ಲೋನ್​ಗಳು ವೇಗವಾಗಿ ಸಂಚರಿಸಲಿವೆ. ಕಡಿಮೆ ನಿಲುಗಡೆ ಹಾಗೂ ವೇಗದ ಸಂಚಾರದಿಂದ, ಮಾಮೂಲಿಯ ರೈಲುಗಳಿಗಿಂತ 3-4 ಗಂಟೆ ಮುಂಚೆ ಪ್ರಯಾಣ ಮುಗಿಸುತ್ತವೆ. ರೈಲು ಪ್ರಯಾಣಿಕರ ದಟ್ಟನೆ ಹೆಚ್ಚಾಗಿರುವ ಮಾರ್ಗಗಳನ್ನ ಆರಿಸಿಕೊಂಡು ಈ ಪ್ರಯೋಗ ಮಾಡಲಾಗುತ್ತಿದೆ. ಕರ್ನಾಟಕ, ಬಿಹಾರ, ಪಶ್ವಿಮ ಬಂಗಅಳ, ಉತ್ತರ ಪ್ರದೇಶ, ದೆಹಲಿ ಮತ್ತು ಆಂಧ್ರ ಪ್ರದೇಶಗಳ ಮಾರ್ಗಗಳಲ್ಲಿ ಸಂಚರಿಸುವ ಈ ಕ್ಲೋನ್ ರೈಲುಗಳ ಪ್ರಯಾಣ ದರ ದುಬಾರಿ ಇರಲಿದ್ದು, ಜನಶತಾಬ್ದಿ ಎಕ್ಸ್​ಪ್ರೆಸ್​ನ ದರಕ್ಕೆ ಸಮಾನವಾಗಿರಲಿವೆ.

2016ರಲ್ಲೇ ಅಂದಿನ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಈ ಕ್ಲೋನ್ ರೈಲುಗಳ ಯೋಜನೆ ಸಿದ್ಧಪಡಿಸಿದ್ದರು. ಆದರೆ, ಎಲ್ಲಾ ಮಾರ್ಗಗಳಲ್ಲಿ ರೈಲು ದಟ್ಟನೆಯಿಂದಾಗಿ ಇದರ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಈಗ ಕೊರೋನಾ ಪಿಡುಗಿನಿಂದಾಗಿ ರೈಲು ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ, ನೆನೆಗುದಿಯಲ್ಲಿ ಬೀಳುತ್ತಿದ್ದ ಕ್ಲೋನ್ ರೈಲು ಯೋಜನೆಯನ್ನು ಈಗ ಜಾರಿಗೆ ತರಲಾಗುತ್ತಿದೆ.

ಇದನ್ನೂ ಓದಿ: ಚೀನಾ ಗಡಿಭಾಗದಲ್ಲಿ ಮೂರು ವಾರಗಳಲ್ಲಿ 6 ಪ್ರಮುಖ ಗುಡ್ಡಗಳು ಭಾರತದ ವಶಕ್ಕೆ

ಇಪ್ಪತ್ತು ಮಾರ್ಗಗಳಲ್ಲಿ ತಲಾ 2ರಂತೆ 20 ಕ್ಲೋನ್ ರೈಲುಗಳು ಸಂಚಾರ ಮಾಡಲಿವೆ. ಈ 20 ಮಾರ್ಗಗಳಲ್ಲಿ ಬೆಂಗಳೂರು-ದಾನಾಪುರ್(ಬಿಹಾರ), ಯಶವಂತಪುರ-ನಿಜಾಮುದ್ದೀನ್ ರೈಲು ಮಾರ್ಗ ಕೂಡ ಸೇರಿವೆ. ಈ 20 ಮಾರ್ಗಗಳಲ್ಲಿ ಮಾಮೂಲಿಯ ವಿಶೇಷ ರೈಲುಗಳ ಜೊತೆ ಹೆಚ್ಚುವರಿಯಾಗಿ ಕ್ಲೋನ್ ರೈಲುಗಳನ್ನ ಸೇರಿಸಲಾಗಿದೆ. ಇವು ಮುಖ್ಯ ರೈಲುಗಳಿಗಿಂತ ಒಂದಷ್ಟು ಮುಂಚೆಯೇ ನಿಲ್ದಾಣದಿಂದ ಹೊರಡುತ್ತವೆ. ಕಡಿಮೆ ನಿಲುಗಡೆ ಹಾಗು ವೇಗದ ಸಂಚಾರದಿಂದ ಬಹಳ ಬೇಗ ಡೆಸ್ಟಿನೇಶನ್ ತಲುಪುತ್ತವೆ. ಕೋವಿಡ್ ಸಂದರ್ಭದಲ್ಲಿ ರೈಲುಗಳಲ್ಲಿ ಹೆಚ್ಚು ಹೊತ್ತು ಇರಲು ಬಯಸದ ಜನರ ಅನುಕೂಲದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ.

ಕೋವಿಡ್ ಬಿಕ್ಕಟ್ಟಿನ ವೇಳೆ ಲಾಕ್ ಡೌನ್ ಘೋಷಿಸಿದಾದ ರೈಲು ಸಂಚಾರವನ್ನೂ ನಿಲ್ಲಿಸಲಾಗಿತ್ತು. ಇತ್ತೀಚೆಗಷ್ಟೇ ಅನ್​ಲಾಕ್ ಘೋಷಣೆಯಾಗಿ ಪಾಕ್ಷಿಕವಾಗಿ ರೈಲು ಸಂಚಾರಕ್ಕೆ ಆಸ್ಪದ ನೀಡಲಾಗಿದೆ. ಕೆಲ ನಿರ್ದಿಷ್ಟ ಮಾರ್ಗಗಳಲ್ಲಿ ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ರೈಲು ಸಂಚಾರ ಇದೆ. ಕಡಿಮೆ ಸಂಚಾರದೊತ್ತಡ ಇರುವ ಹಿನ್ನೆಲೆಯಲ್ಲಿ ಈಗ ಕ್ಲೋನ್ ಟ್ರೈನ್ ಸೇವೆಗೆ ಚಾಲನೆ ನೀಡಲಾಗಿದೆ.
Published by: Vijayasarthy SN
First published: September 21, 2020, 1:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories