• Home
  • »
  • News
  • »
  • national-international
  • »
  • Indian Railway: ರಾತ್ರಿ ಪ್ರಯಾಣಿಕರಿಗೆ ಭಾರತೀಯ ರೈಲ್ವೇಯಿಂದ ಹೊಸ ನಿಯಮ ಜಾರಿ, ಉಲ್ಲಂಘಿಸಿದಲ್ಲಿ ಶಿಕ್ಷೆ ಪಕ್ಕಾ!

Indian Railway: ರಾತ್ರಿ ಪ್ರಯಾಣಿಕರಿಗೆ ಭಾರತೀಯ ರೈಲ್ವೇಯಿಂದ ಹೊಸ ನಿಯಮ ಜಾರಿ, ಉಲ್ಲಂಘಿಸಿದಲ್ಲಿ ಶಿಕ್ಷೆ ಪಕ್ಕಾ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Indian Railway: ರೈಲ್ವೇ ಮಂಡಳಿಯು ಜಾರಿಗೆ ತಂದಿರುವ ಹೊಸ ನಿಯಮವು ರಾತ್ರಿ ವೇಳೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡಿರುವುದರಿಂದ ರಾತ್ರಿ ವೇಳೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಈ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ರೇಲ್ವೇ ಇಲಾಖೆ ತಿಳಿಸಿದೆ.

ಮುಂದೆ ಓದಿ ...
  • Trending Desk
  • Last Updated :
  • New Delhi, India
  • Share this:

ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಖಕರ ಪ್ರಯಾಣಕ್ಕೆ ಹೆಸರುವಾಸಿಯಾಗಿರುವ ಭಾರತೀಯ ರೈಲ್ವೇಯು (Indian Railway) ಒಂದಿಲ್ಲೊಂದು ಬಗೆಯಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೊಸ ಮಾರ್ಪಾಡುಗಳನ್ನು ಮಾಡುತ್ತಿರುತ್ತದೆ. ಮಹಿಳಾ (Womens) ಪ್ರಯಾಣಿಕರ (Passengers) ಸುರಕ್ಷತೆ, ವೃದ್ಧರಿಗೆ ಹಾಗೂ ದೈಹಿಕ ಅಸಾಮರ್ಥ್ಯವುಳ್ಳವರಿಗೆ ಮೀಸಲಾತಿ, ಅವರ ಸುರಕ್ಷತೆ ಹೀಗೆ ಒಂದಿಲ್ಲೊಂದು ನವೀಕರಣಗಳನ್ನು ಮಾಡುತ್ತಿರುತ್ತದೆ. ಅದೇ ರೀತಿ ಇದೀಗ ರಾತ್ರಿ ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೆ ತರುತ್ತಿದೆ.


ರಾತ್ರಿ ಪ್ರಯಾಣಿಕರ ಅನುಕೂಲಕ್ಕೆ ಹೊಸ ನಿಯಮ ಜಾರಿ:


ಇದೀಗ ಭಾರತೀಯ ರೈಲ್ವೇಯು ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲತೆಗಳನ್ನು ಗಮನದಲ್ಲಿರಿಸಿಕೊಂಡು ಹೊಸ ನಿಯಮಗಳನ್ನು ರೂಪಿಸಿದೆ. ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಮಹತ್ವ ನೀಡುವ ಭಾರತೀಯ ರೈಲ್ವೇ ಇಲಾಖೆಯು ಇದೀಗ ರಾತ್ರಿ ಪ್ರಯಾಣಿಕರಿಗಾಗಿ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದೆ.


ಹೌದು ರಾತ್ರಿ ವೇಳೆ ನೀವು ರೈಲು ಪ್ರಯಾಣವನ್ನು ಮಾಡುತ್ತಿದ್ದೀರಿ ಎಂದಾದಲ್ಲಿ ನಿಮ್ಮಿಂದ ತಪ್ಪು ಘಟಿಸದಂತೆ ಎಚ್ಚರವಹಿಸಿ. ಏಕೆಂದರೆ ನಿಮ್ಮ ಅನುಸಾರವಾಗಿ ನೀವು ಮಾಡುವ ತಪ್ಪು ಸಣ್ಣದಾಗಿದ್ದರೂ ಅದು ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸಬಹುದು.


ರೈಲ್ವೇ ಮಂಡಳಿಯು ಜಾರಿಗೆ ತಂದಿರುವ ಹೊಸ ನಿಯಮವು ರಾತ್ರಿ ವೇಳೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡಿರುವುದರಿಂದ ರಾತ್ರಿ ವೇಳೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಈ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ರೇಲ್ವೇ ಇಲಾಖೆ ತಿಳಿಸಿದೆ.


ಇದನ್ನೂ ಓದಿ: Twitter: ಕಚೇರಿಯಲ್ಲಿಯೇ ನಿದ್ರಿಸುತ್ತಿರುವ ಟ್ವಿಟರ್ ಉದ್ಯೋಗಿಯ ಫೋಟೋ ವೈರಲ್, ಭಾರೀ ಕೋಲಾಹಲ ಸೃಷ್ಟಿ!


ಪ್ರಯಾಣಿಕರು ಇಲಾಖೆಗೆ ನೀಡಿರುವ ದೂರುಗಳೇನು?:


ಮಾಧ್ಯಮ ವರದಿಗಳ ಪ್ರಕಾರ ಒಂದೇ ಕೋಚ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇತರ ಪ್ರಯಾಣಿಕರಿಂದ ಉಂಟಾಗುವ ಅನಾನುಕೂಲತೆಯ ಬಗ್ಗೆ ದೂರು ನೀಡಿದ್ದಾರೆ. ಮುಖ್ಯವಾಗಿ ಮೊಬೈಲ್ ಫೋನ್‌ಗಳ ಬಳಕೆಯಿಂದ ರಾತ್ರಿ ಪ್ರಯಾಣಿಸುವವರು ತೊಂದರೆಗೆ ಈಡಾಗುತ್ತಿರುವುದಾಗಿದೆ.


ಫೋನ್‌ನಲ್ಲಿ ದೊಡ್ಡ ಧ್ವನಿಯಲ್ಲಿ ಸಂಭಾಷಿಸುವುದು ಇಲ್ಲವೇ ಹಾಡು ಆಲಿಸುವುದು ಮೊದಲಾದ ಚಟುವಟಿಕೆಗಳಿಂದ ಸಹಪ್ರಯಾಣಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ರೈಲ್ವೇ ಸಿಬ್ಬಂದಿ ನಿರ್ವಹಣಾ ಅಧಿಕಾರಿ ಕೂಡ ಫೋನ್‌ನಲ್ಲಿ ದೊಡ್ಡ ಧ್ವನಿಯಲ್ಲಿ ಸಂಭಾಷಿಸುತ್ತಾರೆ ಎಂಬ ದೂರನ್ನು ಕೂಡ ಕೆಲವು ಪ್ರಯಾಣಿಕರು ದಾಖಲಿಸಿದ್ದಾರೆ.


ಕಠಿಣ ಕ್ರಮ ಕೈಗೊಳ್ಳಲಿರುವ ಇಲಾಖೆ:


ಇನ್ನು ಕೆಲವು ಪ್ರಯಾಣಿಕರು ರಾತ್ರಿ ವೇಳೆಯಲ್ಲಿ ಲೈಟ್ ಹಾಕುವುದು ಇತರರ ನಿದ್ರೆಗೆ ಭಂಗವನ್ನುಂಟು ಮಾಡುತ್ತಿದೆ ಎಂಬ ಆಪಾದನೆ ಕೂಡ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ರೈಲ್ವೇ ಇಲಾಖೆಯು ಹೊಸ ನಿಯಮವನ್ನು ರೂಪಿಸಿದೆ. ಈ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರಯಾಣಿಕರ ಮೇಲೆ ಇಲಾಖೆಯು ಕಠಿಣ ಕ್ರಮವನ್ನು ಕೈಗೊಳ್ಳುತ್ತದೆ ಎಂಬುದು ವರದಿಯಾಗಿದೆ. ಹಾಗಿದ್ದರೆ ಆ ನಿಯಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.


ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ರಾತ್ರಿ 10 ರ ನಂತರವೂ ಫೋನ್‌ನಲ್ಲಿ ಮಾತನಾಡುತ್ತಿದ್ದರೆ ಅಂತಹ ಪ್ರಯಾಣಿಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೇ ಮಂಡಳಿ ತಿಳಿಸಿದೆ.


ರೈಲ್ವೇ ಇಲಾಖೆಯು ಬಿಡುಗಡೆ ಮಾಡಿರುವ ಹೊಸ ನಿಯಮಗಳ ಪ್ರಕಾರ ರಾತ್ರಿ ಪ್ರಯಾಣಿಸುವ ಪ್ರಯಾಣಿಕರು ಜೋರಾಗಿ ಮಾತನಾಡುವಂತಿಲ್ಲ, ಜೋರಾಗಿ ಸಂಗೀತ ಆಲಿಸುವಂತಿಲ್ಲ. ಈ ಕುರಿತು ಪ್ರಯಾಣಿಕರು ದೂರು ನೀಡಿದಲ್ಲಿ ರೈಲ್ವೇ ಸಿಬ್ಬಂದಿಯು ಅದನ್ನು ಕೂಡಲೇ ಪರಿಹರಿಸಬೇಕು.


ಇದನ್ನೂ ಓದಿ: Delhi Pollution: ಈ ಪಟ್ಟಣಕ್ಕೆ ಏನಾಗಿದೆ? ದೆಹಲಿ ಮಾಲಿನ್ಯದ ಫೋಟೋ ನೋಡಿದರೂ ಉಸಿರುಗಟ್ಟುತ್ತದೆ!


ರಾತ್ರಿ 10ರ ನಂತರ ರೈಲು ಪ್ರಯಾಣಿಕರು ಈ ಚಟುವಟಿಕೆಗಳನ್ನು ಮಾಡುವಂತಿಲ್ಲ:


ಪ್ರಯಾಣಿಸುವವರು ಮೊಬೈಲ್ ಫೋನ್‌ನಲ್ಲಿ ಗಟ್ಟಿಯಾಗಿ ಮಾತನಾಡುವುದು ಇಲ್ಲವೇ ದೊಡ್ಡ ಧ್ವನಿಯಲ್ಲಿ ಮೊಬೈಲ್ ಹಾಡುಗಳನ್ನು ಆಲಿಸುವಂತಿಲ್ಲ.


ರಾತ್ರಿ ಉರಿಯುವ ಲೈಟ್ ಒಂದನ್ನು ಹೊರತುಪಡಿಸಿ ಪ್ರಯಾಣಿಕರು ಕಡ್ಡಾಯವಾಗಿ ಉಳಿದೆಲ್ಲಾ ಲೈಟ್‌ಗಳನ್ನು ಆಫ್ ಮಾಡಬೇಕು.


ಇನ್ನು ತಡರಾತ್ರಿಯವರೆಗೆ ಪ್ರಯಾಣಿಕರು ಪರಸ್ಪರ ಸಂಭಾಷಿಸುವಂತಿಲ್ಲ. ಸಂಭಾಷಿಸಿದಲ್ಲಿ ಅದನ್ನು ಕಾನೂನು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.


ಪ್ರಯಾಣಿಕರ ಪರಿಶೀಲನೆ, ಇಲೆಕ್ಟ್ರಿಕ್ ಪರಿಕರಗಳ ತಪಾಸಣೆ, ಕ್ಯಾಟರಿಂಗ್ ಸಿಬ್ಬಂದಿಯ ವಿಚಾರಣೆ, ಪರಿಶೀಲನೆ ರಾತ್ರಿ ವೇಳೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ನಡೆಸಬೇಕು.


ರೈಲಿನಲ್ಲಿ ಪ್ರಯಾಣಿಸುವ ಹಿರಿಯರು, ಅಂಗವಿಕಲರು ಹಾಗೂ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಹಾಗೂ 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಯಾವುದೇ ತೊಂದರೆ ನಿಡುವಂತಿಲ್ಲ. ಅವರಿಗೆ ತುರ್ತು ನೆರವಿನ ಅಗತ್ಯವಿದ್ದಲ್ಲಿ ಸಿಬ್ಬಂದಿಗಳು ಸಹಾಯ ಮಾಡಬೇಕು.

Published by:shrikrishna bhat
First published: