• Home
  • »
  • News
  • »
  • national-international
  • »
  • ಬಸ್ಕಿ ಹೊಡೆದ್ರೆ ಉಚಿತ ಟಿಕೆಟ್: ಭಾರತೀಯ ರೈಲ್ವೆ ಇಲಾಖೆಯಿಂದ ವಿನೂತನ ಯೋಜನೆ

ಬಸ್ಕಿ ಹೊಡೆದ್ರೆ ಉಚಿತ ಟಿಕೆಟ್: ಭಾರತೀಯ ರೈಲ್ವೆ ಇಲಾಖೆಯಿಂದ ವಿನೂತನ ಯೋಜನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗಾಗಲೇ ದೆಹಲಿಯಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಶೀಘ್ರದಲ್ಲಿಯೇ ದೇಶದ ಇತರೆ ರೈಲ್ವೆ ನಿಲ್ದಾಣದಲ್ಲಿ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಟ್ವೀಟ್​ ಮೂಲಕ ಪಿಯೂಷ್​ ಗೋಯೆಲ್​ ತಿಳಿಸಿದ್ದಾರೆ.

  • Share this:

ಬೆಂಗಳೂರು(ಫೆ. 22): ಸದೃಢ ಭಾರತವನ್ನು ರೂಪಿಸುವ ಜೊತೆಗೆ ಭಾರತದ ನಾಗರಿಕರ ಆರೋಗ್ಯದ ಕಾಳಜಿಯಿಂದ ಪ್ರಧಾನಿ ನರೇಂದ್ರ ಮೋದಿ ಫಿಟ್​ ಇಂಡಿಯಾ ಯೋಜನೆ ಜಾರಿಗೆ ತಂದರು. ಅದರ ಅಂಗವಾಗಿ ಈಗ ರೈಲ್ವೆ ಸಚಿವ ಪಿಯೂಷ್​ ಗೋಯೆಲ್​ ಹೊಸ ಯೋಜನೆ ಜಾರಿಗೆ ತಂದಿದ್ದು, ಈ ಮೂಲಕ ರೈಲು ಪ್ರಯಾಣಿಕರಿಗೆ ಬಂಫರ್​ ಆಫರ್​ ನೀಡಿದ್ದಾರೆ. 


ನಿಮ್ಮ ಆಪ್ತರನ್ನು ರೈಲಿಗೆ ಹತ್ತಿಸಲು ನಿಲ್ದಾಣಕ್ಕೆ ಹೋದ ವೇಳೆ ನೀವು  ಪ್ಲಾಟ್​​ ಫಾರಂ ಟಿಕೆಟ್​ ಕೊಳ್ಳುವುದು ಅನಿವಾರ್ಯ. ಒಂದು ವೇಳೆ ಪ್ಲಾಟ್​ ಫಾರಂ ಟಿಕೆಟ್​ ಇಲ್ಲದೇ ನೀವು ರೈಲು ನಿಲ್ದಾಣದಲ್ಲಿದ್ದರೆ, ದಂಡ ತೆರಬೇಕಾಗಿರುವುದು ಅನಿವಾರ್ಯ.


ಈ ರೈಲ್ವೆ ಟಿಕೆಟ್​ನ್ನು ಇನ್ಮುಂದೆ ನೀವು ಉಚಿತವಾಗಿ ಪಡೆಯಬಹುದು. ಅದು ಫಿಟ್​ ಇಂಡಿಯಾ ಯೋಜನೆ ಮೂಲಕ. ರೈಲು ನಿಲ್ದಾಣದಲ್ಲಿ 3 ನಿಮಿಷದಲ್ಲಿ 30 ಬಸ್ಕಿ ಹೊಡೆದರೆ ಇನ್ಮುಂದೆ ಉಚಿತವಾಗಿ ಈ ಪ್ಲಾಟ್​ ಫಾರಂ ಟಿಕೆಟ್​ ಪಡೆಯಬಹುದು.ಈಗಾಗಲೇ ದೆಹಲಿಯಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಶೀಘ್ರದಲ್ಲಿಯೇ ದೇಶದ ಇತರೆ ರೈಲ್ವೆ ನಿಲ್ದಾಣದಲ್ಲಿ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಟ್ವೀಟ್​ ಮೂಲಕ ಪಿಯೂಷ್​ ಗೋಯೆಲ್​ ತಿಳಿಸಿದ್ದಾರೆ.


180 ಸೆಕೆಂಡ್​ಗಳಲ್ಲಿ 30 ಬಸ್ಕಿ ಹೊಡೆಯುವುದರಿಂದ ಉಚಿತ ಟಿಕೆಟ್​ ಜೊತೆ ಆರೋಗ್ಯಕ್ಕೆ ಕೂಡ ಒಳಿತಾಗಲಿದೆ. ಈ ಮೂಲಕ ನಾವು ಇಂಡಿಯಾವನ್ನು ಫಿಟ್​ ಆಗಿಡಬಹುದು ಎಂಬುದು ಕೇಂದ್ರ ಸಚಿವರ ಆಂಬೋಣ.


ಇದನ್ನು ಓದಿ: ಸರಳತೆ ಮೆರೆದ ಪ್ರಧಾನಿ: ಸಣ್ಣ ಹೋಟೆಲ್​​ನಲ್ಲಿ ತಿಂಡಿ ಮತ್ತು ಟೀ ಸವಿದು 120 ರೂ. ಬಿಲ್​​ ಪಾವತಿಸಿದ ಮೋದಿ


ಈ ಹಿಂದೆ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದ ರಾಜವರ್ಧನ್ ಸಿಂಗ್ ರಾಥೋಡ್ ಪ್ರಧಾನಿ ಅವರ ಈ ಅಭಿಯಾನದ ಅಂಗವಾಗಿ 'ಹಮ್​ ಫಿಟ್​ ತೋ ದೇಶ್​ ಫಿಟ್​ ಹೋ' ಅಭಿಯಾನ ಆರಂಭಿಸಿದ್ದರು. ಈ ಮೂಲಕ ತಮ್ಮ ವ್ಯಾಯಾಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಈ ಚಾಲೆಂಜ್​ ಅನ್ನು ಬಾಲಿವುಡ್​ ಮಂದಿ ಸೇರಿದಂತೆ ಹಲವರಿಗೆ ನೀಡಿದ್ದರು.

Published by:Seema R
First published: